Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಬದುಕಿದ್ದಾಗ ಪ್ರೀತಿಸಿ…

Friday, 21.09.2018, 3:03 AM       No Comments

| ಡಾ. ಕಾಂತೇಶಾಚಾರ್ಯ ಕದರಮಂಡಲಗಿ

ನಾನು ಎಲ್ಲೋ ಓದಿದ ಕಥೆ. ವಿದೇಶದಲ್ಲೊಂದು ಕುಟುಂಬ. ಗಂಡ-ಹೆಂಡತಿ ಇಬ್ಬರೂ ಪ್ರೀತಿಸಿ ಮದುವೆಯಾದವರು. ಇಪ್ಪತ್ತು ವರ್ಷಗಳವರೆಗೆ ಹೇಗೋ ಜೀವನ ನಡೆಯಿತು. ಗಂಡನಿಗೆ ಬಿಡುವಿಲ್ಲದಷ್ಟು ಕೆಲಸ. ಮಡದಿಯ ಕಡೆ ಗಮನ ಕಡಿಮೆ. ಗಂಡನ ಅನಾಸಕ್ತಿಗೆ ಬೇಸತ್ತ ಹೆಂಡತಿ ಒಂದು ದಿನ ಗಂಡನಿಗೆ ಕೇಳಿದಳು-‘ನಾನು ಸತ್ತರೆ ನನ್ನ ಅಂತ್ಯಕ್ರಿಯೆಯನ್ನು ಹೇಗೆ ಮಾಡುತ್ತೀರಿ?’ ಹೆಂಡತಿಯ ದಿಢೀರ್ ಪ್ರಶ್ನೆಯಿಂದ ವಿಚಲಿತನಾದ ಗಂಡ ಸಾವರಿಸಿಕೊಂಡು ಉತ್ತರಿಸಿದ-‘ತುಂಬ ಪುಷ್ಪಗುಚ್ಛಗಳು, ಬೆಲೆಬಾಳುವ ಶವಪೆಟ್ಟಿಗೆ, ಶಾಂತಿ ಕೋರುವ ಪ್ರಾರ್ಥನಾಸಭೆಗಳು. ಹೀಗೆ ವೈಭವದಿಂದ ಮಾಡುತ್ತೇನೆ’. ಹೆಂಡತಿಯ ಮರುಪ್ರಶ್ನೆ-‘ಇದಕ್ಕೆಲ್ಲ ತುಂಬ ಖರ್ಚಾಗುವುದಿಲ್ಲವೇ?’ ಗಂಡನೆಂದ-‘ಹತ್ತಾರು ಸಾವಿರ್ ಡಾಲರ್ ಖರ್ಚಾಗುತ್ತದೆ. ಆದರೆ ಅದು ನನ್ನ ಕರ್ತವ್ಯವಲ್ಲವೇ?’ ‘ನಾನು ಸತ್ತ ಮೇಲೆ ಸಾವಿರಾರು ಡಾಲರ್ ಖರ್ಚು ಮಾಡಿ ಪುಷ್ಪಗುಚ್ಛಗಳು-ಶವಪೆಟ್ಟಿಗೆ ತಂದರೂ ಅವುಗಳನ್ನು ನೋಡಲು, ನೋಡಿ ಆನಂದಿಸಲು ಆಗುವುದಿಲ್ಲ. ಗುಣಗಾನದ ಮಾತುಗಳನ್ನು ಕೇಳಲೂ ಆಗುವುದಿಲ್ಲ. ಕಾರಣ ನಾನು ಶವವಾಗಿರುತ್ತೇನೆ. ಅದರ ಬದಲು ನಾನು ಬದುಕಿರುವಾಗ ಒಂದು ಗುಲಾಬಿ ಹೂವು ಕೊಡಬಾರದೆ?’ ಒಂದೆರಡು ಪ್ರೀತಿಯ ಮಾತುಗಳನ್ನು ಆಡಬಾರದೆ?’ ಎಂದು ಮನನೊಂದು ಮಡದಿ ನುಡಿದ ಮಾತುಗಳನ್ನು ಕೇಳಿ ಗಂಡನ ಮನ ಕಲುಕಿತು. ತಪ್ಪಿನ ಅರಿವಾಯಿತು. ಅಂದಿನಿಂದ ಜೀವನಶೈಲಿಯೇ ಬದಲಾಯಿತು. ಸತಿಯನ್ನು ಸುಖವಾಗಿ ನೋಡಿಕೊಂಡ ಪತಿ. ಇದು ಅನೇಕರ ಮನೆಗಳಲ್ಲಿ ಇಂದಿಗೂ ನಡೆಯುತ್ತಿರುವ ಸಂಗತಿ. ತನ್ನನ್ನು ಹೊತ್ತು ಹೆತ್ತು ವಿದ್ಯೆ-ಸ್ಥಾನ-ಮಾನಗಳನ್ನು ಕೊಟ್ಟು ಪಾಲಿಸಿದ ತಂದೆ-ತಾಯಿಗಳಿರಬಹುದು, ಹೆತ್ತವರನ್ನು ತೊರೆದು, ಪತಿಯನ್ನೇ ಸರ್ವಸ್ವವೆಂದು ನಂಬಿ ಬಂದಿರುವ ಹೆಂಡತಿಯಿರಬಹುದು. ಅವರು ಬದುಕಿರುವಾಗ, ತನ್ನೊಡನೆ ಇರುವವರೆಗೆ ಅವರಿಗಾಗಿ ಒಂದಿಷ್ಟು ಸಮಯ ಇಟ್ಟುಕೊಂಡು, ಅವರಿಗಾಗಿ ಹಲವು ಕನಸುಗಳನ್ನು ಕಂಡು, ಅವರಿಗಾಗಿ ಪ್ರೀತಿ ಕಾಯ್ದಿರಿಸಿ ಸುಖವಾಗಿ ನೋಡಿಕೊಳ್ಳಬೇಕಾದದ್ದು ಆದ್ಯ ಕರ್ತವ್ಯ. ಅನ್ನುವುದಕ್ಕಾಗಿಯೇ ಮಗನ ಮುಖ್ಯ ಮೂರು ಕರ್ತವ್ಯಗಳನ್ನು ತಿಳಿಸುವಾಗ- ತಂದೆ-ತಾಯಿ ಮೃತರಾದ ಮೇಲೆ ಅವರ ಶ್ರಾದ್ಧಾದಿಗಳನ್ನು ಮಾಡುವುದು ಅನಂತರದ ಕರ್ತವ್ಯವಾದರೂ ಮೊದಲು ‘ಜೀವ ತೋ ವಾಕ್ಯಕರಗಾತ್’ ಬದುಕಿರುವವರೆಗೆ ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳಬೇಕಾದದ್ದು ಮಗನ ಮೊದಲನೇ ಮುಖ್ಯ ಕರ್ತವ್ಯ ಎಂದು ತಿಳಿಸುತ್ತದೆ ಶಾಸ್ತ್ರ.

ಬದುಕಿರುವಾಗ ಮೊಳ ಹೂ ತಂದು ಕೊಡದೇ ಸತ್ತ ಮೇಲೆ ಕಳೇಬರಕ್ಕೆ ಮಣಭಾರದ ಪುಷ್ಪಮಾಲೆಗಳನ್ನು ಹಾಕಿದರೆ ಸಂತಸವಾದೀತೆ? ತಂದೆ-ತಾಯಿಗಳು ಬದುಕಿದ್ದಾಗ ಪ್ರೀತಿಯಿಂದ ಒಪ್ಪೊತ್ತು ಊಟಕ್ಕೆ ಹಾಕದೇ ಸತ್ತ ನಂತರ ವೈಭವದಿಂದ ಶ್ರಾದ್ಧ ಮಾಡಿದರೆ ತೃಪ್ತಿಯಾದೀತೆ?

(ಲೇಖಕರು ಸಂಸ್ಕೃತ ಸಂಶೋಧಕರು) (ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *

Back To Top