17.7 C
Bengaluru
Wednesday, January 22, 2020

ಸಾಮರ್ಥ್ಯ, ಅವಕಾಶ ಗುರುತಿಸಿಕೊಂಡರೆ ಏಳಿಗೆ

Latest News

ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ತೂಕ ಬಿಟ್ಟು ಎಲ್ಲವೂ ಓಕೆ

ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ...

ಅಂಧರಿಗೆ ವರದಾನ ಆ್ಯನಿ

ಅಂಧರಿಗಾಗಿ ಬ್ರೖೆಲ್ ಲಿಪಿ ಇದ್ದರೂ, ಇಡೀ ತರಗತಿಯ ಮಕ್ಕಳಿಗೆ ಒಟ್ಟಿಗೇ ಹೇಳಿಕೊಡುವುದು ಶಿಕ್ಷಕರಿಗೆ ಸವಾಲಿನ ಕೆಲಸವೇ ಸರಿ. ಒಬ್ಬ ವಿದ್ಯಾರ್ಥಿ ಐದು ನಿಮಿಷಗಳಷ್ಟೇ...

ರೈತರಿಗೆ ತಟ್ಟಿದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ

ಶ್ರೀಕಾಂತ್ ಅಕ್ಕಿ ಬಳ್ಳಾರಿ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ ಈಗ ರಾಜ್ಯದ ಭತ್ತ ಬೆಳೆಗಾರರಿಗೂ...

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಪಂಕ್ಚರ್​ ಹಾಕುತ್ತಿದ್ದವರ ಮೇಲೆ ಲಾರಿ ಹರಿದು ಮೂವರು ಸಾವು

ಬೀದರ್: ಲಾರಿ ಹರಿದು ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೀದರ್ ತಾಲೂಕಿನ ರಾಷ್ಟೀಯ ಹೆದ್ದಾರಿ 09ರ ಮಿನಕೇರಾ ಕ್ರಾಸ್ ಬಳಿ ಬುಧವಾರ ನಸುಕಿನ...

ಕೈ ಕಿತ್ತಾಟ ತೀವ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಪಕ್ಷದ ಎರಡು ಬಣಗಳ ನಡುವೆ ಹಲವು ವಾರಗಳಿಂದ ನಡೆಯುತ್ತಿರುವ ಶೀತಲ ಸಮರ ತೀವ್ರಗೊಂಡಿದ್ದು, ತಮಗೆ ಸಿಗದ್ದು...

ಸಾವಿರಾರು ಮಂದಿ ಯುವಕ, ಯುವತಿಯರು ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳದೆ, ಅವಮಾನ ಮತ್ತು ಸೋಲಿನಿಂದ ಜೀವನದಿಂದಲೇ ಪಲಾಯನ ಮಾಡುತ್ತಾರೆ. ಹಾಗಾದರೆ, ನಮ್ಮ ಮಕ್ಕಳಿಗೆ ಭವಿಷ್ಯವೇ ಇಲ್ಲವೆ? ಮುಂದೆ ಕಣ್ಣು ಕಾಣದ ಕತ್ತಲೆಯೆ? ಉದ್ಯೋಗದಿಂದ ಪಲಾಯನ ಮಾಡಿದರೂ ಚಿಂತೆಯಿಲ್ಲ. ಆದರೆ ಜೀವನದಿಂದಲೇ ನಿರ್ಗಮನ ಸರಿಯಲ್ಲ.

ಒಂದು ದಿನ ಚಾವಡಿಯಲ್ಲಿ ಎಂದಿನಂತೆ ಭಕ್ತರೊಂದಿಗೆ ಭೇಟಿಗಾಗಿ ಕುಳಿತಿದ್ದೆ. ನಾನು ಬಹಳ ಶ್ರದ್ಧೆಯಿಂದ ಮಾಡುವ ಈ ಭೇಟಿ ವಿಶಿಷ್ಟ ಅನುಭವ ನೀಡುತ್ತದೆ. ಅಂದು ಒಬ್ಬ ಗೃಹಸ್ಥ ನನ್ನನ್ನು ಭೇಟಿಯಾಗಬೇಕೆಂದು ಬಂದಿದ್ದ. ಅವನೊಂದಿಗೆ 21-22 ವರ್ಷದ ಸದೃಢ ಶರೀರದ ಮಗನಿದ್ದ. ಅವನು ತನ್ನ ಮಗನನ್ನು ನನಗೆ ಪರಿಚಯಿಸಲು ಪ್ರಾರಂಭಿಸಿದ. ಮಾತನಾಡುವಾಗ ಅವನ ಸ್ವರ ನಡುಗುತ್ತಿತ್ತು. ಮಗನ ಕುರಿತಾದ ಚಿಂತೆ ಈತನನ್ನು ಬಾಧಿಸುತ್ತಿದೆ ಎಂದು ನಾನು ಗ್ರಹಿಸಿದೆ.

‘ಸ್ವಾಮಿ, ತಕ್ಕಮಟ್ಟಿನ ವಿದ್ಯಾಭ್ಯಾಸದ ನಂತರ ನನ್ನ ಮಗ ಒಂದು ಚಿನ್ನ ಮಾರಾಟದ ಕಂಪನಿಯಲ್ಲಿ ಮಾರಾಟದ ಪ್ರತಿನಿಧಿಯಾಗಿ ಸೇರಿದ್ದ. ಕೆಲವು ತಿಂಗಳುಗಳ ಕಾಲ ಲವಲವಿಕೆಯಿಂದಲೇ ಕೆಲಸ ಮಾಡಿದ. ಆದರೆ ಆ ಕೆಲಸ ಈತನ ಸ್ವಭಾವಕ್ಕೆ ಒಗ್ಗಲಿಲ್ಲ. ಆ ನೌಕರಿಯ ಚಾಕಚಕ್ಯತೆ ಮತ್ತು ಕರ್ತೃತ್ವ ಶಕ್ತಿಯನ್ನು ತಿಳಿಯಲಾಗದೆ ವಿಫಲನಾಗುತ್ತ ಬಂದ. ಕೆಲಸದಲ್ಲಿ ಪ್ರಗತಿಯನ್ನು ತೋರಿಸದಿದ್ದುದರಿಂದ, ಮೇಲಧಿಕಾರಿಗಳು ಇವನನ್ನು ಟೀಕಿಸಿದರು ಮತ್ತು ಆತನೊಬ್ಬ ಅಯೋಗ್ಯ ವ್ಯಕ್ತಿ ಎಂದು ತೀರ್ವನಿಸಿದರು. ಇದರಿಂದ ನೊಂದು ಬೆಂದ ಹುಡುಗ ಕೆಲಸ ತೊರೆದು ಮನೆಗೆ ಬಂದಿದ್ದಾನೆ. ತನ್ನದೇ ವಯೋಮಾನದವರು ಬೇರೆ ಬೇರೆ ಊರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ತಾನು ಮಾತ್ರ ಹೀಗೆಂಬ ಕೀಳರಿಮೆ ಅವನನ್ನು ಬಾಧಿಸುತ್ತಿದೆ. ತಾನು ನಿಷ್ಪ್ರಯೋಜಕನೆಂದು ಬಗೆದು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾನೆ ಹಾಗೂ ಪ್ರಯತ್ನಿಸುತ್ತಿದ್ದಾನೆ’ ಎಂದು ಅವರು ಹೇಳಿದರು. ಆ ಹುಡುಗನ ಮುಖದಲ್ಲಿ ನಿರುತ್ಸಾಹ ಎದ್ದು ತೋರುತ್ತಿತ್ತು. ಜತೆಗೆ ಕೀಳರಿಮೆಯನ್ನು ಮೆಟ್ಟಿ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿರಲಿಲ್ಲ.

ಸಂವಹನದಿಂದ ಸಮಸ್ಯೆ ದೂರ: ನಾನು ಸಹಜವಾಗಿ ಆತನಲ್ಲಿ ಪ್ರಶ್ನೆ ಹಾಕುತ್ತ ಹೋದೆ. ಯಾವ ಕಂಪನಿಯಲ್ಲಿದ್ದೀ? ಕೆಲಸದ ಸ್ವರೂಪ ಹೇಗಿತ್ತು? ಯಾಕೆ ನಿನಗೆ ಆ ಕೆಲಸ ಕಷ್ಟವಾಯಿತು? ಮತ್ತು ಇನ್ನು ಮುಂದಿನ ಬದುಕಿನ ಬಗ್ಗೆ ನೀನೇನು ಕನಸು ಕಂಡಿದ್ದೀ? ಹೀಗೆ. ಆದರೆ ಅವನಿಗೆ ಸೋಲಿನ ಚಿಂತೆಯೊಂದನ್ನು ಬಿಟ್ಟು ಬೇರೆ ಯಾವುದೇ ಚಿಂತನೆ ಇದ್ದ ಹಾಗೆ ತೋರಲಿಲ್ಲ. ತಾನು ಈ ಭೂಮಿಯಲ್ಲಿ ಬದುಕುವುದಕ್ಕೆ ಅನರ್ಹನೆಂಬ ಭಾವನೆ ಆತನ ಮುಖದಲ್ಲಿತ್ತು. ಆಗ ನನಗೆ ಅನ್ನಿಸಿದ್ದು ಇಷ್ಟು. ಇಂತಹ ವ್ಯಕ್ತಿಗಳಲ್ಲಿ ನಾವು ಮೃದುವಾಗಿ ಮಾತನಾಡಿದರೆ ಏನೂ ಪ್ರಯೋಜನವಾಗಲಾರದು. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ.

ತಕ್ಷಣ ನನ್ನ ದೀರ್ಘಕಾಲದ ಅನುಭವದಿಂದ ಹೇಳಿದೆ- ‘ನೀನು ಇಲ್ಲಿಯವರೆಗೆ ಹೋದ ಉದ್ಯೋಗ ನಿನಗೆ ಹೇಳಿದಂತಹದಲ್ಲ. ಮೊದಲಿಗೆ ನೀನು ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಆ ಉದ್ಯೋಗಕ್ಕೆ ಸೇರಿಕೊಂಡಿದ್ದಿ. ಆದ್ದರಿಂದಲೇ ಅಲ್ಲಿ ಪೂರ್ಣಪ್ರಮಾಣದಲ್ಲಿ ನಿನ್ನನ್ನು ತೊಡಗಿಸಿಕೊಳ್ಳಲಿಲ್ಲ. ತನಗೆ ಕೊಟ್ಟ ಕಾರ್ಯವನ್ನು ಪರಿಪೂರ್ಣವಾಗಿ, ಶ್ರದ್ಧೆಯಿಂದ ಮಾಡಬೇಕು ಎಂಬ ಛಲ, ಏಕಾಗ್ರತೆ ಇದ್ದಿದ್ದರೆ ನಿನ್ನ ಪರಿಸ್ಥಿತಿಯೇ ಬೇರಾಗುತ್ತಿತ್ತು. ನಾವು ದುಡಿಮೆಗೆ ಹೋದ ಮೇಲೆ ಯಥಾಶಕ್ತಿ ದುಡಿಯಬೇಕು. ನಮಗೆ ಕೆಲಸ ಕೊಟ್ಟವರು ಅದನ್ನು ಅಪೇಕ್ಷಿಸುತ್ತಾರೆ. ಅವರು ಕೊಟ್ಟ ಮಾರ್ಗದರ್ಶನ ಅನುಸರಿಸಬೇಕೆಂದು ಬಯಸುತ್ತಾರೆ. ನಾವು ಹಾಗೆ ಮಾಡದಿದ್ದರೆ, ಅವರ ಖಾರವಾದ ಮಾತುಗಳನ್ನು ಕೇಳಬೇಕಾಗುತ್ತದೆ.

ಪ್ರಪಂಚ ತುಂಬ ವಿಶಾಲವಾಗಿದೆ. ಒಂದು ಕ್ಷೇತ್ರದಲ್ಲಿ ವಿಫಲರಾದರೆ, ಜೀವನವೇ ಮುಗಿದುಹೋಯಿತೆಂದು ಭಾವಿಸಬಾರದು. ಇಂದು ನಿನ್ನ ಯೋಗ ಬದಲಾಗಿದೆ. ಇಲ್ಲಿಯವರೆಗೆ ನೀನು ಯಾರದೋ ಕೈಕೆಳಗೆ, ಯಾರದ್ದೋ ಕೆಲಸ ಮಾಡುತ್ತಿದ್ದೆ. ನೀನು ಹುಟ್ಟಿದ್ದು ಮತ್ತು ನಿನ್ನ ಬದುಕು ಬೇರೆಯವರ ಕೆಲಸಕ್ಕಾಗಿ ಅಲ್ಲ. ಬದಲಾಗಿ ನೀನು ನಿನಗಾಗಿ ಪೂರ್ಣ ಪರಿಶ್ರಮದಿಂದ ದುಡಿದು ಬೆಳೆಯುವ ಕಾಲ ಸನ್ನಿಹಿತವಾಗಿದೆ. ಇಲ್ಲಿಯವರೆಗೆ ಸಾವಿರಾರು ಜನರು ದುಡಿಯುವ ಕಂಪನಿಯಲ್ಲಿ ನೀನೂ ಒಬ್ಬ ಸಾಮಾನ್ಯ ಕೆಲಸದವನಾಗಿದ್ದೆ. ನಿನಗೆ ಸಂಬಳ ಎಷ್ಟು ಬರುತ್ತಿತ್ತು? (ಸುಮಾರು 14,000 ರೂಪಾಯಿ). ಇಷ್ಟು ಹಣಕ್ಕಾಗಿ ನಿನ್ನ ಯೌವನ ಮತ್ತು ಕೌಶಲವನ್ನು ಬೇರೆಯವರಿಗೆ ಮೀಸಲಿಟ್ಟಿದ್ದಿ. ಇದರ ಬದಲಾಗಿ ನೀನು ಸ್ವಂತ ಉದ್ಯೋಗ ಮಾಡು ಅಥವಾ ಬೇರೆ ಅವಕಾಶವನ್ನು ಪಡೆದು ಹತ್ತಾರು ಜನರಿಗೆ ಅನ್ನನೀಡುವ ವ್ಯಕ್ತಿಯಾಗು. ಈ ದಿಶೆಯಲ್ಲಿ ಕಾರ್ಯಪ್ರವೃತ್ತನಾಗುವುದಕ್ಕಾಗಿಯೇ ನಿನಗೆ ಈಗ ತಾತ್ಕಾಲಿಕ ಹಿನ್ನಡೆಯಾಗಿದೆ. ಇದು ದೇವರ ಇಚ್ಛೆ.

ಪ್ರತಿ ವ್ಯಕ್ತಿಯಲ್ಲೂ ಸುಪ್ತಪ್ರತಿಭೆಯಿರುತ್ತದೆ. ಇಂತಹ ಒಂದೊಂದು ಘಟನೆಯೂ ವ್ಯಕ್ತಿಯ ಜೀವನಚಕ್ರದ ಗತಿಯನ್ನೇ ಬದಲಾಯಿಸುತ್ತದೆ. ನಿನ್ನ ಜೀವನ ಪರಿವರ್ತನೆಗೆ ಇದೇ ಸುಸಂದರ್ಭ. ಈಗಿನ ಉದ್ಯೋಗವನ್ನು ತೊರೆದು ತಕ್ಷಣ ಮನೆಗೆ ಬಾ. ಇಲ್ಲಿಯವರೆಗೆ ನಿನಗಾದ ಸೋಲು, ಅವಮಾನವನ್ನು ಮರೆತುಬಿಡು. ಹೊಸಜೀವನದ ಸಂಕಲ್ಪ ಮಾಡು. ಹೊಸ ಬದುಕಿನ, ಹೊಸ ಸಾಧನೆಯ ಛಲ ಬೆಳೆಸಿಕೊ’ ಎಂದಾಗ ಅವನಿಗೂ ಕುತೂಹಲವುಂಟಾಯಿತು.

ಸ್ವ-ಉದ್ಯೋಗ ತರಬೇತಿ: ಉತ್ಸಾಹ ತುಂಬಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗಲಾರದು. ಆ ಜೀವನೋತ್ಸಾಹಕ್ಕೊಂದು ದಾರಿ ತೋರಿಸಬೇಕಲ್ಲ! ಅದಕ್ಕಾಗಿ ಮಾಹಿತಿ ನೀಡಿದೆ. ‘ನಮ್ಮಲ್ಲಿ ಸ್ವ-ಉದ್ಯೋಗ ತರಬೇತಿ ಕೇಂದ್ರಗಳಿವೆ. ಅಂದರೆ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಸಮಯಕ್ಕೆ ಸರಿಯಾಗಿ ಅಂದರೆ ಶಾಲಾ, ಕಾಲೇಜುಗಳಿಂದ ಹೊರಬಂದ ನಂತರ, ಅವರಿಗೆ ಸ್ವಾವಲಂಬನೆಯ ಮಹತ್ವವನ್ನು ಮನವರಿಕೆ ಮಾಡುವುದು, ಸರಿಯಾದ ಮಾರ್ಗದರ್ಶನ ಮತ್ತು ಅವರಿಗೆ ಆಸಕ್ತಿಯುಳ್ಳ ವೃತ್ತಿಯೊಂದರಲ್ಲಿ ತರಬೇತಿ ನೀಡುವುದು ಈ ಸಂಸ್ಥೆಯ ಸ್ಥಾಪನೆಯ ಮುಖ್ಯ ಉದ್ದೇಶ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನದಲ್ಲಿ ಬ್ಯಾಂಕುಗಳಿಂದ ಪ್ರಾಯೋಜಿತವಾದ ಈ ಸ್ವಉದ್ಯೋಗ ತರಬೇತಿ ಕೇಂದ್ರಗಳು ಇಲ್ಲಿ ಮಾತ್ರವಲ್ಲ, ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಇವೆ. ನೀನಿರುವ ಜಿಲ್ಲೆಯಲ್ಲೂ ಅದು ಇದೆ. ಅಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಸ್ವ-ಉದ್ಯೋಗಕ್ಕೆ ಬೇಕಾದ ತರಬೇತಿ ಮತ್ತು ಸಂಪನ್ಮೂಲದ ಮಾರ್ಗವನ್ನು ತಿಳಿಸಿಕೊಡುತ್ತಾರೆ. ಮೊದಲು ನಿನಗೆ ಯಾವ ವಿಷಯದಲ್ಲಿ ಆಸಕ್ತಿಯಿದೆಯೆಂದು ಅರಿತುಕೊ. ಮೊಬೈಲ್ ರಿಪೇರಿ, ಛಾಯಾಚಿತ್ರಗ್ರಹಣ, ವಾಹನ ರಿಪೇರಿ, ಅಂಗಡಿ ವ್ಯಾಪಾರ, ಕಂಪನಿಗಳ ಪ್ರತಿನಿಧಿಯಾಗಿ ಉತ್ಪನ್ನಗಳನ್ನು ಮಾರುವ ವೃತ್ತಿ ಹೀಗೆ ಹಲವು ಕ್ಷೇತ್ರಗಳಿವೆ. ನಿನ್ನಿಷ್ಟದ ಕ್ಷೇತ್ರವನ್ನು ಆಯ್ದುಕೊಂಡು ತರಬೇತಿ ಪಡೆ. ನಂತರ ಸ್ವಂತ ಉದ್ಯೋಗ ಆರಂಭಿಸು. ನಂತರ ನೀನೇ ಒಂದು ವ್ಯಾಪಾರವನ್ನು ನಡೆಸುತ್ತ, ಬೆಳೆದಂತೆ, ನಿನ್ನ ಕೈಕೆಳಗೆ ಕೆಲವರು ಕೆಲಸ ಮಾಡಬೇಕಾಗುತ್ತದೆ. ಆಗ ಆ ನಿನ್ನ ನೌಕರರಿಗೂ ಇಂದು ನಿನಗೆ ಬಂದಂತಹ ಸ್ಥಿತಿ ಬರಬಹುದು. ಅವರಲ್ಲಿ ಉದ್ಯೋಗಶೀಲತೆ ಇಲ್ಲದಿರಬಹುದು. ಶ್ರದ್ಧೆಯ ಕೊರತೆ ಕಾಣಬಹುದು. ಆಗ ನಿನಗೂ ಸಿಟ್ಟು ಬಂದು ಅವರನ್ನು ಬಯ್ಯಬಹುದು. ಅಂತಹ ಸಮಯದಲ್ಲಿ ಅವರನ್ನು ತಿದ್ದಿ ತೀಡಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿನ್ನದು. ಹಾಗಾಗಿ ಈ ಸ್ವ ಉದ್ಯೋಗ ಎನ್ನುವುದು ಹಣದಿಂದ ಮಾತ್ರ ಆಗುವುದಲ್ಲ. ಅನುಭವದಿಂದಲೂ ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು. ಉದಾಹರಣೆಗೆ, ನೀನು ನಿರುದ್ಯೋಗಿಯಾಗಿದ್ದಾಗ ಮತ್ತು ಉದ್ಯೋಗಸ್ಥನಾದ ಮೇಲೆ ಏನು ಅನುಭವವನ್ನು ಪಡೆದಿದ್ದೀಯೋ, ಆಗ ದೊರಕಿದ ಒಳನೋಟಗಳು, ಸೂಕ್ಷ್ಮತೆಗಳು ನಿನ್ನ ಉದ್ಯೋಗದಲ್ಲಿ ಮಾರ್ಗದರ್ಶಕವಾಗಿರಬೇಕು. ಗೆಲುವಿಗಿಂತ ಸೋಲು ಉತ್ತಮವಾಗಿ ಜೀವನಪಾಠವನ್ನು ಕಲಿಸುತ್ತದೆ. ಇಲ್ಲಿಯವರೆಗಿನ ಉದ್ಯೋಗದಲ್ಲಿ ಕಂಡುಕೊಂಡ ನಿನ್ನ ಉತ್ತಮ ಅಂಶಗಳನ್ನು ನೆನಪಿಸಿಕೊಂಡು, ಕಂಪನಿಯವರು ನಿನ್ನಲ್ಲಿ ಗುರುತಿಸಿದ ದೌರ್ಬಲ್ಯವನ್ನು ಮೆಟ್ಟಿನಿಲ್ಲು. ಈ ಎರಡೂ ಅಂಶಗಳು ಮುಂದಿನ ಸ್ವಂತ ಉದ್ಯೋಗಕ್ಕೆ ಅಡಿಪಾಯವಾಗಿರಲಿ. ಯಾವುದೇ ಕಂಪನಿಯ ಹೆಸರು (Good Will) ಮತ್ತು ಸಾಧನೆಯನ್ನು ಗುರುತಿಸಿ ಜನರು ಗೌರವಿಸುತ್ತಾರೆ. ಎಲ್ಲ ಕಂಪನಿಗಳೂ ಚಿಕ್ಕದಾಗಿಯೇ ಆರಂಭವಾಗಿರುತ್ತವೆ. ನಂತರ ಬದ್ಧತೆ, ಪರಿಶ್ರಮ ಮತ್ತು ಗುಣಮಟ್ಟದಿಂದಾಗಿ ಹಂತಹಂತವಾಗಿ ಬೆಳೆದು ಜನಪ್ರಿಯವಾಗುತ್ತವೆ. ಕೆಲವು ಬಾರಿ ಅಂತಹ ಕಂಪನಿಯ ಸಾಧನೆ, ಮಾಲಕತ್ವ ಎಷ್ಟು ಉತ್ತಮವಾಗಿ ಇರುತ್ತದೆಯೆಂದರೆ, ಆ ಕಂಪನಿಯ ಹೆಸರಿಂದಲೇ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾರೆ. ನೀನೂ ಕೂಡ ಮುಂದೆ ಸಾಧನೆ ಮಾಡಿದಾಗ, ಹೆಸರು, ಕೀರ್ತಿ ಮತ್ತು ಅಪಾರವಾದ ಧನ, ಧಾನ್ಯಲಾಭ ನಿನ್ನದಾಗುತ್ತದೆ. ಆದ್ದರಿಂದ ಆತ್ಮಹತ್ಯೆ ಚಿಂತೆ ಬಿಟ್ಟು ಹೊಸಬದುಕನ್ನು ಕಟ್ಟು’ ಎಂದು ತಿಳಿಹೇಳಿದೆ.

ನಾನು ಹೇಳಿದ್ದನ್ನು, ತನ್ನ ಮಗನಲ್ಲಾದ ಧನಾತ್ಮಕ ಪರಿವರ್ತನೆಯನ್ನು ಗ್ರಹಿಸಿದ ಆತನ ತಂದೆ ‘ಈತ ಸ್ನಾನ ಮಾಡದೇ ಎರಡು ದಿನವಾಯಿತು. ಸರಿಯಾಗಿ ಆಹಾರವನ್ನೂ ಸೇವಿಸಿರಲಿಲ್ಲ’ ಎಂದರು. ಅವರು ಕ್ಷೇತ್ರಕ್ಕೆ ಬಂದದ್ದು ಬೆಳಗ್ಗೆ 9 ಗಂಟೆಗೆ. ಕ್ಷೇತ್ರಕ್ಕೆ ಬಂದಮೇಲೂ ಸ್ನಾನ ಮಾಡಿರಲಿಲ್ಲ. ಹಾಗಾಗಿ ಮೊದಲು ಗಡ್ಡ ತೆಗೆದು, ನೇತ್ರಾವತಿಗೆ ಹೋಗಿ ಸ್ನಾನ ಮಾಡಿ, ಮಂಜುನಾಥ ಸ್ವಾಮಿಯ ದರ್ಶನ ಮಾಡುವಂತೆ ಸೂಚಿಸಿದೆ. ಎಲ್ಲರ ಬದುಕಲ್ಲೂ ಸೌಭಾಗ್ಯದ ಸಮಯ ಬರುವಂತೆ ಕಷ್ಟದ ಸಮಯಗಳೂ ಬರುತ್ತವೆ. ಕಷ್ಟ ಬಂದ ಸಮಯದಲ್ಲಿ ಅತ್ಯಂತ ಕೆಟ್ಟ ಕ್ಷಣವೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆ. ಆ ಕ್ಷಣ ತಪ್ಪಿದರೆ ಮುಂದೆ ದೀರ್ಘಾಯುಷ್ಯ ಬಂದುಬಿಡಬಹುದು.

ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್ |

ಯಂ ತು ರಕ್ಷಿತುಮಿಚ್ಛಂತಿ ಬುಧ್ಯಾ ಸಂಯೋಜಯಂತಿ ತಮ್|

‘ಕೈಯಲ್ಲಿ ಕೋಲು ಹಿಡಿದುಕೊಂಡು ದನಗಾಹಿಗಳು ದನಗಳನ್ನು ಕಾಯುವಂತೆ ದೇವರು ದಂಡಹಿಡಿದು ನಮ್ಮನ್ನು ರಕ್ಷಿಸುವುದಿಲ್ಲ. ಆದರೆ ಯಾರನ್ನು ರಕ್ಷಿಸಬೇಕೆಂದು ದೇವರು ಬಯಸುತ್ತಾನೋ ಅಂತಹವರಿಗೆ ಒಳ್ಳೆಯ ಬುದ್ಧಿಯನ್ನು ಕೊಡುತ್ತಾನಂತೆ. ಇಂದು ನಿಮಗೂ ಹಾಗೆ. ದೇವರೇ ಕಷ್ಟದಾಟುವ ದಾರಿಯನ್ನು ತೋರಿದ್ದಾನೆ. ಹಾಗಾಗಿಯೇ ಇಂದು ಧರ್ಮಸ್ಥಳಕ್ಕೆ ಬಂದಿದ್ದೀರಿ. ದೇವರಿಗೊಂದು ಅಭಿಷೇಕ ಸೇವೆಯನ್ನು ಮಾಡಿ, ಅನುಗ್ರಹವನ್ನು ಯಾಚಿಸಿ, ದೇವರ ಪ್ರಸಾದ ಸ್ವೀಕರಿಸಿ ತೆರಳಿ’ ಎಂದು ಹೇಳಿದೆ. ಅಪ್ಪನ ಕಣ್ಣಲ್ಲಿ ಆನಂದಬಾಷ್ಪ. ನನಗೂ ತೃಪ್ತಿಯಾಯಿತು. ಸಾವಿನಂಚಿನಲ್ಲಿರುವ ಒಬ್ಬನನ್ನು ಬದುಕಿಸಿದ ಮತ್ತು ಪರಿವರ್ತನೆ ಮಾಡಿದ, ಪ್ರೇರಣೆ ಕೊಟ್ಟ ಪುಣ್ಯ ನನ್ನದಾಯಿತು.

ಇಂತಹ ಸಾವಿರಾರು ಮಂದಿ ಯುವಕ, ಯುವತಿಯರು ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳದೆ, ಅವಮಾನ ಮತ್ತು ಸೋಲಿನಿಂದ ಜೀವನದಿಂದಲೇ ಪಲಾಯನ ಮಾಡುತ್ತಾರೆ. ಉದ್ಯೋಗದಿಂದ ಪಲಾಯನ ಮಾಡಿದರೆ ಚಿಂತೆಯಿಲ್ಲ; ಆದರೆ ಜೀವನದಿಂದಲೇ ಪಲಾಯನ ಮಾಡುವುದು ಖೇದದ ಸಂಗತಿ. ಹೀಗಾಗಬಾರದು. ಇಂತಹವರಿಗಾಗಿಯೇ ಇಂದು ಭಾರತದಲ್ಲಿ ಬದುಕು ಕಟ್ಟಿಕೊಳ್ಳುವ ಸಾಕಷ್ಟು ಅವಕಾಶಗಳಿವೆ. ಉದ್ಯೋಗಗಳು ನಿರ್ವಣವಾಗಿವೆ. ಕಾಲೇಜಿನಿಂದ ಪದವಿ ಪಡೆದು ಇನ್ಯಾರದ್ದೋ ಲೆಕ್ಕ ಬರೆದು, ಸ್ವಂತಿಕೆ ಮರೆತು ಬದುಕುವುದಕ್ಕಿಂತ ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಒಳಿತಲ್ಲವೆ? ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೇರಳ ಅವಕಾಶಗಳಿವೆ. ಆದ್ದರಿಂದ ಎಲ್ಲರೂ ಅವರವರ ಸಾಮರ್ಥ್ಯ ಮತ್ತು ಅವಕಾಶ ಗುರುತಿಸಿಕೊಂಡು ಬಲ್ಲವರ ಮಾರ್ಗದರ್ಶನ ಪಡೆದು ಸುಂದರವಾದ ಬದುಕನ್ನು ಅರಳಿಸಿಕೊಳ್ಳಿರಿ ಎಂದು ಹಾರೈಸುತ್ತೇನೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...