ಆಕರ್ಷಕ ಕಚೇರಿ ಸ್ಥಳಕ್ಕೆ ಏರುತ್ತಿದೆ ಬೇಡಿಕೆ

| ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು

ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರ ಪ್ರತಿ ವರ್ಷವೂ ಹಲವು ಬದಲಾವಣೆಗಳನ್ನು ಕಾಣುತ್ತಿದೆ. ಕಟ್ಟಡ ವಿನ್ಯಾಸದಿಂದ ಹಿಡಿದು ಸುತ್ತಮುತ್ತಲ ವಾತಾವರಣಕ್ಕೂ ಆದ್ಯತೆ ನೀಡಲಾಗುತ್ತಿದೆ. ಕಚೇರಿ ಎಂದರೆ ಕೇವಲ ನಾಲ್ಕು ಗೋಡೆ ನಡುವಿನ ಸ್ಥಳವಲ್ಲ. ಕಚೇರಿಯಲ್ಲಿ ಆರೋಗ್ಯಕರ ವಾತಾವರಣ, ಮನೆಯ ವಿನ್ಯಾಸ, ಹೊಸ ತಂತ್ರಜ್ಞಾನ ಸೇರಿ ಕೆಲಸ ನಿರ್ವಹಿಸುವವರ ಅಗತ್ಯತೆಗೆ ತಕ್ಕಂತೆ ಕಚೇರಿ ನಿರ್ಮಾಣ ರಿಯಲ್ ಎಸ್ಟೇಟ್ ಕ್ಷೇತ್ರದ ಭವಿಷ್ಯದ ಸವಾಲಾಗಿದೆ.

ಕಾಲಿಯರ್ಸ್ ಇಂಟರ್​ನ್ಯಾಷನ್ ಸಂಸ್ಥೆ ಸಿದ್ಧಪಡಿಸಿರುವ ಸಂಶೋಧನಾ ವರದಿಯಂತೆ, ಮುಂದಿನ ವರ್ಷಗಳಲ್ಲಿ ವಾಣಿಜ್ಯ ರಿಯಲ್ ಎಸ್ಟೇಟ್ ಮೇಲೆ ಹೆಚ್ಚಿನ ಬಂಡವಾಳ ಹರಿದುಬರಲಿದೆ. ದೇಶದಲ್ಲಿ 2018ರ ಮೊದಲಾರ್ಧದಲ್ಲಿ ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ 2.4 ಬಿಲಿಯನ್ ಡಾಲರ್ (ಸುಮಾರು -ಠಿ; 16,458ಕೋಟಿ) ಬಂಡವಾಳ ಬಂದಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 1.9 ಬಿಲಿಯನ್ ಡಾಲರ್ (-ಠಿ;13,033ಕೋಟಿ) ಬಂಡವಾಳ ಬಂದಿತ್ತು.

ಮುಂದಿನ 3 ವರ್ಷಗಳಲ್ಲಿ ದೇಶದ ಜಿಡಿಪಿ ಶೇ.7ಕ್ಕಿಂತ ಅಧಿಕ ವೃದ್ಧಿಸುವ ನಿರೀಕ್ಷೆ ಹೊಂದಲಾಗಿದೆ. ಕಳೆದ 5 ವರ್ಷದಲ್ಲಿ ದೇಶದ ಪ್ರಮುಖ 7 ನಗರಗಳಲ್ಲಿ 147 ಮಿಲಿಯನ್ ಚದರ ಅಡಿ ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರ ಸೃಷ್ಟಿಯಾಗಿದೆ. ಮುಂದಿನ 3 ವರ್ಷಗಳಲ್ಲಿ 120 ಮಿಲಿಯನ್ ಚದರ ಅಡಿ ಕಚೇರಿ ಸ್ಥಳ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ. ಡಿಜಿಟಲ್ ಯುಗದಲ್ಲಿ ಎಲ್ಲಿ ಕುಳಿತಾದರೂ ಕಚೇರಿ ಕೆಲಸ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇದರ ಪರಿಣಾಮವಾಗಿ ಐಟಿ ಕ್ಷೇತ್ರದಲ್ಲಿ ಕ್ರಮೇಣ ಕಚೇರಿ ಸ್ಥಳ ಖರೀದಿ ಅಥವಾ ಭೋಗ್ಯಕ್ಕೆ ಪಡೆದುಕೊಳ್ಳುವ ಸಂಖ್ಯೆ ಇಳಿಕೆಯಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗಿಗಳ ಅಗತ್ಯತೆ ತಿಳಿದುಕೊಂಡು ರಿಯಲ್ ಎಸ್ಟೇಟ್ ಹೆಜ್ಜೆ ಇಡಬೇಕಾದ ಅನಿವಾರ್ಯತೆಯಲ್ಲಿದೆ. ಉದ್ಯೋಗಿಗಳನ್ನು ಸೆಳೆಯುವ ಕಚೇರಿ ವಿನ್ಯಾಸ, ಉದ್ಯಾನ, ಶಾಪಿಂಗ್ ಮಾಲ್, ಒಳಾಂಗಣ ಕ್ರೀಡಾಂಗಣ, ಮೆಟ್ರೋ ಸಂಪರ್ಕ ಉದ್ಯೋಗಿಗಳ ಕಾರ್ಯವೈಖರಿ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಉದ್ಯೋಗಿಗಳಿಗೆ ಆರೋಗ್ಯಕರ ವಾತಾವರಣ ನೀಡುವುದರಿಂದ ಕಂಪನಿ ಉತ್ಪಾದನೆ ಹೆಚ್ಚಲಿದೆ ಎನ್ನುವುದು ಡಿಎಲ್​ಎಫ್ ಆಫೀಸ್ ಬಿಜಿನೆಸ್ ನಿರ್ದೇಶಕ ಅಮಿತ್ ಗ್ರೋವರ್ ಅಭಿಪ್ರಾಯವಾಗಿದೆ.

ಕೋ ವರ್ಕ್ ಸ್ಪೇಸ್ ಬೇಡಿಕೆ : ಪ್ರತಿ ವರ್ಷ ಸಾವಿರಾರು ನವೋದ್ಯಮಗಳು ಹುಟ್ಟಿಕೊಳ್ಳುತ್ತಿದ್ದು, ಕೋ-ರ್ವಂಗ್ ಸ್ಪೇಸ್​ಗೆ(ಒಂದೇ ಕಚೇರಿಯಲ್ಲಿ 2-3 ಕಂಪನಿಗಳು) ಬೇಡಿಕೆ ಹೆಚ್ಚಾಗುತ್ತಿದೆ. 2016ರಲ್ಲಿ ಆಫೀಸ್ ಸ್ಪೇಸ್​ನಲ್ಲಿ ಶೇ.3 ಕೋ-ರ್ವಂಗ್ ಸ್ಪೇಸ್ ಆಗಿತ್ತು. 2017ರಲ್ಲಿ ಇದು ಶೇ.8ಕ್ಕೆ ಏರಿಕೆಯಾಗಿದೆ.

ಮೆಟ್ರೋ ಸಂಪರ್ಕ

2012ರಲ್ಲಿ ಡಿಎಲ್​ಎಫ್ ಸೈಬರ್ ಸಿಟಿಯಲ್ಲಿ ಪ್ರತಿ ಚದರಡಿ ದರ 60 ರಿಂದ 65 ರೂ. ಇತ್ತು. ಸೈಬರ್​ಸಿಟಿಗೆ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ಸಂಪರ್ಕ ನೀಡಿದ ಬೆನ್ನಲ್ಲೇ ಪ್ರತಿ ಚದರಡಿ ದರ 110-120 ರೂ.ಗೆ ಏರಿಕೆಯಾಗಿತ್ತು. ಉದ್ಯೋಗಿಗಳು ಆರಾಮವಾಗಿ ಕಚೇರಿ ತಲುಪುವಂತೆ ರಿಯಲ್ ಎಸ್ಟೇಟ್ ಕಂಪನಿಗಳು ಯೋಜನೆ ರೂಪಿಸಿದರೆ, ಕಚೇರಿ ಸ್ಥಳಕ್ಕೆ ಬೇಡಿಕೆ ಹೆಚ್ಚಲಿದೆ. ಇನ್ಪೋಸಿಸ್, ಎಂಬಸಿ ಗ್ರೂಪ್ ಹೊರವರ್ತಲ ರಸ್ತೆಯಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ಮೆಟ್ರೋ ಮೇಲೆ ಬಂಡವಾಳ ಹೂಡುತ್ತಿವೆ.

ರಿಯಲ್ ಎಸ್ಟೇಟ್ ಕ್ಷೇತ್ರ ಭವಿಷ್ಯದಲ್ಲಿ ಉದ್ಯೋಗಿಗಳ ಸಮೀಕ್ಷೆ ನಡೆಸಿ ಕಚೇರಿ ಸ್ಥಳ ನಿರ್ವಣಕ್ಕೆ ಮುಂದಾಗಬೇಕು. ಕೆಲಸ ನಿರ್ವಹಿಸುವ ಸ್ಥಳದ ಗುಣಮಟ್ಟ, ಭದ್ರತೆ, ತಂತ್ರಜ್ಞಾನ, ವಾತಾವರಣ ಉದ್ಯೋಗಿಗಳಿಗೆ ಸಂತೋಷ ನೀಡಬೇಕು.

| ಶ್ರೀರಾಮ್ ಖತ್ತರ್ ವ್ಯವಸ್ಥಾಪಕ ನಿರ್ದೇಶಕ (ರೆಂಟಲ್ ಬಿಜಿನೆಸ್) ಡಿಎಲ್​ಎಫ್ ಗ್ರೂಪ್.

Leave a Reply

Your email address will not be published. Required fields are marked *