ಪ್ರಾಪರ್ಟಿ ಎಕ್ಸ್​ಪೋ ಅವಕಾಶಗಳ ಆಗರ

ಒಂದೇ ಸೂರಿನಡಿ ಆಸ್ತಿ ಕೊಳ್ಳುವವರು ಹಾಗೂ ಮಾರಾಟ ಮಾಡುವವರಿಗೆ ‘ವಿಜಯವಾಣಿ’ ಪತ್ರಿಕೆ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸುತ್ತಿರುವ ಪ್ರಾಪರ್ಟಿ ಎಕ್ಸ್ ಪೋ-2019 ಅವಕಾಶಗಳ ಬಾಗಿಲನ್ನೇ ತೆರೆದಿದೆ. ಪ್ರಾಪರ್ಟಿ ಎಕ್ಸ್​ಪೋ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಇಂದು ಮತ್ತು ನಾಳೆ ನಡೆಯಲಿದೆ.

ಎಲ್ಲ ವರ್ಗದ ಗ್ರಾಹಕರಿಗೆ ಇಷ್ಟವಾಗುವಂಥ ಯೋಜನೆಗಳು ಇರಲಿವೆ. 20ಕ್ಕೂ ಅಧಿಕ ಬಿಲ್ಡರ್​ಗಳು ಎಕ್ಸ್ ಪೋದಲ್ಲಿ ಭಾಗಿಯಾಗಿ ತಮ್ಮ ಯೋಜನೆಗಳ ಪ್ರದರ್ಶನ ಹಾಗೂ ಮಾಹಿತಿ ನೀಡಲಿದ್ದಾರೆ. ರೇರಾದಿಂದ ಅನುಮೋದನೆ ಗೊಂಡಿರುವ 200ಕ್ಕೂ ಅಧಿಕ ಯೋಜನೆಗಳು, ನಿವೇಶನ, ಅಪಾರ್ಟ್​ವೆುಂಟ್, ಮನೆ, ವಿಲ್ಲಾ, ಫಾಮ್ರ್ ಹೌಸ್, ಫಾಮರ್್​ಲ್ಯಾಂಡ್​ಗಳ ಪ್ರದರ್ಶನ ನಡೆಯಲಿದೆ. -ಠಿ; 2.5 ಲಕ್ಷದಿಂದ ಆರಂಭವಾಗಿ 17 ಲಕ್ಷ ರೂಪಾಯಿವರೆಗಿನ ಮೌಲ್ಯದ ನಿವೇಶನಗಳು ಇವೆ.

ಬೆಂಗಳೂರು ಹೊರ ವಲಯ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಯಲಹಂಕ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಜಿಗಣಿ, ದೊಡ್ಡಬಳ್ಳಾಪುರ, ಬಿಡದಿ ಸೇರಿದಂತೆ ಇತರ ಕಡೆಗಳಲ್ಲಿ ನಿರ್ವಣವಾಗಿರುವ ಬಡಾವಣೆ, ಮನೆ, ಅಪಾರ್ಟ್​ವೆುಂಟ್, ಫಾಮರ್್​ಹೌಸ್, ಫಾಮರ್್​ಲ್ಯಾಂಡ್​ಗಳ ಮಾಹಿತಿಯ ಮಹಾಪೂರವೇ ಗ್ರಾಹಕರಿಗೆ ಒಂದೇ ವೇದಿಕೆಯಲ್ಲಿ ದೊರೆಯಲಿದೆ.

2 ತಾಸಿಗೊಮ್ಮೆ ಚಿನ್ನ ಗೆಲ್ಲುವ ಅವಕಾಶ

2 ದಿನ ನಡೆಯುವ ರಿಯಲ್ ಎಸ್ಟೇಟ್ ಎಕ್ಸ್​ಪೋದಲ್ಲಿ ಪ್ರತಿ 2 ಗಂಟೆಗೊಮ್ಮೆ ಚಿನ್ನ ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ. ರಿಯಾಲ್ಟಿ ಮೇಳದಲ್ಲಿ ಭಾಗವಹಿಸುವ ಗ್ರಾಹಕರು ತಮಗೆ ಇಷ್ಟವಾದ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡರೆ ಅವರಿಗೆ ಚಿನ್ನ ಗೆಲ್ಲುವ ಅಭೂತಪೂರ್ವ ಅವಕಾಶ ನೀಡಲಾಗಿದೆ.

ಉಚಿತ ಪ್ರವೇಶ

ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯುವ 2 ದಿನಗಳ ಪ್ರಾಪರ್ಟಿ ಎಕ್ಸ್​ಪೋಗೆ ಗ್ರಾಹಕರಿಗೆ ಉಚಿತ ಪ್ರವೇಶ ಲಭ್ಯ ಇದೆ. ರ್ಪಾಂಗ್ ಸೌಲಭ್ಯ ಕೂಡ ಇದೆ. ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು.

ಎಕ್ಸ್​ಪೋ ಮುಗಿದ ನಂತರ ನಿವೇಶನ ವೀಕ್ಷಣೆ

ರಿಯಾಲ್ಟಿ ಮೇಳಕ್ಕೆ ಭೇಟಿ ನೀಡುವ ಗ್ರಾಹಕರು ತಮಗೆ ಇಷ್ಟವಾದ ಯೋಜನೆ ವೀಕ್ಷಣೆಗೆ ಮುಂದಾದರೆ ಅವರಿಗೆ ಯೋಜನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಮೇಳದಲ್ಲಿ ಗ್ರಾಹಕರು ಕಂಪನಿಗೆ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನೀಡಿದರೆ ಮೇಳ ಮುಗಿದ ನಂತರ ಸ್ಥಳಕ್ಕೆ ತೆರಳಿ ವೀಕ್ಷಣೆ ಮಾಡಬಹುದು. ಕೆಲವು ಕಂಪನಿಗಳು ಮೇಳದಿಂದಲೇ ನೇರವಾಗಿ ಯೋಜನೆ ಸ್ಥಳಕ್ಕೆ ತೆರಳಿ ಗ್ರಾಹಕರಿಗೆ ತೋರಿಸುವ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿವೆ. ಕಂಪನಿ ತಮ್ಮ ವಾಹನದಲ್ಲಿ ಗ್ರಾಹಕರನ್ನು ಮನೆಯಿಂದ ಕರೆದುಕೊಂಡು ಹೋಗಿ ಯೋಜನೆ ವೀಕ್ಷಣೆ ಮಾಡಿದ ನಂತರ ಮತ್ತೆ ಮನೆಗೆ ಹಿಂದಿರುಗಿಸುವ ವ್ಯವಸ್ಥೆ ಮಾಡಿವೆ.

ಎಕ್ಸ್​ಪೋದಲ್ಲಿ ಭಾಗಿಯಾಗುವ ರಿಯಾಲ್ಟಿ ಕಂಪನಿಗಳು: ಎಕ್ಸ್​ಪೋಗೆ ನಗರದ ಹೆಸರಾಂತ ಆಸ್ಥಾ ಪ್ರಾಪರ್ಟೀಸ್ ಪ್ರಸ್ತುತಿ ಇದೆ. ಕಂಪನಿಯ ಹಲವಾರು ಪ್ರಾಜೆಕ್ಟ್ ಗಳು ಎಕ್ಸ್​ಪೋದಲ್ಲಿ ಪ್ರದರ್ಶನಗೊಳ್ಳಲಿವೆ. ಜತೆಗೆ, ಬೃಂದಾವನ್ ಪ್ರಾಪರ್ಟೀಸ್, ಟ್ರಿಂಕೋ ಇನ್ಪಾ› ಪ್ರೖೆವೇಟ್ ಲಿಮಿಟೆಡ್, ಶ್ರೀ ದತ್ತಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಶ್ರೀಧಾತ್ರಿ, ಕೆಎನ್​ಎಸ್ ಇನ್ಪಾ› ಎಸ್​ಎಸ್​ಡಿಪಿ, ಶ್ರೀಗುರು ಪ್ರಾಪರ್ಟೀಸ್, ಭಗಿನಿ ಡೆವಲಪರ್ಸ್, ಡಿಎಸ್ ಮ್ಯಾಕ್ಸ್, ಗೋಲ್ಡನ್ ಪಾಮ್್ಸ, ಕಾವೇರಿ ಇನ್ಪಾ› ಪ್ರಾಜೆಕ್ಟ್, ಆಶೀರ್ವಾದ್, ಎ.ಬಿ ಪ್ರಾಪರ್ಟೀಸ್, ಶರಣ್ಯ ಫಾಮ್್ಸರ್ ಬಿಲ್ವಾ ಪ್ರಾಪರ್ಟೀಸ್ ಮತ್ತು ಡೆವಲಪರ್ಸ್, ಎಟಿಝುಡ್ ಪ್ರಾಪರ್ಟೀಸ್, ಪ್ರಾವಿಡೆಂಟ್, ಸುಭೋದಯ ವೆಂಚರ್ಸ್ ಅರ್ಯನ್ ಡೆವಲಪರ್ಸ್ ಮತ್ತು ಪ್ರಾಪರ್ಟೀಸ್ ಕಂಪನಿಗಳ ಸ್ಟಾಲ್​ಗಳು ಇರಲಿವೆ.

ಕಳೆದ ಬಾರಿ ಮೊದಲ ದಿನವೇ 50 ನಿವೇಶನ ಬುಕ್ಕಿಂಗ್: ಕಳೆದ ಬಾರಿ ನಡೆದ ಪ್ರಾಪರ್ಟಿ ಮೇಳದಲ್ಲಿ ಮೊದಲ ದಿನದ ಕೆಲವೇ ತಾಸುಗಳಲ್ಲಿ 50 ಮಂದಿ ಗ್ರಾಹಕರು ಮಾಹಿತಿ ಪಡೆದು ಇಷ್ಟವಾದ ಯೋಜನೆ ಬುಕ್ಕಿಂಗ್ ಮಾಡಿದ್ದರು. ನಂತರ ಅವರು ಸ್ಥಳಕ್ಕೆ ತೆರಳಿ ವೀಕ್ಷಣೆ ನಡೆಸಿ ದಾಖಲೆ ಪರಿಶೀಲಿಸಿ ನಿವೇಶನಗಳನ್ನು ಖರೀದಿಸಿದ್ದಾರೆ ಎಂದು ಕಂಪನಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಈ ಬಾರಿ ಕೂಡ ಗ್ರಾಹಕರು ಮಾಹಿತಿ ಪಡೆದು ವೇಗವಾಗಿ ಬುಕ್ಕಿಂಗ್ ಮಾಡಲಿದ್ದಾರೆ ಎಂಬ ನಿರೀಕ್ಷೆಯನ್ನು ರಿಯಾಲ್ಟಿ ಕಂಪನಿಗಳು ಹೊಂದಿವೆ.

ಫಾಮ್ರ್ ಲ್ಯಾಂಡ್ ಹಾಗೂ ಹೌಸ್​ಗಳಿಗೆ ಬೇಡಿಕೆ: ಗ್ರಾಹಕರ ಅಭಿರುಚಿಗೆ ತಕ್ಕಂತೆ ರಿಯಾಲ್ಟಿ ಕ್ಷೇತ್ರ ಕೂಡ ಬದಲಾಗಿದೆ. ಸುಂದರ ಪರಿಸರ ಹೊಂದಿರುವ ಪ್ರದೇಶಗಳಲ್ಲಿ ಫಾಮ್ರ್, ರೆಸಾರ್ಟ್ ಲ್ಯಾಂಡ್ ಹಾಗೂ ಹೌಸ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಈ ವರ್ಗದ ಗ್ರಾಹಕರನ್ನು ತಣಿಸಲು ಕೆಲವು ರಿಯಾಲ್ಟಿ ಕಂಪನಿಗಳು ಮುಂದಾಗಿ ಯೋಜನೆ ರೂಪಿಸಿವೆ. ಮೇಳದಲ್ಲಿ ಅವುಗಳನ್ನು ಪ್ರದರ್ಶಿಸಲು ಮುಂದಾಗಿವೆ.ಮೈಸೂರು, ಕುಶಾಲನಗರ, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಈ ರೀತಿಯ ಯೋಜನೆಗಳು ನಿರ್ವಣಗೊಂಡಿವೆ.ವಿಜಯವಾಣಿ ನಡೆಸುವ ಪ್ರಾಪರ್ಟಿ ಎಕ್ಸ್​ಪೋ ಜನಪ್ರಿಯವಾಗಿದೆ. ಕಾರಣ ಮೋಸ ಹೋಗುವ ಭಯ ಇಲ್ಲ ಎಂಬುದು ಗ್ರಾಹಕರ ಅನಿಸಿಕೆ. ಮೋಸ ಮಾಡುವ ಯಾವುದೇ ಬಿಲ್ಡರ್​ಗಳು ಪಾಲ್ಗೊಳ್ಳಲು ಸಾಧ್ಯವಿಲ್ಲ. ಎಲ್ಲ ಕಂಪನಿಗಳು ನೈಜವಾಗಿರುತ್ತವೆ ಎಂಬುದು ಗ್ರಾಹಕರ ನಂಬಿಕೆ.

ಕಳೆದ ಬಾರಿಯೂ ಭಾರಿ ಯಶಸ್ಸು ಕಂಡ ಎಕ್ಸ್​ಪೋ

ಕಳೆದ ವರ್ಷ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆದ ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋದಲ್ಲಿ 50 ರಿಯಾಲ್ಟಿ ಕಂಪನಿಗಳು ಪಾಲ್ಗೊಂಡಿದ್ದವು.

ಮೂರು ದಿನಗಳ ಕಾಲ ನಡೆದ ಮೇಳದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಗ್ರಾಹಕರು ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಅಲ್ಲದೆ ವಿವಿಧ ಪ್ರಮುಖ ಬ್ಯಾಂಕುಗಳ ಸ್ಟಾಲ್​ಗಳು ಇದ್ದವು. ಯೋಜನೆಗಳಿಗೆ ದೊರೆಯುವ ಸಾಲ ಸೌಲಭ್ಯದ ಬಗ್ಗೆ ಗ್ರಾಹಕರು ಮಾಹಿತಿ ಪಡೆದರು.

ರಿಯಲ್ ಎಸ್ಟೇಟ್ ಪ್ರಾಪರ್ಟಿ ಎಕ್ಸ್​ಪೋ ಕಾರ್ಯಕ್ರಮದ ಉದ್ಘಾಟನೆಗೆ ನಮ್ಮ ‘ಪಂಚತಂತ್ರ’ ಚಿತ್ರತಂಡದ ಜತೆ ನಾನು ಭಾಗವಹಿಸುತ್ತಿದ್ದೇನೆ. ನೀವೂ ಪಾಲ್ಗೊಂಡು ನಿಮ್ಮ ಪ್ರಾಪರ್ಟಿ ಕನಸನ್ನು ಸಾಕಾರ ಮಾಡಿಕೊಳ್ಳಿ.

| ಸೋನಲ್ ಮೊಂತೆರೋ ನಟಿ

ನಿವೇಶನಗಳಿಗೆ ಅಧಿಕ ಬೇಡಿಕೆ

ವಿಜಯವಾಣಿ ಇಲ್ಲಿಯವರೆಗೆ ನಡೆಸಿದ ಪ್ರಾಪರ್ಟಿ ಎಕ್ಸ್ ಪೋಗಳಲ್ಲಿ ಗ್ರಾಹಕರು ನಿವೇಶನಗಳ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಅಪಾರ್ಟ್​ವೆುಂಟ್, ಫಾಮರ್್​ಹೌಸ್ ಕಡೆ ಗಮನ ಹರಿಸಿದ್ದಾರೆ. ಇದನ್ನು ಅರಿತಿರುವ ರಿಯಾಲ್ಟಿ ಕಂಪನಿಗಳು ಬಡಾವಣೆಗಳ ಬಗ್ಗೆ ಮಾಹಿತಿ ನೀಡಿ ಮಾರಾಟ ಮಾಡಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ನಿವೃತ್ತರೇ ಅಧಿಕ

ರಿಯಾಲ್ಟಿ ಮೇಳದಲ್ಲಿ ನಿವೃತ್ತಿ ಹೊಂದಿರುವವರು ಅಧಿಕವಾಗಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಖಾಸಗಿ, ಸರ್ಕಾರಿ ಕಂಪನಿಗಳ ನಿವೃತ್ತ ನೌಕರರು, ನಿವೃತ್ತ ನ್ಯಾಯಮೂರ್ತಿಗಳು, ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ನೀಡಿ ಮಾಹಿತಿ ಪಡೆದು ನಿವೇಶನ ಖರೀದಿಸಿದ್ದಾರೆ. ನಿವೃತ್ತಿ ಹಣದಲ್ಲಿ ಮಕ್ಕಳಿಗೆ, ಅಳಿಯಂದಿರು ಹಾಗೂ ಇತರರಿಗೆ ನಿವೇಶನಗಳನ್ನು ಉಡುಗೊರೆ ನೀಡಲು ಎಕ್ಸ್​ಪೋಗೆ ಆಗಮಿಸಿದ್ದು ವಿಶೇಷವಾಗಿದೆ.

ಪಂಚತಂತ್ರ ತಂಡ ಉಪಸ್ಥಿತಿ

ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಪ್ರಾಪರ್ಟಿ ಎಕ್ಸ್​ಪೋ ಉದ್ಘಾಟಿಸಲಿದ್ದಾರೆ. ನಟಿ ಸೋನಲ್ ಮೊಂತೆರೋ, ನಟ ವಿಹಾನ್ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಎಕ್ಸ್​ಪೋ ನಡೆಯಲಿದೆ.

ಲಕ್ಷ ಮಂದಿ ಗ್ರಾಹಕರ ನಿರೀಕ್ಷೆ

ಈ ಬಾರಿ ನಡೆಯುವ 2 ದಿನಗಳ ಪ್ರಾಪರ್ಟಿ ಮೇಳಾಕ್ಕೆ ಲಕ್ಷಕ್ಕೂ ಅಧಿಕ ಮಂದಿ ಗ್ರಾಹಕರು ಭೇಟಿ ನೀಡುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ರಿಯಾಲ್ಟಿ ಕಂಪನಿಗಳು ತಮ್ಮ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಲು ದೊಡ್ಡ ಟಿವಿಗಳನ್ನು ಅಳವಡಿಸಿ ಅದರಲ್ಲಿ ಪ್ರಸಾರ ಮಾಡಿ ಮಾಹಿತಿ ನೀಡಲು ಮುಂದಾಗಿದ್ದಾರೆ. ಶನಿವಾರ ವಾರಾಂತ್ಯ ರಜೆ ಹಾಗೂ ಭಾನುವಾರ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಅಧಿಕ ಮಂದಿ ಗ್ರಾಹಕರು ಭೇಟಿ ನೀಡುವ ನಿರೀಕ್ಷೆ ಇದೆ.