20.8 C
Bangalore
Sunday, December 8, 2019

ರಕ್ತಸಿಕ್ತ ಭೈರವ ಗೀತ

Latest News

ಪತಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಪತ್ನಿಯ ಸೆರೆ

ಕೆಜಿಎಫ್: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಗೈದ ಪತ್ನಿ ಮತ್ತು ಪ್ರಿಯಕರನನ್ನು ಉರಿಗಾಂ...

ಅರಣ್ಯ ಸರ್ವೆಗೆ ಡ್ರೋನ್: ರಾಜ್ಯದಲ್ಲೇ ಮೊದಲ ಬಾರಿಗೆ ಹೊಸನಗರದಲ್ಲಿ ಪ್ರಾಯೋಗಿಕವಾಗಿ ಜಾರಿ

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಪ್ರದೇಶ ಗುರುತಿಸಲು ಪ್ರಾಯೋಗಿಕವಾಗಿ ಹೊಸನಗರ ತಾಲೂಕಿನಲ್ಲಿ ಅರಣ್ಯ ಇಲಾಖೆ ಡ್ರೋನ್ (ಏರಿಯಲ್) ಸರ್ವೆ ನಡೆಸಿದ್ದು, ಯಶಸ್ವಿಯಾದರೆ ಇಲಾಖೆಯ...

ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ಸಾಮಾಜಿಕ ಸಾಮರಸ್ಯ,ರಾಷ್ಟ್ರೀಯ ಏಕತೆಗೆ ತಿಂಗಳಿಗೂ ಹೆಚ್ಚು ಕಾಲ ಜಿಲ್ಲಾದ್ಯಂತ ನಡೆದ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣೆಗೆ ಶನಿವಾರ ಚಿತ್ರದುರ್ಗದ ಹಳೇ...

ಭಗವದ್ಗೀತೆ ಪಠಣದಿಂದ ಅಜ್ಞಾನ ದೂರ

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಸೇವಾಟ್ರಸ್ಟ್ ಸಂಸ್ಥಾಪಕ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು. ತಾಲೂಕಿನ...

ನಾಯಿಂದ್ರಹಳ್ಳಿ ವಿವಾದಿತ ರಸ್ತೆ ಸರ್ವೇ

ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂದ್ರಹಳ್ಳಿ ರಸ್ತೆ ವಿವಾದ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಸರ್ವೇ ನಂ.2 ವ್ಯಾಪ್ತಿಯ 5.04...

| ಅವಿನಾಶ್ ಜಿ.ರಾಮ್ ಬೆಂಗಳೂರು

ಕ್ರೖೆಂ ಕಥೆಗಳನ್ನು ತೆರೆಮೇಲೆ ಅಚ್ಚುಕಟ್ಟಾಗಿ ತೋರಿಸುವುದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಿದ್ಧಹಸ್ತರು. ಅದೇ ಕೆಲಸ ‘ಭೈರವ ಗೀತ’ದಲ್ಲೂ ಆಗಿದೆ. ಆದರೆ, ಈ ಬಾರಿ ನಿರ್ದೇಶನದ ಹೊಣೆಯನ್ನು ಶಿಷ್ಯ ಸಿದ್ಧಾರ್ಥ್​ಗೆ ನೀಡಿದ್ದಾರೆ. ಉಳ್ಳವರ ಮತ್ತು ಇಲ್ಲದವರ ನಡುವಿನ ಸಾಕಷ್ಟು ಕಥೆಗಳು ಈಗಾಗಲೇ ತೆರೆಮೇಲೆ ಬಂದಿವೆ. ಅದಕ್ಕೆ ಹೊಸ ಸೇರ್ಪಡೆಯಾಗಿ ‘ಭೈರವ ಗೀತ’ ಅಬ್ಬರಿಸಿದೆಯಷ್ಟೇ!

ಶಂಕ್ರಪ್ಪ ಎಂಬ ದೂರ್ತ ಶ್ರೀಮಂತನ ಮನೆಯಲ್ಲಿ ಅನೇಕ ಆಳುಗಳಿದ್ದಾರೆ. ಅದರಲ್ಲಿ ಭೈರವ ಕೂಡ ಒಬ್ಬ. ಹೊಟ್ಟೆಪಾಡಿಗಾಗಿ ಅವರೆಲ್ಲ ಶಂಕ್ರಪ್ಪನಿಗೆ ನಿಷ್ಠರಾಗಿ ಕೆಲಸ ಮಾಡಿಕೊಂಡಿದ್ದರೆ, ‘ಇವರೆಲ್ಲ ಇರುವುದು ನಂಗೋಸ್ಕರ ಪ್ರಾಣ ನೀಡೋಕೆ’ ಎಂಬ ಅಹಂಕಾರದ ವ್ಯಕ್ತಿತ್ವ ಶಂಕ್ರಪ್ಪನದ್ದು. ಈ ವೇಳೆಗೆ ನಗರದಲ್ಲಿ ಓದಿಕೊಂಡ ಶಂಕ್ರಪ್ಪನ ಮಗಳು ಗೀತಾ ಮನೆಗೆ ಮರಳುತ್ತಾಳೆ. ಕೆಲವೇ ದಿನಗಳಲ್ಲಿ ಭೈರವನ ಮೇಲೆ ಗೀತಾಳಿಗೆ ಪ್ರೀತಿ ಚಿಗುರೊಡೆಯುತ್ತದೆ. ಅಷ್ಟೇ, ಮುಂದಿನದನ್ನು ಸರಾಗವಾಗಿ ಊಹಿಸಿಬಿಡಬಹುದು. ಅಷ್ಟೊಂದು ದುರ್ಬಲವಾಗಿದೆ ಚಿತ್ರಕಥೆ!

ಮಾಸ್ತಿ ಬರೆದಿರುವ ಖಡಕ್ ಸಂಭಾಷಣೆಗಳು ಚಿತ್ರಕ್ಕೆ ಖದರ್ ತುಂಬಿವೆ. ಆದರೆ, ಲೀಟರ್​ಗಟ್ಟಲೇ ರಕ್ತ ಹರಿಸುವುದರ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಚಿತ್ರಕಥೆ ಮೇಲೂ ರಾಮ್ೋಪಾಲ್ ವರ್ಮ (ಕಥೆ-ಚಿತ್ರಕಥೆ) ಗಮನ ಹರಿಸಬೇಕಿತ್ತು. ಇಲ್ಲಿ ಪ್ರೀತಿ ಇದೆ, ವರ್ಗ ಸಂಘರ್ಷವಿದೆ. ಆದರೆ, ಯಾವುದಕ್ಕೂ ಗಟ್ಟಿಯಾದ ನೆಲೆಗಟ್ಟಿಲ್ಲ! ಇಡೀ ಕಥೆ ಸಾಗುವುದು ಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ಎನ್ನುವ ಮೂಲಕ ಸಿನಿಮಾ ಶುರುವಾಗುತ್ತಾದರೂ, ಕನ್ನಡ ಮಣ್ಣಿನ ನೇಟಿವಿಟಿಗೆ ಈ ಸಿನಿಮಾ ಒಗ್ಗುವುದಕ್ಕೆ ತುಂಬ ಹಠ ಮಾಡುತ್ತದೆ! ಬಹುಭಾಷೆಯಲ್ಲಿ ಚಿತ್ರೀಕರಣಗೊಂಡ ಪರಿಣಾಮ, ಪಾತ್ರಗಳ ತುಟಿಚಲನೆ ಕನ್ನಡ ಸಂಭಾಷಣೆಗೆ ಹೊಂದಿಕೆಯಾಗುವುದಿಲ್ಲ. ರವಿಶಂಕರ್ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ತಕ್ಕನಾಗಿ ಇದ್ದರೆ, ಹಾಡುಗಳು ನೆನಪಿನಲ್ಲಿ ಉಳಿಯವುದಿಲ್ಲ. ಜಗದೀಶ್ ಛಾಯಾಗ್ರಹಣಕ್ಕೆ ಪೂರ್ಣಾಂಕ ನೀಡಲೇಬೇಕು. ಭೈರವನಾಗಿ ಧನಂಜಯ ಅಕ್ಷರಶಃ ಅಬ್ಬರಿಸಿದ್ದಾರೆ. ಶ್ರೀಮಂತರ ದಬ್ಬಾಳಿಕೆಯನ್ನು ಖಂಡಿಸುವ ಆಕ್ರೋಶದ ಯುವಕನಾಗಿ ಕೆಂಡಕಾರುವ ನಟನೆ ಮಾಡಿರುವ ಧನಂಜಯ, ನಾಯಕಿ ಜತೆಗಿನ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಅದ್ಯಾಕೋ ಮಂಕಾಗಿದ್ದಾರೆ. ನಾಯಕಿ ಇರಾ› ಪಾತ್ರಕ್ಕೆ ತುಂಬ ಸ್ಕೋಪ್ ಇದೆ. ಆದರೆ, ಅದು ಇರಾ› ಅರಿವಿಗೆ ಬಂದಂತೆ ಕಾಣುವುದಿಲ್ಲ. ನಟನೆಯಲ್ಲೂ ಜಿಪುಣತನ ಮೆರೆದಿದ್ದಾರೆ. ಶಂಕ್ರಪ್ಪನ ಪಾತ್ರದಲ್ಲಿ ಬಾಲ್ ರಾಜ್​ವಾಡಿ ಅಭಿನಯ ಗಮನಸೆಳೆಯುತ್ತದೆ. ಮಿಕ್ಕಂತೆ ಸಿನಿಮಾದ ತುಂಬ ಸಾಕಷ್ಟು ಕಲಾವಿದರಿದ್ದರೂ, ಕನ್ನಡಕ್ಕೆ ಅವರೆಲ್ಲವರೂ ಹೊಸಬರು!

ಚಿತ್ರ: ಭೈರವ ಗೀತ

ನಿರ್ಮಾಣ: ಭಾಸ್ಕರ್ ರಾಶಿ

ನಿರ್ದೇಶನ: ಸಿದ್ಧಾರ್ಥ್ ತಾತೋಲು

ಪಾತ್ರವರ್ಗ: ಧನಂಜಯ, ಇರಾ› ಮೋರ್, ಬಾಲ್ ರಾಜ್​ವಾಡಿ ಮುಂತಾದವರು.

Stay connected

278,744FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...