ಸೈಕ್ಲೋತ್ಸವಕ್ಕೆ ನೋಂದಣಿ

ಹುಬ್ಬಳ್ಳಿ: ವಿಆರ್​ಎಲ್ ಲಾಜಿಸ್ಟಿಕ್ಸ್ ಸಹಯೋಗದಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ವತಿಯಿಂದ ಗಿನ್ನೆಸ್ ದಾಖಲೆಗಾಗಿ ಜ.26ರ ಗಣರಾಜ್ಯೋತ್ಸವ ದಿನದಂದು ನಗರದ ಕೇಶ್ವಾಪುರ ರಸ್ತೆಯಲ್ಲಿ ಸೈಕ್ಲೋತ್ಸವ ಏರ್ಪಡಿಸಿದ್ದು, ಭರಪೂರ ನೋಂದಣಿ ಪ್ರಕ್ರಿಯೆ ನಡೆದಿದೆ. ಬನಹಟ್ಟಿ, ಮುಧೋಳ, ಬೀಳಗಿ, ಜಮಖಂಡಿ ಭಾಗದ ಸೈಕ್ಲಿಸ್ಟ್​ಗಳು ಹೆಸರು ನೋಂದಾಯಿಸುತ್ತಿದ್ದು, ಹುಬ್ಬಳ್ಳಿಯಲ್ಲಿಯೇ 900 ಸೈಕ್ಲಿಸ್ಟ್​ಗಳು ಹೆಸರು ನೋಂದಾಯಿಸಿದ್ದಾರೆ. ಜ.17 ಹೆಸರು ನೋಂದಣಿಗೆ ಕಡೇ ದಿನವಾಗಿದೆ. ಆಕ್ಸ್​ಫರ್ಡ್ ಕಾಲೇಜ್ ಎದುರಿನ ಜಾಗದಲ್ಲಿ ಜ.20ರಂದು ಮೌಖಿಕ ಸಂದರ್ಶನ ನಡೆಯಲಿದೆ. ಜ.26ರವರೆಗೆ ಉಚಿತ ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಹು-ಧಾ ಸೈಕ್ಲಿಸ್ಟ್​ಗಳು ಜ.25ರಂದು ಜೆರ್ಸಿ, ಬಿಬ್, ಗ್ರೀನ್​ಕಾರ್ಡ್ ಪಡೆಯಬೇಕು. ಹೊರಗಿನವರಿಗೆ ಜ. 26ರಂದು ಬೆಳಗ್ಗೆ 6.30ರಿಂದ 10.30ರವರೆಗೆ ಪಡೆಯಬಹುದು. ಹೆಸರು ನೋಂದಣಿಗೆ www.hbcriders.co ಹಾಗೂ ದೂ.ಸಂ. 9108507179ಗೆ ಸಂಪರ್ಕಿಸಬಹುದು ಎಂದು ಕ್ಲಬ್ ನಿರ್ದೇಶಕ ಆನಂದ ಬೇದ್ ತಿಳಿಸಿದ್ದಾರೆ.