21 C
Bengaluru
Wednesday, January 22, 2020

ನಿಮ್ಮೆಡೆಗೆ ಪ್ರೀತಿ ಬೆಳೆಯಬೇಕು ಅಂದರೆ ನೀವು ಮಾಡಬೇಕಾದ್ದಿಷ್ಟೆ!

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

‘ಅಲ್ಲ ಸರ್, ಯಾವ ಊರಿನ ಬಗ್ಗೆ ಯಾವ ವಿಷಯ ಮಾತಾಡಿದರೂ, ಅಲ್ಲಿ ನನಗೊಬ್ಬರು ಗೊತ್ತು ಅಂದುಬಿಡ್ತೀರಲ್ಲ? ನಿಜಕ್ಕೂ ನಿಮಗೆ ಎಷ್ಟು ಜನ ಗೊತ್ತು? ಎಷ್ಟು ಫ್ರೆಂಡ್ಸ್ ಇದಾರೆ? ಎಲ್ಲಿಯ ಜೋಯಿಡಾ? ಎಲ್ಲಿಯ ಬಿಕ್ಕೋಡು? ಇದೆಲ್ಲಿಯ ನಿಕೋಸಿಯಾ?’ ಅಂತ ಕೇಳಿದ ನನ್ನ ವರದಿಗಾರ ಮಿತ್ರನ ಕಣ್ಣೊಳಗಿನ ಬೆರಗನ್ನೇ ನೋಡುತ್ತಿದ್ದೆ. ಅವನು ಮಾತಿನ ಮಧ್ಯೆ ಕೊಟ್ಟಿಗೆಹಾರದ ಬಗ್ಗೆ ಪ್ರಸ್ತಾಪ ಮಾಡಿದ್ದ. ನಾನು ತಕ್ಷಣ ‘ಅಲ್ಲಿ ಅದ್ಭುತವಾದ ನೀರು ದೋಸೆ-ಕೋಳಿ ಸಾರು ಮಾಡೋ ಹೋಟ್ಲಿದೆ. ಬೇಬಿ ಹೋಟ್ಲು ಅಂತಿದ್ರು, ಈಗಲೂ ಇದೆಯಾ?’ ಅಂತ ಕೇಳಿದುದಕ್ಕೆ ವರದಿಗಾರ ಮಿತ್ರ ಬೆರಗುಗೊಂಡಿದ್ದ. ಹಾಗಂತ ನಂಗೆ ಇಡೀ ಜಗತ್ತೇ ಗೊತ್ತು, ಕೋಟ್ಯಂತರ ಫ್ರೆಂಡ್ಸ್ ಇದ್ದಾರೆ ಅಂತ ನಾನು ಹೇಳುತ್ತಿಲ್ಲ. ನನಗೆ ಎಲ್ಲಿಗೆ ಹೋದರೂ ಗೆಳೆಯರು ಸಿಗುತ್ತಾರೆ : ಹುಡುಗರು, ಹುಡುಗಿಯರು, ಹಿರಿಯರು. ಅದಕ್ಕೆ ಕಾರಣ ನನ್ನಲ್ಲಿರುವ ಅದ್ಭುತ ಪ್ರತಿಭೆ, ಆಕರ್ಷಣೆ, ಪಾಪ್ಯುಲಾರಿಟಿ, ಮಾತಿನ ಚಾಕಚಕ್ಯತೆ-ಉಹುಂ, ಯಾವ ಸುಡುಗಾಡೂ ಅಲ್ಲ. ಒಬ್ಬ ಹುಡುಗೀನ ಇಂಪ್ರೆಸ್ ಮಾಡಿ ಎಂಟು ವರ್ಷದೊಳಗಾಗಿ ಅವಳನ್ನು ನನ್ನೆಡೆಗೆ ಆಸಕ್ತಳನ್ನಾಗಿ ಮಾಡಿಕೊಳ್ಳುವುದಕ್ಕಿಂತ, ಎಂಟು ದಿನಗಳಲ್ಲಿ ನಿಜವಾದ ಆಸಕ್ತಿ ತೋರಿಸಿ ಎಂಟು ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಹೇಗೆ ಅನ್ನೋದು ನನಗೆ ಗೊತ್ತಿದೆ. It’s that simple. ನನಗೆ ಮತ್ತೂ ಒಂದು ವಿಷಯ ಗೊತ್ತು : ಜನಕ್ಕೆ ನನ್ನ ಬಗ್ಗೆ ಆಸಕ್ತಿ ಇರುವುದಿಲ್ಲ. ನಿಮ್ಮ ಬಗ್ಗೆಯೂ ಆಸಕ್ತಿ ಇರುವುದಿಲ್ಲ. ಅವರಿಗೆ ಕೇವಲ ‘ಅವರ’ ಬಗ್ಗೆ ಮಾತ್ರ ಆಸಕ್ತಿಯಿರುತ್ತದೆ : ಇಡೀ ದಿನ! ಏಕೆಂದರೆ, ಅನೇಕರಿಗೆ ನಾವು ಇನ್ನೊಬ್ಬರ ಬಗ್ಗೆ ಆಸಕ್ತಿ ಹೊಂದಬೇಕು ಎಂಬ ಅಂಶವೇ ಗೊತ್ತಿರುವುದಿಲ್ಲ. ಇದು ಕನ್ನಡಿ ನೋಡಿಕೊಂಡು ಹಗಲೂ ಮೂರು ಹೊತ್ತು ಆನಂದಪಡುವ ಮನ್ಮಥೋತ್ಸಾಹ. ಫೇಸ್​ಬುಕ್ ಸಿಂಡ್ರೋಮ್

ಒಂದು ಕಂಪನಿಯ ಯಜಮಾನನಾಗಿ, ಮೇನೇಜರ್ ಆಗಿ, ಕುಟುಂಬದ ಹಿರಿಯನಾಗಿ, ಗೆಳೆಯರ ಗುಂಪಿನ ನಾಯಕನಾಗಿ, ವಾರ್ಡ್​ನ ಕೌನ್ಸಿಲರ್ ಆಗಿ, ಶಾಸಕನಾಗಿ-ನಾವೆಲ್ಲ ತೋರಿಸಬೇಕಾದದ್ದು ಒಂದೇ : ಇತರರೆಡೆಗೆ ಆಸಕ್ತಿ. ಅದು ಅನವಶ್ಯಕ ದುಷ್ಟ ಕುತೂಹಲವಲ್ಲ.

ಯಾರು ನೀವು? ಏನು ಮಾಡುತ್ತಿದ್ದೀರಿ? ನಿಮಗೆ ಏನಿಷ್ಟ? ಯಾವುದರಲ್ಲಿ ಪರಿಣಿತಿ ಇದೆ? ಅಂದ್ಹಾಗೆ, ಮಗೂಗೆ ಜ್ವರ ಅಂತಿದ್ರಿ ಈಗ ಹೇಗಿದೆ? ಎಂಬಂತಹ ಸಹಜ ಕುತೂಹಲ. ಅದೇ ನಿಜವಾದ ಆಸಕ್ತಿ. ಅದೊಂದಿದ್ದರೆ ಸಾಕು, ತುಂಬ ಬೇಗ ನಿಮಗೆ ಗೆಳೆಯರು ಸಿಗುತ್ತಾರೆ.

‘ಇವನು ಕೊಂಚ ದುಷ್ಟ ಅಲ್ವ? ಅವಳ ಕ್ಯಾರೆಕ್ಟರೇ ಸರಿಯಿಲ್ಲ’ ಎಂಬಂತಹ ಮಾತುಗಳನ್ನಾಡಿದರೆ ಆಗಲೂ ಸಿಗುತ್ತಾರೆ. ಆದರೆ ಅವರು ಗೆಳೆಯರಲ್ಲ. ಅದು ಗಾಸಿಪ್​ಕೋರರ ಗುಂಪು. ಸ್ವಸ್ಥ ಮನಸ್ಸಿನ ಒಬ್ಬ ಲೇಖಕ ಅಥವಾ ಸಾಮಾನ್ಯ ಮನುಷ್ಯನನ್ನ ನೋಡಿ. ಅವನು ಸದಾ ಗೊಣಗುತ್ತಿರುವುದಿಲ್ಲ. ಸಿಟ್ಟು ಬಂದಾಗ ವ್ಯವಸ್ಥೆಯ ಮೇಲೆ, ರಾಜಕಾರಣಿಗಳ ಮೇಲೆ ಕೆರಳುವ ಪತ್ರಕರ್ತ ಅದನ್ನೇ ಕಸುಬು ಮಾಡಿಕೊಂಡು ಬಿಡಬಾರದು. ಒಂದು ಫ್ಲವರ್ ಷೋ ಬಗ್ಗೆ ಅಥವಾ ಲೇಖಕನ ಬಗ್ಗೆ ಅಥವಾ ಒಂದು ಊರಿನ ಬಗ್ಗೆ ಅಷ್ಟೇ ನವಿರಾಗಿ ಬರೆಯುವ, ರಿಯಾಕ್ಟ್ ಮಾಡುವ ಸಾವಧಾನ ಇಟ್ಟುಕೊಳ್ಳಬೇಕು. ಸುಮ್ನೆ ‘ಉರ ಉರಾ’ ಅನ್ನುತ್ತಿದ್ದರೆ ಸುತ್ತಲಿನವರಿಗೆ ಬಹಳ ಬೇಗನೆ ನಿಮ್ಮ ಬಗ್ಗೆ ಆಸಕ್ತಿ ಹೊರಟು ಹೋಗುತ್ತದೆ.

ನಿಮ್ಮ ಬಗ್ಗೆ ಸುತ್ತಲಿನವರಿಗೆ ಆಸಕ್ತಿ, ಪ್ರೀತಿ ಬೆಳೆಯಬೇಕು ಅಂದರೆ ಅದಕ್ಕಾಗಿ ನೀವು ಮಾಡಬೇಕಾದದ್ದು ಒಂದೇ-ಸುತ್ತಲಿನವರೆಡೆಗೂ ನೀವು ಅಷ್ಟೇ ಆಸಕ್ತಿ, ಪ್ರೀತಿ ತೋರಿಸಬೇಕು. ಮನುಷ್ಯನ ಸ್ವಭಾವವೇ ಹಾಗೆ : ಸ್ವಲ್ಪಮಟ್ಟಿಗಿನ ಪ್ರೀತಿ, ಮೆಚ್ಚುಗೆ, ಮುದ್ದು, ಗಮನ ಕೊಡುವಿಕೆ ಎಂಥವರನ್ನೂ ಮುದಗೊಳಿಸುತ್ತವೆ. ‘ಇತ್ತೀಚೆಗೆ ಸ್ವಲ್ಪ ತೂಕ ಕಡಿಮೆ ಆದಂತಿದೆಯಲ್ಲಾ? You look bright’’ ಅಂದು ನೋಡಿ, ಡುಮ್ಮನೆಯ ಹುಡುಗಿಗೆ ಭಯಂಕರ ಸಂತೋಷವಾಗುತ್ತದೆ. ಆದರೆ ನೀವು ತೋರಿಸುವ ಆಸಕ್ತಿ ಪ್ರಾಮಾಣಿಕವಾಗಿರಲಿ. ಆಸಕ್ತಿ ತೋರಿಸೋದು ಅಂದಮಾತ್ರಕ್ಕೆ ಮುಗಿಬಿದ್ದು ಮುದ್ದಾಡಿ ಬಿಡೋದು ಅಂತ ಅಲ್ಲ. ಟೆಲಿಫೋನ್ ರಿಸೀವ್ ಮಾಡಿದ ರೀತಿಯಲ್ಲೇ ನಾವು ಅತ್ತಲಿನವರಿಗೆ ಹೇಳಿಬಿಡಬಹುದು- ‘ನಿನ್ನ ಧ್ವನಿ ಕೇಳಿ ಎಷ್ಟು ಸಂತೋಷವಾಗ್ತಿದೆ ಕಣಯ್ಯಾ…’ ಎಂಬ ಭಾವವನ್ನು. ಅತ್ತಲಿನ ಮನುಷ್ಯನಿಗೆ ಸಂತೋಷವಾಗಲಿಕ್ಕೆ ಅಷ್ಟು ಸಾಕು. ಎಲ್ಲೋ ಮಾರ್ಕೆಟ್​ನ ಸಂದಣಿಯಲ್ಲಿ ಪರಿಚಿತ ಮುಖ ಕಂಡಾಗ ತಕ್ಷಣ ‘ಹಲೋ’ ಅನ್ನಿ.

ಕಣ್ಣರಳಿಸಿ. ನಾನು ಯೂರೋಪ್​ನಲ್ಲಿ ಗಮನಿಸಿದ್ದು ಅದನ್ನೇ. ಪರಿಚಯವಿಲ್ಲದಿದ್ದರೂ ಒಮ್ಮೆ ‘ಗುಡ್ ಮಾರ್ನಿಂಗ್’ ಎಂಬಂತೆ ತಲೆಯಲುಗಿಸುತ್ತಾರೆ. ಅವರು ಮುಂದೆ ಗಂಟೆಗಟ್ಟಲೆ ಏನನ್ನೂ ಮಾತನಾಡದೆ ಕೂತು ಬಿಡಬಹುದು. ಆದರೆ ನಿಮ್ಮ ಇರುವಿಕೆಯನ್ನು ನಾನು ಗುರುತಿಸಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ನಾವು ಬಸ್ಸಿನಲ್ಲಿ ಕುಳಿತು ಪಕ್ಕದ ಸೀಟಿನ ಅಪರಿಚಿತನೊಂದಿಗೆ ಗಂಟೆಗಟ್ಟಲೆ ಮಾತನಾಡಿರುತ್ತೇವೆ. ಆದರೆ ಅವನ ಪೂರ್ತಿ ಹೆಸರೂ ತಿಳಿದುಕೊಂಡಿರುವುದಿಲ್ಲ. ಯಾವತ್ತಿಗೂ ಆ ತಪ್ಪು ಮಾಡಬಾರದು. ಯಾರನ್ನೂ ಎರಡೆರಡು ಸಲ ಹೆಸರು ಕೇಳಬಾರದು. ಮೊದಲ ಸಲ ಕೇಳುವಾಗಲೇ ಸರಿಯಾಗಿ, ಶ್ರದ್ಧೆಯಿಂದ ಕೇಳಿಸಿಕೊಳ್ಳಿ. ಅದನ್ನ ಹೇಗೆ ಉಚ್ಚರಿಸಬೇಕು ಎಂಬುದನ್ನು ಮನನ ಮಾಡಿಕೊಳ್ಳಿ. ಗೆಳೆಯರು ಸಿಕ್ಕಾಗ ಅವರ ಮನೆಯಾಕೆ, ಮಕ್ಕಳು, ತಂದೆ-ತಾಯಿ ಮುಂತಾದವರ ಬಗ್ಗೆ ವಿಚಾರಿಸಿ. ಇಂಥ ವಿಷಯಗಳಿಗೆ ಬಂದಾಗ ನಮ್ಮ ನೆನಪಿನ ಶಕ್ತಿ, memory chip ಮತ್ತು ಮಿದುಳಿನ google ಚೆನ್ನಾಗಿರಬೇಕು. ವಿಧವೆಯೊಬ್ಬಾಕೆ ಸಿಕ್ಕ ಕೂಡಲೆ ‘ಮೊನ್ನೆ ನಿಮ್ಮ ಯಜಮಾನರು ಸಿಕ್ಕಿದ್ರಮ್ಮಾ’ ಅಂತ ಆರಂಭಿಸಿ ಬಿಡುವುದಿದೆಯಲ್ಲ? ಅದಕ್ಕಿಂತ ಅಪಸವ್ಯ ಮತ್ತೊಂದಿಲ್ಲ. ನಾನು ಸಾಮಾನ್ಯವಾಗಿ ಬರ್ತ್​ಡೇಗಳನ್ನು ಮರೆಯುತ್ತೇನೆ. ಮದುವೆ ಆನಿವರ್ಸರಿಗಳನ್ನು ಮರೆಯುತ್ತೇನೆ. ಈ ಬಲಹೀನತೆಯನ್ನು ಸರಿಪಡಿಸಿಕೊಳ್ಳಲು ಅದೇಕೋ ಸಾಧ್ಯವಾಗಿಯೇ ಇಲ್ಲ. ನನ್ನ ಮಕ್ಕಳ ಬರ್ತ್​ಡೇಗಳನ್ನೇ ಮರೆತುಬಿಟ್ಟಿರುತ್ತೇನೆ. ಆದರೆ ಅವರೆಡೆಗೆ ಪ್ರೀತಿ ತೋರಿಸುವುದಕ್ಕೆ ನನಗಿರುವುದು ಅದೊಂದೇ ಮಾರ್ಗವಲ್ಲ. ಪ್ರೀತಿ ಜಛ್ಞಿ್ಠ್ಞ ಆಗಿದ್ದಾಗ ಅಂಥ formalityಗಳಿಗೆ ಅರ್ಥವಿರುವುದಿಲ್ಲ. ಆದರೆ formal ಆದ ಸಂಬಂಧಗಳನ್ನು ಕೂಡ ಅರ್ಥಪೂರ್ಣ ಸಂಬಂಧಗಳನ್ನಾಗಿಸಿಕೊಳ್ಳಬೇಕೆಂದರೆ, ಆ ವ್ಯಕ್ತಿಯೆಡೆಗೆ ನಮಗೆ ನಿಜವಾದ ಪ್ರೀತಿಯಿರಬೇಕಾಗುತ್ತದೆ. ಆ ವ್ಯಕ್ತಿ ತುಂಬ ಪ್ರಮುಖನಾಗಿರಬೇಕು ಅಂತೇನಿಲ್ಲ. ತೀರ ಪ್ರಮುಖರಾದವರಿಗೆ ನಿಮ್ಮ ಪ್ರೀತಿಯ ಅವಶ್ಯಕತೆಯೂ ಇರಲಿಕ್ಕಿಲ್ಲ. ಆದರೆ ಅವರ ಸೆಕ್ರೆಟರಿಗಳು, ರಿಸೆಪ್ಷನಿಸ್ಟುಗಳು, ಖಾಸಗಿ ಸಿಬ್ಬಂದಿಯವರು, ಕಡೆಗೆ ಅವರ ಜವಾನರು-ಸೆಕ್ಯುರಿಟಿಯವರು ಮುಂತಾದವರನ್ನು ಗಮನಿಸಿ, ಪರಿಚಯ ಮಾಡಿಕೊಂಡು, ನೆನಪಿಟ್ಟುಕೊಳ್ಳಿ. ನನಗೆ ಪುಸ್ತಕ ತಂದುಕೊಡುವ ಕೊರಿಯರ್​ನ ಹುಡುಗ ನನಗೆಷ್ಟು ಪರಿಚಿತ ಮತ್ತು ಸ್ನೇಹಿತನೆಂದರೆ, ಅವನ ಮೊಬೈಲ್ ನಂಬರ್ ನನ್ನ ಬಳಿಯಿದೆ. ಕೆಲವೊಮ್ಮೆ ಸುಮ್ಮನೆ ಫೋನು ಮಾಡಿ ಮಾತನಾಡಿಸಿರುತ್ತೇನೆ. ಹೀಗಾಗಿ, ಒಂದೇ ಒಂದು ದಿನಕ್ಕೂ ನನ್ನ ಕೊರಿಯರ್ ಮಿಸ್ ಆಗುವುದಿಲ್ಲ. ‘ನಿನ್ನ ಷರ್ಟು ಸಕತ್ತಾಗಿದೆ. ಇಂಥದ್ದು ಸಿಕ್ರೆ ನನ್ನ ಸೈಜಿನದೊಂದು ತಗೊಂಡು ಬಾ’ ಅಂತ ನನ್ನ ಸಿಬ್ಬಂದಿಯ ಹುಡುಗರಿಗೆ ಯಾವಾಗಾದರೊಮ್ಮೆ ಹೇಳಿರುತ್ತೇನೆ. ಷರ್ಟಿನ ಸಂಗತಿ ಮುಖ್ಯವಲ್ಲ: ನನ್ನ ದನಿಯಲ್ಲಿನ ಪ್ರೀತಿ, ಮೆಚ್ಚುಗೆ, ಅಕ್ಕರೆ ಅವರಿಗೆ ಅರ್ಥವಾಗುತ್ತದೆ. ಗೆಳೆತನದಲ್ಲಿ ಕಣ್ಣು, ಮುಖಭಾವ, body language,, ಅಪ್ಪುಗೆಯಲ್ಲಿನ warmth-ಎಲ್ಲವೂ ಮುಖ್ಯವಾಗುತ್ತವೆ. ಇನ್ನೊಬ್ಬರಲ್ಲಿ ಆಸಕ್ತಿ ವಹಿಸುವುದನ್ನು ಸುಮ್ಮನೆ ರೂಢಿ ಮಾಡಿಕೊಂಡರೆ ಸಾಕು, ಕ್ರಮೇಣ ಅದು ನಮ್ಮ ಸ್ವಭಾವವೇ ಆಗಿಬಿಡುತ್ತದೆ. ಯಾವಾಗ ಇನ್ನೊಬ್ಬರಲ್ಲಿ ಆಸಕ್ತಿ ತೋರಿಸತೊಡಗುತ್ತೇವೋ, ನಮ್ಮೊಳಗಿನ ಖಾಲಿತನ ಮರೆಯಾಗಿ ನಮ್ಮ ಸಮಸ್ಯೆಗಳು ಕ್ಷುಲ್ಲಕ ಅನ್ನಿಸತೊಡಗುತ್ತವೆ. ‘ನನ್ನ ಹೊಟ್ಟೆ ತುಂಬಿಯೂ ಮಿಗುವಷ್ಟು ಅನ್ನವಿದೆ’ ಎಂಬ ಸತ್ಯಕಾಮರ ಮಾತು ನನಗೆ ಪದೇಪದೆ ನೆನಪಾಗುತ್ತದೆ. ಹೀಗಾಗಿಯೇ ಯಾವುದೋ ಬ್ರಿಲಿಯಂಟ್ ಆದ ಬಡ ಮಗುವಿಗೆ ಓದು, ನಿರಾಶ್ರಿತ ಅಜ್ಜಿಗೆ ಮನೆ ಬಾಡಿಗೆ, ನಿಸ್ಸಹಾಯಕ ರೋಗಿಗೆ ಔಷಧ ಕೊಡಿಸಿ ಸಮಾಧಾನಗೊಳ್ಳುತ್ತೇನೆ. ಚಿಕ್ಕಪುಟ್ಟ ಸಹಾಯ ಮಾಡಿ ನಾನು ಯಾವತ್ತೂ ಉಪವಾಸ ಮಲಗಿಲ್ಲ. ಅಂತೆಯೇ ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತು ಆಡಿ ನಾನು ಯಾವತ್ತೂ ದಣಿದಿಲ್ಲ. ಮಾಡಿಕೊಂಡ ಗೆಳೆತನಗಳು ತುಂಬ ಸಹಜ ರೀತಿಯ ಲಾಭಗಳನ್ನು ತಂದುಕೊಟ್ಟಿವೆ. ಗೆಳೆಯರು ಹುಡುಕಿಕೊಂಡು ಬರುತ್ತಾರೆ; ಮನಸಾರೆ ನಗಲಿಕ್ಕೆ ಎದೆ ಬಿರಿಯೆ ಅಳಲಿಕ್ಕೆ, ಸುಮ್ಮನೆ ಸ್ವಲ್ಪ ಹೊತ್ತು ಜೊತೆಗೆ ಕುಳಿತು ಹಗುರಾಗಲಿಕ್ಕೆ, ಯಾವುದೋ ಕನಸು ಹಂಚಿಕೊಳ್ಳಲಿಕ್ಕೆ! ನಾನೂ ಇವೇ ಕಾರಣಗಳಿಗಾಗಿ ಅವರಲ್ಲಿಗೆ ಹೋಗುತ್ತಿರುತ್ತೇನೆ.

ಚೆಂದದ ಬದುಕು ಅಂದರೆ ಇದೇ ಅಲ್ಲವೆ?

(ಲೇಖಕರು ಹಿರಿಯ ಪತ್ರಕರ್ತರು)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...