20.4 C
Bengaluru
Sunday, January 19, 2020

ಅರ್ನಾಲ್ಡ್ ಶ್ವಾರ್ಜಿನೆಗರ್: ಸ್ವನಿರ್ವಿುತ ಸಾಧಕನ ಗೆಲುವಿನ ಗುಟ್ಟು

Latest News

ಆಯುಷ್ಮಾನ್ ಭಾರತಕ್ಕೆ ಅನಾರೋಗ್ಯ

ಶಂಕರ ಶರ್ಮಾ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುಷ್ಮಾನ್ ಭಾರತ ಆರೋಗ್ಯ ಸೇವಾ ಕೇಂದ್ರವು ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿದ್ದು,...

ಸೌಹಾರ್ದದಿಂದ ಶಾಂತಿ, ಪ್ರಗತಿ ಸಾಧ್ಯ

ಧಾರವಾಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಮೇಲೆ ತಾರತಮ್ಯ ತೋರದೆ, ಎಲ್ಲ ಸಮಾಜದವರು ಅನ್ಯೋನ್ಯತೆ ಮತ್ತು ಶಾಂತಿ, ಸೌಹಾರ್ದತೆಯಿಂದ ಬದುಕಿದರೆ...

ಹೊಸ ಅನುಭವ ನೀಡಿದ ಸ್ಕೂಬಾ ಡೈವಿಂಗ್

ಭಟ್ಕಳ: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ ಮತ್ತು ಕುಟುಂಬ ಸದಸ್ಯರು ಭಟ್ಕಳದ ಮುರ್ಡೆಶ್ವರದಲ್ಲಿ ಸೂರ್ಯ ನೇತ್ರಾಣಿ ನಡುಗಡ್ಡೆ ಪರಿಸರದಲ್ಲಿ ಶುಕ್ರವಾರ ಬೆಳಗ್ಗೆ...

ಅಹೋ ರಾತ್ರಿ ಧರಣಿಗೆ ನಿರ್ಧಾರ

ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋ ರಾತ್ರಿ ಧರಣಿಗೆ ಮುಂದಾಗಿದ್ದಾರೆ.ಸಾಗರ ಮಾಲಾ ಯೋಜನೆಯಡಿ ಅಲೆ ತಡೆಗೋಡೆ,...

ಕೊಹ್ಲಿ ಟೀಕಿಸುವ ಭರದಲ್ಲಿ ಅನುಷ್ಕಾ ಎಳೆತಂದು ಕೆಟ್ಟದಾಗಿ ಟ್ವೀಟ್​ ಮಾಡಿದ ಲೇಖಕಿಗೆ ಟ್ವಿಟ್ಟಿಗರ ಟೀಕಾಸ್ತ್ರ!

ನವದೆಹಲಿ: ಹತ್ತು ವಿಕೆಟ್​ ಅಂತರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ನಾಯಕ ವಿರಾಟ್​ ಕೊಹ್ಲಿಯ...

‘‘ಜನರು ನನ್ನ ಹತ್ತಿರ ಯಶಸ್ಸಿನ ಸೂತ್ರ ಏನು ಎಂದು ಕೇಳುತ್ತಿರುತ್ತಾರೆ. ಮೊಟ್ಟಮೊದಲು ನಿಮ್ಮನ್ನು ನೀವು ನಂಬಿ. ನಿಮ್ಮ ಮನಸ್ಸಿನಾಳದಲ್ಲಿ ನೀವು ಯಾರಾಗಬೇಕೆಂದಿದ್ದೀರಿ ಎನ್ನುವುದನ್ನು ಚೆನ್ನಾಗಿ ಯೋಚಿಸಿ. ಏನಾಗಬೇಕೆಂದೆಲ್ಲ, ಯಾರಾಗಬೇಕೆಂದು ಯೋಚಿಸಿ. ಬೇರೆಯವರಿಗೆ ಅದು ಎಂಥ ಹುಚ್ಚುತನ ಎನ್ನಿಸಿದರೂ ಪರವಾಗಿಲ್ಲ.

ಗೆಲುವು ಸಾಧಿಸಲು ನಿಮಗೊಂದು ವಿಷನ್ ಇರಲಿ. ನಿಮಗೊಂದು ಗುರಿ ಇಲ್ಲದಿದ್ದರೆ ವಿಷನ್ ಇರುವುದಿಲ್ಲ. ನಾನು ಆಸ್ಟ್ರಿಯಾದಲ್ಲಿ ವಿಶ್ವಯುದ್ಧದ ನಂತರ ಬೆಳೆದವನು. ಆಸ್ಟ್ರಿಯಾ ನಾಝಿ ಜರ್ಮನಿಯ ಆಕ್ರಮಣಕ್ಕೊಳಗಾಗಿತ್ತು. ಆರ್ಥಿಕ ಹಿಂಜರಿತ ತೀವ್ರವಾಗಿತ್ತು. ನಾನು ಈ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಹೋಗಲು ಬಯಸುತ್ತಿದ್ದೆ. ಒಂದು ದಿನ ನಾನು ಶಾಲೆಯಲ್ಲಿ ಅಮೆರಿಕ ಕುರಿತ ಡಾಕ್ಯುಮೆಂಟರಿ ನೋಡಿದೆ. ನನ್ನ ಗುರಿ ಅಮೆರಿಕ ಎಂದು ನನಗೆ ಸ್ಪಷ್ಟವಾಯಿತು. ಆದರೆ ಅಲ್ಲಿಗೆ ಹೋಗುವುದು ಹೇಗೆ? ಆದರೆ ಅದೃಷ್ಟವಶಾತ್ ಒಂದು ದಿನ ನಾನು ಬಾಡಿಬಿಲ್ಡಿಂಗ್ ಮ್ಯಾಗಝಿನ್ ಒಂದನ್ನು ನೋಡಿದೆ. ಮುಖಪುಟದಲ್ಲಿ ಒಬ್ಬ ಬಾಡಿಬಿಲ್ಡರ್ ಚಿತ್ರ. ‘ಹರ್ಕ್ಯುಲಸ್ ಸ್ಟಾರ್ ಆದ ಮಿಸ್ಟರ್ ಯೂನಿವರ್ಸ್’ ಎಂದು ತಲೆಬರಹವಿತ್ತು. ಆತನ ಹೆಸರು ರೆಜ್ ಪಾರ್ಕ್. ಆ ಲೇಖನವನ್ನು ನಾನು ಸಾಧ್ಯವಾದಷ್ಟು ವೇಗವಾಗಿ ಓದಿದೆ. ಆತ ಹೇಗೆ ಇಂಗ್ಲೆಂಡಿನಲ್ಲಿ ಬಡತನದಲ್ಲಿ ಬೆಳೆದ, ಹೇಗೆ ದಿನಕ್ಕೆ ಐದು ಗಂಟೆ ತರಬೇತಿ ಪಡೆದು ಮಿಸ್ಟರ್ ಇಂಗ್ಲೆಂಡ್ ಆದ, ನಂತರ ಮತ್ತೂ ಪ್ರಯತ್ನಪಟ್ಟು ಹೇಗೆ ಮಿಸ್ಟರ್ ಯೂನಿವರ್ಸ್ ಆದ, ಎರಡನೇ ಬಾರಿ, ಮೂರನೇ ಬಾರಿ ಹೇಗೆ ಆ ಚಾಂಪಿಯನ್​ಶಿಪ್ ಉಳಿಸಿಕೊಂಡ, ಕೊನೆಯಲ್ಲಿ ಹೇಗೆ ಹರ್ಕ್ಯುಲಸ್ ಸಿನಿಮಾಗೆ ಹೀರೋ ಆದ ಇತ್ಯಾದಿ ಮಾಹಿತಿ ಅದರಲ್ಲಿತ್ತು.

ನನ್ನ ಗುರಿ ನನಗೆ ಸ್ಪಷ್ಟವಾಯಿತು. ಆತನಂತೆ ಅದೇ ವೇದಿಕೆಯಲ್ಲಿ ಮಿಸ್ಟರ್ ಯೂನಿವರ್ಸ್ ಆಗಬೇಕು. ನಂತರ ಅಮೆರಿಕಕ್ಕೆ ಹೋಗಬೇಕು. ಆಮೇಲೆ ಸಿನಿಮಾಗಳಲ್ಲಿ ನಟಿಸಬೇಕು. ಅದನ್ನೆಲ್ಲ ಸಾಧಿಸಲು ಎಷ್ಟು ಕಷ್ಟ ಬೇಕಾದರೂ ಪಡಬೇಕಾಗಿ ಬರಲಿ ಅವೆಲ್ಲ ದೊಡ್ಡವೇನಲ್ಲ. ನನ್ನ ಗುರಿ ನನಗೆ ಸ್ಪಷ್ಟವಿತ್ತು. ಹದಿನೈದಕ್ಕೇ ನಾನು ಬಾಡಿಬಿಲ್ಡರ್ ಆದೆ. ಜನ ಹೇಳಿದರು, ‘ಹುಚ್ಚು ಹಿಡಿದಿದೆಯಾ ನಿಂಗೆ, ಬಾಡಿಬಿಲ್ಡಿಂಗ್ ಅಮೆರಿಕದ ಆಟ. ನಿಂಗೆಲ್ಲಿ ಆಗುತ್ತೆ?’ ನಾನು ತಲೆಕೆಡಿಸಿಕೊಳ್ಳಲಿಲ್ಲ. ಇಪ್ಪತ್ತೆರಡಕ್ಕೇ ಮಿಸ್ಟರ್ ಯೂನಿವರ್ಸ್ ಆದೆ. ಮತ್ತೆ ಮತ್ತೆ ಚಾಂಪಿಯನ್ ಆದ ಮೇಲೆ ನನ್ನ ಗುರಿ ಇತ್ತಲ್ಲ, ಸಿನಿಮಾ ಸ್ಟಾರ್ ಆಗುವುದು! ರೆಜ್ ಪಾರ್ಕ್ ತರ ಹರ್ಕ್ಯುಲಸ್ ಸಿನಿಮಾ ಮಾಡಬೇಕು ಎಂದೆ. ಏಜೆಂಟ್​ಗಳು, ನಿರ್ದೇಶಕರ ಬಳಿ ಹೋದಾಗ ಎಲ್ಲರೂ ‘ನಿನ್ನ ದೇಹ ಸರಿಯಿಲ್ಲ, ರಾಕ್ಷಸನ ಥರಾ ಇದೀಯ, ಹೀರೋ ಆಗ್ಬೇಕಾ ನಿಂಗೆ ನಿನ್ನ ಉಚ್ಛಾರಣೆ ನೋಡು, ಯಾರಾದರೂ ಅಂತಾರಾಷ್ಟ್ರೀಯ ನಟ ಜರ್ಮನ್ ಉಚ್ಛಾರಣೆ ಹೊಂದಿದ್ದು ನೋಡಿದ್ದೀಯಾ, ಸಾಧ್ಯವೇ ಇಲ್ಲ ನೀನು ಹೀರೋ ಆಗೋದು’ ಎಂದು ನಕ್ಕರು. ‘ನಿನ್ನ ಹೆಸರೋ ಶ್ವಾರ್ಜಿನೆಗರ್ ಯಾರಿಗಾದರೂ ಹೇಳಲು ಬರುತ್ತಾ?’ ಎಂದರು. ಆದರೆ ನಾನು ಅವರ ಮಾತು ಕೇಳಲಿಲ್ಲ. ನಾನು ಕಷ್ಟಪಡಲು ತಯಾರಿದ್ದೆ. ನಟನೆ, ಇಂಗ್ಲಿಷ್ ತರಗತಿಗಳು, ಜರ್ಮನ್ ಉಚ್ಛಾರಣೆಯನ್ನು ತೆಗೆಯುವ ತರಗತಿಗಳು ಎಲ್ಲದಕ್ಕೂ ಹಾಜರಾದೆ. ಆದರೆ ‘ಟರ್ವಿುನೇಟರ್’ ಸಿನಿಮಾದಲ್ಲಿ ನನ್ನ ವಿಶಿಷ್ಟ ಉಚ್ಛಾರಣೆಯೇ ಪಾತ್ರದ ಯಶಸ್ಸಿಗೆ ಕಾರಣವಾಯ್ತು!

ಚಿಕ್ಕಂದಿನಿಂದಲೇ ನಾನು ಸಮಯದ ಸದುಪಯೋಗದಲ್ಲಿ ನಂಬಿಕೆ ಇಟ್ಟವನು. ಕಾಲೇಜಿಗೆ ಹೋಗುತ್ತಿದ್ದೆ, ದಿನಕ್ಕೆ ಐದು ಗಂಟೆ ಜಿಮ್ಲ್ಲಿ ಬೆವರಿಳಿಸುತ್ತಿದ್ದೆ. ಜಿಮ್ ಖರ್ಚು ವೆಚ್ಚವನ್ನು ಪೂರೈಸಲು ಕಟ್ಟಡ ನಿರ್ಮಾಣ ಕೆಲಸವನ್ನೂ ಮಾಡುತ್ತಿದ್ದೆ. ಅಷ್ಟೇ ಅಲ್ಲ, ವಾರದಲ್ಲಿ ನಾಲ್ಕು ದಿನ ರಾತ್ರಿ ಎಂಟರಿಂದ ಹನ್ನೆರಡು ಗಂಟೆಯವರೆಗೆ ನಟನಾ ತರಬೇತಿಯ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಒಂದು ನಿಮಿಷವನ್ನೂ ವ್ಯರ್ಥ ಮಾಡುತ್ತಿರಲಿಲ್ಲ. ಅದಕ್ಕೇ ಇವತ್ತು ಇಲ್ಲಿ ನಿಂತಿದೀನಿ. ನಿಮಗೆ ನಿಮ್ಮ ಗುರಿ ಸ್ಪಷ್ಟವಿರದಿದ್ದರೆ, ಎಲ್ಲಿಗೆ ಹೋಗಬೇಕು ಎಂಬ ಅರಿವಿರದಿದ್ದರೆ ನೀವು ಎಲ್ಲಿಗೂ ತಲುಪುವುದಿಲ್ಲ. ‘ದಿನವೂ ಜಿಮ್ಲ್ಲಿ ಐದಾರು ಗಂಟೆ ವರ್ಕೌಟ್ ಮಾಡಿಯೂ ನಿಮ್ಮ ಮುಖದ ಮೇಲೆ ನಗು ಹೇಗೆ ಇರುತ್ತದೆ’ ಎಂದು ಜನರು ನನ್ನನ್ನು ಕೇಳುತ್ತಿದ್ದರು. ಏಕೆಂದರೆ ಜಿಮ್ಲ್ಲಿ ನನಗಿಂತ ಬಹಳ ಕಡಿಮೆ ಅವಧಿ ಕಳೆದರೂ ಮುಖ ಸಪ್ಪೆ ಮಾಡಿಕೊಳ್ಳುವವರೇ ಜಾಸ್ತಿ ಇದ್ದರು. ನನ್ನೆದುರು ನನ್ನ ಗುರಿಯಿತ್ತು. ಮಿಸ್ಟರ್ ಯೂನಿವರ್ಸ್ ಕಿರೀಟವಿತ್ತು. ನಾನು ಜಿಮ್ಲ್ಲಿ ಕಳೆಯುವ ಪ್ರತೀಕ್ಷಣವೂ ಅದರ ಹತ್ತಿರ ಹತ್ತಿರಕ್ಕೆ ನನ್ನನ್ನು ಕೊಂಡೊಯ್ಯುತ್ತದೆ ಎಂಬ ಅರಿವಿತ್ತು. ನನ್ನ ಗುರಿಯನ್ನು, ಕನಸನ್ನು ವಾಸ್ತವವಾಗಿ ಪರಿವರ್ತಿಸಿಕೊಳ್ಳಲು ಕಷ್ಟಪಡುವುದು, ಕೆಲಸ ಮಾಡುವುದು ಅನಿವಾರ್ಯ ಎಂದು ನನಗೆ ಗೊತ್ತಿತ್ತು. ನಿಮಗೆ ಜೀವನದಲ್ಲಿ ಒಂದು ಗುರಿ ಇದ್ದರೆ ಕೆಲಸ ಮೋಜಾಗುತ್ತದೆ. ಮೊಹಮದಾಲಿ ಗೊತ್ತು ನಿಮಗೆ. ಹಗಲೂ ರಾತ್ರಿ ಶ್ರಮಪಟ್ಟು ಕೆಲಸ ಮಾಡುತ್ತಿದ್ದರು. ಒಮ್ಮೆ ಅವರನ್ನು ಯಾರೋ ಕೇಳಿದರಂತೆ, ‘ದಿನಕ್ಕೆ ಎಷ್ಟು ಸಿಟ್ ಅಪ್ಸ್ ಮಾಡುತ್ತೀರಿ’ ಆಗ ಮಹಮದಾಲಿ ಹೇಳಿದರಂತೆ, ‘ಸಿಟ್ ಅಪ್ಸ್ ಮಾಡಿ ಮಾಡಿ ನೋವು ಶುರುವಾದ ಮೇಲೆ ನಾನು ಲೆಕ್ಕ ಪ್ರಾರಂಭಿಸುತ್ತೇನೆ!’ ರ್ವಂಗ್ ಹಾರ್ಡ್ ಎಂದರೆ ಅದು!

ಯಶಸ್ಸಿಗೆ ಯಾವುದೇ ಮ್ಯಾಜಿಕ್ ಗುಳಿಗೆ ಇಲ್ಲ. ಪರಿಶ್ರಮ ಪರಿಶ್ರಮ ಮತ್ತು ಪರಿಶ್ರಮ ಮಾತ್ರ ಯಶಸ್ಸಿಗೆ ಕಾರಣ. ನಲವತೆôದು ನಿಮಿಷ ವರ್ಕೌಟ್ ಮಾಡಲು ಜನರು ಜಿಮ್ೆ ಹೋಗಲು, ಮುಕ್ಕಾಲು ಗಂಟೆಯಿಂದ ಒಂದು ಗಂಟೆ ತಮ್ಮ ಮಾನಸಿಕ, ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ಏನನ್ನಾದರೂ ಮಾಡಲು ತಮಗೆ ಸಮಯವೇ ಇಲ್ಲ ಎಂದಾಗ ಅಚ್ಚರಿಯಾಗುತ್ತದೆ! ದಿನಕ್ಕೆ ಒಂದು ಗಂಟೆ ಇತಿಹಾಸ ಓದುತ್ತೀರಿ ಎಂದುಕೊಳ್ಳಿ. 365 ಗಂಟೆಗಳ ಓದಿನ ನಂತರ ಎಷ್ಟು ಜ್ಞಾನ ಸಂಪಾದಿಸುತ್ತೀರಿ ಎಂದು ಯೋಚಿಸಿ. ಯಾವುದಾದರೂ ಉದ್ಯಮ ಮಾಡಬೇಕೆಂದಿದ್ದರೆ ದಿನಕ್ಕೆ ಒಂದು ಗಂಟೆ ಕೊಡಿ. ನೀವು ಎಷ್ಟು ಮುಂದುವರಿಯಬಹುದೆಂದು ಯೋಚಿಸಿ. ನಮಗೆಲ್ಲ ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳಿವೆ. ಆರು ಗಂಟೆ ನಿದ್ರೆಗೆ ಹೋದರೆ ಹದಿನೆಂಟು ಗಂಟೆಗಳ ಸಮಯ ಸಿಗುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಎಂಟರಿಂದ ಹತ್ತು ಗಂಟೆ ಕೆಲಸ ಮಾಡುತ್ತಾನೆ. ಹತ್ತು ಗಂಟೆ ಎಂದೇ ಇಟ್ಟುಕೊಳ್ಳೋಣ. ಅಲ್ಲಿಗೆ ಎಂಟು ಗಂಟೆಗಳು ಉಳಿದವು. ಪ್ರಯಾಣಕ್ಕೆ ಒಂದೆರಡು ಗಂಟೆಗಳು ಎಂದರೆ ಇನ್ನೂ ಆರು ಗಂಟೆಗಳು. ಏನು ಮಾಡುತ್ತೀರಿ ಆರು ಗಂಟೆಗಳನ್ನು? ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಸರಿಯಾಗಿ ಯೋಜಿಸಿದರೆ, ಕಷ್ಟಪಟ್ಟರೆ ನಮ್ಮ ಗುರಿ ಸಾಧಿಸಬಹುದು. ಅದಾಗದಿದ್ದರೆ ಇದು ಎಂದು ಕೆಲವರು ಮತ್ತೊಂದು ಯೋಜನೆ ಯೋಚನೆ ಮಾಡಿರುತ್ತಾರೆ! ಆದರೆ ನಾನು ಈ ಪ್ಲಾ್ಯನ್ ಬಿ ಎಂದರೆ ದೂರವಿರುತ್ತೇನೆ. ಏಕೆಂದರೆ ನಮ್ಮ ಸುತ್ತಮುತ್ತ ಅನುಮಾನ ಪಡುವವರೇ ಇದ್ದಾರೆ. ನಿನ್ನ ಹತ್ತಿರ ಇದು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆಗ ನಮಗೆ ನಮ್ಮ ಮೇಲೆಯೇ ಅನುಮಾನ ಬರುತ್ತದೆ. ಇದು ಅತ್ಯಂತ ಅಪಾಯಕಾರಿ. ಆಗ ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಮ್ಮ ಪೂರ್ತಿ ಗಮನ ಹಾಕದೇ ಇದು ಯಶಸ್ವಿಯಾಗದಿದ್ದರೆ ಪ್ಲಾ್ಯನ್ ಬಿ ಮಾಡಬಹುದು ಎಂದು ಯೋಚಿಸುತ್ತ ನಾವೇ ನಮ್ಮ ಗುರಿಗೆ ಅಡ್ಡಗಾಲಾಗುತ್ತೇವೆ. ಒಂದು ವಿಷಯ ನೆನಪಿಟ್ಟುಕೊಳ್ಳಿ. ಯಾವುದೇ ಸುರಕ್ಷಿತ ವಲಯ ಇಲ್ಲದಿದ್ದಾಗ ನಾವು ಯಶಸ್ಸು ಗಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದಲ್ಲದಿದ್ದರೆ ಇನ್ನೊಂದನ್ನು ಮಾಡಬಹುದು ಎಂಬ ಸಾಧ್ಯತೆಯ ಅರಿವು ನಮಗಿರುವುದೇ ನಮ್ಮ ಸೋಲಿಗೆ ಕಾರಣವಾಗುತ್ತದೆ.

ನಾನು ಎಂದಿಗೂ ಪ್ಲಾ್ಯನ್ ಬಿ ಇಟ್ಟುಕೊಳ್ಳಲಿಲ್ಲ. ಒಂದು ಸಲಕ್ಕೆ ಒಂದೇ ಗುರಿ ಇಟ್ಟುಕೊಂಡೆ. ಬಾಡಿ ಬಿಲ್ಡಿಂಗ್​ನಲ್ಲಿ ವಿಶ್ವ ಚಾಂಪಿಯನ್ ಆಗಬೇಕು, ಸಿನಿಮಾಗಳಲ್ಲಿ ನಟಿಸಬೇಕು, ರಾಜಕೀಯ ಹೀಗೆ ಆಯಾಯ ಗುರಿ ಇಟ್ಟುಕೊಂಡಾಗ ಅದಕ್ಕೆ ಸರಿಯಾಗಿ ಕೆಲಸ ಮಾಡಿದೆ. ಫಲಿತಾಂಶ ಸಿಗುವವರೆಗೂ ಕೆಲಸ ಮಾಡಿದೆ. ಜನರು ಸೋಲುವುದರ ಬಗ್ಗೆ ಯೋಚನೆ ಮಾಡುತ್ತಾರೆ. ಸೋಲುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸೋಲುವುದರಲ್ಲಿ ತಪ್ಪೇನೂ ಇಲ್ಲ. ಗೆಲುವಿನ ಏಣಿ ಹತ್ತಲು ನೀವು ಸೋಲಲೇಬೇಕು. ಸೋಲದೇ ಗೆದ್ದವರು ಯಾರೂ ಇಲ್ಲ. ಖ್ಯಾತ ಬಾಸ್ಕೆಟ್​ಬಾಲ್ ಆಟಗಾರ ಮೈಕಲ್ ಜೋರ್ಡಾನ್ ಅವರನ್ನು ಯಾರೋ ಕೇಳಿದರಂತೆ, ‘ಎಂಥ ಅದ್ಭುತ ಗುರಿ ನಿಮ್ಮದು, ಹೇಗೆ ಸಾಧ್ಯವಾಯಿತು ಇದು?’ ಆಗ ಜೋರ್ಡಾನ್ ಹೇಳಿದರಂತೆ, ‘ನೀವು ಯಶಸ್ಸಿನ ಬಗ್ಗೆ ಮಾತ್ರ ಮಾತಾಡುತ್ತಿದ್ದೀರಿ. ಇದಕ್ಕೂ ಮುಂಚೆ ಆಡುವಾಗ ನಾನು ಒಂಬತ್ತು ಸಾವಿರಕ್ಕೂ ಹೆಚ್ಚು ಬಾರಿ ಗುರಿ ತಪ್ಪಿದ್ದೆ!’

ನಾವೆಲ್ಲ ಸೋಲುತ್ತೇವೆ. ತೊಂದರೆಯೇನಿಲ್ಲ. ಆದರೆ ಸೋತಾಗ ಮೇಲೇಳದೇ ಕೂತುಬಿಟ್ಟರೆ ಸೋಲು ಶಾಶ್ವತವಾಗುತ್ತದೆ. ಸೋತರೂ ಎದ್ದು ಮುನ್ನಡೆಯುವವರು ಗೆಲ್ಲುತ್ತಾರೆ, ಅವರೇ ವಿನ್ನರ್ ಆಗುತ್ತಾರೆ. ನಾನು ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಸೋತಿದ್ದೇನೆ, ಪವರ್ ಲಿಫ್ಟಿಂಗ್, ವೇಟ್ ಲಿಫ್ಟಿಂಗ್​ಗಳಲ್ಲೂ ಸೋತಿದ್ದೇನೆ. ನನ್ನ ಚಲನಚಿತ್ರಗಳಿಗೆ ಅತ್ಯಂತ ಕೆಟ್ಟ ವಿಮರ್ಶೆಗಳು ಬಂದಿವೆ. ರಾಜಕೀಯದಲ್ಲೂ ಏಳುಬೀಳು ಕಂಡಿದ್ದೇನೆ. ಹೇಯ್! ಪರವಾಗಿಲ್ಲ, ಯಾಕಂದ್ರೆ ನಾವೆಲ್ಲ ಸೋಲುತ್ತೇವೆ. ಆದರೆ ಸೋಲಿನ ಬಗ್ಗೆ ಚಿಂತಿಸಬಾರದು. ಚಿಂತಿಸಿದರೆ ನಾವು ಮರಗಟ್ಟುತ್ತೇವೆ, ಬಿಗಿದುಕೊಳ್ಳುತ್ತೇವೆ. ರಿಲಾಕ್ಸ್ ಆಗಿ ಇರಲಾಗುವುದಿಲ್ಲ. ಬಾಕ್ಸಿಂಗ್ ಇರಲಿ, ಹೊಸ ಕೆಲಸವಿರಲಿ ಅಥವಾ ಯೋಚಿಸುವುದಿರಲಿ ಎಲ್ಲವೂ ಸಾಧ್ಯವಾಗುವುದು ನೀವು ಆರಾಮಾಗಿದ್ದಾಗ. ಹಾಗಾಗಿ ಸೋಲೆಂದರೆ ಹೆದರಬೇಡಿ.

ಕಷ್ಟಪಟ್ಟು ಕೆಲಸ ಮಾಡಿ. ಸಮಯವನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಿ. ಸಮಾಜದಿಂದ ಪಡೆದುಕೊಂಡು ಒಂದಿಷ್ಟು ವಾಪಸ್ ಕೊಡಿ. ಒಂದೇ ಪ್ರಶ್ನೆ ಕೇಳಿಕೊಳ್ಳಿ- ನಾವಲ್ಲದಿದ್ದರೆ ಮತ್ಯಾರು, ಈಗಲ್ಲದಿದ್ದರೆ ಇನ್ಯಾವಾಗ?’

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...