More

    ವಿಜಯವಾಣಿ ವರದಿ ಫಲಶ್ರುತಿ; ತಾತ್ಕಾಲಿಕ ಬಸ್ ನಿಲ್ದಾಣಗಳ ದುಸ್ಥಿತಿ ಪರಿಶೀಲನೆ

    ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ನಗರದ ಕಿಟೆಲ್ ಕಾಲೇಜ್ ಪಕ್ಕದ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
    ಇಲ್ಲಿನ ಸಿಬಿಟಿ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭವಾಗಿದೆ. ಅಂದಿನಿAದ ನಗರದ ವಿವಿಧೆಡೆ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ, ನೆರಳು ಹಾಗೂ ಶೌಚಗೃಹಗಳಿಲ್ಲ. ತಾತ್ಕಾಲಿಕ ನಿಲ್ದಾಣಗಳಲ್ಲಿನ ದುಸ್ಥಿತಿ ಕುರಿತು ವಿಜಯವಾಣಿ' ಪತ್ರಿಕೆಧರೆ ಸುಡುತಿರೆ ಇಲ್ಲ ನೆರಳು- ಆಸನ ಆಸರೆ’ ಎಂಬ ವಿಸ್ತÈತ ವರದಿ ಪ್ರಕಟಿಸಿತ್ತು.
    ವರದಿಗೆ ಸ್ಪಂದಿಸಿದ ಎಂಡಿ ಪ್ರಿಯಾಂಗಾ, ನಗರ ಸಾರಿಗೆ ಬಸ್‌ಗಳ ನಿಲುಗಡೆಗೆ ಸ್ಥಾಪಿಸಿರುವ ತಾತ್ಕಾಲಿಕ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿದ್ದರು. ಪ್ರಯಾಣಿಕರಿಗೆ ನೆರಳು ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಜೊತೆಗಿದ್ದ ಅಽಕಾರಿಗಳೊಂದಿಗೆ ಚರ್ಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts