21 C
Bengaluru
Wednesday, January 22, 2020

ಭಾರತದ ಇಂದಿನ ರಾಜಕಾರಣದ ಅಪಾಯ ದಿಕ್ಕು

Latest News

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸ್​ ವಿಚಾರಣೆ ವೇಳೆ ಆರೋಪಿ ಆದಿತ್ಯರಾವ್ ಹೇಳಿದ್ದೇನು?​

ಬೆಂಗಳೂರು: ಸಮಾಜದ ವ್ಯವಸ್ಥೆಗೆ ಬೇಸತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದಾಗಿ ಆರೋಪಿ ಆದಿತ್ಯರಾವ್​ ಪೊಲೀಸ್​ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ವಿಐಪಿ ಗೆಸ್ಟ್ ಹೌಸ್​ನಲ್ಲಿ...

ನೇಪಾಳದ ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದ 8 ಕೇರಳ ಪ್ರವಾಸಿಗರ ಸಾವಿಗೆ ಕಾರಣವೇನು?: ಕುಟುಂಬದವರಿಗೆ ಮೃತದೇಹ ಹಸ್ತಾಂತರ

ಕಾಠ್ಮಂಡು: ನೇಪಾಳದ ಹೋಟೆಲ್​ವೊಂದರಲ್ಲಿ ಕೇರಳ ಮೂಲದ 8 ಪ್ರವಾಸಿಗರು ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ರೂಮಿನೊಳಗೆ ಇಡಲಾಗಿದ್ದ ಔಟ್​ಡೋರ್​ ಹೀಟರ್​ನ ವಿಷಕಾರಿ ಕಾರ್ಬನ್​...

ರಾಷ್ಟ್ರ ಏಕತೆಯ ವಿರೋಧಿಗಳ ಹುಟ್ಟಡಗಿ ಏಕರೂಪ ನ್ಯಾಯಸಂಹಿತೆ ಜಾರಿಯಾಗಿ ಸರ್ವ ಸಮಾನತೆಗೆ ಅಡಚಣೆಯಾದ ಮತಾಂತರ ಪಿಡುಗು, ಆಕ್ರಮಣಶೀಲತೆ, ಜಿಹಾದೀ ಮನೋಭಾವ, ಹಿಂಸಾಚಾರ, ಕೋಮುವಾದ, ಜಾತೀಯತೆ ಇವೆಲ್ಲ ನಾಶವಾದರೆ ಮಾತ್ರ ನಾವು ಉಳಿಯುತ್ತೇವೆ. ಈ ಬಯಕೆ ಅತ್ಯಾಶೆಯಲ್ಲ. ಸಹಜವಾದುದು.

ಶ್ರೀರಾಮಾಯಣದಲ್ಲಿ ತ್ರಿಜಟೆಯೆಂಬ ವಿಭೀಷಣ ಪುತ್ರಿ, ಸೀತಾದೇವಿಗೆ ತಾನು ಕಂಡ ಕನಸೊಂದನ್ನು ವಿವರಿಸಿದ್ದು, ಅದು ಲಂಕಾ ಭವಿಷ್ಯದ ಕುರಿತದ್ದು, ಸಾಂಕೇತಿಕವಾಗಿ ಕಾಣುತ್ತದೆ. ಮುಂದೆ ಬರುವುದನ್ನು ಸೂಚಿಸುವ ಸಾತ್ವಿಕ ಕನಸ್ಸು ನಿಜವಾಗುತ್ತದೆ ಎಂದು ವ್ಯಾಸರು ಬ್ರಹ್ಮಸೂತ್ರದಲ್ಲಿ ಬರೆದಿದ್ದಾರೆ-‘ಸೂಚಕಶ್ಚ ಹಿ ಶ್ರುತೇಃ’ ಎಂಬಲ್ಲಿ. ರಾವಣನು ಕತ್ತೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ದಕ್ಷಿಣಾಭಿಮುಖವಾಗಿ ಹೊರಟುದಾಗಿಯೂ, ಬೊಗಸೆಯಲ್ಲಿ ಎಣ್ಣೆಯನ್ನು ಕುಡಿಯುತ್ತಿದ್ದುದಾಗಿಯೂ, ಕರಾಳ ಸ್ತ್ರೀಯೊಬ್ಬಳು ಅವನ ಕೊರಳಿಗೆ ಹಗ್ಗ ಬೀರಿ ಹಿಂಸಿಸುತ್ತಿದ್ದುದಾಗಿಯೂ ಕಂಡ ದೃಶ್ಯ. ಯಮದಿಕ್ಕಿನತ್ತ ಒಬ್ಬ ರಾಷ್ಟ್ರನಾಯಕ, ರಾಜಕಾರಣಿ ವಾಹನಯೋಗ್ಯವಲ್ಲದ ಹೀನಪಶುಗಳ ರಥದಲ್ಲಿ ಕುಳಿತು ಕುಡಿಯಬಾರದ ದ್ರವ್ಯವನ್ನು ಕುಡಿಯುತ್ತ, ಅಮಲಿನಲ್ಲಿ ಸಾಯುವುದನ್ನೂ ಕಾಣದೆ ಹೊರಟದ್ದು ಸಾರ್ವಕಾಲಿಕ ಸತ್ಯ. ತನ್ನ ಅಕಾರ್ಯದ ಅರಿವಿಲ್ಲದೆ, ಒಪ್ಪಲು ಇಷ್ಟವಿಲ್ಲದೆ, ಹಠದಿಂದ, ದ್ವೇಷದ ರಾಜಕಾರಣ ಮಾಡುತ್ತಾ, ಕಾರ್ಯಾಕಾರ್ಯದ ವಿವೇಕವಿಲ್ಲದ ಮೂಢಧಣಿ ತಾನೂ ಸತ್ತು ತನ್ನವರನ್ನೂ ಸಾಯಿಸುತ್ತಾನೆಂಬುದಕ್ಕೆ ‘ದ್ರಾವಿಡ’ ಅವಾಸ್ತವವಾದದ ತಮಿಳು ಪಕ್ಷಗಳೂ, ಭಾಜಪ, ಮೋದಿ, ಆರೆಸ್ಸೆಸ್, ದ್ವೇಷದ ಮಮತಾರೂ, ಅಧಿಕಾರಭ್ರಷ್ಟರಾದ ನಾಯ್ಡುವೂ, ಸರ್ವಸಂಪತ್ ಭ್ರಷ್ಟರಾದ ಸೋನಿಯಾ, ರಾಹುಲ ಇವರ ಹಿಂಬಾಲಕರೂ, ಕಚ್ಚಾಡಿ ಸಾಯುವುದೇ ಪರಮ ಪುರುಷಾರ್ಥವೆಂಬ ಭ್ರಮೆಯ ಕರ್ನಾಟಕದ ದೋಸ್ತರೂ, ಹಿಂದೂದ್ವೇಷವೊಂದೇ ಆಸ್ತಿಯಾದ ಕಾಮ್ರೇಡರೂ, ಎಲ್ಲ ಎಡಪಂಥೀಯರೂ, ಬಾಡಿಗೆಯ ಬುದ್ಧಿಜೀವಿಗಳೂ, ರಾಷ್ಟ್ರೀಯತೆಯೇ ಅಪರಾಧವೆನ್ನುವ ಭ್ರಮೆಯಲ್ಲಿರುವ ವಿದೇಶೀ ಸಂಬಳದ ಪತ್ರಿಕಾ/ಟಿವಿ ಮಾಧ್ಯಮಗಳವರೂ, ನಾನಾ ಪಟ್ಟಭದ್ರರೂ ಈ ರಾವಣ ವರ್ಗದವರೇ. ಜಪಾನಿನಲ್ಲಿ ರಾಷ್ಟ್ರಭಕ್ತಿ ಇಲ್ಲದವರಿಲ್ಲ. ದ್ವಿತೀಯ ಮಹಾಯುದ್ಧದ ದುರಂತದಿಂದ ಹೇಗೆ ಆ ಪುಟ್ಟ ರಾಷ್ಟ್ರ ಪಾರಾಗಿ ಆರ್ಥಿಕ ಮುನ್ನಡೆಯಲ್ಲಿದೆ ಕಾಣಿರಿ. ನನ್ನ ಸ್ನೇಹಿತನೊಬ್ಬ ಜಪಾನಿಗೆ ಭೇಟಿಯಿತ್ತು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಂಡ ದೃಶ್ಯ. ಎದುರಿನ ಸೀಟಿನಲ್ಲಿ ಹುಡುಗಿಯೊಬ್ಬಳು ಒಂದು ಪುಸ್ತಕ ಓದುತ್ತಾ ಮುಗಿದ ಪುಟ ಹಾಳೆಗಳನ್ನು ಕ್ರಮವಾಗಿ ಹರಿದು ಬಿಸಾಡುತ್ತಿದ್ದಾಗ ಈತ ಕೇಳಿದ, ‘ಇದೇನು ಹುಚ್ಚು?’ಎಂದು. ಅವಳು ಹೇಳಿದಳು- ‘ಈ ಪುಸ್ತಕ ಉಳಿದರೆ ಇನ್ನೊಬ್ಬರು ಓದುವಂತಾದರೆ ಅವನು ಕೊಳ್ಳಬೇಕಿದ್ದ ಒಂದು ಪ್ರತಿ ಖರ್ಚಾಗದೇ ಉಳಿದು ಪ್ರಕಾಶಕನಿಗೆ ನಷ್ಟವಾಗುತ್ತದೆ. ಎಲ್ಲರೂ ಹೀಗೇ ಮಾಡಿದರೆ ಪುಸ್ತಕೋದ್ಯಮವೇ ಹಾಳಾಗುತ್ತದೆ’ ಎಂದು. ಅಲ್ಲಿದೆ ದೇಶಭಕ್ತಿ. ಅಲ್ಲಿ ಮುಷ್ಕರಗಳೂ ಅಪರೂಪ. ಒಂದು ಪಾದರಕ್ಷಾ ತಯಾರಿಕೆಯ ಕಾರ್ಖಾನೆಯಲ್ಲಿ ಸಂಬಳ, ಬೋನಸ್​ನಲ್ಲಿ ತಕರಾರು ಎದ್ದಾಗ ಶ್ರಮಿಕರು ಬರೀ ಒಂಟಿ ಚಪ್ಪಲಿ ಮಾತ್ರ ತಯಾರಿಗೆ ಸಹಕರಿಸುತ್ತಾ, ಇತ್ತ ಉತ್ಪನ್ನಕ್ಕೂ ಹಾನಿಯಾಗದಂತೆ ತಮ್ಮ ಆಗ್ರಹವನ್ನೂ ವ್ಯಕ್ತಪಡಿಸಿದರು. ಅದು ನಾಗರಿಕ ಲಕ್ಷಣ.

ಅಪೊಸಿಷನ್ ಪಾರ್ಟಿ ಎನ್ನುತ್ತೇವೆ. ಇದು ಪ್ರತಿಪಕ್ಷ, ಎದುರು ಪಕ್ಷ, ಇನ್ನೊಂದು ಪರ್ಯಾಯ ಪಕ್ಷ (alternative party) ಎಂದಾಗ ಬೇರೆ ಹೊರತು ವಿರೋಧ ಪಕ್ಷ ಎಂಬುದಲ್ಲ. ವೈರಿ ಪಕ್ಷಆಗಬಾರದು. ಶತ್ರುಪಕ್ಷ ಎಂಬ ಗ್ರಹಿಕೆ ರಾಷ್ಟ್ರಕ್ಕೆ ಹಾನಿಕಾರಕ. ಯುಪಿಎ-ಐ ಮತ್ತು ಯುಪಿಎ-ಐ ಐ ರಲ್ಲಿ ಕಾಂಗ್ರೆಸ್ಸು ನಡೆದುಕೊಂಡ ರೀತಿ ಈ ವೈರಿ ಪಕ್ಷದ್ದು. ರಾಹುಲರ ಸೇನೆ ಮೋದಿಯನ್ನು ಯಾವಾಗಲೂ ಎಲ್ಲದಕ್ಕೂ ದ್ವೇಷಿಸುತ್ತಾ ಬೈಯ್ಯುತ್ತಾ ಶಾಸಕಾಂಗವು ನಡೆಯಗೂಡದಂತೆ ಮಾಡಿದ್ದು, ಇಂಗ್ಲೆಂಡು, ಅಮೆರಿಕಾ, ಜರ್ಮನಿ, ಫ್ರಾನ್ಸ್​ಗಳ ರೀತಿಯಲ್ಲಿ ಎಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ರಾಷ್ಟ್ರಹಿತವನ್ನು ಬಲಿಕೊಡುವುದಿಲ್ಲ. ವಿದೇಶಾಂಗ ನೀತಿಯಲ್ಲಿ, ರಕ್ಷಣಾ ನೀತಿ, ವಾಣಿಜ್ಯ ನೀತಿ, ದ್ವಿಪಕ್ಷೀಯ ಒಪ್ಪಂದಗಳಲ್ಲಿ ರಿಪಬ್ಲಿಕನ್, ಡೆಮಾಕ್ರಟಿಕ್ ಹಾಗೂ ಕನ್ಸರ್ವೆಟಿವ್, ಲಿಬರಲ್/ಲೇಬರ್ ಪಕ್ಷಗಳು ಪಕ್ವವಾಗಿ ನಡೆದುಕೊಳ್ಳುತ್ತವೆ. ಇಲ್ಲಿ? ರೋಗಗ್ರಸ್ತ ಮನಸ್ಸುಗಳೋ? ಎದುರಾಳಿಗಳನ್ನು ಸೋಲಿಸಲು ವಿದೇಶಿ ಶಕ್ತಿಗಳ ಅವಲಂಬನೆ, ಏನೆಲ್ಲಾ ತೇಜೋವಧೆ, ರಾಷ್ಟ್ರಸಂಪತ್ತಿನ ಲೂಟಿ, ಸುಳ್ಳು ಪ್ರಚಾರ, ವಿದೇಶೀ ಲಾಬಿಗಳ ಕೊಳ್ಳಾಟ- ಎಲ್ಲವನ್ನೂ ಕಂಡಿದ್ದೀರಿ! ಆಂಧ್ರದಲ್ಲಿ ಜಗನ್ಮೋಹನ ಅಧಿಕಾರ ಗ್ರಹಣ ಸಂದರ್ಭಕ್ಕೆ ನಾಯ್ಡು ಹೋಗಲಿಲ್ಲ. ಏಕೆ? ಹಗೆ! ಬಂಗಾಳದಲ್ಲಿ ಮಮತಾಗೆ ಜೈಶ್ರೀರಾಮ್ ಎಂಬುದು ಹುಚ್ಚು ತರುವ ಮಂತ್ರ! ಇದೇನು ಉಲ್ಬಣ? ಬಾಯಿನೊರೆ! ಕೋಪ ಪರಮಾವಧಿ! ಅಧಿಕಾರ ಉಳಿಸಿಕೊಳ್ಳಲು ಅನಾಗರಿಕ ಮಾರ್ಗಗಳು, ಮೋದಿ ಷಾ ರ್ಯಾಲಿಗಳಿಗೆ ಅನವಕಾಶ, ಹೆಲಿಕಾಪ್ಟರು ಇಳಿಯಲೂ ತಡೆ, ಕಾರ್ಯಕರ್ತರ ಕೊಲೆ, ಬೆದರಿಕೆ, ತನ್ನ ಗುಟ್ಟಿನ ರಕ್ಷಣೆಯ ಅಧಿಕಾರಿಗೆ ಪ್ರೋತ್ಸಾಹ! ಇದೆಲ್ಲ ಕಾಮ್ರೇಡರ ಕಾಲದ ಬಳುವಳಿ. ಕಾಮ್ರೇಡರು ಅಂತಾರಾಷ್ಟ್ರೀಯತೆಯ ಭಕ್ತರು, Communism ಎಂಬುದು ಅಂತಾರಾಷ್ಟ್ರೀಯ ಚಳವಳಿ, ಇಲ್ಲಿನದು ಅದರ ಒಂದು ಭಾಗ, ಅಧ್ಯಾಯ ಎಂಬರ್ಥದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹೊರತು ಇಂಡಿಯನ್ ಕಮ್ಯೂನಿಸ್ಟ್ ಪಾರ್ಟಿಯಲ್ಲ! ಇಂಡಿಯನ್ ಬೇಡ. ಬೇರು ಬೇರೆಲ್ಲೋ ಇಲ್ಲಿ ಬರೀ ಶಾಖೆ. ಯೆಚೂರಿಯವರು ಯೋಗವನ್ನು ನಾಯಿಗಳು ಮೈಮುರಿಯುವುದಕ್ಕೆ ಹೋಲಿಸಿದ್ದು ನೆನೆಯಿರಿ! ಇವರಿಗೆ ಇಂಡಿಯನ್ ಎಂಬುದೆಲ್ಲ ವಾಂತಿ ತರುವ ವಿಚಾರ, ಭಾವನೆ, Hindu ಎಂದರೆ ಇವರಿಗೆ ಸಾವೇ ಬರುತ್ತದೆ. ವಿದೇಶೀ ಮೂಲದ ಮತಗಳ ಓಲೈಕೆ ಏಕೆ ಎಂದರೆ ಸ್ವದೇಶಿ ಗ್ರಹಿಕೆಗಳನ್ನು ಕೊಲ್ಲಲು, ಈ ಹಿಂದೂ ವೃಕ್ಷನಾಶಕ್ಕೆ ಬೇಕಾದ ಕೊಡಲಿ ಎಂಬಂತೆ! ರಾಹುಲರ ಎಲ್ಲ ಅವಿವೇಕದ ಕೂಗುಗಳನ್ನೂ ಓಟುದಾರ ತಿರಸ್ಕರಿಸಿದ್ದಾನೆ. ಆದರೆ ತಾಯಿ ಮಗ ಮೋದಿಯವರ ಪದವೀಗ್ರಹಣಕ್ಕೆ ಹಾಜರಿದ್ದು ಮಾನ ಉಳಿಸಿಕೊಂಡರೇ? ಜನತೆಯ ಕಂಗಳಿಗೆ ಮಣ್ಣು ತೂರಿದರೇ? ಯೋಚಿಸಿ. ಮನಃಸ್ಥಿತಿ ಬದಲಾದಂತೆ ಕಾಣುವುದಿಲ್ಲ. ರಾಹುಲರು ಕಾಂಗ್ರೆಸ್ಸಿಗೆ ರಾಜೀನಾಮೆ ಇತ್ತರೆ ನಷ್ಟವೇನು? ಹಿಂಬಾಲಕರೇಕೆ ತಮಟೆ ಬಡಿಯುತ್ತಾರೆ? ಕೈಕೇಯಿಗೆ ಮಂಥರೆಯ ಸಪೋರ್ಟ್ ಇದ್ದಂತೆ. ಇಲ್ಲಿ ರಾಮಾಯಣ, ಮಹಾಭಾರತ ದುರಂತಗಳು ಇನ್ನೂ ಬೇಕೆ? ಹಳ್ಳಿ ಹಳ್ಳಿಗಳಲ್ಲಿ ಈ ಸಲ ಜ್ಞಾನೋದಯ! ಮೋದಿ, ಮೋದಿ ಕೂಗು ಎತ್ತಲೂ. ಅಲ್ಲಿ ಹಿಂದೂ ಮೌಲ್ಯಗಳ ಪುನರುತ್ಥಾನ.

ಕಾಶ್ಮೀರದ ನಾಯಕರ ಪಾಕ್ ಭಕ್ತಿಯ ಬಗೆಗೆ, ಪ್ರತ್ಯೇಕತಾವಾದದ ಅಮಲಿನ ಬಗೆಗೆ ಏನು ಬರೆಯಲಿ? ಇವರಿಗೆ ಭಾರತದಲ್ಲಿರಲು ಬೇಡವಾದರೆ ಬೇರೆ ದೇಶಕ್ಕೆ ವಲಸೆ ಹೋಗಲು ಏನು ಅಡ್ಡಿ? ನೆಲವನ್ನೇ ಒಡೆಯುವ ಹಿರಣ್ಯಾಕ್ಷ ಪ್ರವೃತ್ತಿಗೆ ಈ ಸಲ ಷಾ ಅವರು ಒಂದು ವರಾಹಾವತಾರೀ ಸೂತ್ರ ಕಾಣಿಸುತ್ತಾರೆಂದು ಆಶಿಸೋಣ! ಓವೈಸಿ, ಮಣಿಶಂಕರ್ ಇಂಥವರು ಯಾವ ಪಕ್ಷದಲ್ಲಿದ್ದರೂ ಅದು ರಾಷ್ಟ್ರವಿರೋಧಿ ನಿಷ್ಠೆಯೇ ಆಗಿರುತ್ತದೆ. ಒಂದು ಕುಟುಂಬ ನಿಷ್ಠೆ ಬೇರೆ, ಒಂದು ಪಕ್ಷ ನಿಷ್ಠೆ ಬೇರೆ, ರಾಷ್ಟ್ರನಿಷ್ಠೆಯೇ ಬೇರೆ. ಹಿಂದೆ ಡಾ. ರಾಧಾಕೃಷ್ಣನ್ ಅವರು ರಾಷ್ಟ್ರಾಧ್ಯಕ್ಷರಾಗುವ ಮೊದಲು ನೆಹ್ರೂ ಕಾಲದಲ್ಲಿ ರಷ್ಯಾಕ್ಕೆ ಒಂದು ರಾಯಭಾರ ಹೊತ್ತು ಹೋದರು. ಯಾರಿಗೂ ಭೇಟಿ ಕೊಡದಿದ್ದ ಸ್ಟಾಲಿನ್ ಆಗ ಇವರಿಗೆ ಭೇಟಿಯ ಅವಕಾಶ ಇತ್ತ. ಈ ರಾಯಭಾರಿ ಅವರಿಗೆ ಒಂದು ಮಹಾಭಾರತ ವಾಕ್ಯವನ್ನು ಉಪದೇಶಿಸಿದರು: ‘ತ್ಯಜೇದೇಕಂ ಕುಲಸ್ಯಾರ್ಥೆ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್/ಗ್ರಾಮಂ ಜನಪದಸ್ಯಾರ್ಥೇ, ಆತ್ಮಾರ್ಥೇ, ಪೃಥಿವೀಂತ್ಯಜೇತ್’. ಇದರ ನೀತಿವಾಕ್ಯ- ‘ಒಂದು ಕುಲ ಉಳಿಯಲು ಕುಲಕಂಟಕನನ್ನು ತೊರೆಯಬೇಕು, ಒಂದು ಹಳ್ಳಿ ಉಳಿಯಲು ಕೆಟ್ಟ ಕುಲವನ್ನೇ ಗಡೀಪಾರು ಮಾಡಬೇಕು. ಹಳ್ಳಿಯೇ ಕೆಟ್ಟು ಹೋದರೆ ರಾಷ್ಟ್ರಹಿತಕ್ಕಾಗಿ ಅದಕ್ಕೆ Punitive Tax ಶಿಕ್ಷಾರ್ಹ ತೆರಿಗೆ ಹಾಕಿ ಬಗ್ಗುಬಡಿಯಬೇಕು. ಒಂದು ರಾಷ್ಟ್ರವೇ ಮರಣಾವಸ್ಥೆಗೆ ಬಂದರೆ ಅದನ್ನೇ ತೊರೆಯಬೇಕು’. ಈಗ ಬಂಗಾಳ, ಕೇರಳ, ಕಾಶ್ಮೀರಗಳಲ್ಲಿ ಡೆಮಾಕ್ರಸಿಯ ದುರುಪಯೋಗ, ಕ್ರೌರ್ಯ, ಬೆದರಿಕೆ, ಹಗೆ, ಕೊಲೆ, ಹಕ್ಕು ಚಲಾವಣೆಯ ಅಡಚಣೆ, ಮತಗಟ್ಟೆ ವಶ, ಮತಅಕ್ರಮ ನಡೆಯದಂತೆ ಕೇಂದ್ರ ಎಚ್ಚರ ವಹಿಸಬೇಕು. ಕೆಟ್ಟ ಹೆಸರು ಹೊತ್ತವರು ಚುನಾವಣಾನರ್ಹರೂ, ಓಟು ಹಕ್ಕು ಕಳಕೊಂಡವರೂ ಆಗಬೇಕು. ಒಂದು ಪ್ರಾಂತ್ಯವೇ ದುಷ್ಟಾಡಳಿತೆಯಲ್ಲಿದ್ದರೆ ಆಡಳಿತ ರದ್ದು ಮಾಡಬೇಕು. ಅನುದಾನ ಸೌಲಭ್ಯಗಳನ್ನು ಕಡಿತಗೊಳಿಸಬೇಕು. ದೇಶವೇ

ದುಃಸ್ಥಿತಿಗೆ ಬಂದಾಗ ಸುಭಾಷ್, ಸಾವರ್ಕರರಂತೆ ಹೊರಗೆ ನಡೆದು ಸೇನೆ ಕಟ್ಟಬೇಕು. ದೇಶ ಒಡಕರನ್ನು ಸೇವಿಸುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಕಾರ್ತಿ, ಚಿದಂಬರಂ, ವಾದ್ರಾ, ನಾಯ್ಡು, ಕನಿಮೊಳಿ, ಮಾರನ್, ಎ.ರಾಜಾ, ಕರ್ನಾಟಕದ ಅಕ್ರಮ ಹಣ ಸಂಪಾದನೆಯವರು, ಶಾರದಾ ಚಿಟ್​ಫಂಡ್, ದೀದಿ, ಸೋನಿಯಾ, ರಾಹುಲ ಇನ್ನಿತರ ಇ.ಡಿ. ಪಟ್ಟಿಯಲ್ಲಿರುವವರೆಲ್ಲರ ಮೇಲೂ ಕ್ರಮವಾಗಬೇಕು. ರಾಷ್ಟ್ರ ಏಕತೆಯ ವಿರೋಧಿಗಳ ಹುಟ್ಟಡಗಿ ಏಕರೂಪ ನ್ಯಾಯಸಂಹಿತೆ ಜಾರಿಯಾಗಿ ಸರ್ವ ಸಮಾನತೆಗೆ ಅಡಚಣೆಯಾದ ಮತಾಂತರ ಪಿಡುಗು, ಆಕ್ರಮಣಶೀಲತೆ, ಸ್ವಶ್ರೇಷ್ಠತೆ, ಜಿಹಾದೀ ಮನೋಭಾವ, ಹಿಂಸಾಚಾರ, ಕೋಮುವಾದ, ಜಾತೀಯತೆ ಇವೆಲ್ಲ ನಾಶವಾದರೆ ಮಾತ್ರ ನಾವು ಉಳಿಯುತ್ತೇವೆ. ಈ ಬಯಕೆ ಅತ್ಯಾಶೆಯಲ್ಲ. ಸಹಜವಾದದು. ಎಂದೋ ಆಗಬೇಕಿದ್ದ ಇದಕ್ಕೆ ಇಂದು ಮುಹೂರ್ತ ಕೂಡಿಬಂದಿದೆ. ಒಬ್ಬನೇ ಕೃಷ್ಣ ಅಂದು ಕ್ರಾಂತಿ ಮಾಡಿದ, ಒಬ್ಬನೇ ಚಾಣಕ್ಯ! ಇಂದು ಒಬ್ಬನೇ ಮೋದಿ!

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...