Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಪರ್ವಿುಟ್ ಗೋಲ್ಮಾಲ್ ಪರಿಶೀಲನೆಗೆ ಆದೇಶ

Thursday, 14.06.2018, 3:04 AM       No Comments

ಬೆಂಗಳೂರು: ಅರ್ಹತೆ ಇಲ್ಲದ 100 ಹೊಸ ಕಾಲೇಜುಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಿರುವ ವಿಚಾರವನ್ನು ವಿಜಯವಾಣಿ ಬೆಳಕಿಗೆ ತರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇದೀಗ ಎಲ್ಲ ಅರ್ಜಿಗಳ ಬಗ್ಗೆ ಪ್ರತ್ಯೇಕ ವರದಿ ಪಡೆದು ಮರುಪರಿಶೀಲಿಸಲು ನಿರ್ಧರಿಸಿದೆ. ವಿಜಯವಾಣಿ ಮಂಗಳವಾರ ಮುಖಪುಟದಲ್ಲಿ ‘ಪರ್ವಿುಟ್ ಗೋಲ್ಮಾಲ್’ ಎಂಬ ಶೀರ್ಷಿಕೆ ಅಡಿ ತನಿಖಾ ವರದಿ ಪ್ರಕಟಿಸಿತ್ತು. ಬುಧವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಜತೆ ರ್ಚಚಿಸಿ ಅರ್ಜಿಗಳನ್ನು ಮರು ಪರಿಶೀಲಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಜಿಲ್ಲಾ ಉಪನಿರ್ದೇಶಕರಿಂದ ಹೊಸದಾಗಿ ವರದಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಲಂಚ ಪಡೆದು ಅನುಮತಿ: 2018-19ನೇ ಸಾಲಿಗೆ ಹೊಸದಾಗಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ಬಂದಿದ್ದ 204 ಅರ್ಜಿಗಳ ಪೈಕಿ ಕೇವಲ 8 ಅರ್ಜಿಗಳು ಮಾತ್ರವೇ ಅಪೇಕ್ಷಿತ ಮಾನದಂಡ ಪೂರೈಸಿದ್ದವು. ಉಳಿದ ಯಾವುದೇ ಕಾಲೇಜುಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರಕ್ಕೆ ಕಡತ ರವಾನೆ ಮಾಡಿತ್ತು. ಆದರೆ, ಶಿಕ್ಷಣ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪ್ರತಿ ಅರ್ಜಿಗೆ ಸುಮಾರು 5 ಲಕ್ಷ ರೂ. ಲಂಚ ಪಡೆದು ಅನುಮತಿ ನೀಡಿರುವುದನ್ನು ವಿಜಯವಾಣಿ ಬಹಿರಂಗಗೊಳಿಸಿತ್ತು.

ಅನುಮತಿಯೂ ಇಲ್ಲ, ಹಣವೂ ಇಲ್ಲ

ಹೊಸ ಕಾಲೇಜುಗಳಿಗೆ ಅರ್ಹತೆ ಇಲ್ಲದಿದ್ದರೂ ಹಣ ನೀಡಿ ಸರ್ಕಾರ ಹಂತದಲ್ಲಿ ಅನುಮತಿ ಪಡೆದಿರುವವರ ಕಥೆ ಹೇಳ ತೀರದು. ಎಲ್ಲ ಸೌಕರ್ಯ ಇದ್ದೂ ಅನುಮತಿ ಸಿಗದವರು ಈ ಪ್ರಕರಣದಿಂದ ಖುಷಿ ಪಟ್ಟರೆ, ಹಣ ನೀಡಿದವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ವಿಜಯವಾಣಿ ಉತ್ತಮ ತನಿಖಾ ವರದಿ ಪ್ರಕಟಿಸಿ ಶಿಕ್ಷಣ ಇಲಾಖೆ ಭ್ರಷ್ಟಾಚಾರವನ್ನು ಬೆಳಕಿಗೆ ತಂದಿದೆ. ಇನ್ನೂ ಸಾಕಷ್ಟು ಅವ್ಯವಹಾರ ನಡೆದಿದ್ದು, ಎಲ್ಲವೂ ತನಿಖೆಯಾಗಬೇಕು.

|ಅರುಣ ಶಹಾಪೂರ, ವಿಧಾನ ಪರಿಷತ್ ಸದಸ್ಯ

 

ಎಲ್ಲದರ ತನಿಖೆ ಆಗಲಿ

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಮೊದಲು ಹಾಗೂ ಶಿಕ್ಷಣ ಸಚಿವರು ಆಯ್ಕೆಯಾಗುವ ಮುನ್ನ ಸಾಕಷ್ಟು ‘ಬೆಲೆ’ ಬಾಳುವ ಕಡತಗಳಿಗೆ ಕ್ಲಿಯರ್ ಪಾಸ್ ನೀಡಲಾಗಿದೆ. ಕಾಲೇಜುಗಳ ಅನುಮತಿಗೆ ನಿಯಮ ಉಲ್ಲಂಘನೆ ಹೊರತಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರಾರಂಭಕ್ಕೆ ಅನುಮತಿ, ಸಿಬಿಎಸ್​ಇ ಶಾಲೆಗಳ ಆರಂಭಕ್ಕೆ ನಿರಾಕ್ಷೇಪಣಾ ಪತ್ರ(ಎನ್​ಒಸಿ)ಕ್ಕೂ ಸಾಕಷ್ಟು ಲಂಚ ಪಡೆದು ಅನುಮತಿ ನೀಡಿರುವ ಆರೋಪ ಕೇಳಿಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಈ ಬಗ್ಗೆ ತನಿಖೆ ನಡೆಸಲು ಮುಂದಾಗಬೇಕಿದೆ.

ಅಧಿಕಾರಿ ತಲೆದಂಡ?

ಹೊಸ ಕಾಲೇಜು ಆರಂಭಕ್ಕೆ ಸರ್ಕಾರವೇ ನಿಗದಿಪಡಿಸಿರುವ ಮಾನದಂಡಗಳನ್ನು ಅನುಸರಿಸದ 100 ಕಾಲೇಜುಗಳಿಗೆ ಮಂಜೂರಾತಿಗೆ ಸಹಿ ಮಾಡಿರುವ ಅಧೀನ ಕಾರ್ಯದರ್ಶಿ ತಲೆದಂಡಕ್ಕೆ ಮುಂದಾಗಿರುವ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಆದರೆ, ಎಲ್ಲ ಅಧೀನ ಕಾರ್ಯದರ್ಶಿಗಳು ಇಲಾಖಾ ಮುಖ್ಯಸ್ಥರ ಆದೇಶಾನುಸಾರ ಸಹಿ ಮಾಡುತ್ತಾರೆಯೇ ವಿನಾ ಏಕಾಏಕಿ ಸಹಿ ಮಾಡುವುದಿಲ್ಲ. ಹೀಗಾಗಿ ಯಾರದೋ ತಪ್ಪಿಗೆ ಯಾರನ್ನೋ ಹರಕೆಯ ಕುರಿಯಾಗಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಮಧ್ಯೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ತಮ್ಮ ಸ್ವಕ್ಷೇತ್ರ ಕೊಳ್ಳೇಗಾಲಕ್ಕೆ ತೆರಳಿದ್ದು, ಗುರುವಾರ ಬೆಂಗಳೂರಿಗೆ ಬಂದ ನಂತರ ಕಡತ ಪಡೆದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ನಿಯಮಬಾಹಿರವಾಗಿ ಹೊಸ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿರುವ ಬಗ್ಗೆ ನನಗೆ ತಿಳಿದಿಲ್ಲ. ಗುರುವಾರ ಬೆಂಗಳೂರಿಗೆ ಬಂದು ಅಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

| ಎನ್.ಮಹೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Leave a Reply

Your email address will not be published. Required fields are marked *

Back To Top