Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಎರಡೇ ದಿನದಲ್ಲಿ ಮನೆ ನಿರ್ಮಾಣ

Saturday, 01.09.2018, 3:00 AM       No Comments

| ಹೊಸಹಟ್ಟಿ ಕುಮಾರ ಬೆಂಗಳೂರು

ರಿಯಾಲ್ಟಿ ಕ್ಷೇತ್ರ ಹಳೆಯ ಪಥ ಬದಲಿಸಲು ಮುಂದಾಗಿದೆ. ಆಧುನಿಕ ತಂತ್ರಜ್ಞಾನಗಳು ಅಳವಡಿಕೆಯಾಗುತ್ತಿವೆ. ಈಗಾಗಲೇ ನೂತನ ಆವಿಷ್ಕಾರಗಳನ್ನು ಅಪ್ಪಿಕೊಂಡಿರುವ ರಿಯಾಲ್ಟಿ ಈಗ ಮತ್ತೊಂದು ನೂತನ ತಂತ್ರಜ್ಞಾನಕ್ಕೆ ಕೈಚಾಚಿದೆ. ಕಟ್ಟಡ ನಿರ್ವಣದ ಇತ್ತೀಚಿನ ಆವಿಷ್ಕಾರ ‘ಪ್ರೀ-ಫ್ಯಾಬ್ರಿಕೇಟೆಡ್’ ರಿಯಾಲ್ಟಿ ಕ್ಷೇತ್ರ ಪ್ರವೇಶಿಸಿದೆ. ಈ ತಂತ್ರಜ್ಞಾನದ ಮೂಲಕ ಬಿಡಿಎ, ಗೃಹಮಂಡಳಿ ಹಾಗೂ ಖಾಸಗಿ ಬಿಲ್ಡರ್​ಗಳು ಮನೆ ನಿರ್ವಿುಸಲು ಮುಂದಾಗಿವೆ. ಕಡಿಮೆ ಅವಧಿಯಲ್ಲಿ ಮನೆ ನಿರ್ವಿುಸುವ ಹೊಸ ಯೋಜನೆಯೇ ‘ಪ್ರೀ-ಫ್ಯಾಬ್ರಿಕೇಟೆಡ್’ ತಂತ್ರಜ್ಞಾನ.

ಮನೆ ನಿರ್ಮಾಣ ಎಂದರೆ ಹಲವು ವರ್ಷಗಳ ಕಾಲ ನಡೆಯುವ ಕಾಮಗಾರಿ. ಅಲ್ಲದೆ ಹೆಚ್ಚು ಹಣ ಖರ್ಚಾಗುವ ಕೆಲಸ ಎಂಬುದು ಎಲ್ಲರ ಭಾವನೆ. ಹಣ ಖರ್ಚು ಮಾಡಿದರೂ ಕೆಲವು ವೇಳೆ ಕಾರ್ವಿುಕರು ಸಿಗುವುದಿಲ್ಲ. ಇದರಿಂದ ಮನೆ ನಿರ್ಮಾಣ ಮತ್ತಷ್ಟು ವಿಳಂಬವಾಗಿ ವೆಚ್ಚ ಇನ್ನಷ್ಟು ಅಧಿಕವಾಗುತ್ತದೆ. ಇದಕ್ಕೆಲ್ಲ ಈಗ ‘ಪ್ರೀ-ಫ್ಯಾಬ್ರಿಕೇಟೆಡ್’ ತಂತ್ರಜ್ಞಾನ ವಿರಾಮ ಹಾಕಿದೆ.

ಒಂದು ದಿನದಲ್ಲಿ 2 ಮನೆ ನಿರ್ಮಾಣ: ಮನೆ ನಿರ್ಮಾಣ ಕೆಲಸ ವರ್ಷಗಟ್ಟಲೇ ಹಿಡಿಯುತ್ತದೆ. ಬೃಹತ್ ಅಪಾರ್ಟ್ ಮೆಂಟ್​ಗಳು, ಕಟ್ಟಡ ಕಟ್ಟಲು ಹಲವು ವರ್ಷಗಳೇ ಬೇಕು. ಈ ರೀತಿಯ ದೀರ್ಘ ಕಾಲದ ಯೋಜನೆಗಳಿಗೆ ‘ಪ್ರೀ-ಫ್ಯಾಬ್ರಿಕೇಟೆಡ್’ ತಂತ್ರಜ್ಞಾನ ವಿರಾಮ ಹಾಕಿದೆ. ಈ ತಂತ್ರಜ್ಞಾನದ ಮೂಲಕ ದಿನಕ್ಕೆ 2 ಮನೆಗಳನ್ನು ನಿರ್ವಿುಸಬಹುದಾಗಿದೆ.

ಮೊದಲೇ ತಯಾರಿಸಿದ ಗೋಡೆಗಳು ಹಾಗೂ ಬ್ಲಾಕ್​ಗಳನ್ನು ಜೋಡಿಸುವುದೇ ‘ಪ್ರೀ-ಫ್ಯಾಬ್ರಿಕೇಟೆಡ್’ ತಂತ್ರಜ್ಞಾನ. ಈ ರೀತಿಯ ಮನೆಗಳನ್ನು ನಿರ್ವಿುಸಲು ಸಾಂಪ್ರದಾಯಿಕ ಅಡಿಪಾಯ ಆಗುವುದಿಲ್ಲ. ಇದಕ್ಕೆಂದೇ ವಿಶೇಷವಾಗಿ ಅಡಿಪಾಯ ನಿರ್ವಿುಸಬೇಕು. ಅಡಿಪಾಯ ನಿರ್ವಿುಸುವಾಗ ಕಬ್ಬಿಣದ ಸರಳುಗಳನ್ನು ವಿಶೇಷವಾಗಿ ಅಳವಡಿಸಬೇಕು. ಅಡಿಪಾಯದಲ್ಲಿ ಇರುವ ಕಬ್ಬಿಣದ ಸರಳುಗಳಿಗೆ ಮೊದಲೇ ನಿರ್ವಿುಸಿದ್ದ ಗೋಡೆಗಳಲ್ಲಿ ಇರುವ ಕಬ್ಬಿಣದ ಸರಳುಗಳನ್ನು ಒಟ್ಟಿಗೆ ಸೇರಿಸಿ ಬಿಗಿದು ಅದರ ಮೇಲೆ ಕಾಂಕ್ರೀಟ್ ಹಾಕಲಾಗುತ್ತದೆ. ಈ ರೀತಿ ಪ್ರತಿ ಗೋಡೆ ಹಾಗೂ ಬ್ಲಾಕ್​ಗಳನ್ನು ಸರಳುಗಳ ಜೊತೆ ಬಂಧಿಸಿ ಕಾಂಕ್ರೀಟ್ ಹಾಕಲಾಗುತ್ತದೆ.

ಕಳಪೆ ಮನೆ ಅಲ್ಲ

ಕಡಿಮೆ ಅವಧಿಯಲ್ಲಿ ತಯಾರಿಸಿದರೂ ಈ ಮನೆಗಳು ಕಳಪೆಯಾಗಿರುವುದಿಲ್ಲ. ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಕಡಿಮೆ ವೆಚ್ಚ ಹಾಗೂ ಅವಧಿಯಲ್ಲಿ ಉತ್ತಮ ಗುಣಮಟ್ಟದ ಮನೆಗಳನ್ನು ಈ ತಂತ್ರಜ್ಞಾನದಿಂದ ಕಟ್ಟಬಹುದು. ಬಿಡಿಎ ಈ ರೀತಿಯ ತಂತ್ರಜ್ಞಾನ ಅಳವಡಿಸಿಕೊಂಡು ಬೆಂಗಳೂರಿನ ಹೊರ ವಲಯದಲ್ಲಿ ಮನೆಗಳನ್ನು ನಿರ್ವಿುಸಿದೆ. ಅದೇ ರೀತಿ ಖಾಸಗಿ ಕಂಪನಿಯೊಂದು ತುಮಕೂರಿನಲ್ಲಿ ಮನೆ ನಿರ್ವಿುಸಿದೆ. ಗೃಹ ಮಂಡಳಿ ಇದೇ ರೀತಿಯ ಮನೆ ನಿರ್ವಿುಸಲು ಮುಂದಾಗಿದೆ.

ಈ ತಂತ್ರಜ್ಞಾನವನ್ನು ಸದ್ಯ ಬೃಹತ್ ರಿಯಾಲ್ಟಿ ಕಂಪನಿಗಳು ಮಾತ್ರ ಅಳವಡಿಸಿಕೊಂಡಿವೆ. ಹೊಸ ಪ್ರಯೋಗ ಯಶಸ್ವಿಗೊಂಡರೆ ಸಾರ್ವತ್ರಿಕವಾಗಿ ಬಳಕೆಯಾಗಲಿದೆ. ಇದಕ್ಕೆ ಇನ್ನಷ್ಟು ಸಮಯ ಅಗತ್ಯ.

ಕಡಿಮೆ ಅವಧಿಯಲ್ಲಿ ಪ್ರೀಫ್ಯಾಬ್ರಿಕೇಟೆಡ್ ತಂತ್ರಜ್ಞಾನದ ಮೂಲಕ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ವಿುಸಬಹುದು. ಅಲ್ಲದೆ ಮನೆಗಳ ಸೌಂದರ್ಯ ಕೂಡ ಉತ್ತಮವಾಗಿರುತ್ತದೆ.

| ಪ್ರಣವ್ ಶರ್ಮಾ ಫೆಲಿಸಿಟಿ ಅಡೋಬ್ ಸಂಸ್ಥಾಪಕ

ಪ್ರೀಫ್ಯಾಬ್ರಿಕೇಟೆಡ್ ತಂತ್ರಜ್ಞಾನ ಮನೆಗಳ ನಿರ್ಮಾಣದಲ್ಲಿ ಕೆಲಸದ ನಿರ್ವಹಣೆ ಹಾಗೂ ಏಕ ರೂಪದ ಶಕ್ತಿ ನಿರ್ವಹಣೆಗೆ ನೆರವಾಗುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಯೋಜನೆ ಮುಗಿಯುತ್ತದೆ.

| ಡಾ. ಟಿ.ವಿ. ಮಲ್ಲೇಶ್ ಸಿವಿಲ್ ಇಂಜಿನಿಯರ್

Leave a Reply

Your email address will not be published. Required fields are marked *

Back To Top