More

    ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ…

    ಕಳೆದ ಕೆಲ ತಿಂಗಳಿಂದ ಯಾರದ್ದಾದರೂ ೋನು ಬಂತೆಂದರೆ ಎತ್ತಲಿಕ್ಕೇ ಭಯ. ಏನು ಸುದ್ದಿ ಹೊತ್ತು ತಂದ ಕರೆಯೋ ಎಂಬ ಅವ್ಯಕ್ತ ಭಯ. ಮುಖಪುಸ್ತಕದಲ್ಲಿ ಯಾರದ್ದಾದರೂ ೋಟೊ ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ...ಕಂಡರೆ ಅದು ಹುಟ್ಟುಹಬ್ಬದ ಶುಭಾಶಯದ್ದೋ, ಜವರಾಯನ ಬೇಟೆಗೆ ತುತ್ತಾದ ನತದಷ್ಟ ಜೀವಿಯದೋ ಎಂಬ ನಡುಕ. ಇಂಥದ್ದೊಂದು ವಿಚಿತ್ರ ಸಂದರ್ಭದಲ್ಲಿ ಸ್ನೇಹಿತರು, ಬಂಧುಗಳು ೋನು ಮಾಡಿದರೆ ಅವರ ಆತಂಕ, ಭಯವನ್ನು ಹೆಚ್ಚಿಸುವ ಧಾಟಿಯಲ್ಲಿ “ಏನ್ರೀ ನಿಮ್ಮೂರಲ್ಲಿ ಕರೊನಾ ಆರ್ಭಟ ಹೇಗಿದೆ? ನಮ್ಮೂರಲ್ಲಂತೂ ಕೇಳ್ಲೇಬೇಡಿ ಎಂಥೆಂಥವರೆಲ್ಲ ಹೋಗ್ಬಿಟ್ರು ಗೊತ್ತಾ?’ ಎಂಬ ಧಾಟಿಯಲ್ಲಿ ಮಾತನಾಡುವುದು ಸರ್ವಥಾ ಸಲ್ಲದು. ಸ್ನೇಹಿತರು, ಬಂಧುಗಳು ಎದುರಿಗೆ ಸಿಕ್ಕಾಗ ನಮ್ಮ ಕಷ್ಟದ ಪ್ರವರವನ್ನು ಅವರ ಮುಂದೆ ಬಿಚ್ಚಿಡದೆ ಅವರ ಕಷ್ಟ ಸುಖಗಳನ್ನು ಕೇಳುತ್ತ ಆದಷ್ಟು ಅವರ ಮನಸ್ಸಿನ ದುಗುಡವನ್ನು ಮರೆಸುವಂತೆ ಧೆರ್ಯ ತುಂಬುವ ಕೆಲಸ ನಮ್ಮಿಂದಾಗಬೇಕು. ಇಂಥದ್ದೊಂದು ಹೊಂದಾಣಿಕೆಯ ಹದವನ್ನು ಕಂಡುಕೊಳ್ಳದಿದ್ದರೆ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಳ್ಳಬಹುದಾದ ಕಾಲಟ್ಟದಲ್ಲಿ ನಾವಿದ್ದೇವೆ. ನಮ್ಮ ಹಿಂದಿನವರು, ಪೂರ್ವಸೂರಿಗಳು ಕಷ್ಟ ಕಂಡಿಲ್ಲವೇ? ದು@ಖ ಅನುಭವಿಸಿಲ್ಲವೇ? ಊಹೂಂ ನಮಗಿಂತ ಹೆಚ್ಚಿನ ಕಡುಕಷ್ಟಗಳನ್ನು ಕಂಡ ಜೀವಗಳು ಆಗಿಹೋಗಿವೆ. “ಕಾವ್ಯ ಶಾಸ್ತ್ರ ವಿನೋದ’ಗಳನ್ನು ಬದುಕಿನ ಬಹುದೊಡ್ಡ ಮೌಲ್ಯಗಳನ್ನಾಗಿ ಸ್ವೀಕರಿಸಿ ಆರಾಧಿಸಿಕೊಂಡು ಬಂದವರು ನಮ್ಮ ಹಿರಿಯ ತಲೆಮಾರಿನವರು. ಲೌಕಿಕ ವಿಷಯಗಳಿಂದ ನಿರ್ಬಾಧಿತರಾಗಿ ಅಲೌಕಿಕವಾದ ಪ್ರಪಂಚದಲ್ಲಿ ಸದಾ ಸಂತಪ್ತಿಯಿಂದ ಬಾಳಿದ ಪರಿಪೂರ್ಣ ದಾರ್ಶನಿಕರನ್ನು, ಕವಿಗಳನ್ನು, ಸಾಹಿತಿಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು, ಬರೆಯುವುದರಿಂದಲೇ ಬದುಕಿದ್ದೇನೆಂದು ಹೇಳಿಕೊಂಡವರು, ಎಂತೆಂಥ ಕವಿಗಳು…. ನಮ್ಮಲ್ಲಿ ಆಗಿಹೋಗಿದ್ದಾರೆ! ನಿಜವಾದ ಕವಿಗಳ ಮನಸ್ಸನ್ನು ಅರಳಿಸಲು ಯಾವ ಬಿರುದು ಬಾವಲಿಗಳಾಗಲಿ, ಬಂಗಲೆ ಕಾರುಗಳಾಗಲೀ, ಪ್ರಶಸ್ತಿ ಸನ್ಮಾನಗಳಾಗಲಿ ಅಗತ್ಯವಿಲ್ಲ. ಪ್ರಕತಿಯ ಮಡಿಲಲ್ಲಿ, ಸ್ನೇಹ ಪ್ರೀತಿಗಳಲ್ಲಿ, ಮನುಷ್ಯ ಸಂಬಂಧಗಳ ಮಾರ್ದವತೆಯಲ್ಲಿ, ಮಗುವಿನ ನಗೆಯ ಮಾಧುರ್ಯದಲ್ಲಿ, ಬದುಕಿನ ಸಾರ್ಥಕ್ಯ ಕಂಡುಕೊಳ್ಳಬಲ್ಲವರು ಕವಿಹದಯವುಳ್ಳವರು.
    “ಕವಿಜೀವದ ಬ್ಯಾಸರ ಹರಿಸಾಕ/ಹಾಡ ನುಡಿಸಾಕ ಹೆಚ್ಚಿಗೇನು ಬೇಕ?
    ಒಂದು ಹೂತ ಹುಣಸೀ ಮರ ಸಾಕ’/
    ಹೀಗೆಂದು ನುಡಿದವರು ವರಕವಿ ಬೇಂದ್ರೆ. ಕಷ್ಟಗಳಿವೆ, ದು@ಖವಿದೆ ಎಂದಮಾತ್ರಕ್ಕೆ ಜೀವನಕ್ಕೆ ಎಂದೂ ಬೆನ್ನು ಹಾಕಿದವರಲ್ಲ ಇವರು.

    “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ’ ಎಂಬ ವ್ರತವನ್ನು ತೊಟ್ಟವರು. ಕಡುಕಷ್ಟದ ಬೆಂಕಿಯನ್ನು ಎದೆಯೊಳಗೆ ಇರಿಸಿಕೊಂಡು ತುಟಿಯಲ್ಲಿ ನಗುವನ್ನು ಧರಿಸಬಲ್ಲ ಅವಧೂತರು ಈ ಕವಿವರ್ಯರುಗಳು. ಇಂಥ ಕವಿಗಳು ಆರಾಧಿಸಿಕೊಂಡು ಬಂದ ನಗುವನ್ನು ನಾವಿಂದು ಹುಡುಕಿ ಆಹ್ವಾನಿಸಿ ಕೊಳ್ಳಬೇಕಾದ ಅಗತ್ಯವಿದೆ. ಇಲ್ಲವೆಂದಾದರೆ ನಾವು ನಗುವನ್ನೇ ಮರೆತ ಉಸಿರಾಡುವ ಯಂತ್ರಗಳೇ ಆಗಿಬಿಡುವ ಅಪಾಯವಿದೆ. ಕಹಿಸತ್ಯಗಳ ಹಾಲಾಹಲವನ್ನೇ ಹೊಟ್ಟೆಯೊಳಗಿಟ್ಟುಕೊಂಡ ಟಿ.ಪಿ. ಕೆಲಾಸಂ ಎಂತೆಂತಹ ನಗೆನಾಟಕಗಳನ್ನು ಬರೆದಿಟ್ಟು ಹೋಗಿದ್ದಾರೆ! “ಕಿರಿಯಾಳದ ನಗೆ ನೀರಿನ ಮೇಲೆ ತಿರುಗುತ ಬಹುವೇಳೆ, ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು’ ಎಂದವರು ನಗೆಯ ಣಭಂಗುರತೆಯನ್ನು ಕಂಡ ಟಿ.ಪಿ. ಕೆಲಾಸಂ. “ಬುದ್ಧಿ ಇದ್ದವರನ್ನು ನಗಿಸುತ್ತೇನೆ ಹದಯ ಇದ್ದವರನ್ನು ಅಳಿಸುತ್ತೇನೆ’ ಎಂಬುದು ಅವರ ಸಾಹಿತ್ಯೋದ್ದೇಶ. “ಟಿಪಿಕಲ್​ ಕೆಲಾಸಂ’ ಎಂದೇ ಜನಜನಿತವಾದ ಈ ನಾಟಕಕಾರರ ಕತಿಗಳನ್ನು ಓದುವುದೆಂದರೆ ಅಳು&ನಗುಗಳ ಪಾಕವನ್ನು ಒಟ್ಟಿಗೆ ಸವಿದ
    ಅನುಭವ. (ಅಳುವೊಂದು ರಸಪಾಕ, ನಗುವೊಂದು ರಸಪಾಕ ನಗುವಾತ್ಮ ಪರಿಮಳವ ಪಸರಿಸುವ
    ಕುಸುಮ& ಡಿ. ವಿ. ಜಿ.)
    “ಕ್ಕನೊಮ್ಮೆ ನಕ್ಕುಬಿಡು ಚಿಂತೆ ತೊಲಗಲಿ’ ಎಂದವರು ನಮ್ಮ ದಾಂಪತ್ಯಕವಿ ಕೆಎಸ್​ ನರಸಿಂಹಸ್ವಾಮಿ. ಆ ತಲೆಮಾರಿನ ಹೆಚ್ಚಿನ ಕವಿಗಳು ಬಡತನವನ್ನೇ ಹಾಸಿ ಹೊದ್ದವರು. ಅವರ ಹೆಂಡಂದಿರೋ ಬಡತನವನ್ನು ಅನುಭವಿಸುತ್ತಾ ತಮ್ಮ ಗಂಡಂದಿರ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುತ್ತಾ ಜೀವ ಸವೆಸಿದವರು.ಆದರೂ ಸಂತೃಪ್ತಿಯ ನಗೆಯಾಭರಣವನ್ನು ಸದಾ ಮುಡಿಯುವ ಸಂಸ್ಕಾರ ಅವರದು.

    “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂಬ ತಪ್ತಿಯ ಬದುಕನ್ನು ಕಂಡುಕೊಂಡವರು ಇವರು.
    ಜಿ.ಪಿ. ರಾಜರತ್ನಂ ತಾನು ಎಂದೂ ಕುಡಿಯದೇ ಕುಡುಕನ ಬಾಯಿಂದ ಹೊಸದೊಂದು ಫಿಲಾಸಫಿಯನ್ನೇ ತೆರೆದಿಟ್ಟ ಪರಿ ಅದ್ಭುತವಾದುದು. “ಏಳ್ಕೊಳ್ಳಾಕೊಂದೂರು ತಲೆ ಮ್ಯಾಗೊಂದ್ಸೂರು ಮಲಗಾಕೆ ಭೂಮ್ತಾಯಿ ಮಂಚ. ಕೆಹಿಡಿದೋಳ್​ ಪುಟ್ನಂಜಿ ನಗ್ನಗ್ತಾ ಉಪ್ಪ$್ಗಂಜಿ ಕೊಟ್ರಾಯ್ತು ರತ್ನನ್​ ಪರ್ಪಂಚ’. ಕುಡಿದು ತೂರಾಡುವ ಯೆಂಡ್ಗುಡ್ಕ ರತ್ನನ ಬಾಯಲ್ಲಿ ಬರೋದೆಲ್ಲಾ ಇಂಥ ಜೀವನ ತತ್ತ$್ವಗಳೇ. “ನಮ್ದೇ ಲೋಕ ಉಟ್ಟಿಸ್ಕೋಬೇಕು ಈ ಲೋಕಾನೇ ಮರ್ತು’ ಎಂದು ಕರೆಕೊಡುವ ರತ್ನ ಲೌಕಿಕ ಪ್ರಪಂಚದ ಯಾವ ಸುಖಕ್ಕೂ ಬೆಲೆ ಕೊಡುವವನಲ್ಲ. ಅವನ ಪುಟ್ನಂಜಿ “ನಗುನಗು’ತ್ತಾ ಉಪು$್ಪ ಗಂಜಿ ಕೊಟ್ಟರೆ ಅದೇ ಅವನಿಗೆ ಮಷ್ಟಾನ್ನ. ನಗುವಿನ ಮಹತ್ವವನ್ನು ಇದಕ್ಕಿಂತ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೆ?
    “ನಕ್ಕಾಂವ ಗೆದ್ದಾಂವ’ ಎಂದು ಹೇಳಿ ನಕ್ಕವನಿಗೆ ಜಯಮಾಲೆ ಹಾಕಿದವರು ಬೇಂದ್ರೆ. ನಗುವನ್ನು ಅತ್ಯುನ್ನತ ಸ್ಥಾನದಲ್ಲಿ ಸ್ಥಾಪಿಸಿದ ಬೇಂದ್ರೆಯವರು ನಗುವಿಗೆ ತಾತ್ವಿಕವಾದ ಅರ್ಥವನ್ನು ಕಲ್ಪಿಸಿದವರು. “ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ, ಬಡ ನೂರು ವರುಷಾನ ಹರುಷಾದಿ ಕಳೆಯೋಣ, ಯಾಕಾರೆ ಕೆರಳೋಣ’ ಎಂದರು. “ನಗೆಯಲ್ಲಿ ಹೊಗೆ ಬ್ಯಾಡ’ ಎಂದ ಕವಿ ಬೇಂದ್ರೆ, ತನ್ನ ಮನದನ್ನೆಯನ್ನು ಮೊದಲ ಬಾರಿ “ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ’ ಮನಸೂರೆಗೊಂಡ ನಗುವನ್ನೇ “ನಾರಿ ನಿನ್ನ ಮಾರಿಮ್ಯಾಗ ನಗೀನವಿಲು ಆಡುತ್ತಿತ್ತ’ ಎಂದು ಹಾಡಿ ನಗೆನವಿಲಿನ ನಾಟ್ಯದ ಖುಷಿಯನ್ನು ಹಂಚಿದವರು.

    ಆದರೆ ನಗೆಯ ಹಿಂದೆಯೇ ಇರುವ ದು@ಖದ ಕುರಿತು ಈ ಹಿರಿಯ ಕವಿಗಳು ಅವಜ್ಞೆ ಹೊಂದಿದವರಲ್ಲ. ಹಗಲು ರಾತ್ರಿಗಳಂತೆ ಸುಖ&ದು@ಖಗಳು, ಅಳು&ನಗುಗಳು ಒಂದರ ಹಿಂದೆ ಇನ್ನೊಂದು ಬಂದೇ ಬರುತ್ತವೆ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ ವಿಧಿಯನ್ನು ಹೆಚ್ಚು ಪ್ರಶ್ನಿಸದೆ “ಹೊರಡು ಕರೆ ಬರಲ್​ ಅಳದೆ’ ಎಂದು ನಂಬಿದವರು. ಬಡತನದ ಬವಣೆಯಲ್ಲಿ ಬೇಯುತ್ತ ಒಂದು ಹೊತ್ತಿನ ಊಟಕ್ಕೂ ಭವತಿ ಭಿಾಂದೇಹಿ ಎನ್ನುವಂತಹ ಸ್ಥಿತಿ ಇದ್ದ ಮುದ್ದಣ ಅದೇ ಕಾರಣಕ್ಕಾಗಿ ಯರೋಗಕ್ಕೆ ತುತ್ತಾಗಿ ಸಾವಿಗೀಡಾದವರು. ತನ್ನ ಅಲ್ಪ ಜೀವಿತಾವಧಿಯಲ್ಲಿ ಕನ್ನಡಿಗರು ಎಂದೂ ಮರೆಯದ ಮುದ್ದಣ ಮನೋರಮೆಯರನ್ನು ಚಿತ್ರಿಸಿದ ಮಹಾಕವಿ. ತನ್ನೆದುರು ಮನದನ್ನೆ ಮನೋರಮೆಯನ್ನು ಕೂಡಿಸಿಕೊಂಡು ಸಾಹಿತ್ಯ ಸಲ್ಲಾಪಗೆಯ್ಯುತ್ತಾ ಅವಳೆದುರು ನಗುವಿನ ಮಳೆ ಸುರಿಸುತ್ತಾ ಕೊನೆಗೆ ಮನೋರಮೆ “ನೀನೇನ್​ ಕಬ್ಬಿಗನೋ ಸಬ್ಬವಕಾರನೋ?’ ಎಂದು ಕೇಳುತ್ತಾಳೆ.

    “ಕನ್ನಡದ ಭಗವದ್ಗೀತೆ’ಯಾಗಿರುವ “ಮಂಕುತಿಮ್ಮನ ಕಗ್ಗ’ ಕತಿಯನ್ನು ರಚಿಸಿ ಅಜರಾಮರರಾಗಿರುವ ಡಿ.ವಿ. ಗುಂಡಪ್ಪ ಅವರ ಸರಳ ವ್ಯಕ್ತಿತ್ವದಲ್ಲಿ ನಗೆಯನ್ನು ಸಹಜ ಜೀವನಧರ್ಮವಾಗಿ ಸ್ವೀಕರಿಸಿದ್ದು ಕಂಡುಬರುತ್ತದೆ.
    “ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ/ಜಗವ ಸುಡುಗಾಡೆಂಬ ಕಟು ತಪಸು ಬೇಡ..’ ಬೇರೆಯವರು ನಗುವುದನ್ನು ಕಂಡಾಗ ಅದರಲ್ಲಿ ಕೊಂಕು ಹುಡುಕುವ ಸಿನಿಕರು ನಮ್ಮ ನಡುವೆ ಇಲ್ಲದಿಲ್ಲ. ತಾವು ನಗಲಾರರು; ನಗುವವರನ್ನು ನೋಡಿ ಸಹಿಸಲಾರರು. ಇಂಥ ವ್ಯಕ್ತಿಗಳು ಬದುಕನ್ನು ನರಕವಾಗಿಸಲು ಪಣ ತೊಟ್ಟವರಂತೆ ಗಂಟುಮುಖದ ಪ್ರದರ್ಶನ ಮಾಡಿಕೊಂಡೇ ಇರುತ್ತಾರೆ. ನಗುವನ್ನು ಕಬಳಿಸುವ ಅಳು ನಗುವಿನ ಬೆನ್ನ ಹಿಂದೇ ಇರುತ್ತದೆ ಎಂಬ ಕಟುಸತ್ಯವನ್ನು ನಮ್ಮ ಕವಿಗಳು ಅರಿಯದವರಲ್ಲ.

    ಬೇಂದ್ರೆಯವರು ಸಾಲಾಗಿ ಕರುಳಕುಡಿಗಳನ್ನು ಕಳೆದುಕೊಂಡವರು. ಬದುಕಿನ ಕನಸುಗಳೇ ಹೀಗೆ ಕಮರಿ ಹೋದಾಗ ಸಮಚಿತ್ತದಿಂದಿರಲು ಹೆಂಡತಿಗೆ ಬೋಧಿಸುವ ಧೆರ್ಯವಿದ್ದೀತೇ? ಉಸಿರು ಕಳೆದುಕೊಂಡ ಕಂದಮ್ಮನನ್ನು ತೊಡೆಯ ಮೇಲಿಟ್ಟುಕೊಂಡು ನಿಸ್ತೇಜಳಾಗಿ ಕೂತಿರುವ ಹೆಂಡತಿಯ ಬಳಿ, “ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಕಾ$್ಯಕ ಮರಸತೀ ದು@ಖ?’ ಎಂದು ಕೇಳುತ್ತಾರೆ. ಅಸಹಾಯಕ ದಂಪತಿಗಳ ಈ ಕರುಳಿರಿಯುವ ದಶ್ಯವನ್ನು ಕಂಡಾಗ ವಿಧಿಯ ಕ್ರೌರ್ಯದ ಅರಿವಾಗಿ ಕಣ್ಣೀರು ಜಿನುಗದೇ ಇರದು.

    ಸಾರ್ವಜನಿಕರ ಹಣವನ್ನು ತಮಗಾಗಿ ಎಂದೂ ಬಳಸದ, ಬಯಸದ ಕರ್ಮಶುದ್ಧಿ, ವಾಕ್ಶುದ್ಧಿಯನ್ನು ಇಟ್ಟುಕೊಂಡು ಬಾಳಿದವರ ಕಾಲದಲ್ಲಿ ಆಗಿಹೋದ ಕವಿಗಳು, ಮಾಸ್ತಿಯಂತಹ ಅಂತರಂಗ ಹೊಂದಿದ ಅಧಿಕಾರಿಗಳು ನಮ್ಮ ಕನ್ನಡ ನೆಲದಲ್ಲಿಯೇ ಆಗಿಹೋಗಿದ್ದಾರೆ ಎಂಬುದು ನಮ್ಮ ಪಾಲಿನ ಹೆಮ್ಮೆ. ಯಾವುದರಲ್ಲಿಯೂ ಅತಿ ಬೇಡ ಎನ್ನುವ ಡಿವಿಜಿಯವರು ಸಂತುಲಿತ ಬದುಕಿನ ಮಾದರಿಯಂತೆ ಬಾಳಿದವರು.
    “ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ ಅತಿ ಬೇಡವೆಲ್ಲಿಯುಂ ಮಂಕುತಿಮ್ಮ’ ಎನ್ನುವ ಡಿವಿಜಿ ಸ್ನೇಹಿತರ ಒಡನಾಟದಲ್ಲಿ ಮಗುವಿನಂತೆ ನಗಬಲ್ಲವರಾಗಿದ್ದರು. ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನು
    ಸಂತೋಷದ ಸೆಲೆಗಳನ್ನಾಗಿ ಆಸ್ವಾದಿಸಬಲ್ಲವರಾಗಿದ್ದರು. ಆದರೂ ನಗುವಿಗೆ ಕುಟಿಲತೆಯ ಲೇಪವಿರಬಾರದು ಎಂದು ನಂಬಿದವರು ಅವರು. ಅಂತರಂಗ ಬಹಿರಂಗ ಶುದ್ಧಿಗೆ ಪ್ರಾಶಸ್ತ$್ಯ ಕೊಡುವ ಕವಿಗಳ ಸಾಲಿನಲ್ಲಿ ಡಿವಿಜಿ ಅಗ್ರಗಣ್ಯರಾಗಿದ್ದಾರೆ. “ನಗುವಿನಲಿ ಊಟದಲಿ ಅನುಗಾಲ
    ಶುಚಿಯಿರಲಿ’ ಎಂಬ ಜೀವನಶುಚಿತ್ವದ ಪಾಠವನ್ನು ಹೇಳಿದ ಮಹಾನ್​ ಕವಿಗೆ ಶರಣೆನ್ನುತ್ತಾ ನಗುವನ್ನು ಕಳೆದುಕೊಳ್ಳದೆ ಅಳುವನ್ನು ಸಂಭಾಳಿಸಿಕೊಳ್ಳುತ್ತ ನಿರುದ್ವಿಗ್ನರಾಗಿ ಬಾಳಲು ಪ್ರಯತ್ನಿಸೋಣ.

    (ಲೇಖಕರು ಅರ್ಥಶಾಸ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts