Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ನೀವೂ ಆಗಿ ಡಬ್​ಸ್ಮ್ಯಾಶ್​ ಸ್ಟಾರ್!

Saturday, 11.08.2018, 3:04 AM       No Comments

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಡಬ್​ಸ್ಮ್ಯಾಶ್​​ನದ್ದೇ ಕ್ರೇಜ್. ಅದಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು. ಇಷ್ಟದ ಸಿನಿಮಾ ಹಾಡಿಗೆ, ನೆಚ್ಚಿನ ನಟ ಹೇಳಿದ ಸಿನಿಮಾ ಡೈಲಾಗ್​ಗೆ ಲಿಪ್​ಸಿಂಕ್ ಮಾಡಿಯೇ ಸ್ಟಾರ್ ಆದವರೂ ಕಣ್ಣಮುಂದೆಯೇ ಇದ್ದಾರೆ. ಹಾಗಾದರೆ ನೀವು ಡಬ್​ಸ್ಮಾ್ಯಶ್ ಸ್ಟಾರ್ ಆಗಬೇಕಾ? ನಿಮ್ಮಲ್ಲಿ ಅಂಥ ಪ್ರತಿಭೆ ಇದೆಯಾ? ಮತ್ತೇಕೆ ತಡ, ಆಡಿಷನ್ ಕೊಟ್ಟು ರಿಯಾಲಿಟಿ ಶೋಗೆ ಹಾಜರಾಗಿ!

ಹೌದು, ಕನ್ನಡಿಗರ ಧ್ವನಿಯಾಗಿರುವ ನಿಮ್ಮ ದಿಗ್ವಿಜಯ 24ಗಿ7 ನ್ಯೂಸ್, ಕನ್ನಡ ಟಿವಿ ಮಾಧ್ಯಮದಲ್ಲೇ ಮೊಟ್ಟಮೊದಲ ಬಾರಿಗೆ ‘ಡಬ್​ಸ್ಮ್ಯಾಶ್ ಚಾಲೆಂಜ್’ ರಿಯಾಲಿಟಿ ಶೋ ಆರಂಭಿಸಲಿದೆ. ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ಡಬ್​ಸ್ಮ್ಯಾಶ್ ಕಲೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ವಾಹಿನಿ ರೂಪಿಸಿದೆ. ಈ ಶೋಗೆ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಮಹಾ ತೀರ್ಪಗಾರರಾಗಿದ್ದು, ಡಬ್​ಸ್ಮ್ಯಾಶ್ ಸ್ಟಾರ್​ಗಳಾದ ಯುವ ಜೋಡಿ ಅಲ್ಲು ರಘು ಹಾಗೂ ಸುಶ್ಮಿತಾ ಜಡ್ಜ್​ಗಳಾಗಿರುತ್ತಾರೆ. ಡಬ್​ಸ್ಮ್ಯಾಶ್ ಚಾಲೆಂಜ್​ನಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಇದೇ ಭಾನುವಾರ (ಆ.12) ಬೆಂಗಳೂರಿನಲ್ಲಿ ಆಡಿಷನ್ ಕರೆಯಲಾಗಿದೆ. ಬೆಳಗ್ಗೆ 9ಕ್ಕೆ ಆಡಿಷನ್ ಆರಂಭವಾಗಲಿದ್ದು, ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗಳನ್ನು ಕಾರ್ಯಕ್ರಮದ ತೀರ್ಪಗಾರರು ಅಂತಿಮ ಹಂತಕ್ಕೆ ಆಯ್ಕೆ ಮಾಡಲಿದ್ದಾರೆ. ಆಡಿಷನ್​ನಲ್ಲಿ ಭಾಗವಹಿಸುವುದಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ಡಬ್​ಸ್ಮ್ಯಾಶ್​ನಲ್ಲಿ ಪ್ರತಿಭೆ ತೋರಿಸಲು ಆಸಕ್ತಿ ಇರುವವರಿಗೆಲ್ಲ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ.

ಆಡಿಷನ್ ಎಲ್ಲಿ?

ಬೆಂಗಳೂರಿನ ಕಾಪೋರೇಷನ್ ಸರ್ಕಲ್ ಬಳಿಯ ಬಿಬಿಎಂಪಿ ಕಚೇರಿಯ ನೌಕರರ ಸಂಘದ ಸಭಾಂಗಣದಲ್ಲಿ ಆ.12ರ ಬೆಳಗ್ಗೆ 9ರಿಂದ ‘ಡಬ್​ಸ್ಮ್ಯಾಶ್ ಚಾಲೆಂಜ್’ ಆಡಿಷನ್ ನಡೆಯಲಿದೆ.

Leave a Reply

Your email address will not be published. Required fields are marked *

Back To Top