23.5 C
Bangalore
Saturday, December 7, 2019

ರಾಜೀವರ ಯುದ್ಧನೌಕಾ ವಿಹಾರದ ರಹಸ್ಯವೇನು?

Latest News

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ: ಮೂವರು ಕಾರ್ಮಿಕರು ಸಾವು, ಓರ್ವನ ಸ್ಥಿತಿ ಗಂಭೀರ

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಒಡಿಯೂರಿನಲ್ಲಿ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ ವಕೀಲರ ಗುಂಪು!

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ...

ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತಷ್ಟು ಭದ್ರ ಸರ್ಕಾರವಾಗಿ ನಿರ್ಮಾಣಗೊಳ್ಳುತ್ತದೆ: ಸಂಸದೆ ಶೋಭಾ ಕರಂದ್ಲಾಜೆ

ವಿಜಯಪುರ: ಈ ಉಪಚುನಾವಣೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪರನ್ನು ಗಟ್ಟಿಗೊಳಿಸುವ ಚುನಾವಣೆ. ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತಷ್ಟು ಭದ್ರ ಸರ್ಕಾರವಾಗಿ ನಿರ್ಮಾಣಗೊಳ್ಳುತ್ತದೆ ಎಂದು...

ಭಾರತ ವಿಶ್ವಗುರು ಆಗಲಿ

ವಿಜಯಪುರ: ಭಾರತ ವಿಶ್ವ ಗುರು ಆಗಬೇಕಾದರೆ ನಾವೆಲ್ಲ ನಮ್ಮ ಸಂಸ್ಕೃತಿಯನ್ನು ಮೊದಲು ಪಾಲಿಸಬೇಕು ಬಬಲೇಶ್ವರದ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ...

ಸೌಲಭ್ಯಕ್ಕಾಗಿ ದಲ್ಲಾಳಿಗಳ ಮೋಸಕ್ಕೊಳಗಾಗಬೇಡಿ

ಸಿಂದಗಿ: ಸಾರ್ವಜನಿಕರು ಸರ್ಕಾರಿ ಸೌಲಭ್ಯಕ್ಕಾಗಿ ನಮ್ಮ ನಿಮ್ಮ ನಡುವೆ ಬರುವ ದಲ್ಲಾಳಿಗಳ ಮಾತಿನ ಮೋಸಕ್ಕೊಳಗಾಗಬಾರದೆಂದು ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಹೇಳಿದರು.ತಾಲೂಕಿನ ಗಣಿಹಾರ ಗ್ರಾಮದಲ್ಲಿ...

ಈ ಸಲ ಹಿಂದೂ ಎದ್ದಿದ್ದಾನೆ! ಅವನು ಈಗ ರಾಮ, ಅವನು ಭಾಗವತದ ಕೃಷ್ಣ ಇನ್ನು ರಾವಣ, ಕಂಸ, ನರಕ, ಜರಾಸಂಧ, ಭಗದತ್ತರ ಮಹಾಮೈತ್ರಿ ಆಗುವುದಿಲ್ಲ. ನಮ್ಮ ಒಳದ್ರೋಹಿಗಳನ್ನು ಇಮ್ರಾನ್ ಸಾಹೇಬರೋ, ಇಟಲಿಯ ಮಾಟದಗೊಂಬೆಗಳೋ ಯಾರೂ ರಕ್ಷಿಸಲಾರರು! ಭಾರತ ಸಶಕ್ತವಾಗಿದೆ.

ಅವಕಾಶವಾದಿಗಳಿಗೆ, ಸ್ವಾರ್ಥಿಗಳಿಗೆ, ಭ್ರಷ್ಟಾಚಾರಿಗಳಿಗೆ, ದರೋಡೆಕೋರರಿಗೆ, ದಬ್ಬಾಳಿಕೆಯಾಡಳಿತಗಾರರಿಗೆ ಸತ್ಯ ಹಿಡಿಸುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಅದಕ್ಕೆ ಪ್ರಸ್ತುತ ಚರ್ಚೆಯಲ್ಲಿರುವ ರಾಜೀವರ ‘ನೌಕಾಚಿತ್ರ’ವು ಒಂದು ಸಾಕ್ಷಿ ಮಾತ್ರ. ವಿಹಾರ ಹೋಗುವವರಿಗೆ ಲಕ್ಷದ್ವೀಪಗಳ ಒಂದು ನಿರ್ಜನ ಪ್ರದೇಶವೇ ಏಕೆ ಬೇಕಿತ್ತು? ಅದಕ್ಕೆ ಯುದ್ಧ ವಿಮಾನವಾಹಕ ಸೇನಾ ಹಡಗೇ ಏಕೆ ಬೇಕಿತ್ತು? ರಜಾದ ಮೋಜಾದರೆ ಅಲ್ಲಿ ನಾಲ್ಕೈದು ಇಟಾಲಿಯನ್ ಪ್ರಜೆಗಳೇ ಏಕೆ ಇರಬೇಕಿತ್ತು? ಹತ್ತು ದಿನಗಳ ‘ಯಾತ್ರೆ’ಯಲ್ಲಿ ಖಾಸಗೀವಿಹಾರವೋ? ಅಧಿಕಾರ ಪ್ರಯುಕ್ತ ಅಫಿಷಿಯಲ್ ಆದರೆ ಗೌಪ್ಯತೆ ಇರಬೇಡವೇ? ಅಲ್ಲಿ ಅಮಿತಾಭ್ ಬಚ್ಚನ್ ಕುಟುಂಬದ ಪಾತ್ರವೇನಿತ್ತು? ಪೂರ್ಣ ವಿವರಗಳು ಈಗ ಲಭ್ಯವಿವೆ.

1988ರ ಡಿಸೆಂಬರ್ 26. ರಾಜೀವರು ಆಗ ಪ್ರಧಾನಿ ಹಾಗೂ ಕಾಂಗ್ರೆಸ್ ಅಧ್ಯಕ್ಷ. ಹೊರಟದ್ದು ಬಂಗಾರಂ ದ್ವೀಪಕ್ಕೆ. ಲಕ್ಷದ್ವೀಪದ ಒಂದು ಭಾಗ ಅದು. ನಿರ್ಜನ ದೇಶ. ಐಎನ್​ಎಸ್ ವಿರಾಟ್​ನಲ್ಲಿ ಯಾನ. ಹೊರಟದ್ದು ಮಂಗಳೂರಿಂದ. ಅಲ್ಲಿಂದ ಲಕ್ಷದ್ವೀಪ ರಾಜಧಾನಿ ಕರಾವತಿಗೆ. ಅದು ಸಾಮಾನ್ಯ ಹಡಗಲ್ಲ, ಬಾಡಿಗೆಯ ಟ್ಯಾಕ್ಸಿಯಲ್ಲ. ಇದರ ಪರಿವಾರ ಅಪಾರ. ಸಮುದ್ರದಿಂದ ಯುದ್ಧವಿಮಾನ ಹಾರಿಸುವ ವಿಶಾಲ ಹಡಗು. ಅದಕ್ಕೆ ಗೂಢಚರ್ಯ ಸೌಕರ್ಯ, ರಕ್ಷಣೆ, ಜಲಾಂತರ್ಗಾಮಿಯ ಅನುಸರಣೆ, ಇನ್ನಿತರ ಶತ್ರುನಾಶಕ ನೌಕೆಗಳು, ಯಂತ್ರಗಳು, ಇನ್ನಿತರ ರಕ್ಷಕ ಅನುಚರಗಾಮಿಗಳೂ ಇರುತ್ತವೆ. ಯಾತ್ರಿಕರು ಯಾರು? ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕಾ, ಸೋನಿಯಾ ಸೋದರ, ಸೋದರಮಾವ, ಅಮಿತಾಭ್ ಪತ್ನಿ, ಇಬ್ಬರು ಮಕ್ಕಳು, ಸೋದರ, ಅವನ ಮಕ್ಕಳಿಬ್ಬರು, ಬೀರೇಂದ್ರ ಸಿಂಗ್, 6 ಇಟಾಲಿಯನ್ನರು, ಇಬ್ಬರು ಅಜ್ಞಾತ ವಿದೇಶೀಯರು, 14 ಭಾರತೀಯರು, ಆ ದ್ವೀಪದಲ್ಲಿ ಏನೂ ಸೌಕರ್ಯವಿರಲಿಲ್ಲ! ಅಲ್ಲಿ ಎಲ್ಲ ತಯಾರಿ ಯಾಕೆ? ಏನು ರಹಸ್ಯ ಕಾರ್ಯ? ಪತ್ರಕರ್ತರಿಲ್ಲ, ಏನೂ ಬಹಿರಂಗವಿಲ್ಲ? ಯಾರು ಯಾರು ಎಲ್ಲಿಂದ ಬಂದು ರಹಸ್ಯವಾಗಿ ಸೇರಿದರು? Society for promotion of Vacation, Tourism, and Water Sports ಇವರಿಗೆ ಅಲ್ಲೇನು ಕೆಲಸ? ಆಹಾರ? ನೂರು ಕೋಳಿಗಳ ಸಾಕಣೆ ಕೇಂದ್ರ, ಇಬ್ಬರು ಅಡಿಗೆಯವರು- Full time ಗಾಂಧಿ ಪರಿವಾರದ ಉಸ್ತುವಾರಿಯಲ್ಲಿ!

ನೌಕಾಧಿಕಾರಿಗಳಿಗೆ ಇಷ್ಟವಿರದೆ ಅನಿವಾರ್ಯ ಸಹಕಾರ, ಅವರದೇ ಹೇಳಿಕೆಗಳು. ಅಜ್ಞಾತ ವಿದೇಶಿಯರಲ್ಲಿ ಕ್ವಟ್ರೋಚಿ? ಇವನ ಕಥೆ ಗೊತ್ತಲ್ಲ? ಇಲ್ಲಿ ಯುದ್ಧನೌಕಾ ರಹಸ್ಯಗಳ ಭೇದನ, ವರದಿ ತಯಾರಿ? ಯಾರಿಗೆ ರವಾನೆ? ಎಷ್ಟು ಹಣಕ್ಕೆ? ಎಲ್ಲ ತನಿಖೆಗೆ ಒಳಪಟ್ಟರೆ ಸತ್ಯ ತಿಳಿದೀತು! ಇದೆಲ್ಲ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮಾಹಿತಿ. ಆಗಿನ ಅಡ್ಮಿರಲ್ ನಾಡಕರ್ಣಿ ಈಗಿಲ್ಲ. 2018ರಲ್ಲಿ ತೀರಿಕೊಂಡರು. ಹಡಗಿನ ರಿಕಾರ್ಡಗಳು ಇರಬೇಕಲ್ಲ? ಅಲ್ಲೇನುಂಟು?

ಸಂಶಯಕ್ಕೆ ಆಸ್ಪದವಾದ ಅಂಶಗಳು. ರಾಜೀವರಿಗೆ ವಿಶ್ರಾಂತಿಯೋ ವಿಹಾರವೋ, ಏಕಾಂತವೋ, ಖಾಸಗೀಶೈಲಿಯ ರಜೆಯ ಅವಕಾಶವೋ ಬೇಕಿದ್ದರೆ ಯುದ್ಧನೌಕಾವಾಹಕವಾದ ಅಪರೂಪದ ಈ ಹಡಗೇ ಏಕೆ ಬೇಕಿತ್ತು? ಬೇರೆ ಹಡಗುಗಳು ಇದ್ದವಲ್ಲ? Steamer ಸಾಕಿತ್ತಲ್ಲ? ಇದೇ ಏಕೆ ಬೇಕೆಂದರೆ, ಅದರ ರಚನೆ, ಸುರಕ್ಷೆ, ಅದರ ಏರ್ಪಾಡು, ಅದರ ಪರಿವಾರ, ಅದರ ಕಾರ್ಯನಿರ್ವಾಹಕ ಶಕ್ತಿ, ಅದರ ಅಳತೆ, ಅದನ್ನು ನಾಶಪಡಿಸಲು ಇರಬಹುದಾದ Loopholes, ಬಿರುಕುಗಳು, ಲೋಪದೋಷಗಳು, ಬೇರೊಂದು ದೇಶಕ್ಕೆ ಬೇಹುಗಾರಿಕೆಗಾಗಿ ಬೇಕಾಗಿರಲು ಸಾಧ್ಯ! ಅದು ಯಾವ ದೇಶ? ಸೋನಿಯಾ ಹಿಂದಿನ ಆ ದೇಶ ಯಾವುದು? ರಾಜೀವರು ಮರುಳಾಗಿ ಸಿಕ್ಕಿಕೊಂಡು ಅಧಿಕಾರ ದುರುಪಯೋಗಕ್ಕೆ ಅವಕಾಶವಾದ ಆ Blackmail ಸಂದರ್ಭ ಇರಬಹುದಾದರೆ ಅದು ಯಾವುದು? ರಾಜೀವರು ಆಗ ಯಾರ ಕೈಗೊಂಬೆ? ವಿಹಾರಕ್ಕೆ ಈ ಜನರಹಿತ ದ್ವೀಪವೇ ಏಕೆ ಬೇಕಿತ್ತು? ರಹಸ್ಯಪರೀಕ್ಷೆ ಯಾರ ಕಣ್ಣಿಗೂ ಬೀಳದಿರಲಿ ಎಂಬ ಆಶಯವೇ? ಗೂಢಚರ್ಯು ಅಲ್ಲ ಎನ್ನಲು ಪ್ರಮಾಣವೇನು? ಅನಾಯಾಸವಾಗಿ ಹೇಳುತ್ತಾರೆ ‘ಪ್ರಧಾನಿಯ ಹಕ್ಕು’- He was entitled to it ಎಂಬುದು ಯಾವುದು? ದೇಶದ ರಹಸ್ಯಗಳ ಮಾರಾಟವೇ? ಅಡ್ಮಿರಲ್ ರಾಮದಾಸರು ಹೇಳುತ್ತಾರೆ- ‘ಸೋನಿಯಾ, ರಾಜೀವ್, ಮಕ್ಕಳು ಮಾತ್ರ ಹತ್ತಿದ್ದರು’ ಎಂದು. ಅಯ್ಯಾ! ಈ ‘ಉಳಿದವರು’ ಎಲ್ಲಿಂದ ಹತ್ತಿದರು! ಕೊಚ್ಚಿನ್​ನಿಂದಲೇ? ಬೇರೊಂದು ಹಡಗಿನಿಂದಲೇ? ಹೆಲಿಕಾಪ್ಟರ್​ನಿಂದಲೇ? ಅಲ್ಲಿ ವಿದೇಶೀ ಇಟಾಲಿಯನ್ ಅಜ್ಞಾತರಿಗೆ ಇವರ ‘ವಿಹಾರ’ ಕಾಲದಲ್ಲಿ ಏನು ಕೆಲಸ ಇತ್ತು? ಇಲ್ಲಿ ಮಾರೀಚಮಾಯೆ! ವಿಹಾರ ಒಂದು ನೆಪ! ಹಡಗಿನ ಪರೀಕ್ಷೆಯೇ ಉದ್ದೇಶ್ಯ. ಅದಕ್ಕೆಂದೇ ಇಟಾಲಿಯನ್ನರು ಆಹ್ವಾನಿತರು. ಹಿಂದೆ ಯುಪಿಎ ಅವಧಿಯಲ್ಲಿ ತಮಿಳುನಾಡಿನ ಕೂಡಂಕುಳಂ ಸಮುದ್ರತೀರದ ಅಣುಕೇಂದ್ರದ ಬಳಿ ಇಟಲಿಯ ಹಡಗು ಓಡಾಡುತ್ತ ಭಾರತೀಯ ತೀರರಕ್ಷಕರನ್ನು ಕೊಂದದ್ದು ನೆನಪಿದೆಯೇ? ಆ ಹಡಗಿನಲ್ಲಿ ಏನಿತ್ತು? ಭಾರತದ ಸಾಗರತೀರದಿಂದ ಅದು ಹೊತ್ತು ಹೋದುದೇನು? ಆ ಮರಳಿನಲ್ಲಿ ಥೋರಿಯಂ ನಿಕ್ಷೇಪ ಅಣುಶಸ್ತ್ರಕ್ಕೆ ಉಪಯುಕ್ತವಾದುದರ ಸಮೃದ್ಧಿಯ ಬಗೆಗೆ ವರದಿ ಇತ್ತು, ಓದಿದ್ದೀರಾ? ಪ್ರಕರಣವನ್ನು ಏಕೆ ಮುಚ್ಚಲಾಯ್ತು? ಮನಮೋಹನರು ಏಕೆ ಸುಮ್ಮನಾದರು? ಆಗಿನ ರಕ್ಷಾಮಂತ್ರಿ ಸಲ್ಮಾನ್ ಖುರ್ಷಿದ್/ ಎ.ಕೆ.ಆಂಟನಿ ಇವರ ಪಾತ್ರವೇನು?

ಮೋದಿ ವಾಯುವಿಹಾರ ಖರ್ಚಿನ ಕುರಿತು ಕಾಂಗ್ರೆಸ್ಸಿಗರು ಅನವಶ್ಯ ಗೊಂದಲ ಎಬ್ಬಿಸುತ್ತಿದ್ದಾರೆ. ಮೋದಿ ದೇಶರಕ್ಷಣೆಗಾಗಿ, ವಿದೇಶಾಂಗ ನೀತಿಯ ದೃಢತೆಗಾಗಿ, ಸ್ನೇಹ ಸಂಪಾದನೆಗಾಗಿ, ಪಾಕನ್ನು ಕಟ್ಟಿಹಾಕಲು, ಚೀನಾದ ಬೆನ್ನುಮುರಿಯಲು ಮಾಡಿದ ಸರ್ಕಾರಿಯಾನಗಳು! ಇಲ್ಲಿ ಮುಚ್ಚಿಡುವುದು ಬರೀ Diplomacy ಕುಟುಂಬ ಮೋಜಲ್ಲ! ಅಲ್ಲಿ ಕಾಂಗ್ರೆಸ್ಸಿನ ಕುಟುಕು. ‘ಮೋದಿಗೆ ಕುಟುಂಬವಿಲ್ಲ. ಮೋಜಿನ ಪ್ರವಾಸಾನುಭವ ಇಲ್ಲ’. ಅಯ್ಯಾ! ಇದು Credit!!

ಟಿವಿ ಪ್ಯಾನೆಲ್ಲುಗಳಲ್ಲಿ ಪೆದ್ದುಪೆದ್ದಾಗಿ ಕಾಂಗ್ರೆಸ್ಸನ್ನು ರಕ್ಷಿಸಲು, ಪಾರುಮಾಡಲು ಹೊರಟವರನ್ನು ನೋಡಿ ಅಳಲೂ ಆಗದೆ, ನಗಲೂ ಆಗದೆ ಗಂಭೀರ ಚಿಂತನೆಯಲ್ಲಿರುವ ಪ್ರಜೆಗಳಲ್ಲಿ ನಾನೂ ಒಬ್ಬ! ಒಬ್ಬ ಹೇಳುತ್ತಾನೆ, ‘ಇದು ಮೋದಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ದಾರಿ ತಪ್ಪಿಸುವ Diversionary ತಂತ್ರ’ ಎಂದು!

ಅಸಡ್ಡೆಯ, ಉಡಾಫೆಯ ಮಾತು! ಮೋದಿ ಎಲ್ಲಿ ವಿಫಲರಾಗಿದ್ದಾರೆ? ಒಳಶತ್ರುಗಳನ್ನು ಬಯಲಿಗೆಳೆಯುತ್ತಿ ರುವುದರಲ್ಲಿ ಎಲ್ಲ ಸಫಲವೇ ಅಲ್ಲವೇ? ಇಲ್ಲವಾದರೆ ಘಟಬಂಧನಕಾರರ ಆತಂಕಕ್ಕೇನು ಕಾರಣ? ಯಾರು ಯಾರು ಎಷ್ಟೆಷ್ಟು ಆಸ್ತಿ, ಕಪು್ಪಹಣ ಮಾಡಿದ್ದಾರೆಂಬುದೆಲ್ಲ ಈಗ ಬಹಿರಂಗ! ಮೋದಿ ಸಫಲತೆಯಲ್ಲಿ ಇವರ ವೈಫಲ್ಯ ಬಹಿರಂಗ! ಬೇತಾಳವಾಗಿ ಇವರ ಕೂಗು ಕಾಡುತ್ತಿದೆ. ಅತ್ತ ಮೋದಿ ಇತ್ತ ಬೇತಾಳ! ಬೇರೊಂದತ್ತ ಜೈಲು! ಇನ್ನೊಬ್ಬ ಕೇಳುತ್ತಾನೆ- ‘ರಾಜೀವರ ಚರಿತ್ರೆಯ ಈ ಅಂಶ ಈಗಲೇ ಬಹಿರಂಗ ಏಕೆ?’ ಎಂದು. ಮೂಢಪ್ರಶ್ನೆ. ಬಾಯಾರಿದಾಗಲೇ ನೀರು ಕುಡಿಯುವುದು!

‘ನೀವು ಯಾರಿಗೆ ವೋಟು ಹಾಕುತ್ತೀರಿ? ತಿಳಿದಿರಲಿ’ ಎಂಬ ಎಚ್ಚರಿಕೆ ಚುನಾವಣಾ ಸಂದರ್ಭದಲ್ಲಲ್ಲವೇ. ಅಪರಾಧಿಗಳು ಪಾರಾದ ಮೇಲೆ ರ್ಚಚಿತವಾಗಬೇಕೇನಿರಯ್ಯ? ಮತ್ತೆ ಪ್ರಶ್ನೆ, ‘ರಾಜೀವರು ಸತ್ತಾಯ್ತು. ಈಗ ಈ ಕೆದಕು ಈ ಮೂಲಾನ್ವೇಷಣೆ ಏಕೆ?’ ಉತ್ತರ: ಅವರು ಸತ್ತುಹೋದರೂ ಬಿಟ್ಟು ಹೋದ ಬೇತಾಳ ಬಳುವಳಿ ಇದೆಯಲ್ಲ? ಬೇರು ಇರುವ ತನಕ ವಿಷವೃಕ್ಷವೂ ಚಿಗುರುತ್ತದೆ! ಮೂಲವನ್ನೇ ಅಗೆದು ಸುಟ್ಟು ಭಸ್ಮವನ್ನು ಹುಳಿಮಜ್ಜಿಗೆಯಲ್ಲಿ ಚಾಣಕ್ಯ ಏಕೆ ಕುಡಿದ? ‘ಶತ್ರುಶೇಷಂ ನ ಶೇಷವೇತ್’ ಎಂದು ಜರೆಯಲಿಲ್ಲವೇ? ಭಾರತಕ್ಕೆ ಬೇಕು ಭಯಮುಕ್ತಿ. ಅದು ಬರುವಂತೆ ಕಾಣುತ್ತಿಲ್ಲ. ಒಳಶತ್ರುಗಳು ಪಾಕನ್ನು ಹೊಗಳಿ ಹಾಡುತ್ತಾರೆ. ಭಯೋತ್ಪಾದಕರ ಕೈ ಕುಲುಕುತ್ತಾರೆ, ಬೆನ್ನು ಚಪ್ಪರಿಸುತ್ತಾರೆ! ಒಗ್ಗೂಡುತ್ತಾರೆ! ಸಹಾಯ ನೀಡುತ್ತಾರೆ! ‘ಸ್ವಾತಂತ್ರ್ಯ ಹಕ್ಕು’ ಎಂದು ಅಬ್ಬರಿಸುತ್ತಾರೆ! ‘ಹಿಂದೂ’ ನಾಶ, ‘ಹಿಂದೂದೂಷಣೆ’, ‘ಹಿಂದೂಸಂಹಾರ’ಕ್ಕೆ ತಂತ್ರ ನಿರೂಪಿಸುತ್ತಾರೆ. ‘ಹಿಂದೂ’ ಎಲ್ಲರನ್ನೂ ಒಳಗೊಳ್ಳುವ ಪರಮಾತ್ಮನ ಆಲಿಂಗನ ಬಾಹು ಎಂಬುದನ್ನು ಅಲ್ಲಗಳೆದು ‘ಕಬಂಧಬಾಹು’ ಎಂದು ತಿರುಚಿ, ವಿಕೃತಿ ಮಾಡಿ ಅಲ್ಪಸಂಖ್ಯಾತರನ್ನು ಬೆದರಿಸಿ ವೋಟುಬ್ಯಾಂಕು, ವೋಟುಮಾರ್ಕೆಟು ಮಾಡಿಕೊಳ್ಳುತ್ತಾರೆ. ಈ ಸಲ ಹಿಂದೂ ಎದ್ದಿದ್ದಾನೆ! ಅವನು ಈಗ ರಾಮ, ಅವನು ಭಾಗವತದ ಕೃಷ್ಣ, ಇನ್ನು ರಾವಣ, ಕಂಸ, ನರಕ, ಜರಾಸಂಧ, ಭಗದತ್ತರ ಮಹಾಮೈತ್ರಿ ಆಗುವುದಿಲ್ಲ. ಅವರಿಗೂ ಗೊತ್ತು ರಾಜೀವರ ಯುದ್ಧವಿಮಾನ ಸಾಗಣೆಯ ನೌಕೆಯ ರಹಸ್ಯದಂತಹ ಇನ್ನೆಷ್ಟು ಬಾಣಗಳು, ಬಾಂಬುಗಳು, ಮೋದಿಯವರ ಬತ್ತಳಿಕೆಯಲ್ಲಿವೆಯೋ? ನೋಡುತ್ತಿರಿ! ಚೀನಾ ಈಗ ಪಾಕನ್ನೂ, ಭಯೋತ್ಪಾದಕರ ರಕ್ಷಣೆಯ ತಂತ್ರವನ್ನೂ ಕೈ ಬಿಟ್ಟಾಯ್ತು! ನಮ್ಮ ಒಳದ್ರೋಹಿಗಳನ್ನು ಇಮ್ರಾನ್ ಸಾಹೇಬರೋ, ಇಟಲಿಯ ಮಾಟದಗೊಂಬೆಗಳೋ ಯಾರೂ ರಕ್ಷಿಸಲಾರರು! ಭಾರತ ಸಶಕ್ತವಾಗಿದೆ. ಶತ್ರುಗಳಿಗೆ ಅದು ಬೇಕಿಲ. ನಮಗೆ ಬೇಕಲ್ಲ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Stay connected

278,741FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...