21 C
Bengaluru
Thursday, January 23, 2020

ಬಡತನದ ದೀರ್ಘಶಾಪಕ್ಕೆ ಮೋಕ್ಷ ಎಂದು?

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಭಾರತದಲ್ಲಿ ಬಡತನ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಚರ್ಚೆಯಾಗುವ ಪ್ರಮುಖವಾದ ಅಸ್ತ್ರ. ವಿವಿಧ ಕಾರಣಗಳಿಂದಾಗಿ ಎಷ್ಟೋ ದಶಕಗಳಿಂದ ಅಂಟಿಕೊಂಡಿರುವ ಈ ದೀರ್ಘಶಾಪಕ್ಕೆ ಇನ್ನೂ ಮುಕ್ತಿ ದೊರೆತಿಲ್ಲ. ಇಲ್ಲಿ ಬಡತನದ ಸರಿಯಾದ ಅಂಕಿ-ಅಂಶಗಳನ್ನು ಸ್ಪಷ್ಟವಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ. ಹಲವಾರು ಸಮಿತಿಗಳು ನೀಡಿದ ಬಡತನದ ಸೂಚಿಗಳ ಹೊರತಾಗಿಯೂ ಬಡತನದ ವ್ಯಾಖ್ಯಾನಗಳಲ್ಲಿ ನಿರ್ದಿಷ್ಟತೆಯಿಲ್ಲ.

ಬಡತನದ ಪ್ರಮಾಣವನ್ನು ಅಳೆಯುವ ಮಾನದಂಡಗಳ ಬಗ್ಗೆ ಅದೆಷ್ಟೋ ಗೊಂದಲಗಳು ಇನ್ನೂ ಉಳಿದುಕೊಂಡಿವೆ. ಜನರ ದೈನಂದಿನ ಆದಾಯವನ್ನು ಪರಿಗಣಿಸಬೇಕೆನ್ನುವ ಲೆಕ್ಕಾಚಾರ ಒಂದಾದರೆ ಅವರ ಕೊಳ್ಳುವ ಶಕ್ತಿಯನ್ನು ಆಧರಿಸಿಕೊಂಡು ಆತನ ದೈನಂದಿನ ಖರ್ಚುಗಳನ್ನು ಪರಿಗಣಿಸಬೇಕೆನ್ನುವುದು ಇನ್ನೊಂದು ವಾದ. ಬದುಕಲು ಅವಶ್ಯಕವಾದ ಪೌಷ್ಟಿಕ ಆಹಾರವನ್ನು ಪಡೆಯಲು ಅವನಿಗಿರುವ ಸಾಮರ್ಥ್ಯವನ್ನು ನೋಡಿ ಬಡತನವನ್ನು ನಿರ್ಧರಿಸಬೇಕೆನ್ನುತ್ತದೆ ಇನ್ನೊಂದು ಮಾನದಂಡ. ಆರ್ಥಿಕೇತರ ಅಂಶಗಳನ್ನು ಒಳಗೊಂಡ ಬಹು ಆಯಾಮಗಳ ಸೂಚಿಯೊಂದರ ಪ್ರಕಾರ ಜನರ ಆರ್ಥಿಕ ಸ್ಥಿತಿ ಜೊತೆಗೆ ಅವರ ಶೈಕ್ಷಣಿಕ ಮಟ್ಟವನ್ನೂ (ಶಾಲೆಗಳಲ್ಲಿ ಕಳೆದ ಅವಧಿ) ಗಣನೆಗೆ ತೆಗೆದುಕೊಳ್ಳಬೇಕೆನ್ನುವ ಅಭಿಪ್ರಾಯವನ್ನು ಕೆಲವು ತಜ್ಞರು ವ್ಯಕ್ತಪಡಿಸುತ್ತಾರೆ. ಈ ರೀತಿ ವಿವಿಧ ಸಂಸ್ಥೆಗಳ ಮಾನದಂಡಗಳು, ನೀಡುವ ಅಂಕಿಅಂಶಗಳು ಒಂದಕ್ಕಿಂತ ಒಂದು ಭಿನ್ನ. ಹಾಗಾಗಿ ಬಡತನದ ನಿಖರ ಅಂಕಿ-ಅಂಶಗಳು ಲಭ್ಯವಾಗುವುದಿಲ್ಲ.

1990ರಿಂದ ಬಡತನದ ಪ್ರಮಾಣವನ್ನು ಅಳೆಯುವ ವಿವಿಧ ಮಾನದಂಡಗಳನ್ನು ವಿಮಶಿಸುತ್ತಲೇ ಇವೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು. ವಿವಿಧ ರಾಷ್ಟ್ರಗಳಿಗೆ ಹೋಲಿಸಿದರೆ ಶೀಘ್ರ ಅಭಿವೃದ್ಧಿಯನ್ನು ಹೊಂದುತ್ತಿರುವ ಭಾರತದಲ್ಲಿ ಬಡತನದ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಜಾಗತಿಕ ಬಡತನದ ಗಡಿಯಾರ (ಗಟ್ಟ್ಝ ಟಟಡಛ್ಟಿಠಿಢ ಇಟ್ಚk) ಪ್ರಕಾರ ಭಾರತದಲ್ಲಿ ಪ್ರತಿ ಒಂದು ನಿಮಿಷಕ್ಕೆ 44 ಭಾರತೀಯರು ಬಡತನದಿಂದ ಹೊರಬರುತ್ತಿದ್ದಾರೆ.

ಯಾವ ಅಂಕಿಅಂಶಗಳನ್ನೂ, ಯಾವ ಸಮಿತಿಯ ವರದಿಗಳನ್ನೂ, ಯಾವ ವ್ಯಾಖ್ಯಾನಗಳನ್ನೂ ಆಧರಿಸದೆ ಸಾಮಾನ್ಯ ಜನರ ದೃಷ್ಟಿಯಲ್ಲಿ ಹೇಳುವುದಾದರೆ ಭಾರತದಲ್ಲಿ ಬಡತನ ಸಂಪೂರ್ಣ ನಿಮೂಲನವಾಗಿಲ್ಲ. ನಿಜ. ಆದರೆ ಖಂಡಿತವಾಗಿಯೂ ಅದರ ಪ್ರಮಾಣ ಕಡಿಮೆಯಾಗುತ್ತಿದೆ. ಜನರ ಜೀವನಮಟ್ಟದಲ್ಲಿ, ಅವರ ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಅದು ಸರ್ಕಾರ ಕೈಗೊಂಡ ವಿವಿಧ ಯೋಜನೆಗಳ ಫಲವಾಗಿ ಇರಬಹುದು. ಜನರಿಗೆ ದೊರೆಯುವ ಸೌಲಭ್ಯಗಳಿಂದಾಗಿ ಇರಬಹುದು.

ಅಂದಿನಿಂದ ಇಂದಿನವರೆಗೆ ವಿವಿಧ ಬಡತನ ನಿವಾರಣಾ ಯೋಜನೆಗಳ ಹೊರತಾಗಿಯೂ ಬಡತನ ಒಂದು ಮುಖ್ಯವಾದ ಚರ್ಚಾವಿಷಯವಾಗಿದೆ. ಜನರಿಗೆ ಸೌಲಭ್ಯಗಳನ್ನು ಪಡೆಯಲು ಇದು ಒಂದು ನೆಪವಾದರೆ ರಾಜಕೀಯದವರಿಗೆ ಚುನಾವಣಾ ಸಮಯದ ಅಸ್ತ್ರವಾಗಿದೆ. ಅರ್ಥಶಾಸ್ತ್ರಜ್ಞರಿಗೆ ಮುಗಿಯದ ಅಧ್ಯಯನ ವಿಷಯವಾಗಿದೆ. ಆಡಳಿತದಲ್ಲಿ ಇರುವವರು ವಿವಿಧ ಯೋಜನೆಗಳನ್ನು ರೂಪಿಸುವಾಗ ಹೆಚ್ಚು ಗಮನವನ್ನು ನೀಡಬೇಕಾದ ವಿಚಾರವಾಗಿದೆ.

ಬಡತನಕ್ಕೆ ಅನೇಕ ಕಾರಣಗಳನ್ನು ನೀಡಬಹುದು. ಕಾರಣಗಳು ತಿಳಿದಾಗ ಪರಿಹಾರ ಸುಲಭ. ಆದರೆ ಭಾರತದ ಬಡತನದ ವಿಚಾರದಲ್ಲಿ ಮಾತ್ರ ಪರಿಹಾರ ಸುಲಭವಾಗಿಲ್ಲ. ಬಡತನ ಈಗಲೂ ಭಾರತದ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳೆಲ್ಲ ಈ ಸಮಸ್ಯೆಯಿಂದಾಗಿ ನಿಧಾನವಾಗುತ್ತಿವೆ. ಬಡತನ ನಿವಾರಣಾ ಯೋಜನೆಗಳೆಲ್ಲ ನಿಜವಾದ ಬಡ ಜನರನ್ನು ತಲುಪುತ್ತಿದ್ದರೆ ಸಮಸ್ಯೆ ಕ್ಷೀಣಿಸುತ್ತಿತ್ತು. ಆದರೆ ಬಡಜನರಿಗಾಗಿ ಜಾರಿಯಾಗುವ ಯೋಜನೆಗಳು ಅವರನ್ನು ತಲುಪದೆ ಸೋರಿಹೋಗುವುದೇ ಹೆಚ್ಚು. ಪಡಿತರ ವ್ಯವಸ್ಥೆ, ಧನಸಹಾಯ, ಉದ್ಯೋಗ ನಿರ್ಮಾಣ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಮುಂತಾದವುಗಳೆಲ್ಲವೂ ತಲುಪಬೇಕಾದವರನ್ನು ತಲುಪದಿರುವುದೇ ಇದಕ್ಕೆ ಮುಖ್ಯವಾದ ಕಾರಣ.

ಜನರಿಗೆ ಆಹಾರದಷ್ಟೇ ಮುಖ್ಯವಾದದ್ದು ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳು. ಅತಿ ಅವಶ್ಯಕ ಆಹಾರ ಧಾನ್ಯಗಳೇನೋ ಪಡಿತರ ವ್ಯವಸ್ಥೆಯಲ್ಲಿ ಸಿಗುತ್ತಿವೆ (ಅದರಲ್ಲೂ ಮೋಸ, ವಂಚನೆ ನಡೆಯುತ್ತದೆ ಅನ್ನುವುದು ಬೇರೆ ವಿಚಾರ). ಶಿಕ್ಷಣದ ವಿಚಾರಕ್ಕೆ ಬಂದರೆ ಉಳ್ಳವರು ಮಾತ್ರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುತ್ತಾರೆ. ಅರ್ಹರೊಂದಿಗೆ ಅರ್ಹತೆ ಮೀರಿದವರಿಗೂ ಸಿಗುವ ವಿದ್ಯಾರ್ಥಿ ವೇತನಗಳು ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಿದ್ದರೂ, ಗುಣಮಟ್ಟವನ್ನಂತೂ ಹೆಚ್ಚಿಸಿಲ್ಲ. ಇದು ಸರ್ಕಾರಕ್ಕೆ ಅನಾವಶ್ಯವಾದ ಹೊರೆಯಾಗುತ್ತದೆ. ಮಾತ್ರವಲ್ಲ, ಆರ್ಥಿಕವಾಗಿ ದುರ್ಬಲವಾಗಿರುವವರು ಸೂಕ್ತ ಶಿಕ್ಷಣದ ಅವಕಾಶಗಳು ಸಿಗದೆ ಉನ್ನತ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವುದೂ ಸತ್ಯ. ಹಾಗೋ ಹೀಗೋ ಕಲಿಯಲೇಬೇಕೆಂದು ಬ್ಯಾಂಕುಗಳಲ್ಲಿ ಸಾಲ ಮಾಡಿ ಕಲಿತವರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಶಿಕ್ಷಣ ಪಡೆದರೆ ಉದ್ಯೋಗ ಗಳಿಸಬಹುದು ಅನ್ನುವ ನಂಬಿಕೆ ಇಲ್ಲಿ ಸೋತು ಹೋಗುತ್ತದೆ. ಸಾಲದ ಹೊರೆ ಹೆಚ್ಚಾಗುತ್ತದೆ.

ಬಡ ಜನರು ಬಡವರಾಗಿಯೇ ಉಳಿಯುವುದು ಅವರ ಅನಾರೋಗ್ಯದ ಸಮಸ್ಯೆಗಳಿಂದ. ಬಡಜನರಿಗೆ ಉತ್ತಮ ಹಾಗೂ ರಿಯಾಯಿತಿ ದರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸರ್ಕಾರ ತಲುಪಿಸಬೇಕಿದೆ. ಬಡತನದ ಮುಖ್ಯ ಕಾರಣ ಆರೋಗ್ಯ ಸೌಲಭ್ಯಗಳ ಕೊರತೆ. ಅನಾರೋಗ್ಯದಿಂದಿರುವ ಬಡಜನರಿಗೆ ಸೂಕ್ತ ಚಿಕಿತ್ಸೆ ಪಡೆಯಲಾಗುತ್ತಿಲ್ಲ. ತೀವ್ರತರ ಕಾಯಿಲೆಗಳಿಗೆ ತುತ್ತಾಗಿ ದುಡಿಯುವ ಸಾಮರ್ಥ್ಯ ಕಳೆದುಕೊಂಡು ಔಷಧಗಳಿಗಾಗಿ ಇದ್ದ ಹಣವನ್ನೂ ಕಳೆದುಕೊಳ್ಳುವ ಸ್ಥಿತಿಯಿದೆ. ಇನ್ನು ಕೆಲವರು ಔಷಧ, ಚಿಕಿತ್ಸೆ ಪಡೆಯಲಾರದೆ ನರಳುತ್ತ ಜೀವನ ಸವೆಸುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ತೀವ್ರತರ ಕಾಯಿಲೆಗಳಿಗೆ ಅಗತ್ಯವಿರುವ ಎಲ್ಲ ಔಷಧಗಳಾಗಲಿ, ಸೌಲಭ್ಯಗಳಾಗಲಿ ಸಿಗುತ್ತಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಉತ್ತಮ ವೈದ್ಯರಾಗಲೀ, ಸಂಪರ್ಕ ಸಾಧನಗಳಾಗಳೀ ಸರಿಯಾದ ಸಮಯಕ್ಕೆ ಸಿಗದೆ ಸೂಕ್ತ ಚಿಕಿತ್ಸೆ ಪಡೆಯಲಾಗದ ಎಷ್ಟೋ ಜನರಿದ್ದಾರೆ. ಇದರಿಂದಾಗಿ ಅವರ ದುಡಿಯುವ ಶಕ್ತಿ ಕಡಿಮೆಯಾಗುತ್ತದೆ. ಗಳಿಸಿದ ಹಣ ಔಷಧಕ್ಕೆ ಸಾಲುವುದಿಲ್ಲ. ಹೀಗೆ ಬಡತನದಿಂದಾಗಿ ಅನಾರೋಗ್ಯ, ಅನಾರೋಗ್ಯದಿಂದಾಗಿ ಬಡತನ ಇದು ಒಂದು ವಿಷವರ್ತಲದಂತೆ ಬಡಜನರ ಜೀವನದ ಸುತ್ತ ಸುತ್ತುತ್ತದೆ. ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳು ಜನರಿಗೆ ಪ್ರಾಮಾಣಿಕವಾಗಿ ಸಕಾಲದಲ್ಲಿ ತಲುಪುವಂತಾದರೆ ಅವರ ಆರೋಗ್ಯ ಹಾಗೂ ಹಣಕಾಸು ಸ್ಥಿತಿ ಸುಧಾರಿಸಬಹುದು.

ಭಾರತದಲ್ಲಿ ಇರುವ ಆರ್ಥಿಕ ಮತ್ತು ಸಂಪತ್ತಿನ ಅಸಮಾನತೆ ಇಲ್ಲಿ ಬಡತನ ಉಳಿದುಕೊಂಡಿರಲು ಮತ್ತೊಂದು ಕಾರಣ. ಭಾರತದ ಸಂಪತ್ತು ಕೆಲವರಲ್ಲಿ ಮಾತ್ರ ಕೆಂದ್ರೀಕೃತವಾಗಿದೆ. ಲೆಕ್ಕವಿಲ್ಲದಷ್ಟು ಆಸ್ತಿ, ಆದಾಯ, ಒಡವೆಗಳು ಕೇವಲ ಕೆಲವರ ಒಡೆತನಲ್ಲಿದ್ದರೆ ಕೆಳಸ್ತರದಲ್ಲಿರುವ ಹೆಚ್ಚಿನ ಜನರು ಜೀವನ ಸಾಗಿಸುವುದಕ್ಕೆ ಕುಟುಂಬದ ದೈನಂದಿನ ಆದಾಯವನ್ನೇ ಅವಲಂಬಿಸಿಕೊಂಡಿರುವ ಪರಿಸ್ಥಿತಿ ಇದೆ. ಅಧಿಕಾರಿಗಳ ಲಂಚಗುಳಿತನ, ಭ್ರಷ್ಟಾಚಾರ, ವಂಚನೆಯ ಪ್ರವೃತ್ತಿಗಳು ಬುಡ ಸಹಿತವಾಗಿ ನಿಮೂಲನೆಯಾದಲ್ಲಿ ಮಾತ್ರ ಬಡತನದ ನಿವಾರಣೆಯೂ ಸಾಧ್ಯ. ಎಲ್ಲ ಕಚೇರಿಗಳಲ್ಲಿಯೂ ಪ್ರಾಮಾಣಿಕತೆಯಿಂದ ದುಡಿಯುವ ಅಧಿಕಾರಿಗಳು, ನೌಕರರು ಇದ್ದರೆ ಬಡಜನರಿಗೆ ಸಿಗಬೇಕಾದ ಸವಲತ್ತುಗಳನ್ನು ತಲುಪಿಸಲು ಸಾಧ್ಯವಾಗುತ್ತದೆ.

ದುರಾದೃಷ್ಟವಶಾತ್ ಇಲ್ಲಿ ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂಬ ಧೋರಣೆ. ಸರ್ಕಾರದಿಂದ ಎಲ್ಲ ಸೌಲಭ್ಯವನ್ನೂ ಬಯಸುವ ನಾವು ಒಂದಿಷ್ಟೂ ತ್ಯಾಗಕ್ಕೆ ಸಿದ್ಧರಿಲ್ಲ. ಕುಟುಂಬ ನಿಯಂತ್ರಣಕ್ಕೆ ಎಲ್ಲರೂ ತಯಾರಿಲ್ಲ, ತೆರಿಗೆ ಪಾವತಿಯಲ್ಲಿ ಕಳ್ಳತನ, ದಕ್ಷ ಅಧಿಕಾರಿಗಳು ಬಂದರೆ ವರ್ಗಾವಣೆಗೆ ಒತ್ತಡ, ಅಕ್ರಮ ಚಟುವಟಿಕೆಗಳಿಗೆ ಪೋ›ತ್ಸಾಹ, ನಮ್ಮ ನಮ್ಮ ಕೆಲಸವಾಗಬೇಕಾದರೆ ಲಂಚ, ಹಣವಿದ್ದವರಿಗೂ ರಿಯಾಯಿತಿ- ಸಬ್ಸಿಡಿಗಳು ಬೇಕೆಂಬ ಬಯಕೆ, ಸ್ವಚ್ಛತೆಯ ಸಂಕಲ್ಪವಿಲ್ಲ, ನೀತಿ-ನಿಯಮಗಳ ಪಾಲನೆ ಇಲ್ಲವೇ ಇಲ್ಲ… ಇವೆಲ್ಲವೂ ನಾವು ಹಿಂದುಳಿಯಲು ಕಾರಣವಲ್ಲವೆ?

ಹೀಗೆ ಭಾರತದಲ್ಲಿ ಬಡತನವನ್ನು ಸೋಲಿಸುವುದೇ ಶತಮಾನದ ಸವಾಲು. ಬಡತನದ ಕುರಿತ ಅಧ್ಯಯನಕ್ಕೇನೋ ನೊಬೆಲ್ ಪ್ರಶಸ್ತಿ ಬರುತ್ತದೆ. ಆದರೆ ಬಡತನಕ್ಕೆ ಕೊನೆಯಿಲ್ಲ್ಲ ಅನ್ನುವುದೇ ಬೇಸರದ ವಿಚಾರ.

(ಲೇಖಕರು ಸಹಾಯಕ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...