ಜಮೀನು ಒದಗಿಸಲು ಸರ್ಕಾರ ನಕಾರ; ಮಂಗಳೂರು ಏರ್‌ಪೋರ್ಟ್ ರನ್‌ವೇ ಸುರಕ್ಷತಾ ಪಟ್ಟಿಗೆ ಭೂಮಿ ನಿರಾಕರಣೆ, ಖಾಸಗಿ ಸಹಭಾಗಿತ್ವ ಕಾರಣ ನೀಡಿದ ರಾಜ್ಯ ಸರ್ಕಾರ

blank

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಬದಿಯ ಸುರಕ್ಷತಾ ಪಟ್ಟಿ (ಸೇಫ್ಟಿ ಬೇಸಿಕ್ ಸ್ಟ್ರಿಪ್) ನಿರ್ಮಿಸಲು ಅವಶ್ಯ ಜಮೀನು ಒದಗಿಸಲು ರಾಜ್ಯ ಸರ್ಕಾರ ನಿರಾಕರಿಸಿದೆ.
ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಈ ಉತ್ತರ ನೀಡಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಮಾರ್ಗಸೂಚಿ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದ ಒಂದು ಬದಿಯಲ್ಲಿ ಪೂರ್ಣಗೊಳಿಸಲು ಬಾಕಿ ಇರುವ ಸುರಕ್ಷತಾ ಪಟ್ಟಿ ನಿರ್ಮಿಸಲು 32.97 ಎಕರೆ ಹೆಚ್ಚುವರಿ ಭೂಮಿ ಒದಗಿಸುವಂತೆ ಮಂಗಳೂರು ವಿಮಾನ ನಿಲ್ದಾಣ ಸಂಸ್ಥೆ ಬೇಡಿಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತಾ ಅವಶ್ಯಕತೆಗಳನ್ನು ಪೂರೈಸಲು ಅಗತ್ಯ ಹೆಚ್ಚುವರಿ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಹಸ್ತಾಂತರಿಸುವಂತೆ ವಿಮಾನ ನಿಲ್ದಾಣ ಸಚಿವಾಲಯ ಕರ್ನಾಟಕ ಸರ್ಕಾರವನ್ನು ಕೋರಿತ್ತು. ಮಂಗಳೂರು ವಿಮಾನ ನಿಲ್ದಾಣ ಪಿಪಿಪಿ(ಖಾಸಗಿ- ಸರ್ಕಾರಿ ಸಹಭಾಗಿತ್ವ) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ವಿಮಾಣ ನಿಲ್ದಾಣಕ್ಕೆ ಹೆಚ್ಚುವರಿ ಭೂಮಿ ಉಚಿತವಾಗಿ ಒದಗಿಸಲು ಸಾಧ್ಯವಿಲ್ಲ ಎನ್ನುವ ಕಾರಣವನ್ನು ರಾಜ್ಯ ಸರ್ಕಾರ ನೀಡಿದೆ.
*ಹೆಚ್ಚುವರಿ ಜಮೀನು ಯಾಕೆ?: ಸುರಕ್ಷತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ರನವೇ ಇಕ್ಕೆಲಗಳಲ್ಲಿ ಸೇಫ್ಟಿ ಬೇಸಿಕ್ ಸ್ಟ್ರಿಪ್ ನಿರ್ಮಿಸಲು ತಲಾ 140 ಮೀ. ಹೆಚ್ಚುವರಿ ಜಮೀನು ಅವಶ್ಯ. ಪ್ರಸ್ತುತ ಇರುವ ರನ್‌ವೇಯ ಒಂದು ಬದಿ ಪೂರ್ಣಪ್ರಮಾಣದಲ್ಲಿ ಸುರಕ್ಷತಾ ಪಟ್ಟಿ ಇದ್ದು, ಇನ್ನೊಂದು ಬದಿಯಲ್ಲಿ ಮಾತ್ರ 80 ಮೀಟರ್‌ನಷ್ಟು ಸುರಕ್ಷತಾ ಪಟ್ಟಿ ಇಲ್ಲ. ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಂದರ್ಭ ಅಕಸ್ಮಾತ್ ರನ್‌ವೇಯಿಂದ ಜಾರಿದಲ್ಲಿ ಮುಂಜಾಗರೂಕತಾ ಕ್ರಮವಾಗಿ ಸೇಫ್ಟಿ ಬೇಸಿಕ್ ಸ್ಟ್ರಿಪ್ ನಿರ್ಮಿಸಲು ಡಿಜಿಸಿಎ ನಿರ್ದೇಶಿಸಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ಗೆ ಗುತ್ತಿಗೆ ನೀಡಿದೆ. ಡಿಜಿಸಿಎ ಮಂಗಳೂರು ವಿಮಾನ ನಿಲ್ದಾಣದ ಸುರಕ್ಷತಾ ವ್ಯವಸ್ಥೆ ಅವಲೋಕನಾ ಸಂದರ್ಭದಲ್ಲಿ ಪ್ರತಿ ಬಾರಿ ಸೇಫ್ಟಿ ಬೇಸಿಕ್ ಸ್ಟ್ರಿಪ್ ಉಳಿಕೆ ಕೆಲಸದ ಕಡೆಗೆ ಬೊಟ್ಟು ಮಾಡುತ್ತಿದೆ. ಸೇಫ್ಟಿ ಬೇಸಿಕ್ ಸ್ಟ್ರಿಪ್ ಅಂದರೆ ರನ್‌ವೇ ವಿಸ್ತರಣೆ ಅಲ್ಲ, ಬದಲಾಗಿ ಇರುವ ರನ್‌ವೇ ಸುರಕ್ಷತಾ ವ್ಯವಸ್ಥೆಯಾಗಿದೆ.
——-
ಪಾಯಿಂಟ್ ಆಫ್ ಕಾಲ್ ಯಾಕಿಲ್ಲ?
ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲು ಅನುಕೂಲವಾಗುಂತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್(ಪಿಒಸಿ) ಸ್ಥಾನಮಾನ ನೀಡುವ ಕುರಿತು ಸಂಸದ ಕ್ಯಾ.ಚೌಟ ಅವರು ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಮಂಗಳೂರು ಸೇರಿದಂತೆ ಹೊಸ ನಾನ್ ಮೆಟ್ರೋ ವಿಮಾನ ನಿಲ್ದಾಣಗಳಿಗೆ ಪಿಒಸಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2024ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವರಾದ ರಾಮ್ ಮೋಹನ್ ನಾಯ್ಡು ಅವರನ್ನು ಕ್ಯಾ.ಚೌಟ ಭೇಟಿಯಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದರು.

Share This Article

ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಭಾನುವಾರ ಹೀಗೆ ಮಾಡಿ ನೋಡಿ…devotional

devotional:ಭಾನುವಾರ ಸೂರ್ಯ ದೇವನನ್ನು ಪೂಜೆ ಮಾಡುವುದರಿಂದ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ…

ಸುಡು ಬೇಸಿಗೆಯಲ್ಲಿ ಆರೋಗ್ಯ ನಿಮ್ಮ ಕೈಯಲ್ಲಿ! ಈ ಟಿಪ್ಸ್​ ತಪ್ಪದೇ ಫಾಲೋ ಮಾಡಿ, ಇಲ್ಲದಿದ್ರೆ ಆರೋಗ್ಯಕ್ಕೆ ಡೇಂಜರ್​ | Summer Tips

Summer Tips : ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳು ನಮ್ಮ ನೆತ್ತಿಯನ್ನು ಸುಡುತ್ತಿದೆ.…

ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…