More

    ಕಾಲಯಾನ, ಪಶ್ಚಾತ್ತಾಪವಿಲ್ಲದ ಬದುಕಿನ ವರ್ತಮಾನ

    ನಿದ್ದೆಗೊಮ್ಮೆ ನಿತ್ಯ ಮರಣ
    ಎದ್ದ ಸಲ ನವೀನ ಜನನ
    ನಮಗೆ ಏಕೆ ಬಾರದೋ (ಬೇಂದ್ರೆ)
    ***
    ಕಾಲಯಾನ, ಪಶ್ಚಾತ್ತಾಪವಿಲ್ಲದ ಬದುಕಿನ ವರ್ತಮಾನಪ್ರೀತಿಯಲ್ಲಿ ಎರಡನೇ ಚಾನ್ಸ್​ ಸಿಕ್ಕಿದರೂ ಸಿಗಬಹುದು. ಜೀವನದಲ್ಲಿ ಸಿಗುವುದಿಲ್ಲ…
    ಜೀವನವೆಂದರೇ ಹಾಗೆ, ಕಳೆದ ಣ ಮತ್ತೆಂದೂ ಬಾರದು. ಮುಗಿದುಹೋಗಿದ್ದು ಭೂತ ಕಾಲ. ಭವಿಷ್ಯದಲ್ಲಿ ಏನಿದೆಯೋ ತಿಳಿದಿಲ್ಲ. ಬದುಕು ವರ್ತಮಾನ..
    ಪಶ್ಚಾತ್ತಾಪವೆನ್ನುವುದು ಬದುಕಿನ ಭಾಗ. ದೈನಂದಿನ ಜೀವನದ ಸಣ್ಣಪುಟ್ಟ ಸಂಗತಿಗಳಿಂದ, ಬದುಕಿನ ದಾರಿಯನ್ನೇ ಬದಲಿಸುವಂತಹ ದೊಡ್ಡ ನಿರ್ಧಾರಗಳವರೆಗೆ ಪ್ರತಿಯೊಬ್ಬರ ಜೀವನದಲ್ಲೂ ಪಶ್ಚಾತ್ತಾಪಗಳ ಪ್ರವಾಹ ಅನಿವಾರ್ಯ. ಕುಟುಂಬ, ವ್ಯಾಸಂಗ, ಪ್ರೀತಿ&ಪ್ರೇಮ, ಉದ್ಯೋಗ, ಮದುವೆ ಹೀಗೆ ಜೀವನದ ದಿಕ್ಕು&ದಾರಿ ನಿರೂಪಿಸುವ ಮಹತ್ವದ ವಿಚಾರಗಳಲ್ಲಿ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಷಾದಗಳು ಇರಲೇಬೇಕು. ಬದುಕಿನ ಹೆದ್ದಾರಿಯಲ್ಲಿ ಸಾಗುವಾಗ ಪದೇಪದೆ ಬಹು ಆಯ್ಕೆಯ ಜಂಕ್ಷನ್​ಗಳು ಎದುರಾಗುತ್ತಲೇ ಇರುತ್ತವೆ. ಯಾವಾಗಲೂ ಒಂದೇ ಗುರಿ, ಒಂದೇ ದಾರಿ, ಏಕೈಕ ಆಯ್ಕೆಯಂಥ ಅನಿವಾರ್ಯ ಜೀವನದಲ್ಲಿ ಇಲ್ಲವೇ ಇಲ್ಲ. ನಾಲ್ಕು ಉತ್ತರಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾದ ಬಹುಮಾದರಿ ಪ್ರಶ್ನೆಗಳಂತೆ, ಜೀವನದಲ್ಲೂ ಯಾವುದೇ ಕೆಲಸ ಶುರು ಮಾಡುವಾಗಲೂ; ಹೊಸ ನಿರ್ಧಾರ ತೆಗೆದುಕೊಳ್ಳುವಾಗಲೂ ಹಲವು ಆಯ್ಕೆಗಳ ಗೊಂದಲ. ಅದರಲ್ಲಿ ಯಾವುದು ಸರಿ, ಯಾವುದು ತಪು$್ಪ? ಯಾವುದು ಸುಲಭ, ಯಾವುದು ಕಠಿಣ? ಯಾವುದು ಆಕರ್ಷಕ, ಯಾವುದು ನೀರಸ? ಇತ್ಯಾದಿ ಗೊಂದಲಗಳ ನಡುವೆ ಯಾವುದೋ ಒಂದು ಆಯ್ಕೆ ಮಾಡಿಕೊಳ್ಳಲೇಬೇಕು. ಹಾಗೆ ಆಯ್ದುಕೊಂಡ ಬಳಿಕ, ಆಯ್ಕೆ ಮಾಡದೇ ಬಿಟ್ಟ ಆಯ್ಕೆಗಳ ಸೆಳೆತ, ತುಡಿತ, ಚಡಪಡಿಕೆ… ಹೋದ ದಾರಿಯಲ್ಲಿ ಯಶಸ್ಸು ಕಾಣದೇ ಹೋದಾಗ, ಇಲ್ಲಿ ಬರಲೇಬಾರದಿತ್ತು… ಆ ದಾರಿಯಲ್ಲೇ ಹೋಗಬೇಕಿತ್ತು ಎಂಬ ಅಸಹನೆ.. ಈ ಕೋರ್ಸ್​ ತೆಗೆದುಕೊಂಡು ಸಿಕ್ಕಿಬಿದ್ದೆ. ಅದನ್ನಾದರೂ ಓದಿದ್ದರೆ ಇಷ್ಟು ಹೊತ್ತಿಗೆ ಏನಾದರೂ ಆಗಿರಬಹುದಿತ್ತು… ಎಂಬ ಕಸಿವಿಸಿ.. ಅದೊಂದು ಕೆಲಸ ಮಾಡದೇ ಹೋಗಿದ್ದರೆ.. ಅಂಥ ನಿರ್ಧಾರ ತೆಗೆದುಕೊಳ್ಳದೇ ಹೋಗಿದ್ದರೆ.. ಆ ಮಾತು ಆಡದೇ ಇದ್ದಿದ್ದರೆ.. ಅವಳನ್ನು ದೂರ ಮಾಡದೇ ಇದ್ದಿದ್ದರೆ.. ಆ ಣದಲ್ಲಿ ಅಲ್ಲಿಗೆ ಹೋಗದೆ ಇದ್ದಿದ್ದರೆ.. ಈ ರೀತಿ ಒಂದೇ ಎರಡೇ? ಪ್ರತಿ ಣದಲ್ಲೂ ಇಂಥ ರೇ, ಛೇ.. ಉದ್ಗಾರಗಳ ನಡುವೆಯೇ ಸಾಗುವುದು ಜೀವನ. ಆದರೆ, ಮನುಷ್ಯನ ಜೀವನದಲ್ಲಿರುವುದು ಇಂಥ ಪಶ್ಚಾತ್ತಾಪ, ಪರಿತಾಪ, ಸಂತಾಪ, ಪ್ರಲಾಪಗಳೇ ಹೊರತು, ನಾಳೆ ನಡೆಯುವುದನ್ನು ಮೊದಲೇ ಅರಿತು ಅದಕ್ಕೆ ತಕ್ಕಂತೆ ಬದುಕುವ ದಿವ್ಯ ಶಕ್ತಿ ಯಾರಿಗೂ ಇಲ್ಲ..

    ಮನುಷ್ಯನಿಗೂ ವರ್ತಮಾನದಿಂದ ನಿನ್ನೆಯ ಬದುಕಿಗೆ ಹಿಂದಿರುಗಿ, ನಿನ್ನೆ ಮಾಡಿದ್ದ ತಪ್ಪುಗಳನ್ನು ಸರಿಪಡಿಸುವಂತಹ ದಿವ್ಯ ಶಕ್ತಿ ಇದ್ದಿದ್ದರೆ..? ಎಸ್ಸೆಸ್ಸೆಲ್ಸಿ & ಪಿಯುಸಿ ಬಳಿಕ, ಪ್ರೀತಿ& ಮದುವೆ ವಿಚಾರದಲ್ಲಿ, ವೃತ್ತಿ&ಉದ್ಯೋಗ ಸ್ಥಳದಲ್ಲಿ, ಬದುಕಿನ ನಾನಾ ಮಜಲುಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು; ಬದುಕಿನ ಒಂದೊಂದು ಹೆಜ್ಜೆಯಲ್ಲೂ ಸಂಭವಿಸಬಹುದಾದ ತಪು$್ಪಗಳನ್ನು; ಕಳೆದುಕೊಂಡಿದ್ದನ್ನು; ತೊರೆದುಹೋಗಿದ್ದನ್ನು ಆಯಾ ಕಾಲಟ್ಟಕ್ಕೆ, ದಿನಕ್ಕೆ, ಕ್ಷಣಕ್ಕೆ ಹಿಂದಿರುಗಿ ಬದಲಾಯಿಸುವುದು; ಸರಿಪಡಿಸುವುದು; ಮರಳಿ ಪಡೆದುಕೊಳ್ಳುವುದು ಸಾಧ್ಯವಿದ್ದಿದ್ದರೆ..? ಟೈಮ್​ ಟ್ರಾವೆಲ್​ ಅಥವಾ ಕಾಲ ಯಾನವೆಂಬ ಪರಿಕಲ್ಪನೆ ನಿಜದಲ್ಲಿ ಸಾಧ್ಯವಿದ್ದಿದ್ದರೆ ಈ ಜಗತ್ತಿನಲ್ಲಿ ಕೆಡುಕೆನ್ನುವುದು ಬಹುಶ@ ಇಷ್ಟು ಅಪಾರವಾಗಿ ಇರುತ್ತಿರಲಿಲ್ಲ.

    ಅನೇಕ ಬಾರಿ ನಮ್ಮ ಆತ್ಮಸಾ ಎನ್ನುವುದು, ಯಾವುದು ಸರಿ, ಯಾವುದು ತಪ್ಪು? ಹಾಗೆ ಮಾಡಬಾರದಿತ್ತು… ಆ ರೀತಿ ವರ್ತಿಸಬಾರದಿತ್ತು.. ಸಂಬಂಧ ಮುರಿದುಕೊಳ್ಳಬಾರದಿತ್ತು… ನೋಯಿಸಬಾರದಿತ್ತು… ಅಹಂ ತೋರಿಸಬಾರದಿತ್ತು… ಅಂಥ ಪರಿಸ್ಥಿತಿಯಲ್ಲಿ ಬಿಟ್ಟು ಬರಬಾರದಿತ್ತು… ಸಿಡುಕಬಾರದಿತ್ತು… ಕ್ರೂರವಾಗಿ ವರ್ತಿಸಬಾರದಿತ್ತು.. ಇತ್ಯಾದಿ ಇತ್ಯಾದಿ ಎಚ್ಚರಿಕೆ, ಪರಾಮರ್ಶೆಗಳನ್ನು ನಮಗೆ ವಿವೇಚನೆಯ ಕನ್ನಡಿಯಲ್ಲಿ ತೋರಿಸುವಾಗಲೂ ಸರಿದುಹೋದ ಕಾಲ, ಒಡೆದ ಕನ್ನಡಿ ಮರಳಿಬಾರದು; ಜೋಡಿಸಲಾಗದು ಎಂಬ ವ್ಯಥೆಯಲ್ಲಿ ಕೊರಗುತ್ತೇವೆ. ಕೊರಗುವುದನ್ನು ಬಿಟ್ಟು ಬೇರೆ ಮಾರ್ಗವಾದರೂ ನಮ್ಮಲ್ಲಿದೆಯೇ? ತಂದೆ&ತಾಯಿ ಕಣ್ಮುಂದೆ ಇರುವಾಗ ಅಕ್ಕರೆಯಿಂದ ನೋಡಿಕೊಳ್ಳದೆ, ಕಾಲವಾದ ಮೇಲೆ ತಪ್ಪುಗಳಿಗೆ ವ್ಯಥಿಸಿದರೆ, ತಕ್ಕ ಮಗನಾಗಲಿಲ್ಲ ಎಂದು ಮರುಗಿದರೆ ಏನು ಫಲ? ಗತಿಸಿ ಹೋಗಿರುವುದನ್ನು ಸರಿಪಡಿಸಲಾದೀತೆ? ಪ್ರೀತಿಯ ಬೆಲೆ ಗೊತ್ತಾಗುವುದು ಕಳೆದುಕೊಂಡ ಮೇಲೆಯೇ.. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಜೀವನದ ಕೆಟ್ಟ ಗುಣದಿಂದಾಗಿ ಏನನ್ನೋ ಪಡೆಯುವ ಹಂಬಲದಲ್ಲಿ ಅಮೂಲ್ಯವಾದುದನ್ನೇ ಕಳೆದುಕೊಳ್ಳುತ್ತೇವೆ. ಹಾಗೆ ಕಳೆದಿದ್ದನ್ನು ಮರಳಿ ಗಳಿಸುವ ಅವಕಾಶ ಮನುಷ್ಯರಿಗೆಲ್ಲಿದೆ?

    ಅವಳೊಬ್ಬ ಸುಂದರಿ. ಹೆಸರು ಲಿಯಾ. ಸ್ನೇಹಿತರು, ಪಾರ್ಟಿಯ ಅಮಲಿನಲ್ಲಿ ಲೋಕದ ಚಿಂತೆ ಇಲ್ಲದೆ ಬದುಕುವವಳು. ರೆಸಾರ್ಟ್​ವೊಂದರಲ್ಲಿ ಅದೊಂದು ಬೆಳದಿಂಗಳ ರಾತ್ರಿಯ ಪಾರ್ಟಿಯಲ್ಲಿ ಆಕೆ ಮದ್ಯದ ಬಾಟಲಿ ಹಿಡಿದು, ಗುಂಪಿನಿಂದ ಬೇರೆಯಾಗಿ, ನದಿಪಕ್ಕದ ಮರಳು ದಿಣ್ಣೆಯಲ್ಲಿ ಅಡ್ಡಾಡುವಾಗ ಕೈಕಡಗವೊಂದು ಸಿಗುತ್ತದೆ. ಕುತೂಹಲದಿಂದ ಅದನ್ನು ಕೈಗೆ ಹಾಕಿಕೊಂಡಾಗ ಅದೇನೋ ಶಕ್ತಿ ಅವಳಲ್ಲಿ ಆವಾಹನೆ ಆದಂತೆ… ಆ ರಾತ್ರಿ ಕಳೆದು ಮಾರನೇ ಬೆಳಗ್ಗೆ ಕಣ್ತೆರೆಯುವಾಗ ಪವಾಡ ಸಂಭವಿಸಿರುತ್ತದೆ. ರಾತ್ರಿ ಮನೆಯಲ್ಲಿ ಮಲಗಿದ್ದ ಲಿಯಾ ಬೆಳಗ್ಗೆ ಎಚ್ಚೆತ್ತುಕೊಳ್ಳುವ ಹೊತ್ತಿಗೆ ಕಾಲಯಾನದಲ್ಲಿ ಮೂವತ್ತು ವರ್ಷ ಹಿಂದಕ್ಕೆ ಚಲಿಸಿ ಇಸ್ಮಾಯಿಲ್​ ಎಂಬ ವ್ಯಕ್ತಿಯ ದೇಹದೊಳಕ್ಕೆ ಸೇರಿಕೊಂಡಿರುತ್ತಾಳೆ.

    ಮೂವತ್ತು ವರ್ಷ ಕೆಳಗೆ ಕೊಲೆಯಾಗಿ ಹೋಗಿದ್ದ ಆ ಇಸ್ಮಾಯಿಲ್​ ಸಾವನ್ನಪ್ಪುವ ದಿನಾಂಕಕ್ಕೆ ಒಂದು ವಾರ ಮುಂಚಿನ ಟನಾವಳಿಗಳು ಈ ಯುವತಿಯ ಪರಕಾಯ ಪ್ರವೇಶದ ಸಂದರ್ಭದಲ್ಲಿ ಅನಾವರಣಗೊಳ್ಳುತ್ತ ಸಾಗುತ್ತದೆ. ಲಿಯಾಳ ನಿಜ ಬದುಕಿನ ತಂದೆ, ತಾಯಿ ಇಸ್ಮಾಯಿಲ್​ ಬದುಕಿದ್ದಾಗ ಆತನ ಪ್ರಾಣಸ್ನೇಹಿತರು ಎನ್ನುವುದು ಆಕೆಗೆ ತಿಳಿಯುತ್ತದೆ. ಇಸ್ಮಾಯಿಲ್​ ಬದುಕು ಹಾಗೂ ಸಾವಿನಲ್ಲಿ ಪಾತ್ರ ವಹಿಸಿದ್ದ ಎಲ್ಲ ವ್ಯಕ್ತಿಗಳನ್ನು ಲಿಯಾ ಪತ್ತೆ ಹಚ್ಚುತ್ತಾಳೆ.. ವಿಶೇಷವೆಂದರೆ ಆಕೆ ಪ್ರತಿದಿನ ಒಬ್ಬೊಬ್ಬ ಪಾತ್ರಧಾರಿಯ ದೇಹದೊಳಕ್ಕೆ ಕಾಲಯಾನ ಮಾಡಿ ಆ ಪಾತ್ರದ ದೃಷ್ಟಿಕೋನದಿಂದ ಇಸ್ಮಾಯಿಲ್​ ಎಂಬ ವ್ಯಕ್ತಿಯನ್ನು ಅರಿಯುವ ಪ್ರಯತ್ನ ಮಾಡುತ್ತಾಳೆ. ಯುವತಿ ಪರಕಾಯ ಪ್ರವೇಶ ಮಾಡಿದ ಪ್ರತಿಯೊಬ್ಬರೂ ಮೂವತ್ತು ವರ್ಷ ಕೆಳಗೆ ಇಸ್ಮಾಯಿಲ್​ ಕೊಲೆಯಾಗಲು ತಾನೇ ಕಾರಣ ಎಂಬ ಪಾಪಪ್ರೆಯಿಂದ ಬದುಕುತ್ತಿರುತ್ತಾರೆ. ಕೊನೆಗೂ ಆ ಯುವತಿ ಇಸ್ಮಾಯಿಲ್​ ಕೊಲೆಯಾದ ದಿನ ಆತನ ದೇಹದಲ್ಲೆ ಪರಕಾಯ ಪ್ರವೇಶ ಮಾಡಿ ಆ ದಿನದ ಟನಾವಳಿಗಳನ್ನು ಬದಲಿಸುತ್ತಾಳೆ. ಮೂವತ್ತು ವರ್ಷಗಳ ಹಿಂದಿನ ತಪ್ಪು ಸರಿಪಡಿಸುವ ಅವಳ ನಿರ್ಧಾರ ಇಸ್ಮಾಯಿಲ್​ನನ್ನು ಬದುಕಿಸುತ್ತದೆ. ಅವನ ಸುತ್ತಮುತ್ತಲಿನವರ ಪಾಪಪ್ರೆಯನ್ನು ಮುಕ್ತಗೊಳಿಸುತ್ತದೆ. ಅಲ್ಲದೆ, ಅವರೆಲ್ಲರ ಜೀವನದ ದಾರಿಗಳು ಬೇರೆಯೇ ದಿಕ್ಕಿನಲ್ಲಿ ಸಾಗುತ್ತವೆ. ಯುವತಿಯ ಆತ್ಮ ಮತ್ತೆ ತನ್ನ ದೇಹಕ್ಕೆ& ಜೀವನಕ್ಕೆ ಮರಳಲಾಗದಂತೆ ಇಸ್ಮಾಯಿಲ್​ ದೇಹದಲ್ಲಿ ಶಾಶ್ವತವಾಗುತ್ತದೆ. ಸೆವೆನ್​ ಲೈವ್ಸ್​ ಆ್​ ಲಿಯಾ ಎಂಬ ವೆಬ್​ ಸರಣಿಯ ಕಥೆ ಇದು.
    ನ್ಯಾಯಾಲಯದ ಕಟಕಟೆಯಲ್ಲಿ ವಿಚ್ಛೇದನದ ತೀರ್ಪು ಬಯಸಿ ನಿಂತ ಅರ್ಜುನ್​ ಎಂಬ ಹೆಸರಿನ ಆತನ ಜೀವನದಲ್ಲಿ ವಿಲಣ ಟನೆಗಳು ಟಿಸಿ ದೇವರನ್ನು ಸಂಧಿಸುತ್ತಾನೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುವುದೇ ನಿಜವಾದರೆ, ತನಗೆ ಬೆಸ್ಟ್​ ್ರೆಂಡ್​ ಆಗಿದ್ದವಳನ್ನು ಹೆಂಡತಿಯನ್ನಾಗಿಸಿದ್ದು ದೇವರ ತಪು$್ಪ. ್ರೆಂಡ್​ ಆಗಿದ್ದವಳನ್ನು ಹೆಂಡತಿಯ ರೂಪದಲ್ಲಿ ನೋಡಲು ಮನಸ್ಸು ಒಪು$್ಪತ್ತಿಲ್ಲ. ಇದು ತನ್ನ ತಪ್ಪಲ್ಲ, ದೇವರದೇ ತಪು$್ಪ. ದೇವರ ಎಡವಟ್ಟಿನಿಂದ ತನ್ನ ಸಂಸಾರ ನರಕವಾಗಿದೆ ಎಂದು ಆತ ಸಿಡುಕುತ್ತಾನೆ. ಹಾಗಿದ್ದರೆ, ನಿನಗೆ ಮತ್ತೊಂದು ಅವಕಾಶ ಕೊಡುತ್ತೇನೆ. ನಾನು ಮಾಡಿದ ತಪ್ಪು ನೀನೇ ಸರಿಪಡಿಸು ಎಂದು ದೇವರು ವರ ಕೊಡುತ್ತಾನೆ. ದೇವರು ಕೊಟ್ಟ ಎರಡನೇ ಚಾನ್ಸ್​ ಬಲದಿಂದ ಹಿಂದಿನ ಜೀವನದ ನೆನಪು ಹೊಂದಿರುವ ಆತ, ತನ್ನ ಜೀವನದ ಪ್ರಮುಖ ದಿನಗಳನ್ನು ಮತ್ತೊಮ್ಮೆ ಪುನರಾವರ್ತಿಸುವ ಅವಕಾಶ ಪಡೆಯುತ್ತಾನೆ. ಈ ಪುನರವಕಾಶದಲ್ಲಿ ಆತ ತನ್ನ ಬದುಕಿಗೆ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಹೊಸ ದೃಷ್ಟಿಕೋನದಿಂದ ವ್ಯವಹರಿಸುತ್ತಾನೆ. ತನ್ನ ಮನದಿಂಗಿತವನ್ನು, ಜೀವನದ ಗುರಿ& ದಾರಿಯನ್ನು, ಸಂಬಂಧಗಳ ಅರ್ಥವನ್ನು ವಿವೇಚನೆಯಿಂದ ಅರ್ಥೈಸುವುದು ಅವನಿಗೆ ಸಾಧ್ಯವಾಗುತ್ತದೆ. ಪುನೀತ್​ ರಾಜ್​ಕುಮಾರ್​, ಡಾರ್ಲಿಂಗ್​ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್​ ಚಿತ್ರ ನೋಡಿರುವವರಿಗೆ ಈ ಸನ್ನಿವೇಶ ಬೇಗ ಅರ್ಥವಾಗುತ್ತದೆ.

    ಸುನಿಲ್​ ರಾವ್​, ಸುಧಾರಾಣಿ ಅಭಿನಯದ “ತುರ್ತು ನಿರ್ಗಮನ’ ಚಿತ್ರವೂ ಸ್ವಲ್ಪ ಇದೇ ವರ್ಗಕ್ಕೆ ಸೇರಿದ್ದು. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕಾಲನ ದೂತರ ನೆರವಿನಿಂದ ಜೀವನದ ಕೊನೆಯ ಮೂರು ದಿನಗಳನ್ನು ಮರಳಿ ಬದುಕುವ ಅವಕಾಶ ಪಡೆಯುತ್ತಾನೆ. ಸತ್ತ ಮೇಲೆ ಭೂತದ ಕನ್ನಡಿಯಲ್ಲಿ ಕಾಣಿಸುವ ಅವನ ಬದುಕಿನ ಚಿತ್ರ ಜೀವನದ ಅರ್ಥವನ್ನು ಅವನಿಗೆ ಮಾಡಿಸುತ್ತದೆ. ತಂದೆ& ತಾಯಿ, ಬಂಧುಗಳು, ಇಷ್ಟ ಪಟ್ಟವರು, ಸ್ನೇಹಿತರು, ಶತ್ರು ಎಂದು ಭಾವಿಸಿದವರು ಎಲ್ಲರನ್ನೂ ಅವರವರ ದೃಷ್ಟಿಯಿಂದ ನೋಡುವಾಗ ಜಗತ್ತೇ ಬೇರೆಯ ರೀತಿ ಕಾಣುತ್ತದೆ. ಸಾಯುವ ಪೂರ್ವದ ಬದುಕಿಗೆ ಮರಳುವ ಅವಕಾಶವನ್ನು ಆತ ಸಾರ್ಥಕ ಪಡಿಸಿಕೊಳ್ಳುತ್ತಾನೆ. ತಾನು, ತನ್ನದೆಂಬ ಸ್ವಾರ್ಥ ಮರೆತು ಬೇರೆಯವರ ಸಣ್ಣ ಸಣ್ಣ ಸಂತೋಷಗಳಿಗಾಗಿ ಬದುಕುತ್ತಾನೆ. ತನ್ನ ಬದುಕಿನ ನಿನ್ನೆಗಳಿಗೆ ಮರು ಪ್ರವೇಶ ಮಾಡಿ ಅನೇಕ ತಪ್ಪುಗಳನ್ನು ಸರಿಪಡಿಸುತ್ತಾನೆ. ಯಾವುದೇ ಪಾಪಪ್ರೆ ಇಲ್ಲದೆ, ಅತೃಪ್ತಿ ಇಲ್ಲದೆ ನೆಮ್ಮದಿಯ ಸಾವು ಅಪ್ಪಿಕೊಳ್ಳುವ ಯೋಗ ಅವನದಾಗುತ್ತದೆ.
    ಬದುಕೆನ್ನುವುದು ಭ್ರಮೆ ಅಲ್ಲ. ಇಲ್ಲಿ ನಾವು ಕಳೆಯುವ ಒಂದೊಂದು ಣವೂ ಸೂರ್ಯಚಂದ್ರರಷ್ಟೇ ಸತ್ಯ. ಆದರೆ, ನಾವು ವಾಸ್ತವ ಮರೆಮಾಚಿ ಭ್ರಮೆಗಳಲ್ಲಿ ಬದುಕುತ್ತೇವೆ. ಯಾರ ಬದುಕು ಎಷ್ಟು ದಿನ? ಎಷ್ಟು ಣ? ತಿಳಿದವರ್ಯಾರಿಲ್ಲ. ವರ್ಷಾನುಗಟ್ಟಲೆ ಹಿಮ್ಮುಖ ಕಾಲಯಾನ ಮಾಡಿ ಜೀವನದ ಬೇರೆ ಬೇರೆ ಟ್ಟಗಳಲ್ಲಿ ನಮ್ಮಿಂದಾಗಿರುವ ತಪ್ಪುಗಳನ್ನು ಸರಿಪಡಿಸುವ ಯೋಗವಂತೂ ನಮಗಿಲ್ಲ. ಸಿನಿಮಾಗಳಲ್ಲಿ ತೋರಿಸುವುದೆಲ್ಲವೂ ಜೀವನವಲ್ಲ. ಆದರೆ, ಮಾನವ ಆಲೋಚನೆಗಳನ್ನು ಅರಳಿಸುವ, ಹೊಸ ಹೊಳಹಿನತ್ತ ಕೊಂಡೊಯ್ಯುವ ಅದ್ಭುತ ಶಕ್ತಿ ಚಲನಚಿತ್ರ ಮಾಧ್ಯಮಕ್ಕಿದೆ. ಅದೇ ರೀತಿ, ನಿನ್ನೆಯ ಬದುಕಿನ ನಿರ್ಧಾರಗಳು ನಮ್ಮನ್ನು ಕಾಡದೇ ಇದ್ದಾಗ ಮಾತ್ರ ಇಂದು ನೆಮ್ಮದಿಯಿಂದಿರಲು ಸಾಧ್ಯ. ಇಂದು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾಳೆ ಪಶ್ಚಾತ್ತಾಪ ಪಡದಂತೆ, ವಿವೇಚನೆಯಿಂದ, ಆತ್ಮಸಾಯಿಂದ ನಮ್ಮ ವರ್ತಮಾನದಲ್ಲಿ ಬದುಕುವುದು ಸಾಧ್ಯವಾದರೆ, ವಿಷಾದಗಳೆನ್ನುವುದು ಬದುಕಿನಲ್ಲಿ ಇರುವುದಿಲ್ಲ. ಅಂಥ ಬದುಕೇ ಸಾರ್ಥಕ.

    ಕೊನೆಯಲ್ಲಿ ಉಳಿಯುವುದು, ಎಷ್ಟೊಂದು ಅವಕಾಶಗಳಿದ್ದವು; ಬಳಸಿಕೊಳ್ಳಲೇ ಇಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅದೆಷ್ಟು ವಿಳಂಬ ಮಾಡಿದೆವು ಎಂಬ ವಿಷಾದ ಮಾತ್ರ… (ಲೂಯಿಸ್​ ಕ್ಯಾರಲ್​)
    (ಲೇಖಕರು “ವಿಜಯವಾಣಿ’ ಡೆಪ್ಯೂಟಿ ಎಡಿಟರ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts