23.5 C
Bangalore
Saturday, December 7, 2019

ಭಾರತ್ ಮಾತಾ ಕೀ ಜೈ ಎಂದು ಹೊರಟವನು ದೇಶವನ್ನು ಬೆಸೆದ!

Latest News

ಬಸ್​ನಿಂದ ಇಳಿಯುತ್ತಿದ್ದಾಗ ಬಿದ್ದ ಮಹಿಳೆ ಸಾವು; ಚಾಲಕ, ನಿರ್ವಹಕ ನಾಪತ್ತೆ

ಮೈಸೂರು: ಬಸ್​ನಿಂದ ಇಳಿಯುವಾಗ ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಕಡುಬಿನ ಕಟ್ಟೆ ಗೇಟ್ ಬಳಿ ನಡೆದಿದೆ. ನಂಜನಗೂಡು ತಾಲೂಕಿನ ಮಕನಾಪುರ ನಿವಾಸಿ ಚನ್ನಪಟ್ಟಣದ...

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ: ಮೂವರು ಕಾರ್ಮಿಕರು ಸಾವು, ಓರ್ವನ ಸ್ಥಿತಿ ಗಂಭೀರ

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಒಡಿಯೂರಿನಲ್ಲಿ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ ವಕೀಲರ ಗುಂಪು!

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ...

ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತಷ್ಟು ಭದ್ರ ಸರ್ಕಾರವಾಗಿ ನಿರ್ಮಾಣಗೊಳ್ಳುತ್ತದೆ: ಸಂಸದೆ ಶೋಭಾ ಕರಂದ್ಲಾಜೆ

ವಿಜಯಪುರ: ಈ ಉಪಚುನಾವಣೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪರನ್ನು ಗಟ್ಟಿಗೊಳಿಸುವ ಚುನಾವಣೆ. ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತಷ್ಟು ಭದ್ರ ಸರ್ಕಾರವಾಗಿ ನಿರ್ಮಾಣಗೊಳ್ಳುತ್ತದೆ ಎಂದು...

ಭಾರತ ವಿಶ್ವಗುರು ಆಗಲಿ

ವಿಜಯಪುರ: ಭಾರತ ವಿಶ್ವ ಗುರು ಆಗಬೇಕಾದರೆ ನಾವೆಲ್ಲ ನಮ್ಮ ಸಂಸ್ಕೃತಿಯನ್ನು ಮೊದಲು ಪಾಲಿಸಬೇಕು ಬಬಲೇಶ್ವರದ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ...

ರಾಷ್ಟ್ರಭಕ್ತಿ! ಅದೊಂದು ಉನ್ನತ ಮೌಲ್ಯ, ಶ್ರೇಷ್ಠ ಆದರ್ಶ, ಅತ್ಯುಚ್ಚ ಭಾವನೆಗಳ ಮೊತ್ತ. ರಾಷ್ಟ್ರವನ್ನು ಬಗೆಬಗೆಯಾಗಿ ಪ್ರೇಮಿಸುವ, ಬೆವರು, ರಕ್ತ ಹರಿಸುವ ರಾಷ್ಟ್ರವಾದಿಗಳು ‘ಭಾರತ್ ಹಮ್ಕೋ ಜಾನ್ ಸೇ ಪ್ಯಾರಾ ಹೈ, ಭಾರತ್ ಮಾ ಕೀ ರಕ್ಷಾ ಮೇ ಜೀವನ್ ಕುರ್ಬಾನ್ ಹೈ’ (ಭಾರತ ನಮಗೆ ಪ್ರಾಣಕ್ಕಿಂತಲೂ ಪ್ರಿಯವಾದದ್ದು. ಭಾರತಮಾತೆಯ ರಕ್ಷಣೆಗಾಗಿ ಈ ಜೀವನವಿದೆ) ಎಂದು ಹೊಸ ಉತ್ಕರ್ಷಕ್ಕೆ ಪಲ್ಲವಿ ಬರೆಯುತ್ತಾರೆ. ಇಂಥದ್ದೊಂದು ಅಸಾಧಾರಣ ಕಥೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಯುವಕರೆಂದರೇ ಕನಸುಗಳ ದೊಡ್ಡ ಪರೇಡ್! ಈ ಯುವ ಪೊಲೀಸ್ ಪೇದೆಯದ್ದು ವಿಶಿಷ್ಟ ಕನಸು. ದೇಶಕ್ಕಾಗಿ ಹೋರಾಡಿ, ಪ್ರಾಣಾರ್ಪಣೆ ಮಾಡಿದ, ಭಾರತಕ್ಕೆ ಗೆಲುವನ್ನು ತಂದುಕೊಟ್ಟ ವೀರಯೋಧರ ಕಾರ್ಗಿಲ್ ನೆಲದಲ್ಲಿ ನಿಂತು ಒಮ್ಮೆ ಆ ಎಲ್ಲ ಹುತಾತ್ಮರಿಗೆ ವಂದಿಸಬೇಕು, ಅಲ್ಲಿ ನಿಂತು ಗಗನ ಭೇದಿಸುವಂತೆ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಹಾಕಬೇಕು ಎಂಬುದು. ಇದು ಜೀವನದ ದೊಡ್ಡ ಕನಸು! ಸಾಕಾರ ಮಾಡಿಕೊಳ್ಳಲು ಹಲವು ಅಡ್ಡಿಗಳು.

ಮೊದಲಬಾರಿ 2014ರಲ್ಲಿ ವಿಜಯಪುರದಿಂದ ಸೈಕಲ್ ಏರಿ ಹೊರಟ ಈ ಪೊಲೀಸ್ ಶ್ರೀನಗರದವರೆಗೂ ತಲುಪಿದರು. ಇನ್ನೇನು ಕಾರ್ಗಿಲ್ ಮುಟ್ಟಿಬಿಡುತ್ತೇನೆ ಎನ್ನುವಾಗ ಹವಾಮಾನ ವೈಪರೀತ್ಯ ಇವರ ಆಸೆ ಭಗ್ನಗೊಳಿಸಿತು. 2015ರಲ್ಲಿ ಇಡೀ ದೇಶ 1965ರ ಯುದ್ಧದ 50ನೇ ವರ್ಷದ ವಿಜಯೋತ್ಸವ ಆಚರಿಸುತ್ತಿತ್ತು. ಈ ಹೊತ್ತಲ್ಲಾದರೂ ಹೋಗಲೇಬೇಕು ಎಂದು ನಿರ್ಧರಿಸಿ ಕನ್ಯಾಕುಮಾರಿಯಿಂದ ದೆಹಲಿ ಮಾರ್ಗವಾಗಿ ಶ್ರೀನಗರ ತಲುಪಿದ್ದಾಯಿತು. ಮತ್ತೆ ಭಾರಿ ಹಿಮಪಾತ ಶುರುವಾಗಿ, ದಾರಿಯೆಲ್ಲ ಮುಚ್ಚಿಹೋಗಿ ವಿಧಿಯಿಲ್ಲದೆ ವಾಪಸ್ ಮರಳಬೇಕಾಯಿತು. 2018. ಮೂರಕ್ಕೆ ಮುಕ್ತಿ ಕಾಣಿಸಬೇಕು ಎಂದು ದೆಹಲಿಯಿಂದ ಸೈಕಲ್ ಏರಿ ಹೊರಟರೆ ಮಳೆ, ಬಿಸಿಲು ಲೆಕ್ಕಿಸದೆ ಮುಂದೆ ಸಾಗುತ್ತ ಸಾಗುತ್ತ ಕಡೆಗೂ ಕಾರ್ಗಿಲ್ ಬಂದೇಬಿಟ್ಟಿತ್ತು. ಆ ಭಾವಾನಂದ, ಸಂತೃಪ್ತಿಗೆ ಪದಗಳಿರಲಿಲ್ಲ. ಅಲ್ಲಿನ ಹಿಮಪರ್ವತಗಳ ಮುಂದೆ ನಿಂತು ಸೈನಿಕರ ಕೆಚ್ಚಿಗೆ ಸಲಾಂ ಹೇಳಿ, ಯಾತ್ರೆಯುದ್ದಕ್ಕೂ ಸೈನಿಕರ ಕಲ್ಯಾಣ ನಿಧಿ ‘ಭಾರತ್ ಕೇ ವೀರ್’ (https://bharatkeveer.gov.in) ವೆಬ್​ಸೈಟಿನ ಬಗ್ಗೆ ಜಾಗೃತಿ ಮೂಡಿಸಿ, ದೇಶದ ಎಲ್ಲ ರಾಜ್ಯಗಳ ರಾಜಧಾನಿಗೆ ಭೇಟಿ ನೀಡಿದಾಗ ಭಾವಪಲ್ಲಕ್ಕಿಯಲ್ಲಿ ನೂರೆಂಟು ನೆನಪುಗಳು!

ಭೀಮಾಶಂಕರ್ ಮಡಗ್ಯಾಳ್ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಿಕೆ ಗ್ರಾಮದವರು. ಹತ್ತು ವರ್ಷದ ಹಿಂದೆ ವಿಜಯಪುರ ಸಶಸ್ತ್ರ ಮೀಸಲು ಪಡೆಗೆ ನೇಮಕಗೊಂಡ ಇವರು ಕಳೆದ ಐದು ವರ್ಷಗಳಿಂದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಕ್ಸಲ್ ನಿಗ್ರಹ ಪಡೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕೆಚ್ಚೆದೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿವರ್ಗ ಭೇಷ್ ಎಂದಿದ್ದಾರೆ. 111 ದಿನಗಳ ಯಾತ್ರೆಯಲ್ಲಿ ಹದಿನಾಲ್ಕು ಸಾವಿರ ಕಿಲೋಮೀಟರ್ ಸೈಕಲಿನಲ್ಲಿ ಕ್ರಮಿಸಿದ ಇವರಿಗೆ ಅನನ್ಯ ಅನುಭವಗಳಾಗಿವೆ. ಅವೆಲ್ಲವೂ ಭಾರತದ ಅಂತಃಸತ್ವವನ್ನು, ಜನರ ಹೃದಯವೈಶಾಲ್ಯವನ್ನು ಪರಿಚಯಿಸಿಕೊಟ್ಟಿವೆ.

ಸೈಕಲ್ ಮೇಲೆ ಭಾರತ ದರ್ಶನ ಮಾಡುವುದು ಸುಲಭದ ಮಾತಲ್ಲ. ಅದಕ್ಕೆ ದೈಹಿಕ-ಮಾನಸಿಕ ಬಲ ಎರಡೂ ಸದೃಢವಾಗಿರಬೇಕು. ನಮ್ಮಲ್ಲಿ ಹಲವಾರು ಸೈಕ್ಲಿಸ್ಟ್​ಗಳು ದಾಖಲೆ ಸೃಷ್ಟಿಸಿರುವುದೇನೋ ನಿಜ. ಆದರೆ, ಸೈನಿಕರ ಬಗೆಗೆ ಗೌರವ ಮೂಡಿಸಲೆಂದು, ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲೆಂದು ನಡೆಸಿದ ಈ ಯಾತ್ರೆ ಸಾರ್ಥಕವಾದುದು. ಶ್ರೀನಗರದಲ್ಲಿ ಸಿಆರ್​ಪಿಎಫ್ ತುಕಡಿಯಿಂದ ಅದ್ಧೂರಿ ಸ್ವಾಗತ ದೊರೆತು, ಅಲ್ಲಿರುವ ಕನ್ನಡಮೂಲದ ಡಿವೈಎಸ್​ಪಿ ಕಶ್ಯಪ್ ‘ಕರ್ನಾಟಕ ಪೊಲೀಸ್ ಕೀ ಜೈ’ ಎಂದಾಗ ರೋಮಾಂಚನವಾಯಿತು ಎನ್ನುವ ಭೀಮಾಶಂಕರ್ ‘ಹಿರಿಯ ಐಪಿಎಸ್ ಅಧಿಕಾರಿ ಲಕ್ಷ್ಮಿಪ್ರಸಾದ್ ಬಿ.ಎಂ. 120 ದಿನಗಳ ರಜೆ ಮಂಜೂರು ಮಾಡಿದರೆ, ಎಡಿಜಿಪಿ ಭಾಸ್ಕರ್ ರಾವ್ ಯಾತ್ರೆಗೆ ಎಲ್ಲರೀತಿಯ ಸಹಕಾರ ನೀಡಿದರು’ ಎಂದು ಸ್ಮರಿಸಿಕೊಳ್ಳುತ್ತಾರೆ. ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ದೆಹಲಿಯಲ್ಲಿ ಭೀಮಾಶಂಕರ್ ಸೈಕಲ್​ಯಾತ್ರೆಗೆ ಚಾಲನೆ ನೀಡಿ, ಶುಭ ಕೋರಿದ್ದರು.

ದೆಹಲಿಯಿಂದ ಯಾತ್ರೆ ಆರಂಭಿಸಿ ಮೊದಲ ವಾಸ್ತವ್ಯ ಹೂಡಿದ್ದು ಶನಿದೇವರ ಮಂದಿರದಲ್ಲಿ. ‘ಮೊದಲ ದಿನವೇ ಶನಿಮಂದಿರದಲ್ಲಿ ಆಶ್ರಯ ಸಿಕ್ಕಿರುವುದರಿಂದ ಮುಂದೆ ಯಾತ್ರೆ ನಿರ್ವಿಘ್ನವಾಗಿ ನಡೆಯಲಿದೆ’ ಎಂದುಕೊಂಡ ಭೀಮಾಶಂಕರ್ ಮರುದಿನ ರಾತ್ರಿ ತಲುಪಿದ್ದು ಚಂಡೀಗಢ್ ನಗರಕ್ಕೆ. ರಾತ್ರಿ 1 ಗಂಟೆಯ ಸಮಯ. ಇಡೀ ದಿನ ಸೈಕಲ್ ಹೊಡೆದು ದೇಹ ಸುಸ್ತಾಗಿದೆ. ಗೂಗಲ್​ನಲ್ಲಿ ‘ನಿಯರೆಸ್ಟ್ ಟೆಂಪಲ್ಸ್’ ಎಂದು ಸರ್ಚ್ ಕೊಟ್ಟರೆ 6-7 ಕಿ.ಮೀ.ಗಳ ಅಂತರದಲ್ಲಿ ಹಲವು ದೇಗುಲಗಳನ್ನು ಮ್ಯಾಪ್ ತೋರಿಸುತ್ತಿದೆ. ಮುಂದೇನು ಎಂಬುದು ತಿಳಿಯುತ್ತಿಲ್ಲ. ಆಗ, ನಿದ್ದೆ ಬಾರದೆ ಆ ಹೊತ್ತಲ್ಲಿ ವಾಯುವಿಹಾರಕ್ಕೆಂದು ಬಂದಿದ್ದ ದಂಪತಿ ಇವರನ್ನು ನೋಡಿ, ಮಾತನಾಡಿಸಿ ‘ಇಲ್ಲಿಗೇಕೆ ಬಂದಿದ್ದು’ ಎಂದು ಪ್ರಶ್ನಿಸಿದ್ದಾರೆ. ಉದ್ದೇಶ ವಿವರಿಸಿದಾಗ ಖುಷಿಯಾಗಿ, ‘ನಮ್ಮ ಮನೆ ಇಲ್ಲೇ ಇದೆ, ಬಂದು ಆತಿಥ್ಯ ಸ್ವೀಕರಿಸಿ’ ಎಂದು ಕರೆದು ಭೀಮಾಶಂಕರ್​ರನ್ನು ಮನೆಗೆ ಕರೆದೊಯ್ದು ಬಿಸಿಯೂಟ ನೀಡಿ, ಇರಲು ಜಾಗ ನೀಡಿ ಉಪಚರಿಸಿದರಂತೆ. ಮರುದಿನ ಬೆಳಗ್ಗೆ ನಗರದ ಹೊರವಲಯದವರೆಗೂ ಬಂದು ಬೀಳ್ಕೊಟ್ಟು, ಶುಭ ಹಾರೈಸಿದ್ದಾರೆ. ಇದು ಭಾವನಾತ್ಮಕ ಭಾರತದ ಹೃದಯವೈಶಾಲ್ಯತೆಗೆ ಸಾಕ್ಷಿ. ‘ಅತಿಥಿ ದೇವೋ ಭವ’ ಎಂಬುದರ ಸಾಕ್ಷಾತ್ಕಾರ.

‘ನಮ್ಮ ತಿರಂಗಾದ ಶಕ್ತಿ ಅಷ್ಟು ಇದೆ ಸರ್’ ಎಂದು ಎದೆಯುಬ್ಬಿಸಿ ಹೇಳುವ ಭೀಮಾಶಂಕರ್ ಸೈಕಲ್​ಗೆ ತ್ರಿವರ್ಣಧ್ವಜ ಅಳವಡಿಸಿ ರಸ್ತೆಯಲ್ಲಿ ಹೋಗುವಾಗ ಬೆನ್ಜ್ ಕಾರಲ್ಲಿ ಹೋಗುವವರು, ದ್ವಿಚಕ್ರ ವಾಹನ ಸವಾರರು ಒಂದು ಕ್ಷಣ ನಿಂತು ಮಾತನಾಡಿಸಿ, ‘ತುಂಬ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಏನಾದರೂ ಸಹಾಯ ಬೇಕಿದ್ದರೆ ಕಾಲ್ ಮಾಡಿ’ ಎಂದು ಮೊಬೈಲ್ ನಂಬರ್ ಕೊಟ್ಟುಹೊದ ನಿದರ್ಶನಗಳು ಒಂದೆರಡಲ್ಲ. ಯುವಕರಂತೂ ಬೈಕಿನಿಂದ ಇಳಿದು ಇವರೊಡನೆ ಸೆಲ್ಪಿ ಕ್ಲಿಕ್ಕಿಸಿಕೊಂಡು, ‘ಯೋಧರ ಬಗ್ಗೆ ನಮಗೂ ತುಂಬ ಗೌರವವಿದೆ’ ಎಂದು ಖುಷಿಯಿಂದ ಹೇಳಿಕೊಂಡರು.

ಈ ಯಾತ್ರೆ ಅವಧಿಯಲ್ಲಿ ಇವರು ರಾತ್ರಿ ಬಹುತೇಕ ತಂಗಿದ್ದು ದೇವಾಲಯ, ಗುರುದ್ವಾರ ಮತ್ತು ಧಾಬಾಗಳ ಹೊರಭಾಗದಲ್ಲಿ. ಅಲ್ಲೆಲ್ಲ ಜನ ಕುತೂಹಲದಿಂದ ಮಾತನಾಡಿಸಿ, ಉದ್ದೇಶ ಅರಿತಾದ ಮೇಲೆ ‘ನಿಮ್ಮಂಥವರಿಂದ ಭಾರತ ಬಲಿಷ್ಠವಾಗಿದೆ’ ಎಂದು ಹೇಳುತ್ತಿದ್ದರಂತೆ. ‘ನಮ್ಮ ಜತೆ ಚಹಾ ಕುಡಿಯಿರಿ’ ಎಂಬ ಅವರ ಪ್ರೀತಿಯಲ್ಲಿ ತುಂಬ ಶಕ್ತಿಯಿತ್ತು ಎನ್ನುವ ಭೀಮಾಶಂಕರ್ ಛತ್ತೀಸ್​ಗಢದ ನಕ್ಸಲ್​ಪೀಡಿತ ಪ್ರದೇಶ, ಗೋವಾದ ದಟ್ಟ ಘಾಟ್ ಪ್ರದೇಶ, ಮಧ್ಯಪ್ರದೇಶದ ಅರಣ್ಯಗಳಲೆಲ್ಲ ನಿರ್ಭೀತಿಯಿಂದ ಸಂಚರಿಸಿದ್ದಲ್ಲದೆ, ಅಲ್ಲಿನ ಜನರೊಂದಿಗೆ ಬೆರೆತು ಸೈನಿಕರ ಮಹತ್ವವನ್ನು ವಿವರಿಸಿದ್ದಾರೆ. ‘ಈ ಬಾರಿಯೂ ಶ್ರೀನಗರದಿಂದ ಸೋನ್​ವಾರ್ಗ್ ತಲುಪಿದ ತಕ್ಷಣ ಭಾರಿ ಮಳೆ ಆರಂಭವಾಯಿತು. ಅಲ್ಲಿಂದ ಕಾರ್ಗಿಲ್ 60 ಕಿ.ಮೀ. ದೂರದಲ್ಲಿತ್ತು. ಸ್ಥಳೀಯರು ಈ ಮಳೆ ಯಾವಾಗ ನಿಲ್ಲುವುದೋ ಹೇಳಲಾಗುವುದಿಲ್ಲ ಎಂದಾಗ ಟೂರಿಸ್ಟ್ ಬಸ್ ಮೂಲಕ ಕಾರ್ಗಿಲ್ ತಲುಪಿ ಸಂಜೆವರೆಗೂ ಆ ಪ್ರದೇಶವನ್ನು ಧ್ಯಾನಸ್ಥ ರೀತಿಯಲ್ಲಿ ನೋಡಿ ಸೋನ್​ವಾರ್ಗ್ ಮರಳಿದೆ’ ಎನ್ನುವ ಇವರಿಗೆ ಎಲ್ಲೆಡೆಯೂ ಸಿಆರ್​ಪಿಎಫ್ ಪಡೆ ಸಹಕಾರ ನೀಡಿದೆ.

ಶ್ರೀನಗರ, ಶಿಮ್ಲಾ, ಜೈಪುರ್, ಚಂಡೀಗಢ, ಭೋಪಾಲ್, ಲಖನೌ, ಪಟನಾ, ರಾಂಚಿ, ಕೊಲ್ಕತ್ತ, ಭುವನೇಶ್ವರ, ರಾಯ್ಪುರ, ಹೈದರಾಬಾದ್, ಬೀದರ್, ಕಲಬುರಗಿ, ಬೆಂಗಳೂರು, ಚೆನ್ನೈ, ಕನ್ಯಾಕುಮಾರಿ, ತಿರುವನಂತಪುರ, ಪಣಜಿ, ಪುಣೆ, ಮುಂಬೈ, ಗಾಂಧಿನಗರ ಮತ್ತು ಶ್ರೀಲಂಕಾದಲ್ಲೂ ಸಂಚರಿಸಿ ಮತ್ತೆ ದೆಹಲಿ ತಲುಪಿ ಯಾತ್ರೆ ಪೂರ್ಣಗೊಳಿಸಿದಾಗ ಭಾರತದ ನೂರೆಂಟು ಭಾವಗಳು ಇವರ ಹೃದಯದಲ್ಲಿ ಭದ್ರವಾಗಿದ್ದವು, ಜನರಲ್ಲಿ ಸೈನಿಕರ ಬಗ್ಗೆ ಹೆಮ್ಮೆ ಮೂಡಿಸಿದವು. ತೆಲಂಗಾಣ ಗಡಿಯಿಂದ ಬೀದರ್​ವರೆಗೆ ಎಸ್ಕಾರ್ಟ್ ಮೂಲಕ ಕರೆತಂದಿದ್ದು, ಬೆಂಗಳೂರಿನಲ್ಲಿ ಪೊಲೀಸ್ ಬ್ಯಾಂಡ್ ಮೂಲಕ ಗೌರವ ನೀಡಿದ್ದು ಜೀವಮಾನದಲ್ಲೇ ಮರೆಯಲಾಗದ ಕ್ಷಣಗಳು ಎನ್ನುತ್ತಾರೆ. ಮಾತ್ರವಲ್ಲ, ಈ ಯಾತ್ರೆಯಲ್ಲಿ ಅವರಿಗೆ ಅಸಾಧಾರಣ ಸಾಧಕರು, ಸೈಕ್ಲಿಸ್ಟ್​ಗಳು, ಸಾಮಾಜಿಕ ಕಾರ್ಯಕರ್ತರು, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಾಗಿ ಹುರಿದುಂಬಿಸಿದ್ದಾರೆ.

‘ಹೆದ್ದಾರಿ, ಸಾಧಾ ರಸ್ತೆ, ಕಚ್ಚಾ ರಸ್ತೆ, ಉಬ್ಬು-ತಗ್ಗು… ಹೀಗೆ ಎಲ್ಲ ಕಡೆಗಳಲ್ಲಿಯೂ ಸಂಚರಿಸಿದ್ದೇನೆ. ಈ ಸೈಕಲ್ ಸವಾರಿ ಜೀವನದ ತತ್ತ್ವಜ್ಞಾನವನ್ನೂ ಬೋಧಿಸುತ್ತಿತ್ತು. ಜೀವನದ ಪಯಣದಲ್ಲಿ ಹೀಗೆ ಎತ್ತರ-ತಗ್ಗು ಎದುರಾಗುತ್ತವೆ. ಅವನ್ನೆಲ್ಲ ಎದುರಿಸಿಕೊಂಡು ಮುಂದೆ ಸಾಗಿದರೆ ಗಮ್ಯ ತಲುಪಬಹುದು ಎಂಬುದು ಅರಿವಾಯಿತು’ ಎನ್ನುವ ಇವರು 111ನೇ ದಿನಕ್ಕೆ ಯಾತ್ರೆ ಪೂರ್ಣಗೊಳಿಸಬೇಕಿದ್ದರಿಂದ ಕೊನೇ 36 ಗಂಟೆಗಳಲ್ಲಿ ರಾತ್ರಿ ನಿದ್ದೆಯನ್ನೂ ಮಾಡದೆ ಸೈಕಲ್​ನಲ್ಲಿ 300 ಕಿ.ಮೀ.ಗೂ ಹೆಚ್ಚು ಕ್ರಮಿಸಿದ್ದಾರೆ. ದೆಹಲಿಯಲ್ಲೂ ಸಿಆರ್​ಪಿಎಫ್ ಪಡೆ ಸನ್ಮಾನಿಸಿ, ಪ್ರಮಾಣಪತ್ರ ನೀಡಿದಾಗ ‘ಇದು ಇಡೀ ಕರ್ನಾಟಕ ಪೊಲೀಸ್ ಇಲಾಖೆಗೆ ಸಂದ ಗೌರವ’ ಎಂದು ವಿನೀತರಾಗಿಯೇ ಹೇಳಿದ್ದಾರೆ.

ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲು ‘ಭಾರತ್ ಕೇ ವೀರ್’ ಸರಳ ಮತ್ತು ಉತ್ತಮ ಮಾರ್ಗವಾಗಿದೆ. ಅಸ್ಸಾಂ ರೈಫಲ್ಸ್, ಬಿಎಸ್​ಎಫ್, ಸಿಐಎಸ್​ಎಫ್, ಸಿಆರ್​ಪಿಎಫ್, ಐಟಿಬಿಪಿ, ಎನ್​ಡಿಆರ್​ಎಫ್, ಎನ್​ಎಸ್​ಜಿ, ಎಸ್​ಎಸ್​ಬಿ-ಈ ಎಂಟು ಪಡೆಗಳಲ್ಲಿ ಕಾರ್ಯನಿರ್ವಹಿಸಿ ಹುತಾತ್ಮರಾದ ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯವಿದೆ. ‘ಮೈನಸ್ 40 ಡಿಗ್ರಿಯಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ನಮ್ಮ ಯೋಧರಿಗೆ ಒಂದಿಷ್ಟು ಗೌರವ, ಪ್ರೀತಿ ತೋರಲು ನಾವು ಕಲಿಯಬೇಕಾಗಿದೆ. ಅವರ ಕುಟುಂಬದೊಡನೆ ನಿಲ್ಲುವ ಮೂಲಕ ಸಂಕಷ್ಟದ ಕ್ಷಣಗಳಿಗೆ ಸ್ಪಂದಿಸಬೇಕಿದೆ’ ಎನ್ನುವ ಭೀಮಾಶಂಕರ್ (87626-25684) ‘ಅವರು ಬಾಹ್ಯಶತ್ರುಗಳೊಂದಿಗೆ ಹೋರಾಡಲಿ, ನಾವು ಆಂತರಿಕ ಶತ್ರುಗಳೊಂದಿಗೆ ಹೋರಾಡುತ್ತೇವೆ. ಒಟ್ಟಿನಲ್ಲಿ ದೇಶ ಬಲಿಷ್ಠವಾಗಬೇಕು’ ಎನ್ನುತ್ತ ಭಾವುಕರಾಗುತ್ತಾರೆ. ಇತ್ತೀಚೆಗೆ ಪರಿಸರ ರಕ್ಷಣೆಯ ಕೆಲಸದಲ್ಲೂ ತೊಡಗಿಸಿಕೊಂಡಿರುವ ಅವರು ‘ನೀರು, ಗಾಳಿ ಉಳಿಸದಿದ್ದರೆ ಮನುಷ್ಯನಿಗೆ ಉಳಿಗಾಲವಿಲ್ಲ’ ಎನ್ನುತ್ತಾರೆ.

ಪ್ರತೀ ಭಾರತೀಯನಲ್ಲೂ ಇಂಥ ರಾಷ್ಟ್ರಭಕ್ತಿಯ ಕಿಡಿ ಕಾಣಬೇಕು. ಆಗಲೇ ಸೈಕಲ್ ಮೇಲೆ ಹೊರಟರೂ ಸುಂದರ ಭಾರತದ ದರ್ಶನವಾಗುತ್ತದೆ, ಜಾತಿ, ಮತ, ಭೇದದ ಸಂಕೋಲೆಗಳು ಮುರಿದುಬಿದ್ದು ಎಲ್ಲರೂ ನಮ್ಮವರಾಗುತ್ತಾರೆ. ಅಲ್ಲವೇ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Stay connected

278,741FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...