22.8 C
Bengaluru
Saturday, January 18, 2020

ಉಜ್ಜುವ, ಗುಡಿಸುವ, ಕೊಳೆಯಾಗುವ ಒಂದು ರೊಟೀನ್!

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಅದಕ್ಕೆ ಇಂಗ್ಲಿಷಿನಲ್ಲಿ routine ಅಂತಾರೆ. ಕನ್ನಡದಲ್ಲಿ ರುಟೀನು, ರೊಟೀನು ಅನ್ನುತ್ತೇವೆ. ಒಂದರ್ಥದಲ್ಲಿ ನಿತ್ಯಕರ್ಮ. ಒಂದು ಸಲ ನೀವೇ ಕೂತುಕೊಂಡು ಯೋಚನೆ ಮಾಡಿ: ನಮ್ಮ ಬದುಕಿನ ಎಷ್ಟು ಸಾವಿರ ಸಾವಿರ ಗಂಟೆಗಳನ್ನು ಈ ರೊಟೀನು ನುಂಗಿ ಹಾಕುತ್ತದೆ.

ಪ್ರತಿನಿತ್ಯ ಎದ್ದು ಹಲ್ಲುಜ್ಜುವುದರಿಂದ ಶುರು. ಉಜ್ಜು, ತಿಕ್ಕು, ತೊಳಿ, ಗುಡಿಸು, ಸಾರಿಸು, ರಂಗೋಲಿ ತೀಡು, ಸ್ನಾನ ಮಾಡು, ಅಂಗಡಿಗೆ ಹೋಗು, ಅದೇ ತರಕಾರಿ, ತಂದು ಅಡುಗೆ ಮಾಡು, ಪ್ರತಿನಿತ್ಯ ಅದೇ ರುಚಿ, ಆಫೀಸಿಗೆ ಹೊರಡುವ ಅದೇ ಧಾವಂತ, ಬಸ್ಟಾಪು, ನಿತ್ಯನೋಡುವ ಅವೇ ಮುಖಗಳು, ಬಸ್ಸಿನಲ್ಲಿ ಮನುಷ್ಯರ ವಾಸನೆ, ಆಫೀಸಿನಲ್ಲಿ ಕತ್ತೆ ಚಾಕರಿ, ಮಧ್ಯಾಹ್ನಕ್ಕೆಲ್ಲ ತಂಗಳಾಗುವ ಊಟದ ಡಬ್ಬಿ, ಆಫೀಸು ಮುಗಿಯುತ್ತಿದ್ದಂತೆಯೇ ಮನೆ ಸೇರುವ ತವಕ, ಯಥಾಪ್ರಕಾರ ಮಕ್ಕಳ ಹೋಮ್ರ್ಕ, ಬೆಳಗ್ಗೆಯ ಅಡುಗೆ ಬಿಸಿ ಮಾಡಿಕೋ, ನಾಳೆಗೆ ತರಕಾರಿ ಬಿಡಿಸಿಟ್ಟುಕೋ, ಟೀವಿ ಹಾಕಿದರೆ ಚೇಳಿನ ಜೊತೆಗೆ ಹಾವಿನ ಸಂಸಾರ… ಹೀಗೂ ಉಂಟೆ?

ಉಂಟೇನು ಬಂತು? ಬದುಕು ಇರುವುದೇ ಹೀಗೆ. ನೂರೇ ನೂರು ವರ್ಷಗಳ ಈ ಅಮೂಲ್ಯವಾದ ಪುಟ್ಟ ಬದುಕನ್ನು ಈ ರೊಟೀನ್ ಎಂಬ ಬ್ರಹ್ಮರಾಕ್ಷಸ ಸದ್ದೇ ಆಗದಂತೆ, ಗೊತ್ತೂ ಆಗದಂತೆ ತಿಂದು ಹಾಕಿ ಬಿಡುತ್ತದೆ. ಕೂತು ಲೆಕ್ಕ ಹಾಕಿ ನೋಡಿ. ಕೇವಲ ಹದಿನೈದೇ ನಿಮಿಷದಲ್ಲಿ ಸ್ನಾನ ಮುಗಿಸುತ್ತೇವೆ ಅಂದುಕೊಂಡರೂ, ತಿಂಗಳಿಗೆ 450 ನಿಮಿಷ ಬರೀ ಸ್ನಾನಕ್ಕೇ ಹೋಗುತ್ತವೆ. ಹಾಗಾದರೆ ವರ್ಷಕ್ಕೆ? ನೂರು ವರ್ಷಕ್ಕೆ? ಹಾಗಂತ ಒಂದು ದಿನ ಸ್ನಾನ ತಪ್ಪಿಸಿದೆವಾ? ದಿನವಿಡೀ ಚಡಪಡಿಕೆ, ಹಿಂಸೆ. ದೇಹ ಕೊಳೆಯಾಗದೆ ಇರದು. ಸ್ನಾನ ಮಾಡದೆ ಇರಲಾಗದು. ರೊಟೀನಿನ ಯಾವ ಅಂಶವನ್ನು ತೆಗೆದುಕೊಂಡರೂ ಇದೇ ಬಾಧೆ.

ಕೊಳೆಯಾಗುವುದು ಕೊಳೆಯಾಗುತ್ತಲೇ ಇರುತ್ತದೆ. ತೊಳೆಯುವ ನಾವು ತೊಳೆಯುತ್ತಲೇ ಇರುತ್ತೇವೆ. ಹೀಗೆ ನಮ್ಮ ಆಯುಷ್ಯದ ಸಾವಿರಾರು ಗಂಟೆಗಳನ್ನು ಇಂತಹ ರೊಟೀನುಗಳಲ್ಲಿ ಕಳೆದುಬಿಡುತ್ತೇವಲ್ಲ? ನಾವು ಚಿಂತಿಸುವುದು, ಯೋಚಿಸುವುದು, ಕ್ರಿಯಾಶೀಲರಾಗುವುದು, ಧೇನಿಸುವುದು, ಸಾಧಿಸುವುದು, ಬೆಳೆಯುವುದು-ಅದೆಲ್ಲ ಯಾವಾಗ? ಹಿಂದೆ ಋಷಿಮುನಿಗಳು ತಪಸ್ಸಿಗೆ ಕುಳಿತಾಗ ಜಟಾಜೂಟ ಬೆಳೆದು, ಅವರ ಮೈಗೆ ಹುತ್ತ ಕಟ್ಟುತ್ತಿತ್ತಂತೆ. ಅವರು ರೊಟೀನು ತಪ್ಪಿಸುತ್ತಿದ್ದರೇನೋ? ಇಲ್ಲದಿದ್ದರೆ ತಪಸ್ಸು ಹೇಗೆ ಸಾಧ್ಯ? ಮೈಮೇಲೆ ಹುತ್ತ ಕಟ್ಟುವುದು ಹೇಗೆ ಸಾಧ್ಯ? ರೊಟೀನನ್ನು ನಾವೂ ತಪ್ಪಿಸಿಕೊಳ್ಳಬಯಸುತ್ತೇವೆ. ಅದಕ್ಕಾಗಿ ಹವಣಿಸುತ್ತೇವೆ.

ಮೊದಲು ಇತ್ತೋ, ಇಲ್ಲವೋ ಗೊತ್ತಿಲ್ಲ: ಇಂಗ್ಲಿಷರು ಬಂದ ಮೇಲೆ ಭಾರತಕ್ಕೆ Sunday ಬಂತು. ಇವತ್ತಿಗೂ ಭಾರತದ ಅನೇಕ ಕಡೆ ಸೋಮವಾರದ ದಿನ ರೈತರು ರಜಾ ಮಾಡುತ್ತಾರೆ. ಅವತ್ತು ಎತ್ತುಗಳನ್ನು ನೇಗಿಲಿಗೆ ಹೂಡುವುದಿಲ್ಲ. ಭಾನುವಾರಗಳನ್ನು ನಾವೂ ಕಾಯುತ್ತೇವೆ. ಅವತ್ತು ತಡವಾಗಿ ಏಳಬಹುದು. ಹಿತವೆನ್ನಿಸುವಂತೆ ಎಣ್ಣೆ ನೀರು ಸ್ನಾನ. ಮನೆಯಾಕೆ ತಡವಾಗಿ ಮಾಡಿದರೂ ಅದ್ಭುತವಾದ ಅಡುಗೆ ಮಾಡಿರುತ್ತಾಳೆ. ಘಮ್ಮೆನ್ನುವ ಹುಳಿಗೆ ಜೊತೆಯಾಗಿ ಹಪ್ಪಳ, ಸಂಡಿಗೆ, ಒಂದು ಮಿಳ್ಳೆ ತುಪ್ಪ. ಆಫೀಸಿಗೆ ಹೋಗುವ ಒತ್ತಡವಿಲ್ಲ. ಮಕ್ಕಳಿಗೆ ಅವತ್ತು ಕಾರ್ಟೂನ್ ನೆಟ್​ವರ್ಕ್ ನೋಡುವ ಸ್ವಾತಂತ್ರ್ಯ ಸಾಯಂಕಾಲಕ್ಕೆ ಸಿನೆಮಾ. ರಾತ್ರಿಗೆ ‘ಸಮರಸವೇ ಜೀವನ’.

ಯೋಚಿಸಿ ನೋಡಿದರೆ, ಇದೂ ಒಂಥರದ ರೊಟೀನೇ. ಭಾನುವಾರದ ರೊಟೀನು. ಕೆಲವರು ಜಾಸ್ತಿ ಅದೃಷ್ಟವಂತರು. ಭಾನುವಾರಗಳಲ್ಲಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಚಿಕ್ಕದೊಂದು ಪಿಕ್​ನಿಕ್​ಗೆ ಹೋಗಿ ಬರುತ್ತಾರೆ. ಇರಬಹುದು, ಅದೇ ರಂಗನತಿಟ್ಟು-ಕೊಕ್ಕರೆ ಬೆಳ್ಳೂರು-ಬಲಮುರಿ, ನಿಮಿಷಾಂಬ ದೇವಸ್ಥಾನ. ಆದರೂ ಮನಸಿಗೆ ಸ್ವಲ್ಪ ಛೇಂಜು. ನಾಲ್ಕು ದುಡ್ಡು ಖರ್ಚಾದರೇನಂತೆ? ಸ್ವಂತ ಕಾರಿದೆ. ಡ್ರೖೆವಿಂಗ್ ಬರುತ್ತದೆ. ಅಷ್ಟುದ್ದ ಡ್ರೖೆವ್ ಮಾಡಿ ಹಿಂತಿರುಗಿದರೆ ಮನಸ್ಸಿಗೆ ಉಲ್ಲಾಸವೂ ಆಗುತ್ತದೆ.

ಅವರಿಗಿಂತ ಅದೃಷ್ಟವಂತರೂ ಕೆಲವರಿರುತ್ತಾರೆ. ಮಕ್ಕಳಿಗೆಲ್ಲ ನೌಕರಿ ಸಿಕ್ಕು, ಮದುವೆಗಳಾಗಿ, ಅವರ ಪಾಡಿಗೆ ಅವರು ಅಂತಾದ ಮೇಲೆ ಈ ಸಾಹೇಬರು ಹೆಂಡತಿಯನ್ನು ಕರೆದುಕೊಂಡು ಯೂರೋಪ್ ಟೂರಿಗೆ ಹೋಗಿ ಬರುತ್ತಾರೆ. ‘ಅಲ್ಲೂ ಕಡ್ಲೆಬೇಳೆ ಸಿಗುತ್ತೆ ಗೊತ್ತಾ?’ ಅಂತ ಹಿಂತಿರುಗಿ ಬಂದು ಗೆಳೆಯರಿಗೆ ಕತೆ ಹೇಳುತ್ತಾರೆ. ಅವರದು ರೊಟೀನು ತಪ್ಪಿಸಿಕೊಳ್ಳುವ ದುಬಾರಿ ಯತ್ನ. ಇದು ಇಂದು ನಿನ್ನೆಯ ಮಾತೇನಲ್ಲ. ನಾನೇನೋ ಹೊಸ ಸಂಗತಿ ಹೇಳುತ್ತಿದ್ದೇನೆ ಅಂತಲೂ ಅಲ್ಲ. ಕಾಲಾಂತರದಿಂದಲೂ ಮನುಷ್ಯ ರೊಟೀನಿನಿಂದ, ಏಕತಾನತೆಯಿಂದ, ಮೊನಾಟನಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ. ಮತ್ತೆ ಮತ್ತೆ ಅದೇ ರೊಟೀನಿಗೆ ಬೀಳುತ್ತ ಫಜೀತಿಗೊಳಗಾಗಿದ್ದಾನೆ.

ಎಲ್ಲೋ ಕೆಲವರು ಮಾತ್ರ ರೊಟೀನಿನಲ್ಲಿರುವ ದಿವ್ಯ ಸಂತೋಷವನ್ನು ಅರ್ಥ ಮಾಡಿಕೊಂಡು ಅನುಭವಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನಿಜ, ರೊಟೀನಿನಲ್ಲೊಂದು ದಿವ್ಯ ಸಂತೋಷವಿದೆ. ಏಕತಾನತೆ ಯಲ್ಲೊಂದು ಗಮ್ಮತ್ತಿದೆ. ಬೇಕಾದರೆ ಪರೀಕ್ಷಿಸಿ ನೋಡಿ. ಕಾರಣವೇ ಇಲ್ಲದೆ ನಾಲ್ಕು ದಿನ ರಜೆ ಹಾಕಿ ಮನೆಯಲ್ಲಿರಿ. ಐದನೆಯ ದಿನ ನಿಮಗೇ ಆಫೀಸಿಗೆ ಹಿಂತಿರುಗಬೇಕೆನ್ನಿಸುತ್ತದೆ. ಅದೇ ಬಸ್ಟಾಪು, ಬಸ್ಸು, ಮನುಷ್ಯರ ವಾಸನೆ, ಕೆಲಸ, ಹೋಂವರ್ಕ, ರಾತ್ರಿಯ ಊಟ, ‘ಸಮರಸವೇ ಜೀವನ’- ಎಲ್ಲವೂ ಅದೇ ಅದೇ.

ಆದರೂ ಅದರಲ್ಲೊಂದು ವೈಶಿಷ್ಟ್ಯವಿದೆ. ಸರಿಯಾಗಿ ಗಮನಿಸಿ ನೋಡಿದರೆ ಪ್ರತಿ ಸೂರ್ಯೋದಯದಲ್ಲೂ ಒಂದು ಹೊಸತನವಿದೆ. ಉದಿಸುವ ಪ್ರತಿ ದಿವಸವೂ, ಗತಿಸಿ ಹೋದ ನಿನ್ನೆಗಿಂತ ಡಿಫರೆಂಟು. ಹತ್ತು ವರ್ಷಗಳ ಹಿಂದೆ ನಿಮಗೆ ಅರ್ಥವಾಗುತ್ತಿದ್ದ ಅಕ್ಕ, ಇವತ್ತು ಬೇರೆಯದೇ ವ್ಯಕ್ತಿಯಾಗಿ ಗೋಚರಿಸುತ್ತಾಳೆ. ‘ಅರೆ, ಇವನು ಎಷ್ಟು ಬೆಳೆದುಬಿಟ್ಟ’ ಅಂತ ಇದ್ದಕ್ಕಿದ್ದಂತೆ ಒಂದು ದಿನ ನಿಮಗೆ ನಿಮ್ಮ ಮಗನೇ ಅಚ್ಚರಿ ಮೂಡಿಸಿಬಿಡುತ್ತಾನೆ: ಅವನನ್ನು ನೀವು ನಿತ್ಯ ನೋಡುತ್ತಿದ್ದರೂ! ಒಂದೊಂದು ದಿನವೂ ಒಂದು ಹೊಸ ಅನುಭವ. ನಿತ್ಯ ತಿನ್ನುವ ಹಣ್ಣೇ ಆದರೂ, ಇವತ್ತು ಆ ತೊಳೆಗೆ ಏನೋ ಸವಿ. ಯಾವುದೋ ರುಚಿ. ಬದುಕನ್ನು ಹಾಗೆ ಸ್ವೀಕರಿಸದೆ ಹೋದರೆ ನೀವು ತುಂಬ ಬೇಗನೆ ಬೋರೆದ್ದು ಹೋಗುತ್ತೀರಿ.

ಈ ಮಾತನ್ನು ಬರೆಯುವುದಕ್ಕೆ ಮುನ್ನ ನಾನು ಅನೇಕ ಲೇಖಕರ ಬದುಕುಗಳನ್ನು ಗಮನಿಸಿದ್ದೇನೆ. ಅಭ್ಯಸಿಸಿದ್ದೇನೆ. ಅವರೊಂದಿಗೆ ಮಾತಾಡಿದ್ದೇನೆ. ಕೇವಲ ಬರೆಯುವುದನ್ನೇ ಬದುಕನ್ನಾಗಿ ಮಾಡಿಕೊಂಡವರು ಅವರು. ಅವರಿಗೂ ಸ್ನಾನಗಳಿವೆ, ಯಾನಗಳಿವೆ, ಪ್ರೇಮಗಳಿವೆ, ಕೊಳೆಯಾಗುವುದಿದೆ. ಆದರೆ ಅವೆಲ್ಲವನ್ನೂ ಅವರು single individual actನ್ನಾಗಿ ಮಾಡುವುದಿಲ್ಲ. ಸ್ನಾನ ಮಾಡುತ್ತಾ ಯೋಚಿಸುತ್ತಾರೆ. ಊಟ ಮಾಡುತ್ತಾ ಧೇನಿಸುತ್ತಾರೆ. ಮೈಲುಗಟ್ಟಲೆ ನಡೆಯುತ್ತಾರೆ. ನಡೆಯುತ್ತ ನಡೆಯುತ್ತ ತಾವು ಬರೆಯಲಿರುವ ಸಾಲುಗಳನ್ನು ಮನನ ಮಾಡಿಕೊಳ್ಳುತ್ತಾರೆ. ಎತ್ತಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾರೆ. ಗುಂಪಿನಲ್ಲಿದ್ದರೂ ಏಕಾಂತ ಅನುಭವಿಸುತ್ತಿರುತ್ತಾರೆ. ಬಯಲು ಸಾಕೆನ್ನಿಸಿದಾಗ ತಮ್ಮ ಬರವಣಿಗೆಯ ಚಿಪ್ಪಿನೊಳಕ್ಕೆ ಸೇರಿಕೊಂಡು ಬಿಡುತ್ತಾರೆ.

ಅವರು ರೊಟೀನ್​ನಿಂದ ತಪ್ಪಿಸಿಕೊಳ್ಳಲು ಚಡಪಡಿಸುವುದಿಲ್ಲ. ರೊಟೀನ್​ನಲ್ಲೊಂದು ಲಯವನ್ನೂ, ಸಾರ್ಥಕತೆಯನ್ನೂ ಕಂಡುಕೊಂಡು ಬಿಟ್ಟಿರುತ್ತಾರೆ. ಒಬ್ಬ ಸಾಮಾನ್ಯ ಮನುಷ್ಯ ಕೂಡ ತನ್ನ ರೊಟೀನನ್ನು ಚೆಂದಗೊಳಿಸಿಕೊಳ್ಳಬಲ್ಲ. ಸುಮ್ಮನೆ ಹೋಗಿ, ನೀವು ನಿತ್ಯ ಮಲಗುವ ಕೋಣೆಗಾಗಿ ಒಂದು indoor plant ಖರೀದಿಸಿಕೊಂಡು ಬನ್ನಿ. ನಿಮ್ಮಲ್ಲೊಂದು ಹೊಸ ಚೈತನ್ಯವನ್ನು ಅದು ಮೂಡಿಸುತ್ತದೆ.

ದೇವರ ಮೇಲೆ ಭಕ್ತಿಯಿಲ್ಲದಿದ್ದರೂ ಬೆಳಗ್ಗೆ ಎದ್ದು ಸುಬ್ಬುಲಕ್ಷ್ಮಿಯವರ ಸುಪ್ರಭಾತ ಕೇಳಿಸಿಕೊಳ್ಳಿ. ಒಬ್ಬರೇ ಕುಳಿತು ಸ್ವಲ್ಪ ಹೊತ್ತು ಚದುರಂಗ ಆಡಿರಿ. ಸ್ನಾನದ ಮನೆಯಲ್ಲಿ ರೇಡಿಯೋ ಇಟ್ಟುಕೊಳ್ಳಿ. ಮಲಗುವ ಮುನ್ನ ಏನನ್ನಾದರೂ ಸರಿ, ಒಂದು ಪುಟ ಬರೆಯಿರಿ. ಪ್ರತೀ ತಿಂಗಳು ಒಬ್ಬ ಹೊಸ ಲೇಖಕನ ಪುಸ್ತಕ ಖರೀದಿಸಿ ಓದಿ. ನೆನಪಿರಲಿ, ಇವೆಲ್ಲವನ್ನೂ ನಾವು ರೊಟೀನ್​ನ ಜೊತೆಜೊತೆಯಲ್ಲೇ ಮಾಡಬಹುದು: ತುಂಬ ರೊಟೀನ್ ಆಗಿ!

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...