ಬಂಗಾಳದಲ್ಲಿ ಸಾಂಸ್ಕೃತಿಕ ಬರಗಾಲ ಉದ್ಭವಿಸಿದೆಯೇ?

ಪ್ರಖರ ರಾಷ್ಟ್ರವಾದಿಗಳ ಬೀಡಾಗಿದ್ದ ಬಂಗಾಳದ ಸ್ಥಿತಿ ದಯನೀಯವಾಗಿದೆ. ಜೈಶ್ರೀರಾಮ್ ಘೋಷಣೆಗೆ ಅಲ್ಲಿಯ ಮುಖ್ಯಮಂತ್ರಿಗಳೇ ಉರಿದು ಬೀಳುತ್ತಿದ್ದಾರೆ ಅಂದರೆ ಏನರ್ಥ? ಆ ನೆಲದ ಸಾಂಸ್ಕೃತಿಕ ಮೌಲ್ಯಗಳೆಲ್ಲ ನಾಶವಾಗುತ್ತಿವೆ. ಹಿಂದೆ ಕಮ್ಯುನಿಸ್ಟರು ಮಾಡಿದ ದ್ರೋಹವನ್ನೇ ಈಗಿನ ಮಮತಾ ಸರ್ಕಾರ ಮಾಡುತ್ತಿದೆ.

‘ಬೆಂಗಾಲ್’ ಎಂದು ಬರೆದು ನೋಡಿ. ಅಕ್ಷರಗಳು ಸ್ವಲ್ಪ ವ್ಯತ್ಯಾಸವಾದರೆ ‘ಬೆಂಗಾಡು’ ಎಂದಾಗಬಹುದಾದ ವಿಡಂಬನೆ, ವಿಗಡತೆಗೆ ಭಯ ಪಡುತ್ತೀರಿ! ಅತ್ಯಂತ

ಶ್ರೇಷ್ಠ ರಾಷ್ಟ್ರವಾದಿಗಳ ನಾಡು ಒಂದು ಕಾಲದಲ್ಲಿ! ಬಂಕಿಂಚಂದ್ರ, ಅರವಿಂದ, ವಿವೇಕಾನಂದ, ಸುಭಾಷ್, ವಿದ್ಯಾಸಾಗರ, ಶರತಚಂದ್ರ, ಬಿ.ಸಿ.ರಾಯ್, ಜಗದೀಶಚಂದ್ರ- ಇಂಥವರ ನಾಡು.

ಕನ್ನಡಿಗರೂ ಹಲವರು ಬಂಗಾಳಿ ಕಲಿತು, ಬರೆದು, ಓದಲು ಪ್ರೇರಣೆಯಿತ್ತ ನಾಡು. ಇಲ್ಲಿ ‘ಬೆಂಗಾಲ್ ಲ್ಯಾಂಪ್ಸ್’ ಎಂಬ ವಿದ್ಯುತ್ ಬಲ್ಬ್ ತಯಾರಿಕೆಯ ಕಂಪನಿಯ ಹೆಸರಲ್ಲೂ ಹೊಕ್ಕ ಸ್ಪೂರ್ತಿ, ಅದೊಂದು ಕಾಲ. ಹಾಳು ನವಾಬರು-ಸಿರಾಜುದ್ದೌಲ್, ಮೀರ್ ಜಾಫರ್​ಗಳ ಹಾವಳಿಯಲ್ಲಿ ಪ್ಲಾಸಿ ಕದನದಲ್ಲಿ ಬ್ರಿಟಿಷರು ಅಲ್ಲಿ ಕಾಲಿಟ್ಟರು. ಶುರುವಾಯ್ತು ಕ್ರೖೆಸ್ತರ ಹಾವಳಿ. ರಾಜಾರಾಂ ಮೋಹನ ರಾಯರು, ದಯಾನಂದರ ಆರ್ಯ ಸಮಾಜ (ಪಂಜಾಬದಲ್ಲಿ), ಬ್ರಹ್ಮ ಸಮಾಜ (ಬೆಂಗಾಲದಲ್ಲಿ) ಸ್ಥಾಪಿಸಿ ಹೋರಾಟ ಮಾಡಬೇಕಾಯ್ತು. ಭಾರಿ ಪ್ರಮಾಣದಲ್ಲಿ ಬಂಗಾಳಿ ಮಿದುಳಿಗೆ ಹೊಡೆತ ಬಿತ್ತು. ಕಲ್ಕತ್ತ ಬ್ರಿಟಿಷರ ಭಾರತದ ರಾಜಧಾನಿಯೂ ಆಗಿ, ವಿದೇಶಿ ದರ್ಬಾರು ಪ್ರಾರಂಭವಾಯ್ತು! ಜಹಾಂಗೀರ ಕಾಲದಲ್ಲಿ ಕಲ್ಕತ್ತೆಯಲ್ಲಿ ಬ್ರಿಟಿಷರಿಗೆ ‘ಕೋಠಿ’ (ವ್ಯಾಪಾರಮಳಿಗೆ) ಕಟ್ಟಿಕೊಳ್ಳಲು ಅವಕಾಶ ಇತ್ತದ್ದು ನಮ್ಮಲ್ಲಿ ಮೂದೇವಿಯ ಆಹ್ವಾನ ಕಾಲವಾಯ್ತು. ಸ್ವಾತಂತ್ರ್ಯ ಬರುವ ವೇಳೆಗೆ ಮುಸ್ಲಿಂರು ಬಾಹುಳ್ಯವಾಗಿ ಅಲ್ಲಿ ವಿಭಜನೆಯ ದುಷ್ಪರಿಣಾಮ ಬೆಳೆದಿತ್ತು. ‘ವಂಗಭಂಗ’ ಬ್ರಿಟಿಷರ ಕಾಲದಲ್ಲೇ ಆಗಿತ್ತಲ್ಲ? ಅದು ಬಾಂಗ್ಲಾದೇಶದ ಉದಯದ ದುರ್ಬೀಜ! ಕಾಂಗ್ರೆಸ್ಸಿನಲ್ಲೇ ಇದ್ದೂ, ಆ ಸಂಸ್ಥೆಯ ಬ್ರಿಟಿಷ್ ವಿಧೇಯತೆಯ ಗುಲಾಮಗಿರಿಯನ್ನು ಒಪ್ಪದೆ ಹೊರಬಂದ ನೇತಾಜಿ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದ್ದು, ಅವರು ದೇಶ ಬಿಟ್ಟ ನಂತರ ಎಡಪಂಥೀಯ ನೆಲೆಯಾಯ್ತು! ಅಲ್ಲಿ ಕಮ್ಯುನಿಸಂ ತಳವೂರಿದ್ದು ಆಗ, ಹಾಗೆ.

ಆಮೇಲೆ ಭದ್ರಕೋಟೆಯೂ ಆಗಿ ಅನೇಕ ಬ್ರಾಹ್ಮಣ ನಾಯಕರು ಕಾಂಗ್ರೆಸ್ಸಿನ ವಿರುದ್ಧ ಅತ್ತ ವಾಲುತ್ತ ಸೋಮನಾಥ ಚಟರ್ಜಿ, ಇಂದ್ರಜಿತ್ ಗುಪ್ತಾ, ಮುಖರ್ಜಿ, ಬ್ಯಾನರ್ಜಿಗಳು ದಾರಿ ತಪ್ಪಿದರು. ಚಟರ್ಜಿ= ಚತುರ್ವೆದಿ, ಮುಖರ್ಜಿ= ಮುಖೋಪಾಧ್ಯಾಯ= ಘನಪಾಠಿ= ತ್ರಿವೇದಿ, ದ್ವಿವೇದಿಗಳಿಗೆ ಐಡೆಂಟಿಟಿ ನಾಶವಾಯ್ತು. ಅರಿವಿಲ್ಲದೆಯೇ ಪ್ರಪಾತಕ್ಕೆ ಬಿದ್ದವರು ಬಂಗಾಳ ನಾಶಕ್ಕೆ ಹೀಗೆ ಮುಹೂರ್ತವಿಟ್ಟರು. ಜ್ಯೋತಿ ಬಸು, ಬುದ್ಧದೇವ ಭಟ್ಟಾಚಾರ್ಯರಂಥವರು ಗ್ರಾಸ್ ರೂಟ್ ಹಂತದಲ್ಲಿ ‘ಹಿಂಸಾಚಾರ ಮೂಲಕವೇ ಕ್ರಾಂತಿ’ ಎಂಬ ಟೆರರಿಸಂ ಹುಟ್ಟಿಸಿದರು! ಅಧಿಕಾರ ಊರ್ಜಿತ ಮಾಡಿಕೊಂಡರು. ಈಗಿನ ಮಮತಾ ಬ್ಯಾನರ್ಜಿಯವರ ‘ತೃಣಮೂಲ’ದ ಮೂಲ ಟೆರರ್ ಅಲ್ಲೇ ಹುಟ್ಟಿ ಬೆಳೆಯಿತು. ಹೆಸರು ಬದಲಾದರೂ, ಪಾರ್ಟಿ ಬದಲಾದರೂ ಉಳಿದದ್ದು ಟೆರರ್​ನ ತೃಣಮೂಲವಲ್ಲವೇನಿರಯ್ಯ?

‘ಜೈ ಶ್ರೀರಾಮ್ ದ್ವೇಷಮೂಲ ಅಲ್ಲಿದೆ! ಈಶ್ವರ ಚಂದ್ರ ವಿದ್ಯಾಸಾಗರರ ದೇಶಭಕ್ತಿ, ತೃಣಮೂಲರಿಗೆ ಅಪಾಯಗಂಟೆಯಾಗಿಯೇ, ಅವರ ವಿಗ್ರಹ ಒಡೆಯಲ್ಪಡುತ್ತದೆ. ಎಲ್ಲ ತರ್ಕಬದ್ಧವಲ್ಲವೇ? ನೋಡಿ, ಕೆಲವು ದೇಶಭಕ್ತರು ಈ ಪರಿಸ್ಥಿತಿಯನ್ನು ಈಗಿನ ಕಾಶ್ಮೀರ ಪ್ರತ್ಯೇಕತಾವಾದಿಗಳ ಮತಿಗೆಟ್ಟ ದುಃಸ್ಥಿತಿಗೆ ಹೋಲಿಸಿರುವುದು ವಿವೇಚನೀಯ. ಮೊನ್ನೆಯವರೆಗೆ ಅಸ್ಸಾಂ ಈ ಸ್ಥಿತಿಯಲ್ಲೇ ಇತ್ತು. ಈಶಾನ್ಯದ ಇತರೆ ರಾಜ್ಯಗಳೂ ಸಹ. ಇತ್ತ ಕೇರಳವು ಇನ್ನೊಂದು ಕಾಶ್ಮೀರವಾಗುವ ಸ್ಥಿತಿ. ಏಕೆ? ಹಿಂದೂವಿರೋಧಿ ರಾಜಕೀಯ, ಒಳ-ಹೊರ ಶತ್ರುಗಳ ಅಟ್ಟಹಾಸ, ದರ್ಬಾರಗಳ ಪರಿಣಾಮ.

ದೇಶ ಒಡೆಯುವವರು ಮೊದಲು ಮಿದುಳನ್ನು ಒಡೆಯುತ್ತಾರೆ! ಅಲ್ಲಿ ಮ್ಯಾಕ್ಸ್ ಮುಲ್ಲರನೂ ಒಂದೇ, ಸ್ಟಾಲಿನ್ನನೂ ಒಂದೇ, ಬ್ರಿಟಿಷರೂ ಒಂದೇ, ಎಲ್ಲ ಭಯೋತ್ಪಾದಕರೂ ಒಂದೇ. ಬಂಗಾಳಿ ಪತ್ರಿಕೆಯೊಂದು ದೇಶದ್ರೋಹಿಗಳಿಗೆ ಸ್ಪೂರ್ತಿಯಿತ್ತು, ಪ್ರಶಸ್ತಿ ಕೊಡುವ ಒಂದು ಸಾಧನವಾಯ್ತು. ಕ್ರೖೆಸ್ತರೂ, ಮುಸ್ಲಿಂ ಧುರೀಣರು, ಕಮ್ಯುನಿಸ್ಟರು ಇಲ್ಲಿ ಒಂದೇ! ಏಕಮೇವ ಉದ್ದೇಶ ಹೊಂದಿದವರು! ‘ಹಿಂದೂನಾಶ’ ‘ಹಿಂದೂ ಐಡೆಂಟಿಟಿ’ಗಳನ್ನೇ ಭಯೋತ್ಪಾದಕ ಎಂದು ಬಿಂಬಿಸುವ ಘನ ಹುನ್ನಾರದಲ್ಲಿ ಸಹಭಾಗಿಗಳು. ಆ ಹಿನ್ನೆಲೆಯಲ್ಲೇ ಮಮತಾ ಬ್ಯಾನರ್ಜಿಯ ಅಟ್ಟಹಾಸ ನೋಡಬೇಕು. ಮೋದಿ-ಷಾ ಇವರಿಗೆ ಹೇಗೆ ಕಾಣುತ್ತಾರೆ? ರಾವಣನಿಗೆ ರಾಮ-ಲಕ್ಷ್ಮಣರು ಕಂಡಂತೆ! ಅನುಮಾನವೇ ಇಲ್ಲ. ಹಿಂದೆ ಇದೇ ಮಮತಾ ಅಟಲ್ ಬಿಹಾರಿ ವಾಜಪೇಯಿ ಅವರನ್ನೂ ದ್ವೇಷಿಸಿದರು. ಅವರೂ ಹಾಗೂ ಜಯಲಲಿತಾರು ಸೇರಿ- ಒಂದೇ ಒಂದು ವೋಟಿನಿಂದ ಆ ನೇತೃತ್ವ ಸರ್ಕಾರವನ್ನು ಉರುಳಿಸಿದರು. ಅದು ಆಕಸ್ಮಿಕವಲ್ಲ. ಅಲ್ಲಿತ್ತು ಹಿಂದೂದ್ವೇಷ, ಹಿಂದೂ ಪುನರುಜ್ಜೀವನದ ಭಯ. ಈ ಭಯವನ್ನು ಮೊದಲು ಬಿತ್ತಿ ಬೆಳೆಸಿದ್ದು ನೆಹರು, ಅವರ ಕಾಂಗ್ರೆಸ್ಸು.

ಪ್ರಾಚೀನ ಭಾರತ ಸಂಸ್ಕೃತಿಯ ವಿರುದ್ಧ ಕೃತಕ ಭಾರತದ ಹೋರಾಟ! ಇಂದ್ರಜಿತನ ಮಾಯಾಯುದ್ಧ ಆರಂಭದ ಕಾಲ. ಯುದ್ಧದಲ್ಲಿ ಮೊದಲ ಸೋಲು ಪ್ರಾಚೀನ ಭಾರತಕ್ಕೆ ಆದುದ್ದು ಪಾಕ್ ಸೃಷ್ಟಿಯಲ್ಲಿ! ಅದರ ಮೂಲ ಹಿಂದೂ-ಮುಸ್ಲಿಂರ ‘ಪ್ರತ್ಯೇಕ ಕಲ್ಚರ್’ ಎಂಬ ಭ್ರಮೆ. ಆ ಭ್ರಮೆಯ ಹರಿಕಾರರು ಜಿನ್ನಾ ಸಾಹೇಬರು. ‘ದ್ವಿರಾಷ್ಟ್ರ ಸಿದ್ಧಾಂತ’ದಲ್ಲಿ ದೇಶ ಒಡೆಯಿತು. ಕಾಂಗ್ರೆಸ್ಸು ಪಾಠ ಕಲಿಯಲಿಲ್ಲ. ಒಮ್ಮೆ ದಾರಿ ತಪ್ಪಿದರೂ. ಪಟೇಲರ ಭಾರತದೃಷ್ಟಿಗೆ ನೆಹರು ಅಡ್ಡಿ ಬರುತ್ತ ಕಾಶ್ಮೀರ ಸಮಸ್ಯಾ ಸೃಷ್ಟಿ, ಹೈದರಾಬಾದ್ ವಿಮೋಚನೆಗೆ ಅಡ್ಡಿ, ಗೋವಾ ವಿಮೋಚನೆಗೆ ಅಡ್ಡಿ ಮಾಡುತ್ತ, ಸೋಮನಾಥ ದೇವಾಲಯ ಜೀಣೋದ್ಧಾರಕ್ಕೂ ಅಡ್ಡಿ ಮಾಡುತ್ತ ವಿಭಜಕ ಶಕ್ತಿಗಳ ಪೋಷಕರಾಗಿ, ಜೆಎನ್​ಯುು ಸ್ಥಾಪಿಸಿ, ನಾನಾ ಎಡಪಂಥೀಯ ಶಾಖೆಗಳ ಹುಟ್ಟಿಗೆ ಕಾರಣವಾದದು, ಈಗ ಸೋನಿಯಾ ಕಾಲದಲ್ಲೂ ಕಾಂಗ್ರೆಸ್ಸು ಹಲವು ಬಾರಿ ರಾಷ್ಟ್ರವಿರೋಧಿ ಧೋರಣೆಗಳನ್ನು ತಳೆದಿದ್ದಲ್ಲದೆ, ಅದನ್ನು ಸಮರ್ಥಿಸಿಕೊಂಡಿದ್ದು ದುರದೃಷ್ಟಕರ.

ಕಾಂಗ್ರೆಸ್ಸು, ತೃಣಮೂಲ, ಎಸ್​ಪಿ, ಆರ್​ಜೆಡಿ, ಡಿಎಂಕೆ, ಜನತಾ ದಳ, ಸಿಪಿಐ, ಸಿಪಿಐ (ಎಂ) ಇವರೆಲ್ಲ ಮೋದಿಯವರನ್ನು ಏಕೆ ದ್ವೇಷಿಸುತ್ತಿದ್ದಾರೆ. ಅವರು ಹಿಂದೂ ಸಂಸ್ಕೃತಿಯ ಸಂಕೇತವಾದ ಪ್ರಯುಕ್ತ. ‘ಹಿಂದೂ’ ಎಂಬುದು ಅಮೃತ. ಸಮುದ್ರಮಥನ ಕಾಲದಲ್ಲಿ ಮೊದಲು ಹಾಲಾಹಲ ಬಂತು. ಅದು ಪಾಕ್​ನ ಉದಯ. ಆ ಮೇಲೆ ಬಂದದ್ದು ಅಮೃತ. ಈಗ ಆ ಅಮೃತವನ್ನೇ ಅಪಹರಿಸಲು ಹುನ್ನಾರ ನಡೆಯುತ್ತಿದೆ.

ಇನ್ನೊಂದು ವರ್ತಮಾನ. ನಾನು ನಲ್ವತ್ತು ವರ್ಷದಿಂದ ಆದರದಿಂದ ಓದಿ ಸ್ಪೂರ್ತಿ ಪಡೆಯುತ್ತಿದ್ದ ಒಂದು ಪತ್ರಿಕೆ ಈಗ ಎಡಪಂಥೀಯರ ವಶದಲ್ಲಿದೆ. ಅಲ್ಲಿ ರಾಹುಲರ ಸಂದರ್ಶನಕ್ಕೆ ಒಂದು ಇಡೀ ಪುಟ ಮೀಸಲು. ಮೋದಿಗೆ ‘ಪರ್ಯಾಯ’ ತಯಾರು ಮಾಡಿದ್ದೇನೆ ಎಂದು ರಾಹುಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಯಾವುದು ಆ ಪರ್ಯಾಯ, ಅವರ ದೀಕ್ಷೆ ಸ್ಯಾಮ್ ಪಿತ್ರೋಡಾರಿಗೆ. ಸಾಗರಾಂತ ಕಾಂಗ್ರೆಸ್ಸಿನ ನೇತಾರ, ಅಂದರೆ ವಿದೇಶಿ ಶಕ್ತಿಗಳ ಸಂಘಟಕ ಅಂತ. ಮೋದಿ ಎದುರು ವಿದೇಶ ಶಕ್ತಿಗಳು ಯಾರು? ಅರಬ್ಬರು, ಇಟಲಿಯವರು, ಇನ್ನಿತರರು. ಈ ವಿದೇಶೀ ಶಕ್ತಿಗಳೆಲ್ಲ ಪಾಕ್ ಸೇರದೇ ಇರಲು ಸಾಧ್ಯವೇ? ಭಾರತ ಪ್ರಬಲ ರಾಷ್ಟ್ರವಾಗುವುದು ಯಾರಿಗೆಲ್ಲ ಬೇಡವೋ ಅವರೆಲ್ಲರ ಸಂಘಟನೆ. ಭಾರತೀಯ ಒಳದ್ರೋಹಿಗಳನ್ನೂ ಇವರು ‘ದತ್ತು’ ತೆಗೆದುಕೊಂಡಿದ್ದಾರೆ. ಅಲ್ಲಿ ಕಮಲ್ ಹಾಸನ್, ಸಿಧು, ಚಿದಂಬರಂ, ದಿಗ್ವಿಜಯರಂತೆ. ಝಾಕೀರ್ ನಾಯಕ್, ಸಯೀದ್ ಹಫೀಜ್, ಕಾಶ್ಮೀರ ವಿದ್ರೋಹಿಗಳೂ ಎಲ್ಲ ಸೇರುತ್ತಾರೆ. ಎನ್​ಡಿಎಯನ್ನು ಒಡೆಯಲು ಎಷ್ಟೆಲ್ಲ ಯತ್ನಿಸಿದರು ಅಂತ ನೋಡಿಲ್ಲವೇ? ನಿತೀಶ್ ಕುಮಾರರಿಗೆ ಗಾಳ ಹಾಕಿಯೂ ನೋಡಿದರು, ಫಲಿಸಲಿಲ್ಲ. ಮೋದಿಗೆ ಪರ್ಯಾಯ ನೇತೃತ್ವದ ಸರ್ಕಾರಕ್ಕೆ ಇವರೆಲ್ಲ ಅಶ್ವಮೇಧ ಕುದುರೆಯನ್ನು ಹುಡುಕುತ್ತ, ಸೋತು ಹೋದರು.

ಇದೆಲ್ಲ ಕನಸು ತುಕ್ಡೆ ತುಕ್ಡೆ ಗ್ಯಾಂಗಿನದ್ದಾಗಿತ್ತು. ಅದಕ್ಕೆ ಖರ್ಚಿಲ್ಲ, ವೆಚ್ಚವಿಲ್ಲ.‘ಮೋದಿ ಬರಬಾರದು’ ಎಂಬ ಸೋನಿಯಾರ ರಾಗ ಫಲಿಸಲಿಲ್ಲ. ಮೋದಿಯನ್ನು ತಡೆಯಲು ಯಾವುದೇ ‘ತ್ಯಾಗ’ಕ್ಕೂ ಸಿದ್ಧ ಎಂದಿದ್ದರು. ತ್ಯಾಗದ ಎರಡನೇ ಅಂಕ, ಅಣಕ! ಅಪನಾಣ್ಯೀಕರಣದ ಮೂಲಕ ಮೋದಿ ಕಪು್ಪಹಣಕ್ಕೆ ಕೊಡಲಿ ಪೆಟ್ಟು ನೀಡಿದರು. ಆದರೆ, ಭ್ರಷ್ಟಾಚಾರದ ಹಲವು ಕೇಸುಗಳಿರುವ ನಾಯಕರಿಗೆ ಇದೆಲ್ಲ ಬೇಡವಾಗಿತ್ತು. ಸಿಆರ್​ಪಿಎಫ್ ಬಂಗಾಳದಲ್ಲಿ ಅಮಿತ್ ಷಾ ಅವರನ್ನು ರಕ್ಷಿಸಿತು.

ನನಗೆ ಕಂಸನ ಕೊನೆಯ ದಿನಗಳು ನೆನಪಾಗುತ್ತಿವೆ. ಒಬ್ಬ ಕೃಷ್ಣ ಎಷ್ಟು ಜನರನ್ನು ವಧಿಸಿದ! ಅವರೆಲ್ಲ ಧರ್ಮದ್ರೋಹಿಗಳು. ಧರ್ಮದಲ್ಲಿ ರಾಷ್ಟ್ರಧರ್ಮವೇ ಶ್ರೇಷ್ಠ ಎಂದಿತ್ತು ವೇದ. ‘ರಾಷ್ಟ್ರಂ ಅಶ್ವಮೇಧಃ’ ಎಂದರು. ಈ ಬಾರಿ ಮೋದಿ ಬಾರದಿದ್ದರೆ ಮುಂದಿನ ಸ್ಥಿತಿ ತುಂಬ ಜಟಿಲವಾಗಿತ್ತು. ರಾಷ್ಟ್ರದ್ರೋಹಿಗಳು ನಿರಾಶರಾಗಿದ್ದಾರೆ. ಅದೇನೆ ಇರಲಿ, ಬಂಗಾಳ ಹಿಂಸಾಚಾರದಿಂದ ಮುಕ್ತವಾಗಬೇಕಿದೆ. ಅಲ್ಲಿಯ ಸಾಂಸ್ಕೃತಿಕ ಪರಂಪರೆಯ ಪ್ರಭೆ ಮತ್ತೆ ಬೆಳಗಬೇಕಿದೆ. ಅನೀತಿಗೆ ಸೋಲಾಗಬೇಕಿದೆ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *