ಬೆಂಗಳೂರು: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳಕ್ಕೆ ಜಿಲ್ಲೆಗಳಿಂದ ಬಸ್ಗಳಲ್ಲಿ ರೈತರು ತೆರಳಿದರು.
ಮಂಡ್ಯ ಜಿಲ್ಲೆಯಿಂದ ರೈತರನ್ನು ಕರೆದುಕೊಂಡು ಹೋಗಲು ಒಟ್ಟು ಹತ್ತು ಬಸ್ಗಳ ವ್ಯವಸ್ಥೆಯನ್ನು ಕೃಷಿ ಇಲಾಖೆ ಮಾಡಿದೆ. ಮಂಡ್ಯ, ಮದ್ದೂರು, ಪಾಂಡವಪುರ ತಾಲೂಕಿನಿಂದ ತಲಾ ಎರಡೆರೆಡು ಬಸ್ಗಳು ಮೈಸೂರಿನತ್ತ ಪ್ರಯಾಣ ಬೆಳಸಿದವು.
ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್. ಪೇಟೆ, ನಾಗಮಂಗಲ ತಾಲೂಕಿನಿಂದ ಒಂದೊಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಕೃಷಿ ಮೇಳ ಕಣ್ತುಂಬಿಕೊಳ್ಳಲು ಹೊರಟ ಅನ್ನದಾತರು.
ಮೈಸೂರಿನ ಕೃಷಿ ಮೇಳಕ್ಕೆ ಕೋಲಾರದಿಂದಲೂ ನೂರಾರು ರೈತರು ಹೊರಟರು. ಇಮದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲೆಯಿಂದ 300ಕ್ಕೂ ಹೆಚ್ಚು ರೈತರು ಕೋಲಾರದಿಂದ ಹೊರಟರು.
ಕೋಲಾರ ಜಿಲ್ಲೆಯಿಂದ 5 ಬಸ್ಗಳಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದ ರೈತರು, ಮೈಸೂರಿಗೆ ಹೊರಟ ಬಸ್ಗಳಿಗೆ ಸಂಸದ ಎಸ್. ಮುನಿಸ್ವಾಮಿ ಚಾಲನೆ ನೀಡಿದರು.
ಕೃಷಿ ಮೇಳಕ್ಕೆ ಹೊರಟ ಬಸ್ಗೆ ಆನೇಕಲ್ನಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವಸಂತರೆಡ್ಡಿ ಚಾಲನೆ ನೀಡಿದರು. ಆನೇಕಲ್ನ ಶ್ರೀರಾಮ ದೇವಾಲಯದಿಂದ ಹೊರಟ ರೈತ ಮುಖಂಡರು.