20.4 C
Bengaluru
Sunday, January 19, 2020

ಸ್ವಾತಂತ್ರ್ಯದ ಹೆಬ್ಬಯಕೆಯಲ್ಲಿ ಮುನ್ನಡೆಯುವ ಕಿಚ್ಚು…

Latest News

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಆಯುಷ್ಮಾನ್ ಭಾರತಕ್ಕೆ ಅನಾರೋಗ್ಯ

ಶಂಕರ ಶರ್ಮಾ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುಷ್ಮಾನ್ ಭಾರತ ಆರೋಗ್ಯ ಸೇವಾ ಕೇಂದ್ರವು ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿದ್ದು,...

‘ದ ವೇ ಬ್ಯಾಕ್’ 2010ರ ಅಮೆರಿಕನ್ ಸಿನಿಮಾ. ಆಸ್ಟ್ರೇಲಿಯನ್ ನಿರ್ದೇಶಕ ಪೀಟರ್ ವೇರ್ ನಿರ್ದೇಶನದ ಈ ಸಿನಿಮಾ ಮನುಷ್ಯನಲ್ಲಿ ಮೂಲಭೂತವಾಗಿ ಅಡಕವಾಗಿರುವ ಸ್ವಾತಂತ್ರ್ಯದ ಹಂಬಲವನ್ನು ಅನಾವರಣಗೊಳಿಸುವಂಥ ಸುಂದರ ಕಲಾಕೃತಿ. ಸೈಬೀರಿಯಾದ ಸೆರೆಮನೆಯಿಂದ ತಪ್ಪಿಸಿಕೊಂಡ ಕೈದಿಗಳ ಗುಂಪೊಂದು ಕೊರೆವ ಹಿಮ, ಸುಡುವ ಮರುಭೂಮಿ, ದಟ್ಟ ಕಾಡು ಎಲ್ಲವನ್ನೂ ಸಹಿಸಿಕೊಂಡು ಸಾವಿರಾರು ಕಿಲೋಮೀಟರ್ ಕ್ರಮಿಸಿ ಬಿಡುಗಡೆಯ ಗಾಳಿಯನ್ನು ಉಸಿರಾಡಿದ ಕಥನ. ಮನುಷ್ಯ ಸಾಮರ್ಥ್ಯಕ್ಕೆ ಇರಬಹುದಾದ ಎಲ್ಲೆಗಳನ್ನು ಅಳಿಸಿಹಾಕುವ ಈ ಸಿನಿಮಾ ಹೆಜ್ಜೆಹೆಜ್ಜೆಗೂ ಕೌತುಕ ರೋಮಾಂಚನವನ್ನುಂಟು ಮಾಡುವಂಥದ್ದು. ಮಾನವ ಏನನ್ನಾದರೂ ಮಾಡಬೇಕೆಂದು ಅಂದುಕೊಂಡರೆ ಆತನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಬಹಳಷ್ಟು ಸಂದರ್ಭದಲ್ಲಿ ಕೆಲವರ ಬದುಕನ್ನು ನೋಡಿದಾಗ ಅರಿವಾಗುತ್ತದೆ. ಅದಕ್ಕೊಂದು ಅಪ್ರತಿಮ ಉದಾಹರಣೆ ಈ ನೈಜ ಕಥೆಯನ್ನಾಧರಿಸಿದ ಸಿನಿಮಾ.

ಎಂಥ ಕಠಿಣ ಪರಿಸ್ಥಿತಿಯಲ್ಲಿಯೇ ಇರಲಿ ಬಿಡುಗಡೆಯ ತುಡಿತ ಮನುಷ್ಯನನ್ನು ಬಂಧನದಿಂದ ದೂರ ಓಡುವಂತೆ ಮಾಡುವುದು ಸೋಜಿಗದ ಸಂಗತಿಯೇ ಸೈ. ಎರಡನೇ ಮಹಾಯುದ್ಧದಲ್ಲಿ ರಷ್ಯಾದ ಸೆರೆಮನೆಯಿಂದ ತಪ್ಪಿಸಿಕೊಂಡು 4000 ಮೈಲು ಅಂದರೆ ಸುಮಾರು 6,437 ಕಿಮೀ ನಡೆದು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಿದ ಪೋಲಿಶ್ ಯುದ್ಧ ಕೈದಿ ಸ್ಲಾವೊಮಿರ್ ರಾವಿಸ್ ಅವರ ಕಥನ ‘ದ ಲಾಂಗ್ ವಾಕ್’ನಿಂದ ಪ್ರಭಾವಿತವಾಗಿರುವಂಥದ್ದು. ಕನ್ನಡದಲ್ಲಿ ಇದನ್ನು ತೇಜಸ್ವಿ ‘ಮಹಾಪಲಾಯನ’ ಎಂಬ ಹೆಸರಿನಲ್ಲಿ ತಂದಿರುವುದು ಸಾಹಿತ್ಯಪ್ರೇಮಿಗಳಿಗೆಲ್ಲರಿಗೂ ಗೊತ್ತೇ ಇದೆ. ಹೆನ್ರಿ ಛಾರೇರೇ ಬರೆದ ‘ಪ್ಯಾಪಿಯಾನ್’ ಕೂಡ ಇಂತಹುದ್ದೇ ರೋಮಾಂಚನಗಳ ಮೂಟೆ. (ಪ್ಯಾಪಿಯಾನ್ ಅನ್ನು ತೇಜಸ್ವಿ ಮತ್ತು ಪ್ರದೀಪ್ ಕೆಂಜಿಗೆ ಕನ್ನಡಕ್ಕೆ ತಂದಿದ್ದಾರೆ).

ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ರಷ್ಯಾ ಪೋಲಾಂಡ್ ಅನ್ನು ಆಕ್ರಮಿಸಿದಾಗ ಪೋಲಿಶ್ ಸೇನಾಧಿಕಾರಿ ಜಾನುಸ್ ವೈಝೆಕ್ ಸೆರೆಹಿಡಿಯಲ್ಪಡುತ್ತಾನೆ. ರಷ್ಯಾದ ಸೇನೆ ಬಗೆಬಗೆಯಾಗಿ ವಿಚಾರಿಸಿದರೂ ಆತ ತಾನು ಗೂಢಾಚಾರ ಎಂದು ಒಪ್ಪಿಕೊಳ್ಳುವುದಿಲ್ಲ. ಆದರೆ ಅಧಿಕಾರಿಗಳು ಆತನ ಪತ್ನಿಯನ್ನು ಸೆರೆಹಿಡಿದು ಆತನ ವಿರುದ್ಧವಾಗಿ ಹೇಳಿಕೆ ಪಡೆದುಕೊಳ್ಳುತ್ತಾರೆ.

ಜಾನುಸ್​ಗೆ ಸೈಬೀರಿಯಾದ ಗುಲಾಗ್ ಲೇಬರ್ ಕ್ಯಾಂಪ್​ನಲ್ಲಿ ಇಪ್ಪತ್ತು ವರ್ಷಗಳ ಕಠಿಣ ಸಜೆಯಾಗುತ್ತದೆ.

ಸೈಬೀರಿಯಾದ ಲೇಬರ್ ಕ್ಯಾಂಪ್​ನ ಈ ಸೆರೆಮನೆಯಲ್ಲಿ ರಾಜಕೀಯ ಕೈದಿಗಳೂ ಇದ್ದಾರೆ, ಪಕ್ಕಾ ಕ್ರಿಮಿನಲ್​ಗಳೂ ಇದ್ದಾರೆ. ಕೊರೆವ ಚಳಿಯ, ಚೂರು ನಿಗಾ ತಪ್ಪಿದರೂ ಪ್ರಾಣ ಕಳೆದುಕೊಳ್ಳುವ ಆ ಕಠಿಣ ವಾತಾವರಣದಲ್ಲಿ ವರ್ಷಗಟ್ಟಲೇ ಇರುವ ಭಯಕ್ಕೇ ಯಾರಾದರೂ ಅರೆಜೀವವಾಗಬೇಕು! ಸಿನಿಮಾದ ಪಾತ್ರವೊಂದು ಹೇಳುವಂತೆ ಇಲ್ಲಿ ಪ್ರಕೃತಿಯೇ ಕರುಣೆಯಿಲ್ಲದ ಜೈಲರ್.

ನಟ ಖಬರೊವ್ ಪಲಾಯನದ ಕುರಿತು ಜಾನುಸ್ ಹತ್ತಿರ ರ್ಚಚಿಸುತ್ತಾನೆ. ದಕ್ಷಿಣಕ್ಕೆ ಹೋಗಿ ಬೇಕಲ್ ಸರೋವರ ದಾಟಿ ಮಂಗೋಲಿಯಾಕ್ಕೆ ಹೋಗಬಹುದು ಎಂದಾತ ಹೇಳುತ್ತಾನೆ. ಆಗ ಮಿಸ್ಟರ್ ಸ್ಮಿಥ್ ಎಂಬಾತ ಖಬರೊವ್ ಹೊಸಬರ ಹತ್ತಿರ ಸುಮ್ಮನೇ ಪಲಾಯನದ ಮಾತಾಡುತ್ತ ಈ ಸೆರೆಮನೆಯಲ್ಲಿ ಬದುಕಲು ಒಂದಿಷ್ಟು ಶಕ್ತಿ ಗಳಿಸಿಕೊಳ್ಳುತ್ತಿದ್ದಾನೆಯೇ ವಿನಃ ತಪ್ಪಿಸಿಕೊಳ್ಳುವ ಯಾವ ಯೋಚನೆಯೂ ಅವನಿಗಿಲ್ಲ ಎಂದು ಜಾನುಸ್​ಗೆ ಎಚ್ಚರಿಕೆ ನೀಡುತ್ತಾನೆ. ಅಷ್ಟೇ ಅಲ್ಲ ‘ಕರುಣೆ ಎಂಬುದು ನಿನಗಿರುವ ದೊಡ್ಡ ದೌರ್ಬಲ್ಯ, ಅದು ನಿನ್ನನ್ನು ಸಾಯಿಸಬಹುದು’ ಎನ್ನುತ್ತಾನೆ ಸ್ಮಿಥ್. ಆದರೆ ಜಾನುಸ್​ಗೆ ಆಗಾಗ ಒಂದು ಹಳ್ಳಿಯ ಮನೆ, ಕಿಟಕಿ, ಹೂವಿನ ಗಿಡಗಳು, ಕಿಟಕಿಯ ಹತ್ತಿರ ಇಟ್ಟಿರುವ ಒಂದು ಕಲ್ಲು ಇವು ಕಾಣಿಸುತ್ತಿರುವ ಭ್ರಮೆಯಾಗುತ್ತಿರುತ್ತದೆ. ಮತ್ತು ಅಲ್ಲಿನ ಗಣಿಗಳಲ್ಲಿ ಇವರನ್ನು ಕೆಲಸಕ್ಕೆ ಹಾಕಿದಾಗ ಪ್ರಾಣ ಉಳಿಯಬೇಕೆಂದರೆ ತಪ್ಪಿಸಿಕೊಳ್ಳುವುದೊಂದೇ ದಾರಿ ಎಂದು ಆತ ಸೆರೆಯಿಂದ ತಪ್ಪಿಸಿಕೊಳ್ಳುವ ಯೋಜನೆ ಹಾಕಿಕೊಳ್ಳುತ್ತಾನೆ. ಅಮೆರಿಕದ ಇಂಜಿನಿಯರ್ ಆಗಿರುವ ಮಿಸ್ಟರ್ ಸ್ಮಿಥ್, ಪೋಲ್ಯಾಂಡ್​ನ ಕಲಾವಿದ ತೊಮಾಝå್, ಪಾದ್ರಿ ವಾಸ್, ಇರುಳು ಕುರುಡುತನವಿರುವ ಕಾಝಿಕ್, ರಷ್ಯಾದ ಕ್ರೂರ ಕ್ರಿಮಿನಲ್ ವೋಲ್ಕಾ ಮತ್ತು ಝೆೊರಾನ್ ಎಂಬ ಅಕೌಂಟಂಟ್ ಜಾನುಸ್ ಜತೆ ಸೇರಿಕೊಳ್ಳುತ್ತಾರೆ. ಭೀಕರ ಹಿಮಪಾತದ ಒಂದು ದಿನ ಕ್ಯಾಂಪ್​ನ ಕಾವಲುಗಾರನೊಬ್ಬನಿಗೆ ಲಂಚ ನೀಡಿ ವಿದ್ಯುತ್ ಬೇಲಿಯ ವಿದ್ಯುತ್ ಅನ್ನು ಕೆಲ ನಿಮಿಷ ನಿಲ್ಲಿಸುವಂತೆ ಮಾಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಹೆಜ್ಜೆಗುರುತು ಅಧಿಕಾರಿಗಳಿಗೆ ಕಾಣದಿರಲೆಂದು ಹಿಮಪಾತದ ದಿನವನ್ನೇ ಆಯ್ದುಕೊಳ್ಳುತ್ತಾರೆ.

ಅಲ್ಲಿಂದ ಅವರ ಸಾಹಸಮಯ ಯಾತ್ರೆ ಶುರುವಾಗುತ್ತದೆ. ಆದರೆ ಎರಡನೇ ದಿನ ರಾತ್ರಿಯೇ ದಾರಿ ತಪ್ಪಿಸಿಕೊಂಡ ಕಾಝಿಕ್ ಕ್ಯಾಂಪ್​ಫೈರ್ ಹತ್ತಿರ ಬರಲಾಗದೆ ಚಳಿಯಲ್ಲಿ ಮರಗಟ್ಟಿ ಸಾಯುತ್ತಾನೆ. ಉಳಿದವರು ಹಲವಾರು ದಿನಗಳ ಕಾಲ ಸೈಬೀರಿಯಾದ ಚಳಿಯಲ್ಲಿ ಆಹಾರವಿಲ್ಲದೆ ನರಳುತ್ತಾರೆ. ಹಾವು, ಹುಳಹುಪ್ಪಡಿಗಳನ್ನೂ ಹಿಡಿದು ತಿನ್ನುವ ದೃಶ್ಯಗಳು ಹಸಿವಿನ ತೀವ್ರತೆಯನ್ನು ಕಟ್ಟಿಕೊಡುತ್ತವೆ. ಬೇಕಲ್ ಸರೋವರದ ಸುಳಿವೇ ಸಿಗದಾಗ ಜಾನುಸ್ ಒಬ್ಬನೇ ಹೋಗಿ ಸರೋವರವನ್ನು ಹುಡುಕಿ ಮತ್ತೆ ವಾಪಾಸಾಗುತ್ತಾನೆ. ಅಂತೂ ಇಂತೂ ಬೇಕಲ್ ಸರೋವರ ತಲುಪುತ್ತಾರೆ. ಅಲ್ಲಿ ಅವರಿಗೆ ಅವರನ್ನೇ ಹಿಂಬಾಲಿಸಿಕೊಂಡು ಬರುತ್ತಿದ್ದ ಇರೇನಾ ಎನ್ನುವ ಹುಡುಗಿ ಸಿಗುತ್ತಾಳೆ. ಆಕೆ ಪೋಲಿಷ್ ಹುಡುಗಿ. ರಷ್ಯನ್ ಸೈನಿಕರು ತನ್ನ ತಂದೆ-ತಾಯಿಗಳನ್ನು ಸಾಯಿಸಿ ತನ್ನನ್ನು ವಾರ್ಸಾದ ಫಾಮ್ರ್ ಒಂದಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟರೆಂದೂ ಅದಕ್ಕಾಗಿ ತಾನು ತಪ್ಪಿಸಿಕೊಂಡೆನೆಂದೂ ಹೇಳುತ್ತಾಳೆ. ಆದರೆ ವಾರ್ಸಾ ಜರ್ಮನ್ನರ ವಶದಲ್ಲಿರುವುದರಿಂದ ಸ್ಮಿಥ್​ಗೆ ಅವಳು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗುತ್ತದೆ. ಅವರಿರುವ ಪರಿಸ್ಥಿತಿಯಲ್ಲಿ ಅವಳನ್ನು ಸೇರಿಸಿಕೊಂಡರೆ ಕಷ್ಟವೇ. ಪ್ರಯಾಣ ನಿಧಾನವಾಗುತ್ತದೆ, ಆಹಾರವೋ ಅವರಿಗೇ ಗತಿಯಿಲ್ಲ, ಅದರಲ್ಲೂ ಅವಳಿಗೆ ಪಾಲು ಕೊಡಬೇಕಾಗುತ್ತದೆ. ಆದರೂ ಆಕೆಯನ್ನು ಗುಂಪಿಗೆ ಸೇರಿಸಿಕೊಳ್ಳುತ್ತಾರೆ. ಆಮೇಲೆ ಸ್ಮಿಥ್ ಆಕೆಯ ಸುಳ್ಳಿನ ಬಗ್ಗೆ ಪ್ರಸ್ತಾಪಿಸಿ ಇನ್ನು ಮುಂದೆ ಈ ರೀತಿ ಸುಳ್ಳಾಡಬೇಡವೆಂದು ಹೇಳುತ್ತಾನೆ. ಆಗ ಆಕೆ ತನ್ನ ತಂದೆ-ತಾಯಿ ಇಬ್ಬರೂ ಕಮ್ಯುನಿಷ್ಟರೆಂದೂ ಆದರೆ ಕಮ್ಯುನಿಷ್ಟ್ ಆಡಳಿತಗಾರರೇ ಅವರನ್ನು ಕೊಂದು ತನ್ನನ್ನು ಅನಾಥಾಲಯಕ್ಕೆ ಸೇರಿಸಿದರೆಂದೂ ಹೇಳುತ್ತಾಳೆ.

ಮಂಗೋಲಿಯಾ ಮತ್ತು ರಷ್ಯಾದ ಗಡಿ ಬಳಿ ಬಂದಾಗ ವೋಲ್ಕಾ ರಷ್ಯಾದ ಗಡಿ ದಾಟಿ ಬರಲು ಒಪ್ಪುವುದಿಲ್ಲ. ಆತ ಸ್ಟಾಲಿನ್ ಆರಾಧಕ. ಆತ ವಾಪಾಸ್ ರಷ್ಯಾದೆಡೆಗೇ ಮರಳುತ್ತಾನೆ. ಇವರೂ ಮುಂದುವರಿಯುತ್ತಾರೆ. ಆದರೆ ಮಂಗೋಲಿಯಾದ ಗಡಿಯಲ್ಲೂ ಸ್ಟಾಲಿನ್ ಚಿತ್ರಗಳು ಕಾಣುತ್ತವೆ. ಹಾಗಾಗಿ ಅವರು ಬ್ರಿಟಿಷ್ ಆಡಳಿತವಿರುವ ಭಾರತಕ್ಕೆ ಹೋಗಬೇಕೆಂದು ತೀರ್ವನಿಸುತ್ತಾರೆ. ಗೋಬಿ ಮರುಭೂಮಿಯಲ್ಲಿ ನೀರು ಆಹಾರವಿಲ್ಲದೆ, ಬಿಸಿಲಿಗೆ ಬೆಂದು ಹೈರಾಣಾಗುತ್ತಾರೆ. ಇರೆನಾ, ತೋಮಾಝå್ ಹಾದಿಯಲ್ಲೇ ಸಾಯುತ್ತಾರೆ. ಸ್ಮಿಥ್ ಕೂಡ ಕೊನೆಯ ಅವಸ್ಥೆ ತಲುಪಿ ತನ್ನನ್ನು ಬಿಟ್ಟು ಹೋಗಿ ಎನ್ನುತ್ತಾನೆ. ಆದರೆ ಜೆನುಸ್​ನ ಪೋ›ತ್ಸಾಹದಾಯಕ ಮಾತುಗಳಿಂದ ಚೇತರಿಸಿಕೊಂಡು ಮುನ್ನಡೆಯುತ್ತಾನೆ. ಚೀನಾ ಮಹಾಗೋಡೆಯ ಮೂಲಕ ಚೀನಾ ತಲುಪಿ ನಂತರ ಹಿಮಾಲಯ ತಲುಪುತ್ತಾರೆ, ಸ್ಮಿಥ್ ತಾನು ಅಲ್ಲಿಂದಲೇ ಲಾಸಾ ತಲುಪಿ ಅಮೆರಿಕದ ಸೈನ್ಯದ ಸಹಾಯದಿಂದ ಅಮೆರಿಕ ತಲುಪುತ್ತೇನೆಂದು ಬೀಳ್ಕೊಳ್ಳುತ್ತಾನೆ. ಉಳಿದ ಮೂವರೂ ಭಾರತ ತಲುಪುತ್ತಾರೆ.

ಸೆರೆಯಿಂದ ಬಿಡುಗಡೆಯಾದರೂ ಜಾನುಸ್​ಗೆ ತಾಯ್ನಾಡಿಗೆ ಹೋಗುವ ಅವಕಾಶ ದಕ್ಕುವುದಿಲ್ಲ. ಆತ ಅಲೆಮಾರಿ ಜೀವನ ನಡೆಸಬೇಕಾಗುತ್ತದೆ. 1989ರಲ್ಲಿ ಅಂದರೆ ಆತ ಸೈಬೀರಿಯಾಕ್ಕೆ ಕೈದಿಯಾಗಿ ಕರೆದೊಯ್ಯಲ್ಪಟ್ಟ ಐವತ್ತು ವರ್ಷಗಳ ನಂತರ ಪೋಲ್ಯಾಂಡ್​ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆಯಾಗುತ್ತದೆ. ಚಿತ್ರದ ಕೊನೆಯ ದೃಶ್ಯದಲ್ಲಿ ಆತನಿಗೆ ಸೈಬೀರಿಯಾದಲ್ಲಿರುವಾಗ ಕಾಣಿಸಿಕೊಂಡಿದ್ದ ಅದೇ ಹಳ್ಳಿ ಮನೆ, ಕಿಟಕಿ, ಗಿಡಗಳು, ಕಿಟಕಿಯ ಹತ್ತಿರದ ಕಲ್ಲು. ಈ ಸಲ ಅವನು ಆ ಕಲ್ಲಿನಡಿ ಇರುವ ಕೀಲಿಕೈ ತೆಗೆದು ಮನೆಯ ಬೀಗ ತೆಗೆದು ಒಳಹೋಗುತ್ತಾನೆ. ಬಾಗಿಲು ತೆರೆದು ಒಳಹೋದರೆ ವೃದ್ಧೆಯಾಗಿರುವ ಹೆಂಡತಿ ಕುಳಿತಿರುತ್ತಾಳೆ. ಮಾತಿಗೆ ಆಸ್ಪದವಿಲ್ಲದ ಭಾವನೆಗಳ ಮಹಾಪೂರದಲ್ಲಿ ಇಬ್ಬರೂ ಕೊಚ್ಚಿ ಹೋಗುತ್ತಾರೆ.

ಜಾನುಸ್ ಈ ಚಿತ್ರದ ಕಥಾನಾಯಕ. ಇಡೀ ತಂಡಕ್ಕೆ ಆತ ಸ್ವಾಭಾವಿಕ ನಾಯಕನಾಗುತ್ತಾನೆ. ತಂಡವನ್ನು ಮುನ್ನಡೆಸಲು ಬೇಕಾದ ಸ್ವಾರ್ಥ ರಹಿತತೆ, ತಾಳ್ಮೆ, ಧೈರ್ಯ ಎಲ್ಲವೂ ಆತನಲ್ಲಿ ಹದಪ್ರಮಾಣದಲ್ಲಿ ಮಿಳಿತಗೊಂಡಿವೆ. ಕಳ್ಳರ ಕಳ್ಳನಾದ ಕ್ರೂರಿ ವೊಲ್ಕಾನೇ ಜಾನುಸ್​ನನ್ನು ತೋಳ ಎಂದು ಮೆಚ್ಚುಗೆಯಿಂದ ಕರೆಯುವುದು ಅದಕ್ಕೆ ಸಾಕ್ಷಿ.

ಬರೀ ರೋಮಾಂಚನ ಮಾತ್ರವಲ್ಲ ಕಣ್ಣಂಚನ್ನು ಒದ್ದೆಯಾಗಿಸುವ, ಮನಸ್ಸನ್ನು ಮಿಡಿಸುವ ಮತ್ತು ತುಟಿಯಂಚಿನಲ್ಲಿ ಕಿರುನಗು ಅರಳಿಸುವ ಎಷ್ಟೋ ಸನ್ನಿವೇಶಗಳು ಇಲ್ಲಿವೆ. ಹನಿ ನೀರಿಗಾಗಿ ಒದ್ದಾಡುವ, ನೀರು ಸಿಕ್ಕಿದಾಗ ಸ್ವರ್ಗ ಸಿಕ್ಕಿದಂತೆ ಸಂಭ್ರಮಿಸುವ ದೃಶ್ಯಗಳಿವೆ. ಸಿದ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗದ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವ ಆಧುನಿಕ ಮಾನವನ ಸ್ವಭಾವದ ಬಗ್ಗೆ ತೇಜಸ್ವಿ ಹೇಳುತ್ತಾರೆ. ಸೈಬೀರಿಯಾದಂಥ ಪ್ರದೇಶದಲ್ಲಿ ದಶಕದಶಕಗಳ ಕಾಲ ರಾಜಕೀಯ ವಿರೋಧಿಗಳನ್ನು ಕೊಳೆಸುವ ಕ್ರೌರ್ಯ ಅದರ ಒಂದು ಭಾಗ ಮಾತ್ರ. ಆದರೆ ಎಂಥ ಕ್ರೌರ್ಯಕ್ಕೂ ಎದೆಗುಂದದೆ ಮುನ್ನಡೆಯುವ ಕಿಚ್ಚನ್ನು ಹಚ್ಚುವುದು ಸ್ವಾತಂತ್ರ್ಯದ ಹೆಬ್ಬಯಕೆ. ಅದನ್ನು ಈ ಸಿನಿಮಾ ಬಹು ಚೆನ್ನಾಗಿ ತೋರಿಸುತ್ತದೆ. ಹಾಗಾಗಿ ನೋಡಲೇಬೇಕಾದ ಚಿತ್ರಗಳಲ್ಲಿ ಇದಕ್ಕೆ ಮುಂಚೂಣಿಯ ಸ್ಥಾನ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...