ವಿಜಯವಾಣಿಯ ಶ್ರೇಷ್ಠ ಮುದ್ರಣಕ್ಕೆ ಪ್ರತಿಷ್ಠಿತ ಎಐಎಫ್​ಎಂಪಿ ಪ್ರಶಸ್ತಿ

ಮದುರೈ: ಉತ್ತಮ ಗುಣಮಟ್ಟದ ಮುದ್ರಣ ನೀಡುತ್ತಿರುವ ವಿಜಯವಾಣಿ ದೈನಿಕಕ್ಕೆ ‘ಆಲ್​ ಇಂಡಿಯಾ ಮಾಸ್ಟರ್​ ಪ್ರಿಂಟರ್ಸ್​ ಫೆಡರೇಷನ್​ನ (AIFMP) ರಜತ ಪುರಸ್ಕಾರ ಲಭಿಸಿದೆ.

ತಮಿಳುನಾಡಿನ ಮದುರೈನಲ್ಲಿ ಡಿಸೆಂಬರ್ 22ರಂದು ನಡೆದ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಶ್ರೇಷ್ಠ ಮುದ್ರಣಕ್ಕಾಗಿ ವಿಜಯವಾಣಿಗೆ ಈ ಹಿಂದೆಯೂ ಇದೇ ಸಂಘಟನೆಯಿಂದ ರಜತ ಬಹುಮಾನ ಲಭಿಸಿತ್ತು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.

ಎಐಎಫ್​ಎಂಪಿ ಬಗ್ಗೆ ಒಂದಿಷ್ಟು

ಎಐಎಫ್​ಎಂಪಿ, ಭಾರತದಲ್ಲಿ ಮುದ್ರಣ ಕ್ಷೇತ್ರದ ಪ್ರತಿಷ್ಠಿತ ಸಂಘಟನೆ. ಅಂತಾರಾಷ್ಟ್ರೀಯ ಮಟ್ಟದ ಮುದ್ರಣ ವಲಯದಲ್ಲಿ ಆಗುತ್ತಿರುವ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿ, ತರಬೇತಿಗಳನ್ನು ಈ ಸಂಘಟನೆ ನೀಡುತ್ತಿದೆ. ಗುಣಮಟ್ಟದ ಮುದ್ರಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಎಐಎಫ್​ಎಂಪಿ 1999ರಿಂದಲೂ ನಡೆಸಿಕೊಂಡು ಬರುತ್ತಿದೆ. ಎನ್​ಎಇಪಿ ಕಾರ್ಯಕ್ರಮದಲ್ಲಿ 2.50 ಲಕ್ಷಕ್ಕೂ ಹೆಚ್ಚು ಮುದ್ರಕರು ಭಾಗವಹಿಸುವುದು ಕಾರ್ಯಕ್ರಮದ ಮಹತ್ವ, ವ್ಯಾಪಕತೆಗೆ ಸಾಕ್ಷಿ.