ಅಂದು ಹೊಗಳಿದವರು ಇಂದು ತೆಗಳಿದ್ದೇಕೆ?!

2016ರ ನವೆಂಬರ್ 8ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೋಟ್​ಬ್ಯಾನ್​ನಂತಹ ನಿಲುವು ಕೈಗೊಂಡು 500 ಮತ್ತು 1000 ರೂ. ನೋಟುಗಳ ಚಲಾವಣೆ ಬಂದ್ ಮಾಡಿದಾಗ ಕಾಂಗ್ರೆಸ್​ನ 8 ಪ್ರಮುಖ ಮುಖಂಡರು, ಸಚಿವರು ಸೇರಿ ಅನೇಕರು ಸ್ವಾಗತಿಸಿದರು.

ಟಿ.ಬಿ. ಜಯಚಂದ್ರ ಅವರು ‘ಇವತ್ತು ನಾನು ಸುಖನಿದ್ರೆ ಮಾಡುತ್ತೇನೆ; ಇಂಥ ನಿಲುವಿನ ಅಗತ್ಯವಿತ್ತು’ ಎಂದಿದ್ದರೆ, ಎಚ್.ಕೆ. ಪಾಟೀಲರು, ‘ಅರ್ಬನ್ ಬ್ಯಾಂಕ್ ಫೆಡರೇಷನ್ ಅಧ್ಯಕ್ಷನಾಗಿ ನಾನು 2006ರಲ್ಲೇ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಮನವಿ ಸಲ್ಲಿಸಿದ್ದೆ’ ಎಂದಿದ್ದರು. ಇನ್ನು ರಮೇಶ್​ಕುಮಾರ್, ದಿನೇಶ್ ಗುಂಡೂರಾವ್, ರೋಷನ್ ಬೇಗ್, ಕಾಗೋಡು ತಿಮ್ಮಪ್ಪ ಇವರೆಲ್ಲರೂ ನೋಟ್​ಬ್ಯಾನ್ ಕ್ರಮ ಸ್ವಾಗತಿಸಿದವರ ಸಾಲಿನಲ್ಲೇ ಇದ್ದ ಪ್ರಮುಖರು. ಆದರೆ ಅವರೀಗ ಎರಡು ನಾಲಿಗೆಯವರ ರೀತಿಯಲ್ಲಿ ಮಾತನಾಡುತ್ತಿರುವುದು ವಿಷಾದನೀಯ.

ಲೋಕಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಿಎಸ್​ಟಿಯನ್ನು ‘ಐಠಿ ಜಿಠ ಚ ಜಚಞಛಿ ್ಚಚ್ಞಜಛ್ಟಿ’ ಎಂದು ಕರೆದಿದ್ದರು. ಹೊರಗೆ ಇವರ ನಾಯಕರು ಇದನ್ನು ‘ಗಬ್ಬರ್​ಸಿಂಗ್ ಟ್ಯಾಕ್ಸ್’ ಎನ್ನುತ್ತಾರೆ. ಇದು ಕಾಂಗ್ರೆಸ್ಸಿಗರ ಇಬ್ಬಂದಿತನವಲ್ಲವೇ? ಅಷ್ಟಕ್ಕೂ ನೋಟ್​ಬ್ಯಾನ್​ನಿಂದ ನಷ್ಟ ಯಾರಿಗೆ? ಯಾರು ಭ್ರಷ್ಟವ್ಯವಸ್ಥೆ ಪೋಷಿಸಿಕೊಂಡು ಬಂದಿದ್ದರೋ ಅವರಿಗೆ; ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ತರಬೇಕು ಅನ್ನುವಂಥವರಿಗೆ ಹಾಗೂ ದೇಶಕ್ಕೆ ಇದರಿಂದ ಯಾವುದೇ ನಷ್ಟವಾಗಿಲ್ಲ. ರಿಯಲ್ ಎಸ್ಟೇಟ್ ವಲಯದಲ್ಲಿ ಕಪು್ಪಹಣದ ವ್ಯವಹಾರವೇ ಹೆಚ್ಚಾಗಿ, ಶೇ. 20-30ರಷ್ಟು ಮಾತ್ರವೇ ಪಾರದರ್ಶಕವಾಗಿತ್ತು. ನೋಟ್​ಬ್ಯಾನ್ ನಂತರ ತಂದ ರೇರಾ, ಜಿಎಸ್​ಟಿಗಳಿಂದಾಗಿ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯವಸ್ಥೆ ರೂಪುಗೊಳ್ಳುತ್ತಿದೆ.

ಎಲ್ಲ ಹಣಕ್ಕೂ ಲೆಕ್ಕ ಸಿಕ್ಕಿದ್ದರಿಂದ ‘ಟ್ಯಾಕ್ಸ್ ಬೇಸ್’ ಜಾಸ್ತಿ ಆಯಿತು. ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಸ್ವಾರ್ಥಕ್ಕಾಗಿ ಎಲ್ಲ ಕಡೆ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸಿ ಹೆಮ್ಮರವಾಗಿಸಿತು. ಅದಕ್ಕಾಗಿಯೇ ಸೇಲ್ಸ್ ಟ್ಯಾಕ್ಸ್, ಸಬ್​ರಿಜಿಸ್ಟ್ರಾರ್ ಕಚೇರಿಗಳು ಎಂದರೆ ಭ್ರಷ್ಟಾಚಾರದ ಕೇಂದ್ರ. ಹೀಗೆ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಕೇಂದ್ರವನ್ನಾಗಿಸಿದ್ದೇ ಕಾಂಗ್ರೆಸ್.

ಇವರದೇ ಪಕ್ಷದ ನಾಯಕ ದಿ. ರಾಜೀವ್ ಗಾಂಧಿ 1986ರಲ್ಲಿ ಕೇಂದ್ರದಿಂದ 100 ರೂ. ಕಳಿಸಿದರೆ, ಕಟ್ಟಕಡೆಯ ವ್ಯಕ್ತಿಗೆ ತಲುಪುವಾಗ 15 ರೂ. ಆಗಿರುತ್ತದೆ ಎಂದಿದ್ದನ್ನು ಕಾಂಗ್ರೆಸ್​ನವರು ಮರೆತಂತಿದೆ. ಅಂದು ಬಹುತೇಕ ಪಂಚಾಯಿತಿಯಿಂದ ಪಾರ್ಲಿಮೆಂಟ್​ವರೆಗೆ ದೇಶದಲ್ಲಿ ಅಧಿಕಾರದಲ್ಲಿ ಇದ್ದಿದ್ದೇ ಕಾಂಗ್ರೆಸ್. ಹಾಗಾದರೆ 85 ರೂ. ತಿನ್ನುತ್ತಿದ್ದ ಕಳ್ಳರು ಯಾರು ಎನ್ನುವ ಪ್ರಶ್ನೆ ಹಾಕಿಕೊಂಡರೆ, ಆ ಕಳ್ಳರೂ ಮತ್ತು ಕಳ್ಳ ವ್ಯವಸ್ಥೆ ಪೋಷಿಸಿದ್ದು ಕಾಂಗ್ರೆಸ್ ಅನ್ನುವುದು ಸ್ಪಷ್ಟವಾಗುತ್ತದೆ. ಈಗ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಸ್ಕೀಂ, ನೋಟ್ ಬ್ಯಾನ್, ಜಿಎಸ್​ಟಿ ಇವೆಲ್ಲವೂ ಇಂಥವರಿಗೆ ನುಂಗಲಾರದ ಬಿಸಿತುಪ್ಪವಾಗಿದ್ದು ಸ್ಪಷ್ಟವಾಗುತ್ತಿದೆ.

ನೋಟ್​ಬ್ಯಾನ್ ಕ್ರಮವು ತೆರಿಗೆ ಸಂಗ್ರಹ ಹೆಚ್ಚಿಸುವಲ್ಲಿ ನೆರವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, 2018-19ನೇ ಸಾಲಿನ (31-10-2018ರವರೆಗೆ) ತೆರಿಗೆ ಸಂಗ್ರಹ ಶೇ. 20.2 ಹೆಚ್ಚಾಗಿದೆ. ಸಾಂಸ್ಥಿಕ ತೆರಿಗೆಯಲ್ಲೂ ಶೇ.19.5 ಹೆಚ್ಚಾಗಿದೆ. 2004ರ ಮೇನಲ್ಲಿದ್ದ ಆದಾಯ ತೆರಿಗೆ ರಿಟರ್ನ್ಸ್ ಸಂಖ್ಯೆ 38 ದಶಲಕ್ಷದಿಂದ 68.6 ದಶಲಕ್ಷಕ್ಕೆ ಏರಿಕೆಯಾಗಿದೆ. ಐದು ಲಕ್ಷಕ್ಕೂ ಹೆಚ್ಚು ನಕಲಿ ಕಂಪನಿಗಳು ಮುಚ್ಚಲ್ಪಟ್ಟಿವೆ. ರಿಯಲ್ ಎಸ್ಟೇಟ್ ಬೆಲೆಗಳು ಸಾಮಾನ್ಯ ಸ್ಥಿತಿಗೆ ಬಂದಿವೆ.

ಈ ಹಿಂದೆ ವಿಶ್ವದಲ್ಲಿ 9ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿದ್ದ ಭಾರತ ಈಗ 6ನೇ ಸ್ಥಾನದಲ್ಲಿದೆ. 2018ರ ಜೂನ್ ಹೊತ್ತಿಗೆ ನಮ್ಮ ಜಿಡಿಪಿ ಶೇ.8.2 ಇದ್ದು, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿದೆ. ಯುಪಿಎ ಅವಧಿಯಲ್ಲಿ 10 ಲಕ್ಷ ಕೋಟಿ ರೂ. ಸಾಲ ಕೊಟ್ಟಿದ್ದವರ ಪೈಕಿ 4.5 ಲಕ್ಷ ಕೋಟಿ ರೂ. ಸಾಲ ಎನ್​ಪಿಎ ಆಗಿದೆ. ಇಂದು ಯಾರ್ಯಾರು ದೇಶಬಿಟ್ಟು ಓಡಿಹೋಗುತ್ತಿದ್ದಾರೋ ಅವರಿಗೆಲ್ಲ ಸಾವಿರಾರು ಕೋಟಿ ರೂ. ಸಾಲ ಕೊಟ್ಟಿದ್ದೇ ಈ ಕಾಂಗ್ರೆಸ್ ನೇತೃತ್ವದ ಆಡಳಿತಾವಧಿಯಲ್ಲಿ. ಇವರು ದಿವಾಳಿ ಹಂತಕ್ಕೆ ತೆಗೆದುಕೊಂಡು ಹೋಗಿದ್ದ ದೇಶವನ್ನು, ಆ ಅಪಾಯದಿಂದ ಪಾರುಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂಬುದನ್ನು ವಿನಾಕಾರಣ ತೆಗಳುವವರು ಮರೆಯದಿರಲಿ.

| ಸಿ.ಟಿ.ರವಿ, ಶಾಸಕ, ಚಿಕ್ಕಮಗಳೂರು ಕ್ಷೇತ್ರ