ಮಣ್ಣಿನ ಮನೆಗಳೇ ಆಸರೆ

ಸಾಮಾನ್ಯವಾಗಿ ಮನೆ ನಿರ್ವಣಕ್ಕೆ ಇಟ್ಟಿಗೆ ಬಳಸುವುದು ನೋಡಿದ್ದೇವೆ. ಕೆಲವರು ಕಲ್ಲು ಕಟ್ಟಡಗಳನ್ನು ನಿರ್ವಿುಸಿ ಸೈ ಎನಿಸಿಕೊಂಡಿದ್ದಾರೆ. ಸಿಮೆಂಟ್ ಇಟ್ಟಿಗೆ ಬಳಸುವುದು ಕಾಮನ್. ಇದರ ನಡುವೆ ಮಣ್ಣಿನ ಮನೆಗಳ ನಿರ್ವಣದ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ.

| ಶಿವರಾಜ ಎಂ

ಪರಿಸರ ಸ್ನೇಹಿಯಾಗಿ ಮನೆ ನಿರ್ಮಾಣ ಮಾಡಿದರೆ ಹೇಗೆ ಎಂಬ ಯೋಚನೆಗೆ ಪರಿಸರ ಸ್ನೇಹಿಯಾದ ಮಣ್ಣನ್ನು ಬಳಸುವುದೇ ಸೂಕ್ತ ಎಂಬ ಉತ್ತರ ದೊರಕಿದೆ. ಇದಕ್ಕಾಗಿಯೇ ಭಾರತೀಯ ವಿಜ್ಞಾನ ಸಂಸ್ಥೆ ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ದೊಡ್ಡ ಮಟ್ಟದ ಸಮಾವೇಶವನ್ನೇ ಆಯೋಜಿಸಿದೆ.

ಐತಿಹಾಸಿಕ ಪರಂಪರೆ: ನಾಡಿನ ಇತಿಹಾಸವನ್ನೇ ಕೆದಕಿದರೆ ಆ ಕಾಲದಲ್ಲಿ ಇಟ್ಟಿಗೆ, ಕಲ್ಲಿನ ಬಳಕೆ ತೀರಾ ಕಡಿಮೆ. ಮಣ್ಣು ಎನ್ನುವುದೇ ಪ್ರತಿಯೊಬ್ಬರ ಸೂರಿಗೆ ಆಧಾರವಾಗಿತ್ತು. ಶತಮಾನಗಳೇ ಕಳೆದರೂ ಗಟ್ಟಿಮುಟ್ಟಾಗಿರುತ್ತಿದ್ದ ಮಣ್ಣಿನ ಮನೆಗಳು ಈಗ ಇತಿಹಾಸ ಸೇರಿಹೋಗಿವೆ. ಮಣ್ಣಿನ ಕಟ್ಟಡಗಳ ನಿರ್ವಣಕ್ಕೆ ತನ್ನದೇ ಇತಿಹಾಸವಿದೆ. ಐತಿಹಾಸಿಕ ಪರಂಪರೆ ಇದೆ. ಮುಖ್ಯವಾಗಿ ಸ್ಥಳೀಯ ಮೂಲ ಸಾಮಗ್ರಿಗಳ ಬಳಕೆ, ಕನಿಷ್ಠ ಪ್ರಮಾಣದ ಮಾಲಿನ್ಯ, ಉತ್ತಮ ಆರೋಗ್ಯ, ತಾಪವನ್ನು ಕಡಿಮೆಗೊಳಿಸುವಿಕೆ ಸೇರಿ ಹಲವು ಉಪಯೋಗಗಳನ್ನು ಕಂಡುಕೊಂಡಿದ್ದ ಆಗಿನ ಜನತೆ ಮಣ್ಣಿನ ಮನೆಗಳಿಗೆ ಪ್ರಾಶಸ್ಱ ನೀಡಿದ್ದರು. ಇಡೀ ಕಟ್ಟಡವನ್ನು ಪರಿಸರ ಸ್ನೇಹಿಯಾಗಿ ನಿರ್ವಿುಸುವುದರಿಂದ ಪರಿಸರಕ್ಕೆ ನಮ್ಮ ಕೊಡುಗೆ ನೀಡಬಹುದು ಎಂಬ ಟ್ರೆಂಡ್ ಶುರುವಾಗಿದ್ದು, ಮಣ್ಣಿನ ಮನೆ ನಿರ್ವಣದ ಕಡೆಗೆ ಈಗ ಎಲ್ಲರ ಚಿತ್ತ ಹರಿದಿದೆ.

ದೊಡ್ಡ ಸಮಾವೇಶ: ಭಾರತೀಯ ವಿಜ್ಞಾನ ಸಂಸ್ಥೆ ಇದೇ ಆಗಸ್ಟ್ 22ರಂದು ಮಣ್ಣಿನಿಂದ ನಿರ್ವಿುಸಲಾಗುವ ಕಟ್ಟಡಗಳ ಅಂತಾರಾಷ್ಟ್ರೀಯ ಸಮಾವೇಶ ನಡೆಸಲು ಸಿದ್ಧ್ದತೆ ನಡೆಸಿದೆ. ಇಂಗ್ಲೆಂಡ್​ನ ಬಾತ್ ವಿವಿ, ವೊವೇಂಟಿ ವಿವಿ, ಡ್ಯೂರಾಮ್ ವಿವಿ, ಫ್ರಾನ್ಸ್​ನ ಲೈಯಾನ್ ವಿವಿ ಸೇರಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಜಂಟಿಯಾಗಿ ಸಮಾವೇಶ ಹಮ್ಮಿಕೊಂಡಿದೆ.

ಇಂಥ ಮಣ್ಣಿನ ಮನೆ ನಿರ್ವಣ, ರಚನೆ, ಸೇರಿ ಚರ್ಚೆ ಹಾಗೂ ವಿಷಯ ವಿನಿಮಯಕ್ಕೆ ವೇದಿಕೆ ಒದಗಿಸುತ್ತಿದೆ. ಜತೆಗೆ ಇದರ ಬಗ್ಗೆ ಸಂಶೋಧನೆಗಳು, ನಿರ್ಮಾಣ ವಿಧಾನ, ವಿನ್ಯಾಸ ಬಳಕೆ ವಸ್ತುಗಳು, ಇಂಧನ ಉಳಿತಾಯ ಮತ್ತಿತರ ವಿಷಯಗಳ ಬಗ್ಗೆ ಅರಿಯಲು ವೇದಿಕೆ ಕಲ್ಪಿಸಿಕೊಡಲಿದೆ. ಅಂತಾರಾಷ್ಟ್ರೀಯ ಮಟ್ಟದ ಸಮಾನ ಮನಸ್ಕರು, ವೃತ್ತಿಪರರು, ಇಂಜಿನಿಯರ್, ವಾಸ್ತುಶಿಲ್ಪಿಗಳು, ಸಂಶೋಧಕರು ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಗ್ಲೆಂಡ್, ಫ್ರಾನ್ಸ್, ಚಿಲಿ, ಕೆನಡಾ ಸೇರಿ 12 ಕ್ಕೂ ಹೆಚ್ಚು ದೇಶಗಳ ಪ್ರಖ್ಯಾತ ಭಾಷಣಕಾರರು ಸಮಾವೇಶದಲ್ಲಿ ಪಾಲ್ಗೊಳ್ಳಲು ಸಮ್ಮತಿ ಸೂಚಿಸಿದ್ದಾರೆ. ಈ ಸಮಾವೇಶ ದೇಶದ ಮಣ್ಣಿನ ಕಟ್ಟಡಗಳ ನಿರ್ವಣದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆ ಇದೇ ಆಗಸ್ಟ್ 22ರಂದು ಮಣ್ಣಿನಿಂದ ನಿರ್ವಿುಸಲಾಗುವ ಕಟ್ಟಡಗಳ ಅಂತಾರಾಷ್ಟ್ರೀಯ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ.

ವಿದೇಶಗಳಲ್ಲೂ ಬೇಡಿಕೆ

ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲೂ ಪಾರಂಪರಿಕ ಹಾಗೂ ಆಧುನಿಕ ಮಣ್ಣಿನ ಕಟ್ಟಡಗಳ ನಿರ್ವಣಕ್ಕೆ ಬೇಡಿಕೆ ಕಂಡುಬರುತ್ತಿದೆ. ಜಾಗತಿಕ ಹವಾಮಾನ ವೈಪರೀತ್ಯ ಕುರಿತ ತಂಡವೊಂದು ಇಂಥ ಮನೆಗಳ ಕುರಿತ ವೈಜ್ಞಾನಿಕ ಅಧ್ಯಯನಕ್ಕೆ ಮುಂದಾಗುವಂತೆ ಕರೆ ನೀಡಿದೆ. ಮನೆಗಳ ಕೊರತೆ ಹಾಗೂ ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳ ಬಳಕೆಯಿಂದ ಮಣ್ಣಿನ ಮನೆ ನಿರ್ಮಾಣ ಮಾಡುವಂತೆ ಪ್ರೇರೇಪಿಸುತ್ತಿದೆ. ಪರಿಣಾಮವಾಗಿ ಪ್ರಪಂಚಾದ್ಯಂತ ಮಣ್ಣಿನ ವಾಸನೆ ಬಗ್ಗೆ ಜನರಲ್ಲಿ ಒಲವು ಹೆಚ್ಚುತ್ತಿದೆ.

Leave a Reply

Your email address will not be published. Required fields are marked *