More

    ಪ್ರತಿಮೆ ಬದಲು ಕೆರೆ ನಿರ್ವಿುಸಿ

    ನಕಪುರ ತಾಲೂಕಿನ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಯೇಸುವಿನ ಬೃಹದ್ ಗಾತ್ರದ ಪ್ರತಿಮೆ ಸ್ಥಾಪಿಸುವುದರ ಬಗ್ಗೆ ವಾದ-ವಿವಾದಗಳು ಪ್ರಾರಂಭವಾಗಿವೆ. ವಿಶ್ವದ ವಿವಿಧ ಭಾಗಗಳಲ್ಲಿ, ನಮ್ಮ ದೇಶದಲ್ಲಿ ನಿರ್ವಿುಸಲಾದ/ಪ್ರತಿಷ್ಠಾಪಿಸಲಾದ ವಿವಿಧ ಮಹಾನುಭಾವರ ಪ್ರತಿಮೆಗಳ ಸ್ಥಿತಿಗತಿ ಗಮನಿಸಿದಾಗ ಅವರಿಗೆ ಗೌರವ ಸಲ್ಲಿಸುವುದರ ಬದಲಿಗೆ ಕುಹಕಿಗಳಿಂದ ಅಗೌರವ ಆಗುತ್ತಿರುವುದನ್ನು ಕಾಣಬಹುದು. ಕಪಾಲಬೆಟ್ಟದಲ್ಲಿ ಪ್ರತಿಮೆ ಸ್ಥಾಪಿಸಲು ಆಗುವ ಹಣವನ್ನು ಬಳಸಿಕೊಂಡು ಐದು ಎಕರೆ ಜಮೀನಿನಲ್ಲಿ 15 ಅಡಿ ಆಳದ ಕೆರೆ ನಿರ್ವಿುಸಿ ನೀರುಸಂಗ್ರಹಕ್ಕೆ ಅವಕಾಶ ಮಾಡಿಕೊಡಬಹುದು. ಇದರಿಂದ ಜನ ಜಾನುವಾರುಗಳಿಗೆ ನೀರು ದೊರಕುವುದಲ್ಲದೆ ಹಾರೊಬೆಲೆ ಗ್ರಾಮದ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಹೆಚ್ಚಳವಾಗುತ್ತದೆ. ಬೆಟ್ಟದ ಮೇಲೆ ಬಿಸಿಲಿನ ಪ್ರಮಾಣ ಅಧಿಕವಾಗಿದ್ದು, ಸೌರವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಬಹುದು. ಉಳಿದ ಐದು ಎಕರೆ ಜಮೀನಿನಲ್ಲಿ ಸೌರಫಲಕ ಅಳವಡಿಸಿ ಕನಕಪುರ ತಾಲೂಕಿಗೆ ಸೌರವಿದ್ಯುತ್ ಒದಗಿಸಲು ಕ್ರಮ ಜರುಗಿಸುವ ಮೂಲಕ ಬೆಟ್ಟದ ವಿವಾದಿತ ಪ್ರದೇಶದ ಸದ್ಬಳಕೆ ಮಾಡಿಕೊಳ್ಳಬಹುದು.

    ಈ ಕುರಿತು ವಿವಿಧ ಧಾರ್ವಿುಕ ನೇತಾರರು, ಜನಪರ ಕಾಳಜಿಯ ಸಂಘಟನೆಗಳು, ಸಾಮಾಜಿಕ ಕಾಳಜಿಯ ಚಿಂತಕರು, ಶಾಸಕರು, ಸಂಸದರು, ಸರ್ಕಾರ ಸಕಾರಾತ್ಮಕ ಚಿಂತನೆ ಮಾಡಿ ಬೆಟ್ಟದ ಮೇಲೆ ಬಹುಜನುಪಯುಕ್ತ ಕಾರ್ಯಮಾಡಲು ಮುಂದಾಗಲಿ.

    | ಬಸವರಾಜ ಹುಡೇದಗಡ್ಡಿ, ವಕೀಲರು, ಬೆಂಗಳೂರು

    ದೇಶವಿರೋಧಿ ಭಾವನೆ ಸಲ್ಲ

    ಭಾರತವನ್ನು ಬಯ್ಯುವುದೇ ಒಂದು ಕಸುಬು ಮಾಡಿಕೊಂಡ ಅನೇಕ ಜನ ಎಂದೋ ಬರೆದ ಒಂದೆರಡು ಲೇಖನಗಳನ್ನೋ, ಪುಸ್ತಕಗಳನ್ನೋ ಪ್ರತಿಬಿಂಬಿಸಿ ಮಹಾ ಬುದ್ಧಿಜೀವಿಗಳಂತೆ, ಮೇಧಾವಿಗಳಂತೆ ವರ್ತಿಸುತ್ತ ದೇಶವನ್ನು ಬಯ್ಯುತ್ತಿರುವುದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಎಡ ಎಂದರೆ ಇವರು ಬಲ ಎನ್ನುವುದು, ಮೋದಿ ಬಲ ಎಂದರೆ ಎಡ ಎನ್ನುವುದು ಇವರ ಚಾಳಿ. ಕೇಂದ್ರ ಸರ್ಕಾರ ಹಲವು ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಟೀಕಿಸುವುದು! ಮೋದಿಯವರನ್ನು ಟೀಕಿಸಿ ಇಂಥವರಿಗೆ ಸಮಾಧಾನವಾಗುವುದಾದರೆ ಟೀಕಿಸಲಿ. ಆದರೆ ಅವರನ್ನು ಟೀಕಿಸುವ ನೆಪದಲ್ಲಿ ದೇಶ, ಸಂಸ್ಕೃತಿ, ಧರ್ಮವನ್ನು ಟೀಕಿಸುವುದನ್ನು ಸಹಿಸಲಾಗುವುದಿಲ್ಲ.

    | ಎಂ.ಪರಮೇಶ್ವರ, ಮದ್ದಿಹಳ್ಳಿ (ಹಿರಿಯೂರು ತಾಲೂಕು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts