22.5 C
Bengaluru
Sunday, January 19, 2020

ಇಂದಿನಿಂದ ಮೂರು ದಿನ ರಿಯಲ್​ಎಸ್ಟೇಟ್ ಎಕ್ಸ್​ಪೋ

Latest News

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ವಾಸಯೋಗ್ಯ ಮನೆ, ಹೂಡಿಕೆಗೆ ನಿವೇಶನ, ಬದುಕು ಕಟ್ಟಿಕೊಳ್ಳಲು ಫ್ಲ್ಯಾಟ್​ಗಳನ್ನು ಹೊಂದುವ ಕನಸು ನಿಮ್ಮದಾಗಿದ್ದರೆ ಅದನ್ನು ಸಾಕಾರಗೊಳಿಸಲು ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ವೇದಿಕೆ ಒದಗಿಸುತ್ತಿವೆ. ಅ.12, 13 ಮತ್ತು 14ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ರಿಯಲ್​ಎಸ್ಟೇಟ್ ಎಕ್ಸ್​ಪೋ’ ಹಮ್ಮಿಕೊಳ್ಳಲಾಗಿದ್ದು. ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 7 ಗಂಟೆವರೆಗೆ ಪ್ರದರ್ಶನ ನಡೆಯಲಿದೆ. ನಗರದ ಪ್ರತಿಷ್ಠಿತ ಬಿಲ್ಡರ್​ಗಳು, ಡೆವಲಪರ್ ಸಂಸ್ಥೆಗಳು ಮತ್ತು ಬ್ಯಾಂಕ್ ಪ್ರತಿನಿಧಿಗಳು ಎಕ್ಸ್​ಪೋದಲ್ಲಿ ಭಾಗವಹಿಸುತ್ತಿದ್ದು, ನಿಮ್ಮಿಷ್ಟದ ಸೂರು ಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಿವೆ.

ಸ್ವಂತ ನಿವೇಶನ, ಮನೆ, ಫ್ಲ್ಯಾಟ್ ಪ್ರತಿಯೊಬ್ಬನ ಕನಸು. ದಸರಾ ಸಂಭ್ರಮದಲ್ಲೇ ಈ ಕನಸು ನನಸು ಮಾಡುವ ಸುವರ್ಣಾವಕಾಶ ರಾಜಧಾನಿ ಜನತೆಗೆ ದೊರೆಯುತ್ತಿದೆ. ಆಸ್ಥಾ ಪ್ರಾಪರ್ಟೀಸ್ ಸಹಯೋಗದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಪ್ರಾಪರ್ಟಿ ಎಕ್ಸ್​ಪೋ 2018 ಆಯೋಜಿಸುತ್ತಿದೆ.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೂರು ದಿನಗಳವರೆಗೆ ಎಕ್ಸ್​ಪೋ ನಡೆಯಲಿದ್ದು, ಶುಕ್ರವಾರ (ಅ.12) ಮಧ್ಯಾಹ್ನ 12.15ಕ್ಕೆ ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಚಾಲನೆ ನೀಡಲಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಚಿಕ್ಕಪೇಟೆ ಶಾಸಕ ಡಾ. ಉದಯ್ ಗರುಡಾಚಾರ್, ಮೇಯರ್ ಗಂಗಾಂಬಿಕೆ, ಚಲನಚಿತ್ರ ನಟ ಸತೀಶ್ ನೀನಾಸಂ, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಅದ್ವಿತಿ ಶೆಟ್ಟಿ, ಕಾವ್ಯಾ ಶಾ ಉಪಸ್ಥಿತರಿರಲಿದ್ದಾರೆ.

50ಕ್ಕೂ ಅಧಿಕ ಬಿಲ್ಡರ್ಸ್: 3 ದಿನಗಳ ಎಕ್ಸ್​ಪೋದಲ್ಲಿ 50ಕ್ಕೂ ಅಧಿಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಭಾಗವಹಿಸಲಿದ್ದಾರೆ. ಸ್ವಂತ ಸೂರು ಹೊಂದಲು ಕನಸು ಹೊತ್ತಿರುವವರಿಗೆ ಸೂಕ್ತ ಮಾಹಿತಿ ಕೊರತೆಯಿರುತ್ತದೆ. ಯಾವ ಪ್ರದೇಶದಲ್ಲಿ ನಿವೇಶನ, ಅಪಾರ್ಟ್​ವೆುಂಟ್​ಗಳಿವೆ? ದರವೆಷ್ಟು? ಸುತ್ತಮುತ್ತಲಿರುವ ಸೌಲಭ್ಯ ಹೀಗೆ ಹಲವು ಮಾಹಿತಿಗಳ ಕೊರತೆ ಇರುತ್ತದೆ. ಆದರೆ ಎಕ್ಸ್​ಪೋಗೆ ಆಗಮಿಸುವ ಜನರಿಗೆ ಒಂದೇ ಸೂರಿನಡಿ ತಾವು ಬಯಸುವ, ನಿರ್ದಿಷ್ಟ ವಿನ್ಯಾಸ, ವಿಸ್ತೀರ್ಣದ ಫ್ಲ್ಯಾಟ್​ಗಳು, ನಿವೇಶನ, ವಿಲ್ಲಾ, ಫಾಮರ್್​ಹೌಸ್ ಮಾಹಿತಿ ಸಿಗಲಿದೆ. ರಿಯಲ್​ಎಸ್ಟೇಟ್​ನಲ್ಲಿ ಬಂಡವಾಳ ಹೂಡಿಕೆ ಮಾಡಲಿಚ್ಛಿಸುವವ ರಿಗೂ ಉತ್ತಮ ವೇದಿಕೆಯನ್ನು ಪ್ರಾಪರ್ಟಿ ಎಕ್ಸ್​ಪೋ ಒದಗಿಸಲಿದೆ. 400ಕ್ಕೂ ಅಧಿಕ ರೇರಾ, ಬಿಎಂಆರ್​ಡಿಎ ಅನುಮೋದಿತ ಯೋಜನೆಗಳ ಬಗ್ಗೆ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಹಿತಿ ನೀಡಲಿದ್ದಾರೆ. 4 ಲಕ್ಷ ರೂ.ಗಳಿಂದ ಸೈಟು ಹಾಗೂ 17 ಲಕ್ಷದಿಂದ ಫ್ಲ್ಯಾಟ್ ಮತ್ತು ಕರ್ನಾಟಕ ಗೃಹ ಮಂಡಳಿಯ ಪ್ರಾಪರ್ಟಿಗಳು ಕೈಗೆಟುಕುವ ದರದಲ್ಲಿ ಎಕ್ಸ್​ಪೋದಲ್ಲಿ ಲಭ್ಯವಾಗಲಿವೆ.

ಬ್ಯಾಂಕ್​ಗಳ ಮಳಿಗೆ

ಎಕ್ಸ್​ಪೋದಲ್ಲಿ ಕೇವಲ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾತ್ರವಲ್ಲದೆ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್​ಗಳೂ ಭಾಗವಹಿಸಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮಳಿಗೆಗಳೂ ಇರಲಿವೆ. ಗ್ರಾಹಕರು ತಮಗೆ ಇಷ್ಟವಾದ ನಿವೇಶನ, ಫ್ಲ್ಯಾಟ್ ಖರೀದಿಸಲು ಇಚ್ಛಿಸಿದಲ್ಲಿ ಬ್ಯಾಂಕ್​ಗಳು ನೀಡುವ ಗೃಹ ಸಾಲದ ವಿವರ ಮಳಿಗೆಗಳಲ್ಲಿ ದೊರೆಯಲಿದೆ.

ಎಕ್ಸ್​ಪೋದಲ್ಲಿ ಭಾಗವಹಿಸುವ ಬಿಲ್ಡರ್ಸ್, ಡೆವಲಪರ್ಸ್

ಪ್ರಾಪರ್ಟಿ ಎಕ್ಸ್​ಪೋ 2018ರಲ್ಲಿ ಆಸ್ಥಾ ಸ್ವಮಿತ್ವ, ದುರ್ಗಾ ಶ್ರೀ ವೆಂಚರ್ಸ್, ಬೃಂದಾವನ್ ಪ್ರಾಪರ್ಟಿಸ್, ಕೆಎನ್​ಎಸ್ ಇನ್​ಫ್ರಾ, ಎಕೆ ಮ್ಯಾಕ್ಸ್, ಎಎಸ್​ಬಿ, ಶಿವ ಡೆವಲಪರ್ಸ್, ಎಬಿ ಪ್ರಾಪರ್ಟೀಸ್, ಡಿಎಸ್ ಮ್ಯಾಕ್ಸ್, ವಿಬಿಎನ್​ಸಿ, ಅನುಗ್ರಹ ಪ್ರಾಪರ್ಟೀಸ್, ಟ್ರಿನ್ಕೋ ಇನ್​ಫ್ರಾ, ಗೋಪಾಲನ್ ಎಂಟರ್​ಪ್ರೖೆಸಸ್, ಕಾನ್​ಕೋರ್ಡ್ ಗ್ರೂಪ್, ಸಿಟ್ರಸ್ ಪ್ರೊಜೆಕ್ಟ್​ಸ್, ಸ್ಯಾನ್​ಸಿಟಿ, ಮಹಾವೀರ್, ಪ್ರಾವಿಡೆಂಟ್, ಬೆಳ್ಳಿ ಭೂಮಿ, ಆಶೀರ್ವಾದ್, ಯುಆರ್​ಐ ಗ್ರೂಪ್, ಭಗಿನಿ ಡೆವಲಪರ್ಸ್, ಸ್ಟೇಟಸ್, ಐಎನ್​ಎಫ್​ಐಐ ಸೋಲಾರ್ ಸಲ್ಯೂಷನ್ಸ್ ಇಂಡಿಯಾ ಪ್ರೖೆ.ಲಿ., ಪಿಸಿ ರಿಯಾಲ್ಟಿ, ಉಪಕಾರ್ ಡೆವಲಪರ್ಸ್, ಮಂಗಳ ಪ್ರಾಪರ್ಟೀಸ್, ವಿಜಯಾ ಎಂಟರ್​ಪ್ರೖೆಸಸ್, ಗೋಲ್ಡನ್ ಪಾಮ್್ಸ, ಕರ್ನಾಟಕ ಗೃಹ ಮಂಡಳಿ, ಜಲ್-ಜಾಯ್ ಆಫ್ ಇಂಡಿಯಾ, ಸಮೃದ್ಧಿ ಪ್ರಾಪರ್ಟೀಸ್ ಆಂಡ್ ಡೆವಲಪರ್ಸ್, ಸುಪ್ರೀಂ ಫರ್ನೀಚರ್ಸ್ ಹಾಗೂ ನಂದಿನಿ ಮಳಿಗೆಗಳು ಇರಲಿವೆ.

ಬೆಂಗಳೂರಿಗೆ ಸೀಮಿತವಲ್ಲ..

ಪ್ರಾಪರ್ಟಿ ಎಕ್ಸ್​ಪೋ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಸಾಂಸ್ಕೃತಿಕ ನಗರಿ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿ ರಾಜಧಾನಿ ಸುತ್ತಮುತ್ತಲಿರುವ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಿರುವ ನಿವೇಶನ, ಲಭ್ಯವಿರುವ ಲೇಔಟ್​ಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ.


ರೂ. 10 ಸಾವಿರಕ್ಕೆ ಸೈಟ್ ನೋಂದಣಿ

ಬೆಂಗಳೂರು: ಆಶೀರ್ವಾದ್ ಹೋಮ್ಸ್ ಹಾಗೂ ಆಶೀರ್ವಾದ್ ಬೃಂದಾವನ ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿರುವ ರಾಜೇಶ್ವರಿ ಆಶೀರ್ವಾದ್ ಇನ್ಪಾ› ಪ್ರೖೆ. ಲಿ. ಕಂಪನಿ ಕೇವಲ 10 ಸಾವಿರ ರೂ. ಮೊತ್ತದಲ್ಲಿ ಬಿಎಂಆರ್​ಡಿಎ, ರೇರಾ ಅನುಮೋದಿತ ನಿವೇಶನಗಳನ್ನು ನೋಂದಣಿ ಮಾಡಿಕೊಡುತ್ತಿದೆ.

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಒದಗಿಸಬೇಕೆಂಬ ಆಶಯ ದೊಂದಿಗೆ ಆರಂಭಗೊಂಡಿರುವ ಕಂಪನಿ ಅತಿ ಕಡಿಮೆ ಮೊತ್ತದಲ್ಲಿ ನಿವೇಶನಗಳನ್ನು ನೋಂದಣಿ ಮಾಡಿಸುವುದರ ಮೂಲಕ ಗಮನ ಸೆಳೆದಿದೆ. ಈಗಾಗಲೇ ಹಲವು ಬಡಾವಣೆ ಗಳನ್ನು ರೂಪಿಸಿ ಮಾರಾಟ ಪ್ರಕ್ರಿಯೆ ಯಲ್ಲಿಯೂ ಯಶಸ್ಸು ಗಳಿಸಿರುವ ರಾಜೇಶ್ವರಿ ಆಶೀರ್ವಾದ್ ಕಂಪನಿ ಹೊಸದಾಗಿ ‘ಆಶೀರ್ವಾದ್ ಪಂಚಮುಖಿ ಶ್ರೇಯೋಧಾಮ’

ಬಡಾವಣೆ ಅಭಿವೃದ್ಧಿಪಡಿಸುತ್ತಿದೆ. 16.16 ಎಕರೆ ಪ್ರದೇಶದಲ್ಲಿ ವಿವಿಧ ಅಳತೆಯ 238 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಸದ್ಯದಲ್ಲಿಯೇ ಮಾರಾಟ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ತಿಳಿಸಿದ್ದಾರೆ.

ರಾಮೋಹಳ್ಳಿಯಲ್ಲಿ ಆಶೀರ್ವಾದ್ ಹೋಮ್್ಸ ಹಾಗೂ ಆಶೀ ರ್ವಾದ್ ಬೃಂದಾವನ್ ಬಡಾವಣೆ ಅಭಿವೃದ್ಧಿಪಡಿಸಿ ಬಹುತೇಕ ನಿವೇಶನಗಳನ್ನು ಮಾರಾಟ ಮಾಡಿರುವ ಕಂಪನಿ. ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗಳನ್ನು ಸಾಕಾರಗೊಳಿಸುವ ಕನಸು ಹೊಂದಿದೆ.

ಚೇತರಿಕೆ ಕಂಡ ಮಾರುಕಟ್ಟೆ: ಕೇಂದ್ರ ಸರ್ಕಾರದ ಹಲವು ಆರ್ಥಿಕ ನಿರ್ಧಾರಗಳಿಂದ ಕಳೆದ ಎರಡು ವರ್ಷಗಳ ಕಾಲ ಮಾರುಕಟ್ಟೆ ಹಿನ್ನಡೆ ಅನುಭವಿಸಿತ್ತು. 2-3 ತಿಂಗಳಿನಿಂದ ಮಾರುಕಟ್ಟೆ ಚೇತರಿಕೆ ಕಂಡಿದ್ದು, ಸಾರ್ವಜನಿಕರು ರಿಯಲ್​ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮತ್ತು ನಿವೇಶನಗಳ ಖರೀದಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ರವಿಕುಮಾರ್ ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲಿ ನಮ್ಮ ಕಂಪನಿಯಿಂದ ಮತ್ತಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ. ಕಡಿಮೆ ದರದಲ್ಲಿ ನಿವೇಶನ ಒದಗಿಸುವುದರ ಮೂಲಕ ಸ್ವಂತಕ್ಕೆ ಸೂರು ಹೊಂದಬೇಕೆಂದು ಬಯಸುವವರ ಕನಸು ಸಾಕಾರಗೊಳಿಸಬೇಕೆಂಬುದು ನಮ್ಮ ಕಂಪನಿ ಉದ್ದೇಶ ಎಂದು ಹೇಳಿದರು.

ಕಂಪನಿ ಬೆಳವಣಿಗೆ

2010ರಂದು ಆರಂಭವಾದ ಸಂಸ್ಥೆ, 2015ರಲ್ಲಿ ನಿರ್ದೇಶನ ಮಂಡಳಿ ಒಳಗೊಂಡು ಪ್ರೖೆವೇಟ್ ಲಿಮಿಟೆಡ್ ಕಂಪನಿ ಆಗಿ ಅಸ್ತಿತ್ವಕ್ಕೆ ಬಂದಿತು. ಅಲ್ಲಿಂದ ಈವರೆಗೆ ಬೃಹತ್ ಪ್ರಮಾಣದ ಮೂರು ಪ್ರಾಜೆಕ್ಟ್​ಗಳನ್ನು ನಿರ್ವಹಿಸಿದೆ. ಮೂರನೇ ಪ್ರಾಜೆಕ್ಟ್ ಇಷ್ಟರಲ್ಲಿಯೇ ವಿವಿಧ ಪ್ರಾಧಿಕಾರಗಳ ಅನುಮೋದನೆ ಪಡೆದು ಮಾರಾಟಕ್ಕೆ ಲಭ್ಯವಿರಲಿವೆ. ಪ್ರತಿ ಚದರ ಅಡಿಗೆ 1,399 ರೂ.ಗಳಿಂದ ಆರಂಭಗೊಂಡು ವಿವಿಧ ದರದಲ್ಲಿ ನಿವೇಶನಗಳನ್ನು ಕಂಪನಿ ಮಾರಾಟ ಮಾಡುತ್ತಿದೆ. ಪಾರ್ಕ್, ಆಟದ ಮೈದಾನ ಮಾತ್ರವಲ್ಲದೇ ಅಗತ್ಯವಾಗಿರುವ ಎಲ್ಲ ಸೌಕರ್ಯಗಳನ್ನು ಒಳಗೊಂಡು ಅಭಿವೃದ್ಧಿಗೊಂಡಿರುವ ನಿವೇಶನಗಳನ್ನು ಕಂಪನಿ ಮಾರಾಟ ಮಾಡುತ್ತಿದೆ.

ಬಡಾವಣೆಗಳನ್ನು ವಿಭಿನ್ನವಾಗಿ ರೂಪಿಸುತ್ತೇವೆ. ವಾಸಯೋಗ್ಯಕ್ಕೆ ಮತ್ತು ಹೂಡಿಕೆ ಎರಡಕ್ಕೂ ಸೂಕ್ತವಾದ ಪ್ರಾಜೆಕ್ಟ್​ಗಳು ನಮ್ಮದಾಗಿವೆ. ನೆಮ್ಮದಿಯುತ ಜೀವನಕ್ಕೆ ನಮ್ಮ ಬಡಾವಣೆಗಳು ಹೆಚ್ಚು ಸೂಕ್ತ.

| ರವಿಕುಮಾರ್ ರಾಜೇಶ್ವರಿ ಆಶೀರ್ವಾದ್ ಇನ್ಪಾ› ಪ್ರೖೆ.ಲಿ.ಕಂಪನಿ ಎಂಡಿ

ವಿವರಕ್ಕೆ ಇಲ್ಲಿ ಸಂಪರ್ಕಿಸಿ

ಮೊ: 70226 33213, 70226 33208, 70226 33210

ವೆಬ್​ಸೈಟ್: www.aashirvad.net


ಭಗಿನಿಯಿಂದ ವಿಲ್ಲಾ ಕನಸು ಸಾಕಾರ

ಬೆಂಗಳೂರು: ವಿಲ್ಲಾಗಳು ಎಂದರೆ ಕಣ್ಮುಂದೆ ಬರುವುದು ಐಷಾರಾಮಿ ಮನೆಗಳು. ಇದರ ಬೆಲೆ ಕೋಟಿ ರೂ. ಮೀರುವಂತಿರುತ್ತದೆ ಎಂಬ ಭಾವನೆ. ಆದರೆ, ಭಗಿನಿ ಡೆವಲಪರ್ಸ್ ಕೈಗೆಟುಕುವ ದರದಲ್ಲಿ ವಿಲ್ಲಾ ಕನಸನ್ನು ಸಾಕಾರ ಮಾಡಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಮುಖ ಸ್ಥಳಗಳಲ್ಲಿ ಗ್ರಾಹಕರ ಇಚ್ಛೆಯಂತೆ ಅತಿ ಕಡಿಮೆ ಬೆಲೆಗೆ ವಿಸ್ತರಿಸಬಹುದಾದ ಸ್ವತಂತ್ರ ವಿಲ್ಲಾಗಳನ್ನು ಭಗಿನಿ ಡೆವಲಪರ್ಸ್ ನಿರ್ವಿುಸುತ್ತಿದೆ.

ಪ್ರತ್ಯೇಕ ಕಾಂಪೌಂಡ್ ಹಾಗೂ ಇತರೆ ಸೌಲಭ್ಯಗಳಿರá-ವ ವಿಲ್ಲಾಗಳನ್ನು ಗ್ರಾಹಕರಿಗೆ ಇಷ್ಟವಾಗುವಂತೆ ನಿರ್ಮಾಣ ಮಾಡಿ ಮಾರಾಟ ಮಾಡುವ (ಇಂಡಿಪೆಂಡೆಂಟ್, ಕಸ್ಟಮೈಜಬಲ್ ಹಾಗೂ ಎಕ್ಸ್​ಟೆಂಡೆಬಲ್) ಏಕೈಕ ಡೆವಲಪರ್ಸ್ ಕಂಪನಿ ಎಂಬ ಹೆಗ್ಗಳಿಕೆಯನ್ನು ಭಗಿನಿ ಹೊಂದಿದೆ. ಇದೇ ನೀತಿಯನ್ನು ನಿವೇಶನಗಳ ಅಭಿವೃದ್ಧಿಗೂ ಬಳಸಿಕೊಳ್ಳಲಾಗಿದೆ. ಹೀಗಾಗಿ ಭಗಿನಿ ಕಂಪನಿಯ ವಿಲ್ಲಾ ಹಾಗೂ ನಿವೇಶನಗಳು ಇತರೆ ರಿಯಾಲ್ಟಿ ಕಂಪನಿಗಳು ಅಭಿವೃದ್ಧಿಪಡಿಸಿದ ನಿವೇಶನ ಹಾಗೂ ವಿಲ್ಲಾಗಳಿಗಿಂತ ವಿಭಿನ್ನವಾಗಿವೆ.

ಹೊಸಕೆರೆಹಳ್ಳಿಯಲ್ಲಿ 50 ಫ್ಲ್ಯಾಟ್: ಹೊಸಕೆರೆಹಳ್ಳಿಯಲ್ಲಿ ಭಗಿನಿ ಡೆವಲಪರ್ಸ್ ಅಭಿವೃದ್ಧಿಪಡಿಸಿರುವ ಮಾರ್ಸ್ ಮೌಂಟ್ ಪ್ರಾಜೆಕ್ಟ್​ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭೂಮಾಲೀಕರ ಭಾಗದ 50 ಫ್ಲ್ಯಾಟ್ ಸದ್ಯ ಮಾರಾಟಕ್ಕೆ ಲಭ್ಯವಿದೆ. 50 ರಿಂದ 88 ಲಕ್ಷ ರೂ. ಮೌಲ್ಯದ 2ಬಿಎಚ್​ಕೆ ಹಾಗೂ 3ಬಿಎಚ್​ಕೆ ಫ್ಲ್ಯಾಟ್​ಗಳು ಗ್ರಾಹಕರಿಗಾಗಿ ಎದುರು ನೋಡುತ್ತಿವೆ. ರಸ್ತೆ, ನೀರು, ಒಳಚರಂಡಿ, ವಿದ್ಯುತ್ ಒಳಗೊಂಡಂತೆ ಎಲ್ಲ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗಿದೆ. ಚದರಡಿಗೆ 4,699 ರೂ. ಬೆಲೆಯ ವಿಶೇಷ ಆಫರ್ ಘೋಷಿಸಲಾಗಿದೆ.

3 ಹೊಸ ಪ್ರಾಜೆಕ್ಟ್ ಆರಂಭ: ಬೆಂಗಳೂರು-ಮೈಸೂರು ರಸ್ತೆ (ರಾಜರಾಜೇಶ್ವರಿ ಕಾಲೇಜ್ ಹಿಂಭಾಗ), ತುಮಕೂರು ರಾಷ್ಟ್ರೀಯ ಹೆದ್ದಾರಿ (ನೆಲಮಂಗಲದ ಸಮೀಪ) ಹಾಗೂ ಕನಕಪುರ ರಸ್ತೆಯಲ್ಲಿ ಸಿಗುವ ಕಗ್ಗಲಿಪುರದಲ್ಲಿ ಭಗಿನಿ ಡೆವಲಪರ್ಸ್ ಶೀಘ್ರ ಹೊಸ ಪ್ರಾಜೆಕ್ಟ್ ಆರಂಭಿಸಲಿದೆ. ಮೈಸೂರು ರಸ್ತೆಯಲ್ಲಿ 44 ಲಕ್ಷ ರೂ.ನಿಂದ ವಿಲ್ಲಾಗಳು ಆರಂಭವಾದರೆ, ನೆಲಮಂಗಲದಲ್ಲಿ 38ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

ಭಗಿನಿ ಡೆವಲಪರ್ಸ್ ನಿರ್ಮಾಣ ಮಾಡಿರುವ ವಿಲ್ಲಾಗಳನ್ನು ಭವಿಷ್ಯದಲ್ಲಿ ವಿಸ್ತರಣೆ ಮಾಡುವುದಕ್ಕೂ ಅವಕಾಶವಿದೆ. ಅಂದರೆ, ಸದ್ಯಕ್ಕೆ ನಿರ್ಮಾಣ ಮಾಡಿರುವ ಮನೆ, ಚಿಕ್ಕದೆನಿಸಿದಾದ, ಮಹಡಿಗಳನ್ನು ಹೆಚ್ಚಿಸಲು ಅನೂಕೂಲವಾಗುವಂತೆ ಪಿಲ್ಲರ್​ಗಳನ್ನು ನಿರ್ವಿುಸಲಾಗುತ್ತದೆ. ಇದರಿಂದ ಒಟ್ಟಾರೆ ಮೂರು ಮಹಡಿಗಳನ್ನು ನಿರ್ವಿುಸಲು ಸಾಧ್ಯವಾಗಲಿವೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಉನ್ನತ ಗುಣಮಟ್ಟ ಹಾಗೂ ದೀರ್ಘಕಾಲದ ಬಾಳಿಕೆಗೆ ಅನುಗುಣವಾಗಿ ಸಾಮಗ್ರಿ ಇನ್ನಿತರ ವಸ್ತುಗಳನ್ನು ಬಳಸಲಾಗುತ್ತದೆ.

6 ವರ್ಷದ ಅನುಭವ

ರಿಯಲ್​ಎಸ್ಟೇಟ್ ಉದ್ಯಮದಲ್ಲಿ ಭಗಿನಿ ಡೆವಲಪರ್ಸ್ 6 ವರ್ಷದ ಅನುಭವ ಹೊಂದಿದೆ. ಈಗಾಗಲೇ ಯಶಸ್ವಿಯಾಗಿ 12ಕ್ಕೂ ಅಧಿಕ ಪ್ರಾಜೆಕ್ಟ್​ಗಳನ್ನು ಮುಗಿಸುವ ಮೂಲಕ ನೂರಾರು ಕುಟುಂಬಕ್ಕೆ ಸ್ವಂತ ಮನೆಯ ಕನಸನ್ನು ಸಾಕಾರ ಮಾಡಿದೆ. ಇನ್ನು ವಿವಿಧ ಅಳತೆ, ವಿನ್ಯಾಸದಲ್ಲಿ ಉತ್ತಮ ದರಲ್ಲಿ ಭಗಿನಿ ಡೆವಲಪರ್ಸ್​ನಿಂದ ವಿಲ್ಲಾಗಳು ನಗರದಲ್ಲಿ ತಲೆಯೆತ್ತುತ್ತಿವೆ. ಭಗಿನಿ ಡೆವಲಪರ್ಸ್ ಗ್ರಾಹರಿಗೆ ನಿವೇಶನ ಆಯ್ಕೆಯ ಸ್ವಾತಂತ್ರ್ಯ ನೀಡಿದೆ. ಗ್ರಾಹಕರು ಸೈಟ್ ಪಡೆಯುವ ಜತೆಗೆ ಅವರೇ ನಿಂತು ತಮಗೆ ಬೇಕಾದ ರೀತಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಭಗಿನಿ ಡೆವಲಪರ್ಸ್ ಕಡೆಯಿಂದಲೇ ಗೃಹಪ್ರವೇಶದವರೆಗೂ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಹೆಚ್ಚಿನ ವಿವರಕ್ಕೆ ಮೊ. 9019529529 ಸಂಪರ್ಕಿಸಿ.


ಬೃಂದಾವನ ಪ್ರಾಪರ್ಟೀಸ್ ಪ್ರಾಜೆಕ್ಟ್​ಗಳಿಗೆ ಬೇಡಿಕೆ

ಬೆಂಗಳೂರು: ರಿಯಲ್​ಎಸ್ಟೇಟ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ 6 ವರ್ಷಗಳ ಅವಧಿಯಲ್ಲೇ 3 ಸಾವಿರಕ್ಕೂ ಅಧಿಕ ಗ್ರಾಹಕರನ್ನು ಹೊಂದುವ ಮೂಲಕ ಗಮನ ಸೆಳೆದಿರುವ ಬೃಂದಾವನ ಪ್ರಾಪರ್ಟೀಸ್ ಮತ್ತಷ್ಟು ಹೊಸ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ.

ತಾವರೆಕೆರೆಯಲ್ಲಿ 8 ಎಕರೆ ಪ್ರದೇಶದಲ್ಲಿ ನಿರ್ವಣಗೊಂಡಿರುವ ಬೃಂದಾವನ್ ಮಹಾಲಕ್ಷ್ಮೀ ಎನ್​ಕ್ಲೇವ್ ಬಡಾವಣೆಯಲ್ಲಿ 300 ನಿವೇಶನಗಳು ಮಾರಾಟಕ್ಕೆ ಸಜ್ಜುಗೊಂಡಿವೆ ಎಂದು ಬೃಂದಾವನ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಎಸ್. ಗೌಡ ತಿಳಿಸಿದ್ದಾರೆ. ನಿವೇಶನಗಳನ್ನು ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರ ನಿರೀಕ್ಷೆಯಂತೆ ಸೇವೆ ಒದಗಿಸುತ್ತಿರುವುದೇ ನಮ್ಮ ಕಂಪನಿಯ ಸಾಧನೆಗೆ ಕಾರಣವಾಗಿದೆ ಎಂದಿದ್ದಾರೆ.

ತಾವರೆಕೆರೆಯಲ್ಲಿ ಬೇಡಿಕೆ: ಸುಸಜ್ಜಿತ ರಸ್ತೆ, ವೈಜ್ಞಾನಿಕ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಒಳಗೊಂಡಿರುವ ಬೃಂದಾವನ ಮಹಾಲಕ್ಷ್ಮೀ ಎನ್​ಕ್ಲೇವ್​ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಅಭಿವೃದ್ಧಿ ಪೂರ್ವದಿಂದಲೂ ಬಡಾವಣೆಗೆ ಬೇಡಿಕೆಯಿತ್ತು. ಇದೀಗ ಸಂಪೂರ್ಣ ಅಭಿವೃದ್ಧಿಗೊಂಡಿರುವ ಬಡಾವಣೆಯಲ್ಲಿ ನಿವೇಶನಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಬೃಂದಾವನ ಪ್ರಾಪರ್ಟೀಸ್ ಹೊಂದಿದೆ.

ನಾವು ಯಾವುದೇ ಪ್ರಾಜೆಕ್ಟ್ ಕೈಗೆತ್ತಿ ಕೊಂಡರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ. ಅದೇ ಕಾರಣಕ್ಕಾಗಿ ಸಹಸ್ರಾರು ಗ್ರಾಹಕರನ್ನು ಹೊಂದಿದ್ದೇವೆ. ಬೆಂಗಳೂರಿನಲ್ಲಿ ದರ ಜಾಸ್ತಿ ಎಂಬ ಮಾತನ್ನು ಸುಳ್ಳಾಗಿಸಿ ಕಡಿಮೆ ದರದಲ್ಲಿ ಸೈಟ್ ಒದಗಿಸಬೇಕೆಂಬ ಆಸೆಯಿಂದಲೇ ಬಡಾವಣೆಗಳನ್ನು ನಿರ್ವಿುಸಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ತೋರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಾಜೆಕ್ಟ್​ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ದಿನೇಶ್ ಎಸ್. ಗೌಡ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಬಡಾವಣೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ನಿವೇಶನಗಳ ಖರೀದಿಗೆ ಬೃಂದಾವನ ಪ್ರಾಪರ್ಟೀಸ್ ಆಯ್ಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮತ್ತಷ್ಟು ಬಡಾವಣೆ ಅಭಿವೃದ್ಧಿ

ಕನಕಪುರ ರಸ್ತೆಯಲ್ಲಿ 14 ಎಕರೆಯಲ್ಲಿ ಬೃಂದಾವನ ಮಿಡೋಸ್ ಬಡಾವಣೆ ನಿರ್ವಿುಸಿದ್ದು, 400ಕ್ಕೂ ಅಧಿಕ ನಿವೇಶನಗಳಿವೆ. ಎಲ್ಲ ಅಳತೆಯ ನಿವೇಶನಗಳು ಲಭ್ಯವಿದ್ದು, ಭವಿಷ್ಯದಲ್ಲಿ ಮತ್ತಷ್ಟು ನಿವೇಶನಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಕಂಪನಿ ಹೊಂದಿದೆ. ನೆಲಮಂಗಲದಲ್ಲಿ ರಿಯಲ್​ಎಸ್ಟೇಟ್ ಕ್ಷೇತ್ರ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಸ್ಥಳ ಗುರುತಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ವಿವಿಧೆಡೆಯೂ ಹೊಸದಾಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ಗುರಿಯಿದೆ. ಈಗಲೂ ಪ್ರತಿ ಚದರ ಅಡಿಗೆ ಕನಿಷ್ಠ 600 ರೂ. ದರದಲ್ಲಿ ನಿವೇಶನ ನೀಡಲಾಗುತ್ತಿದೆ ಎಂದು ದಿನೇಶ್ ಎಸ್. ಗೌಡ ತಿಳಿಸಿದ್ದಾರೆ.

ಬೃಂದಾವನ ಪ್ರಾಪರ್ಟೀಸ್ ಕಳೆದ ಆರು ವರ್ಷಗಳಲ್ಲಿ 13ಕ್ಕೂ ಹೆಚ್ಚು ಯೋಜನೆಗಳನ್ನು ನಿರ್ವಹಿಸಿದೆ. ಹೂಡಿಕೆ ಮತ್ತು ವಾಸಯೋಗ್ಯಕ್ಕೆ ಅಗತ್ಯವಾಗಿರುವ ಯೋಜನೆಗಳು ನಮ್ಮದಾಗಿರುವುದರಿಂದ ಬೇಡಿಕೆಯೂ ಹೆಚ್ಚಿದೆ.

|ದಿನೇಶ್ ಎಸ್. ಗೌಡ ಬೃಂದಾವನ ಪ್ರಾಪರ್ಟಿಸ್ ಎಂಡಿ

ಮಾಹಿತಿಗೆ ಇಲ್ಲಿ ಸಂಪರ್ಕಿಸಿ

ಮೊ: 76763 62826

ವೆಬ್​ಸೈಟ್: www.brundavanproperties.com


29 ರೂ.ಗಳಿಗೆ ಒಂದು ಚದರಡಿ ಕೃಷಿ ಭೂಮಿ!

ಬೆಂಗಳೂರು: ಇದು ರಿಯಲ್​ಎಸ್ಟೇಟ್ ಕ್ಷೇತ್ರದಲ್ಲಿ 7 ದಶಕಗಳ ಸುದೀರ್ಘ ಅನುಭವ ಹೊಂದಿರುವ ಯುಆರ್​ಐ ಗ್ರೂಪ್ ಘೋಷಿಸಿರುವ ಕೊಡುಗೆ.

ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಯುಆರ್​ಐ ಗ್ರೂಪ್ ಈ ಬಾರಿಯ ದಸರಾ ಸಂಭ್ರಮ ಹೆಚ್ಚಿಸಿದೆ. ನಂಜನಗೂಡಿನಲ್ಲಿ ಸಾವಿರ ಎಕರೆ ಕೃಷಿ ಭೂಮಿ ಯೋಜನೆಯನ್ನು ಪ್ರಾರಂಭಿಸಿದ್ದು, ಇಲ್ಲಿ 20 ಗುಂಟೆಯಿಂದ 1 ಎಕರೆವರೆಗೆ ಭೂಮಿ ಲಭ್ಯವಿದೆ.

ಟಿ.ನರಸೀಪುರ ರಸ್ತೆಯಲ್ಲಿ ಕೃಷಿ ಭೂಮಿ ಯೋಜನೆ ಯುಆರ್​ಐ, ಎನ್​ಆರ್​ಐ ಗ್ರೂಪ್ ಜಂಟಿಯಾಗಿ ಕೈಗೆತ್ತಿಕೊಂಡಿದೆ. ಈ ಜಾಗದಲ್ಲಿ ಸಂಸ್ಥೆ ಪ್ರತಿ ಎಕರೆಗೆ 1 ಸಾವಿರ ಟೀಕ್, ಹೆಬ್ಬೇವು, ಸಿಲ್ವರ್ ಗಿಡಗಳನ್ನು ನೆಡಲಿದೆ. ಖರೀದಿಸಿದ ಜಾಗಕ್ಕೆ ಬೇಲಿ ಹಾಗೂ ಗೇಟ್, ನೀರಿನ ವ್ಯವಸ್ಥೆಯನ್ನೂ ಮಾಡಲಿದೆ. ಪ್ರತಿ ಎಕರೆಗೆ 5 ಸಾವಿರ ಅಡಿ ಮನೆ ಕಟ್ಟಲು ಜಾಗ ಮೀಸಲಿರಿಸಲಾಗಿದೆ. 1949ರಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯೂನಿವರ್ಸಲ್ ಹೆಲ್ತ್ ಕೇರ್ ಫುಡ್ಸ್ (ಯುಎಚ್​ಎಫ್ ನಂದಿ)ಯ ಸಹ ಸಂಸ್ಥ್ಥೆಯಾಗಿ ಯುಆರ್​ಐ ಗ್ರೂಪ್ ಬೆಳೆದು ಬಂದಿದೆ. 1949ರಲ್ಲಿ ಗಂಗಾರಾಮ್ ಗೋಕುಲ್ ಸಿಂಗ್ ಯುಆರ್​ಐ ಗ್ರೂಪ್ ಪ್ರಾರಂಭಿಸಿದರು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯಂತ ಸುದೀರ್ಘ ಅನುಭವ ಹೊಂದಿರುವ ಸಂಸ್ಥೆಯಾಗಿ ಯುಆರ್​ಐ ಗ್ರೂಪ್ ಗುರುತಿಸಿಕೊಂಡಿದೆ.

ಹತ್ತಾರು ಯೋಜನೆಗಳು: ಬಾಗೇಪಲ್ಲಿ ಬಳಿಯ ಇರಾಪುರ, ಲಕ್ಷ್ಮೀಪುರ ಪ್ರದೇಶದಲ್ಲಿ 5 ಸಾವಿರ ನಿವೇಶಗಳನ್ನು ಯುಆರ್​ಐ ಗ್ರೂಪ್ ನಿರ್ವಿುಸಿದೆ. ಕೇವಲ 1ರಿಂದ 2 ಲಕ್ಷ ರೂ. ಗೆ ಈ ನಿವೇಶನಗಳು ಲಭ್ಯವಾಗಿದೆ. ಚಿಕ್ಕಬಳ್ಳಾಪುರದಲ್ಲಿ 50 ಎಕರೆ, ಗೌರಿಬಿದನೂರು ರೈಲ್ವೆ ಸ್ಟೇಷನ್ ಬಳಿ 50 ಎಕರೆ, ಹುಣಸೂರು ಬಳಿ 25 ಎಕರೆಯಲ್ಲಿ ಲೇಔಟ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎನ್​ಆರ್​ಐ ಗ್ರೂಪ್ ಕೂಡಾ ನೆಲಮಂಗಲ, ಮೈಸೂರು ರಸ್ತೆ ತಾವರಕೆರೆ ಸೇರಿ ಬೆಂಗಳೂರಿನಲ್ಲಿ ಬಿಎಂಆರ್​ಡಿಎ ಒಪ್ಪಿಗೆ ಪಡೆದ ಯೋಜನೆಗಳನ್ನು ಪ್ರಾರಂಭಿಸಿದ್ದು, 12-15 ಲಕ್ಷ ರೂ.ಬೆಲೆಗೆ ಸೈಟ್​ಗಳು ಲಭ್ಯವಿವೆೆ.

ಸಾಲ ಸೌಲಭ್ಯ

ಯುಆರ್​ಐ ಗ್ರೂಪ್ ಶಿರಡಿ ಶ್ರೀ ಸಾಯಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನೂ ಆರಂಭಿಸಿದ್ದು, ಎಲ್ಲ ಯೋಜನೆಗಳಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯವೂ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲೂ ಯುಆರ್​ಐ ಗ್ರೂಪ್ ತೊಡಗಿಸಿಕೊಂಡಿದೆ. ಶಿರಡಿ ಶ್ರೀ ಸಾಯಿ ಚಾರಿಟಬಲ್ ಟ್ರಸ್ಟ್ ಮುಖಾಂತರ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆ ಕಲ್ಪಿಸುತ್ತಿದೆ.

10 ಸಾವಿರ ಸಂತೃಪ್ತ ಗ್ರಾಹಕರನ್ನು ಯುಆರ್​ಐ ಗ್ರೂಪ್ ಹೊಂದಿದೆ. 1 ಲಕ್ಷ ಜನಕ್ಕೆ ನಿವೇಶನಗಳನ್ನು ಮಾಡಿ ಕೊಡಬೇಕು, ಬಡ ಹಾಗೂ ಮದ್ಯಮ ವರ್ಗದ ಜನರಿಗೂ ನಿವೇಶನ ದೊರೆಯಬೇಕು ಎನ್ನುವುದು ನಮ್ಮ ಗುರಿ.

| ಗೋಕುಲ್ ಕೃಷ್ಣ ಸಿಂಗ್ ಎಂಡಿ, ಯುಆರ್​ಐ ಗ್ರೂಪ್.

ವಿಳಾಸ

ಯುಆರ್​ಐ ಗ್ರೂಪ್ 1089, 8ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ವಿಜಯನಗರ, ಬೆಂಗಳೂರು-40.

(ಮೆಡ್​ಪ್ಲಸ್ ಎದುರು) ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845186117

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...