23.5 C
Bangalore
Saturday, December 7, 2019

ಪರಿಪೂರ್ಣ ಜ್ಞಾನಿ, ಗುರು ನಾಗಮಹಾಶಯ

Latest News

ಬಸ್​ನಿಂದ ಇಳಿಯುತ್ತಿದ್ದಾಗ ಬಿದ್ದ ಮಹಿಳೆ ಸಾವು; ಚಾಲಕ, ನಿರ್ವಹಕ ನಾಪತ್ತೆ

ಮೈಸೂರು: ಬಸ್​ನಿಂದ ಇಳಿಯುವಾಗ ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಕಡುಬಿನ ಕಟ್ಟೆ ಗೇಟ್ ಬಳಿ ನಡೆದಿದೆ. ನಂಜನಗೂಡು ತಾಲೂಕಿನ ಮಕನಾಪುರ ನಿವಾಸಿ ಚನ್ನಪಟ್ಟಣದ...

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ: ಮೂವರು ಕಾರ್ಮಿಕರು ಸಾವು, ಓರ್ವನ ಸ್ಥಿತಿ ಗಂಭೀರ

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಒಡಿಯೂರಿನಲ್ಲಿ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ ವಕೀಲರ ಗುಂಪು!

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ...

ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತಷ್ಟು ಭದ್ರ ಸರ್ಕಾರವಾಗಿ ನಿರ್ಮಾಣಗೊಳ್ಳುತ್ತದೆ: ಸಂಸದೆ ಶೋಭಾ ಕರಂದ್ಲಾಜೆ

ವಿಜಯಪುರ: ಈ ಉಪಚುನಾವಣೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪರನ್ನು ಗಟ್ಟಿಗೊಳಿಸುವ ಚುನಾವಣೆ. ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತಷ್ಟು ಭದ್ರ ಸರ್ಕಾರವಾಗಿ ನಿರ್ಮಾಣಗೊಳ್ಳುತ್ತದೆ ಎಂದು...

ಭಾರತ ವಿಶ್ವಗುರು ಆಗಲಿ

ವಿಜಯಪುರ: ಭಾರತ ವಿಶ್ವ ಗುರು ಆಗಬೇಕಾದರೆ ನಾವೆಲ್ಲ ನಮ್ಮ ಸಂಸ್ಕೃತಿಯನ್ನು ಮೊದಲು ಪಾಲಿಸಬೇಕು ಬಬಲೇಶ್ವರದ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ...

ಬಂಗಾಳವು ಚೈತನ್ಯ ಮಹಾಪ್ರಭುಗಳು ಅವತರಿಸಿದ ಪುಣ್ಯಭೂಮಿ. ಈ ಭೂಮಿಯಲ್ಲೇ ಶ್ರೀರಾಮಕೃಷ್ಣ ಪರಮಹಂಸರು ಜನ್ಮತಾಳಿ ‘ಮಹಾವತಾರಿ’ ಎನಿಸಿಕೊಂಡರು. ಅವರ ಉತ್ತಮೋತ್ತಮ ಶಿಷ್ಯರಲ್ಲಿ ನಾಗಮಹಾಶಯ ಅಗ್ರೇಸರರು. ಇವರು ಗೃಹಸ್ಥರಾಗಿ ವಿರಕ್ತಭಾವವನ್ನು ತಾಳಿದ ಪರಿಪೂರ್ಣ ಜ್ಞಾನವಂತರು.

ಪೂರ್ವಬಂಗಾಳದ ನಾರಾಯಣ್​ಗಂಜ್ ಬಂದರಿನ ಪಶ್ಚಿಮಕ್ಕೆ ದೇವಭೋಗವೆಂಬ ಒಂದು ಸಣ್ಣಹಳ್ಳಿ. ಇಲ್ಲಿ ಕ್ರಿ.ಶ.1846 ಆಗಸ್ಟ್ 21ನೆಯ ತಾರೀಖಿನ ದಿವಸ ನಾಗಮಹಾಶಯ ಹುಟ್ಟಿದರು. ನಾಗಮಹಾಶಯರ ಬಾಲ್ಯದ ಹೆಸರು ದುರ್ಗಾಚರಣನಾಗ. ತಂದೆ ದೀನದಯಾಳು, ತಾಯಿ ತ್ರಿಪುರಸುಂದರಿ. ನಾಗಮಹಾಶಯ ಹುಟ್ಟಿದ ನಾಲ್ಕು ವರ್ಷಗಳ ಮೇಲೆ ತಂಗಿ ಶಾರದಾಮಣಿ ಹುಟ್ಟಿದಳು. ಅನಂತರ ನಾಲ್ಕನೆಯ ಮಗು ಜನಿಸುವಾಗ ತಾಯಿ ತ್ರಿಪುರಸುಂದರಿ ಮೃತಳಾದಳು. ಆಗ ನಾದಿನಿ ಭಗವತಿ ಇಬ್ಬರು ಮಕ್ಕಳನ್ನು ಸಾಕಿದಳು. ದೀನದಯಾಳು ಪರಮ ಪ್ರಾಮಾಣಿಕನಾಗಿ ಒಬ್ಬ ರಾಜಕುಮಾರನ ಬಳಿ ಸಣ್ಣ ನೌಕರಿಯಲ್ಲಿದ್ದನು.

ಬಾಲ್ಯ-ಸಾಧನೆ: ನಾಗಮಹಾಶಯ ಮಗುವಾಗಿದ್ದಾಗಿನಿಂದಲೂ ಮಾತು ನಯವಾಗಿತ್ತು. ನಡತೆಯಲ್ಲಿ ವಿನಯ. ತಲೆಯ ತುಂಬ ಉದ್ದ ಕೂದಲು. ಅವರ ಕೈಗಳಲ್ಲಿ ಬೆಳ್ಳಿಯ ಕೈಬಳೆಗಳು ಇದ್ದುವು. ಆ ಮಗು ಜುಟ್ಟನ್ನು ಬಿಟ್ಟು ಕುಣಿಯುತ್ತ ಆಡುತ್ತಿದ್ದರೆ, ಹಳ್ಳಿಯ ಹೆಂಗಸರು ಎತ್ತಿ ಮುದ್ದಾಡುತ್ತಿದ್ದರು. ಸಂಜೆಹೊತ್ತು ಒಬ್ಬನೇ ಕುಳಿತು ನಕ್ಷತ್ರಖಚಿತವಾದ ಆಕಾಶ ನೋಡುತ್ತಿದ್ದನು. ಚಂದ್ರೋದಯ ಆದಾಗ ಚಪ್ಪಾಳೆ ತಟ್ಟಿಕೊಂಡು ಕುಣಿದಾಡುತ್ತಿದ್ದನು. ಹುಡುಗನ ಅತ್ತೆ ಭಗವತಿ ಪುರಾಣಕಥೆ ಹೇಳುತ್ತಿದ್ದಳು. ಆಗ ನಾಗಮಹಾಶಯನು ಕಥಾಲೋಕಕ್ಕೆ ಹೊರಟುಹೋಗುತ್ತಿದ್ದದ್ದುಂಟು.

ನಾಗಮಹಾಶಯರು ಬಾಲ್ಯ ಕಳೆದು ಯೌವನಕ್ಕೆ ಬಂದರು. ಆಗ ಅತ್ತೆ ಸಂಸಾರದಲ್ಲಿ ನೆಲೆ ನಿಲ್ಲಿಸುವ ಪ್ರಯತ್ನ ಮಾಡಿದಳು. ವಿಕ್ರಮಪುರಕ್ಕೆ ಸೇರಿದ ರೈಜದಿಯಾ ಗ್ರಾಮದ ಜಗನ್ನಾಥದಾಸರ ಮಗಳು ಪ್ರಸನ್ನಕುಮಾರಿ ಜತೆ ವಿವಾಹ ನೆರವೇರಿತು. ಆಗ ವಧುವಿಗೆ ಹನ್ನೊಂದುವರ್ಷ. ಮದುವೆಯಾದ ಐದು ತಿಂಗಳಿಗೆ ನಾಗಮಹಾಶಯ ಕಲ್ಕತ್ತೆಗೆ ಬಂದು ಕೇಂಬಲ್ ಮೆಡಿಕಲ್ ಸ್ಕೂಲಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡತೊಡಗಿದರು. ಒಂದೂವರೆ ವರ್ಷ ಅಲ್ಲಿ ಓದಿದರು. ಅಲ್ಲಿ ಓದು ಸಾಗಲಿಲ್ಲ. ಆಗ ಖ್ಯಾತ ಹೋಮಿಯೋಪಥಿ ವೈದ್ಯರಾದ ವಿಹಾರೀಲಾಲ್ ಬಹದುರಿ ಬಳಿ ವೈದ್ಯಕೀಯ ಕಲಿಯಲಾರಂಭಿಸಿದರು. ಅವರ ಬಳಿ ಎರಡು ವರ್ಷ ಕಲಿತು ಪ್ರಾವೀಣ್ಯತೆ ಪಡೆದರು. ಇತ್ತ ಊರಲ್ಲಿದ್ದ ಹೆಂಡತಿ ಅಕಾಲಮರಣಕ್ಕೆ ತುತ್ತಾದಳು. ನಂತರ ಶ್ರೀಮಂತ ಸುರೇಶಬಾಬು ಅವರ ಸ್ನೇಹವಾಗಿ ಪರಸ್ಪರ ಸೇರುತ್ತಿದ್ದರು. ಪ್ರತಿದಿನ ವಾದಾನುವಾದ ನಡೆಯುತ್ತಿತ್ತು. ಈ ನಡುವೆ ತಂದೆ ದೀನದಯಾಳರ ಇಚ್ಛೆಯಂತೆ ಎರಡನೆಯ ಮದುವೆ ಮಾಡಿಕೊಂಡರು. ನಂತರ ವೈದ್ಯಕೀಯ ವೃತ್ತಿ ಮುಂದುವರಿಯಿತು.

ನಾಗಮಹಾಶಯರು ಅಧರ್ಮ-ಕಪಟಚಾರಗಳಿಗೆ ಎಂದೂ ಅವಕಾಶ ಕೊಡುತಿರಲಿಲ್ಲ. ತಂದೆ ಮತ್ತು ಮಗ ಕಲ್ಕತ್ತದಲ್ಲಿದ್ದರು. ನಾಗಮಹಾಶಯರ ಎರಡನೆಯ ಹೆಂಡತಿ ಠಾಕೂರಣಿ ಹಳ್ಳಿಯಲ್ಲೇ ಇದ್ದಳು. ಆಕೆ 1880ರಲ್ಲಿ ಕಲ್ಕತ್ತೆಗೆ ಬಂದು ಸಂಸಾರ ಹೂಡಿದಳು. ಆದರೆ, ನಾಗಮಹಾಶಯರಿಗೆ ಸಂಸಾರದ ಆಸಕ್ತಿಯೇ ಇರಲಿಲ್ಲ. ಚಿಕಿತ್ಸೆ ನೀಡುವುದು ಮತ್ತು ಪುರಾಣ-ಪುಣ್ಯಕಥೆಗಳನ್ನು ಓದುವುದರಲ್ಲೇ ಬಹುಪಾಲು ಸಮಯ ಕಳೆಯುತ್ತಿದ್ದರು. ಈ ನಡುವೆ ಇವರ ಕುಲಗುರು ಕೈಲಾಸ ಚಂದ್ರಭಟ್ಟಾಚಾರ್ಯರು ಕಲ್ಕತ್ತೆಗೆ ಬಂದರು. ತಂದೆ-ಮಗನಿಗೆ ಸಂಭ್ರಮವೋ ಸಂಭ್ರಮ. ಆಗ ನಾಗಮಹಾಶಯರು ಪತ್ನಿಯ ಜತೆ ಭಟ್ಟಾಚಾರ್ಯರಿಂದ ಮಂತ್ರದೀಕ್ಷೆ ಪಡೆದುಕೊಂಡರು. ದೀಕ್ಷೆ ಪಡೆದ ಮೇಲೆ ಸಾಧನೆಯ ಅಗಾಧಜಲದಲ್ಲಿ ಮುಳುಗಿದರು. ರಾತ್ರಿಯೆಲ್ಲಾ ಜಪ-ಧ್ಯಾನ ಮಾಡುತ್ತಿದ್ದರು.

ಪರಮಹಂಸರ ದರ್ಶನ: ನಾಗಮಹಾಶಯ ಪ್ರತಿನಿತ್ಯ ಧ್ಯಾನ-ಜಪ ಮಾಡುತ್ತಿದ್ದರೂ ಗುರುವೊಬ್ಬನನ್ನು ನಿರೀಕ್ಷಿಸುತ್ತಿದ್ದರು. ‘ದಕ್ಷಿಣೇಶ್ವರದಲ್ಲಿ ಸಾಧುವೊಬ್ಬ ಇದ್ದಾನೆ. ಅವನು ಉತ್ತಮ ಸಾಧಕ’ ಎಂಬ ವಿಷಯ ಸುರೇಶಬಾಬು ಹೇಳಿದಾಗ, ನಾಗಮಹಾಶಯ ದಕ್ಷಿಣೇಶ್ವರಕ್ಕೆ ಹೊರಟರು. ಅವರಿಬ್ಬರು ದಕ್ಷಿಣೇಶ್ವರದ ರಾಣಿರಾಸಮಣಿಯ ಕಾಳೀಗುಡಿಗೆ ಬಂದರು. ಶ್ರೀರಾಮಕೃಷ್ಣ ಪರಮಹಂಸರಿದ್ದ ಕೊಠಡಿಯೊಳಕ್ಕೆ ಹೋದರು. ಪರಮಹಂಸರು ಉತ್ತರಮುಖವಾಗಿ ಕಾಲುಚಾಚಿಕೊಂಡು ಕುಳಿತಿದ್ದರು. ಇಬ್ಬರೂ ನಮಸ್ಕರಿಸಿದರು. ರಾಮಕೃಷ್ಣ ಪರಮಹಂಸರು ಅವರ ಪೂರ್ವಾಪರಗಳನ್ನು ವಿಚಾರಿಸಿಕೊಂಡರು. ‘ಕೆಸರಿನಲ್ಲಿ ಮೀನು ಇದ್ದರೂ ಅದು ಕೆಸರನ್ನು ಅಂಟಿಕೊಳ್ಳದೆ ಇರುವಂತೆ ನೀವು ಸಂಸಾರದಲ್ಲಿರಬೇಕು’ ಎಂದು ಹೇಳಿದರು. ಮಾತು ಸರಳವಾಗಿದ್ದರೂ ಪರಮಹಂಸರು ಹೇಳಿದ ರೀತಿಗೆ ಇಬ್ಬರೂ ಮುಗ್ಧರಾದರು. ಅನಂತರ ಪರಮಹಂಸರ ಸೂಚನೆಯಂತೆ ಪಂಚವಟಿಗೆ ಹೋಗಿ ಧ್ಯಾನಮಾಡಿ ಬಂದರು. ರಾಮಕೃಷ್ಣರು ಎಲ್ಲ ದೇವಮಂದಿರಗಳನ್ನು ತೋರಿಸಿದರು. ನಾಗಮಹಾಶಯ ಮತ್ತು ಸುರೇಶಬಾಬು ಊರಿನ ಕಡೆಗೆ ತಿರುಗಿದರು. ಅವರು ದಾರಿಯಲ್ಲಿ ಬರುತ್ತಿರುವಾಗ ನಾಗಮಹಾಶಯ, ‘ಯಾರು ಈತ? ಸಾಧುವೇ ಸಿದ್ಧನೇ ಮಹಾಪುರುಷನೆ?’ ಎಂಬ ಜಿಜ್ಞಾಸೆ ಅವರಲ್ಲಿ ಮೂಡಿತು. ನಂತರ ನಾಗಮಹಾಶಯ ಆಗಾಗ್ಗೆ ಬಂದು ಹೋಗಲು ಪ್ರಾರಂಭಿಸಿದರು. ಪರಮಹಂಸರ ಸೇವೆಗೆ ಅವಕಾಶವೂ ದೊರಕಿತು. ಸ್ವಲ್ಪದಿನದಲ್ಲೇ ಪರಮಹಂಸರು ಪೂರ್ಣಬ್ರಹ್ಮರೆಂದೂ ಬ್ರಹ್ಮನಾರಾಯಣರೆಂದೂ ನಾಗಮಹಾಶಯ ಹೇಳತೊಡಗಿದರು. ಅದೊಂದು ದಿನ ನರೇಂದ್ರನ ಜತೆಗೆ ಮಾತುಕತೆಗಳು ನಡೆದುವು. ವಿವೇಕಾನಂದರ ಪಾತ್ರತ್ವ, ಆ ಧೀಶಕ್ತಿಗೆ ನಾಗಮಹಾಶಯ ಮಾರುಹೋದರು.

ನಾಗಮಹಾಶಯ ಬಿಡುವು ದೊರಕಿದಾಗಲೆಲ್ಲ ದಕ್ಷಿಣೇಶ್ವರಕ್ಕೆ ಹೋಗುತ್ತಿದ್ದರು. ಒಂದು ದಿನ ಪರಮಹಂಸರು ಹೇಳಿದ ‘ಡಾಕ್ಟರು, ವಕೀಲರು ದಳ್ಳಾಳಿಗಳಿಗೆ ಧರ್ಮಲಾಭವಾಗುವುದು ಕಷ್ಟ’ ಎಂಬ ಮಾತು ಕಿವಿಗೆ ಬಿತ್ತು. ಆ ದಿವಸವೇ ಮನೆಗೆ ಬಂದು ಔಷಧಪೆಟ್ಟಿಗೆ, ವೈದ್ಯಕೀಯ ಪುಸ್ತಕ ಎಲ್ಲವನ್ನೂ ಗಂಗೆಯಲ್ಲಿ ಹಾಕಿ ಸ್ನಾನ ಮಾಡಿಕೊಂಡು ಮನೆಗೆ ಹಿಂದಿರುಗಿದರು. ವೈದ್ಯವೃತ್ತಿ ಬಿಟ್ಟು ಸುಂಕದ ಕೆಲಸ ನೋಡಿಕೊಳ್ಳತೊಡಗಿದರು. ರಾಮಕೃಷ್ಣರ ಹತ್ತಿರಹೋಗಿ ಬಂದೆಂತೆಲ್ಲ ತೀವ್ರವಾದ ವೈರಾಗ್ಯ ಅವರಲ್ಲಿ ಉಂಟಾಯಿತು. ದಿನದಿನಕ್ಕೂ ವಿರಕ್ತಿಭಾವ ಬೆಳೆಯುತ್ತ ಹೋಯಿತು. ಒಮ್ಮೆ ಊರಿಗೆ ಹೋಗಿ ಠಾಕೂರಣಿ ಕಂಡು ‘ಶ್ರೀರಾಮಕೃಷ್ಣರ ಚರಣದಲ್ಲಿ ಅರ್ಪಿಸಿದ ದೇಹದಿಂದ ಸಂಸಾರಕಾರ್ಯ ಯಾವುದೂ ನಡೆಯುವುದಿಲ್ಲ’ ಎಂದು ತಿಳಿಸಿಬಿಟ್ಟರು. ತಂದೆಗೆ ಮಗನ ವರ್ತನೆ ಅರ್ಥವಾಗಲಿಲ್ಲ.

ರಾಮಕೃಷ್ಣರು ನಾಗಮಹಾಶಯರ ವೈರಾಗ್ಯ ನೋಡಿ, ‘ಮನೆಯಲ್ಲೇ ಇದ್ದುಬಿಡಿ. ಹೇಗೋ ಅನ್ನಬಟ್ಟೆಗಳು ನಡೆದುಹೋಗುತ್ತವೆ’ ಎಂದರು. ಅದರಂತೆ ಮನೆಯಲ್ಲೇ ಇದ್ದು ಭಗವದ್ಧಾ್ಯನದಲ್ಲಿ ಲೀನರಾದರು. ಸಂಸಾರದ ಅನ್ನಕ್ಕೆ ತೊಂದರೆಯಾಗದಂತೆ ಯಜಮಾನ ಪಾಲ್​ಬಾಬು ವ್ಯವಸ್ಥೆ ಮಾಡಿದರು.

ಪರಮಹಂಸರು ಅಂತರ್ಧಾನವಾಗುವುದಕ್ಕೆ ಮೊದಲು ನಾಗಮಹಾಶಯ ರಾಮಕೃಷ್ಣರ ಬಳಿ ಬಂದಿದ್ದರು. ಅವರು ಪರಮಹಂಸರನ್ನು ನೋಡಿದರು. ಅವರ ವ್ಯಾಧಿಯನ್ನು ಸಂಪೂರ್ಣ ತಮ್ಮಲ್ಲಿ ಆಹ್ವಾನಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಇದ್ದಕ್ಕಿದ್ದಂತೆ ಮೈಯಲ್ಲಿ ಒಂದು ಅಪೂರ್ವಶಕ್ತಿ ಅವರಲ್ಲಿ ಕಂಡುಬಂದಿತು. ಇದು ರಾಮಕೃಷ್ಣರಿಗೆ ಅರಿವಾಗಿ ನಾಗಮಹಾಶಯರನ್ನು ದೂರತಳ್ಳಿ, ‘ನಿನ್ನಿಂದ ರೋಗ ವಾಸಿಮಾಡುವುದಕ್ಕೆ ಆಗುತ್ತೆ’ ಎಂದರು. ನಂತರ ರಾಮಕೃಷ್ಣರ ಅಂತಿಮ ಬಯಕೆಯಾದ ಕಿತ್ತಲೆಹಣ್ಣು-ನೆಲ್ಲಿಕಾಯಿಗಳನ್ನು ತಂದುಕೊಟ್ಟರು. ಪರಮಹಂಸರು ಪೂರ್ಣತೃಪ್ತಿಯಿಂದ ಸ್ವೀಕರಿಸಿದರು. ಪರಮಹಂಸರು ದೇಹಬಿಟ್ಟ ದಿನ ನಿರ್ಜಲೋಪವಾಸ ಮಾಡಿದರು. ನಾಗಮಹಾಶಯ ಕಲ್ಕತ್ತೆಯಿಂದ ಊರಿಗೆ ಬಂದು ತಂದೆಯ ಸೇವೆ ಮಾಡತೊಡಗಿದರು. ತಂದೆ ವಿಷಯ ಚಿಂತನೆಯಿಂದ ಭಗವಚ್ಚಿಂತನೆಯ ಕಡೆ ಮನಸ್ಸು ಹಾಕಿದರು.

ಕೆಲವು ಪ್ರಸಂಗಗಳು: ಪೂರ್ವಬಂಗಾಳದಲ್ಲಿ ತಂತ್ರಸಾಧನೆ ಮಾಡುವವರೇ ಹೆಚ್ಚಿದ್ದರು. ಅಂಥವರಿಗೆ ಅಲ್ಲಿ ಹೆಚ್ಚಾಗಿ ಗೌರವ ಸಿಗುತ್ತಿತ್ತು. ನಾಗಮಹಾಶಯರು ಇಂಥವರ ನಡುವೆ ಇದ್ದರು. ಇವರನ್ನು ಸಾಧುಮಹಾಪುರುಷರೆಂದು ತಿಳಿಯುತ್ತಿರಲಿಲ್ಲ. ಆದರೆ, ಒಮ್ಮೆ ನಾಗಮಹಾಶಯರ ಜತೆ ಮಾತನಾಡಿದರೆ ‘ಇವರು ಹೀನ-ದೀನಗೃಹಸ್ಥ; ಮನುಷ್ಯ ದೇಹದಲ್ಲಿರುವ ದೇವತೆ ಎಂದು ಗೊತ್ತಾಗುತ್ತಿತ್ತು! ಒಮ್ಮೆ ದೀನಬಂಧು ಮುಖ್ಯೋಪಾಧ್ಯಾಯರು ನಾಗಮಹಾಶಯರಿದ್ದ ದೇವಭೋಗಕ್ಕೆ ಹೋದರು. ನಾಗಮಹಾಶಯರನ್ನು ಕಂಡರು. ಅವರು, ‘ಇಂಥ ಮಹಾಪುರುಷರನ್ನು ನನ್ನ ಜೀವಮಾನದಲ್ಲಿ ಮತ್ತೊಬ್ಬರನ್ನು ನೋಡಿಲ್ಲ. ಇವರು ಶಾಸ್ತ್ರದಲ್ಲಿ ವಿದುರರು. ಇವರನ್ನು ನೋಡಿದ ಮೇಲೆ ಅವರಿಗಿಂತ ಏತರಲ್ಲೂ ಕಡಿಮೆ ಇಲ್ಲ’ ಎಂದು ಹೇಳಿದರು. ನಾಗಮಹಾಶಯರನ್ನು ನೋಡಲು ದೂರದೂರಾಂತರಗಳಿಂದ ಜನ ಬರುತ್ತಿದ್ದರು. ಕೆಲವೊಮ್ಮೆ ದೊಡ್ಡ ಸರ್ಕಾರಿ ಅಧಿಕಾರಿಗಳೂ ಬರುತ್ತಿದ್ದದ್ದುಂಟು. ಆಗ ನಾಗಮಹಾಶಯರು ಹೆಂಡತಿ ಠಾಕೂರಣಿಗೆ ‘ಪರಮಹಂಸರ ದಯೆ ಪೂರ್ಣವಾಗಿದೆ. ಇಲ್ಲಿಗೆ ಯಾರು ಬರುತ್ತಾರೋ ಅವರೆಲ್ಲ ನಿಜವಾದ ಧರ್ವನುರಾಗಿಗಳು. ಪರಮಹಂಸರು ಹಾಗೆ ಹೇಳಿದ್ದಾರೆ. ಅವರನ್ನೆಲ್ಲ ಆದರ ಮಾಡು. ನಿನಗೆ ಮಂಗಳವಾಗುತ್ತದೆ’ ಎನ್ನುತ್ತಿದ್ದರು.

ಒಂದು ದಿನ ನಾಗಮಹಾಶಯರಿಗೆ ಹೊಟ್ಟೆ ಶೂಲೆ ಬಂದಿತ್ತು. ಮನೆಯಲ್ಲಿ ಅಕ್ಕಿ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಎಂಟು-ಹತ್ತು ಜನ ಮನೆಗೆ ಬಂದರು. ಆ ಬಾಧೆಯಲ್ಲಿಯೇ ಅಂಗಡಿಗೆ ಹೋಗಿ ಸಾಮಾನುಗಳನ್ನು ಹೊತ್ತು ತಂದರು. ಹೊಟ್ಟೆ ಶೂಲ ಬಾಧೆ ಹೆಚ್ಚಾಯಿತು. ದಾರಿಯಲ್ಲಿ ಹೋಗುತ್ತಲೇ ಬಿದ್ದುಬಿಟ್ಟರು. ನೋವು ಕಡಿಮೆಯಾದಾಗ ಮನೆಗೆ ಬಂದರು. ಬಂದಿದ್ದ ಅತಿಥಿಗಳಿಗೆ ನಮಸ್ಕರಿಸಿ, ‘ಅಯ್ಯೋ ನಿಮ್ಮ ಸೇವೆ ತಡವಾಯಿತು. ನಾನು ತಪ್ಪು ಮಾಡಿದ್ದೇನೆ’ ಎಂದು ಹೇಳುತ್ತ ಅಡುಗೆ ಮಾಡಿ ಅತಿಥಿಗಳ ಸೇವೆ ಮಾಡಿದರು. ಮತ್ತೊಂದು ದಿನ ಮಳೆಗಾಲದಲ್ಲಿ ಇಬ್ಬರು ಅತಿಥಿಗಳು ಬಂದರು. ಅವರ ಮನೆಯಲ್ಲಿ ನಾಲ್ಕುಕೋಣೆಗಳಿದ್ದುವು. ಅದರಲ್ಲಿ ಒಂದು ಕೋಣೆ ಸರಿಯಾಗಿತ್ತು. ಉಳಿದ ಮೂರು ಕೋಣೆಗಳು ಮಳೆಯಿಂದ ಸೋರುತ್ತಿದ್ದವು. ಬಂದ ಅತಿಥಿಗಳಿಗೆ ಒಳ್ಳೆಯ ಕೋಣೆಕೊಟ್ಟು ಠಾಕೂರಣಿಗೆ, ‘ಇವತ್ತು ನಮ್ಮ ಪರಮಭಾಗ್ಯ. ಆ ದೈವಕ್ಕಾಗಿ ಸ್ವಲ್ಪ ಕಷ್ಟ ಅನುಭವಿಸೋಣ. ಆ ಮೂಲೆಯಲ್ಲಿ ಕುಳಿತು ಭಗವದ್ಧಾ್ಯನ ಮಾಡೋಣ’ ಎಂದು ಹೇಳುತ್ತ ಆ ರಾತ್ರಿ ಮಳೆಯಲ್ಲಿ ನೆನೆಯುತ್ತ ಕಾಲಕಳೆದರು. ಇಂಥ ಹತ್ತಾರು ಪ್ರಸಂಗಗಳು ಆಗಾಗ್ಗೆ ನಡೆಯುತ್ತಿದ್ದುವು!

ಮಹಾಸಮಾಧಿ: ಶ್ರೀರಾಮಕೃಷ್ಣ ಪರಮಹಂಸರು ಅಂತರ್ಧಾನ ಆದ ಮೇಲೆ ಊರಲ್ಲಿ ಒಂದು ಗುಡಿಸಲು ಹಾಕಿಕೊಂಡು ಏಕಾಂಗಿಯಾಗಿ ಇದ್ದುಬಿಡಲು ನಾಗಮಹಾಶಯರು ಯೋಚಿಸಿದ್ದರು. ಠಾಕೂರಣಿಗೆ ನಾಗಮಹಾಶಯರ ಮನೋಗತ ತಿಳಿಯಿತು. ‘ನಾನು ನಿಮ್ಮೊಡನೆ ಇರುತ್ತೇನೆ. ನಿಮ್ಮನ್ನು ಯಾವುದಕ್ಕೂ ಪೀಡಿಸುವುದಿಲ್ಲ’ ಎಂದು ಸಾಧಿ್ವಮಣಿ ಹೇಳಿದ ಮೇಲೆ ಸಂಸಾರದಲ್ಲಿ ಇದ್ದುಕೊಂಡಿದ್ದರು. ಆದರೆ, ಮನೆಯಲ್ಲಿದ್ದರೂ ಅವರು ಬದುಕಿರುವತನಕ ಸಂನ್ಯಾಸಿಧರ್ಮವನ್ನು ಪಾಲಿಸಿದರು. ನಾಗಮಹಾಶಯರ ತಂದೆ ದೀನದಯಾಳು ಎಂಬತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ಅವರ ಅಪರಕ್ರಿಯೆಗಳನ್ನು ಸಾಂಗೋಪಾಂಗವಾಗಿ ನೆರವೇರಿಸಿದರು. ವಿದೇಶದಿಂದ ಸ್ವಾಮಿ ವಿವೇಕಾನಂದರು ಬಂದವರೇ ‘ದೇವಭೋಗ’ಕ್ಕೆ ಬಂದು ಒಂದೆರಡು ದಿನವಿದ್ದರು! ಆಗ ನಾಗಮಹಾಶಯರಿಗಾದ ಸಂತೋಷ ಅಷ್ಟಿಷ್ಟಲ್ಲ. ಅವರನ್ನು ಕಂಡರೆ ಎಲ್ಲರಿಗೂ ಗುರುಭಾವ. ಅನೇಕರಿಗೆ ನಾಗಮಹಾಶಯರಿಂದ ದೀಕ್ಷೆ ತೆಗೆದುಕೊಳ್ಳಬೇಕೆಂಬ ಹಂಬಲ. ಆದರೆ, ತಾನು ಶೂದ್ರವರ್ಣದವನೆಂದೂ ದೀಕ್ಷೆಕೊಡಲು ಸಾಧ್ಯವಿಲ್ಲವೆಂದೂ ಹೇಳಿದ್ದುಂಟು.

ದೇವಭೋಗ ಮತ್ತು ಕಲ್ಕತ್ತ ಅವರ ಕ್ರಿಯಾಭೂಮಿಯಾಗಿತ್ತು. ಮಾತೆ ಶಾರದಾದೇವಿ ಅವರನ್ನು ಕಂಡಾಗೆಲ್ಲ ಭಾವುಕರಾಗುತ್ತಿದ್ದರು. ‘ಅಮ್ಮಾ ಅಮ್ಮಾ’ ಎಂದು ಜಪ ಮಾಡುತ್ತಿದ್ದರು. ಅವರು ಕೊಟ್ಟ ಪದಾರ್ಥವನ್ನು ಪ್ರಸಾದರೂಪವಾಗಿ ಸ್ವೀಕರಿಸುತ್ತಿದ್ದರು. ದೇವಭೋಗದಲ್ಲಿದ್ದ ಹತ್ತಾರು ಜನರು ನಾಗಮಹಾಶಯರ ಸತ್ಸಂಗದಲ್ಲಿ ಸೇರಿ ಗುರುಭಾವದಿಂದಲೇ ವರ್ತಿಸುತ್ತಿದ್ದರು. ಕಲ್ಕತ್ತದಲ್ಲಿದ್ದ ಸುರೇಶಬಾಬು, ಚಕ್ರವರ್ತಿ, ತುರೀಯಾನಂದ, ನಿರ್ಮಲಾನಂದ, ನಿರಂಜನಾನಂದ, ಪ್ರೇಮಾನಂದ, ತ್ರಿಗುಣಾತೀತ ಮೊದಲಾದವರು ನಾಗಮಹಾಶಯರ ವಿಷಯದಲ್ಲಿ ಗೌರವ ಹಾಗೂ ಗುರುಪ್ರೀತಿಯನ್ನು ಇಟ್ಟುಕೊಂಡಿದ್ದರು. ಪೂಜ್ಯಪಾದರಾದ ಸ್ವಾಮಿ ಬ್ರಹ್ಮಾನಂದರು ನಾಗಮಹಾಶಯರ ಭಕ್ತಿಗೆ ಮಾರುಹೋಗಿದ್ದರು.

ಅದು ನಾಗಮಹಾಶಯರ ಕೊನೆಯ ದಿನಗಳು. ಮಹಾಸಮಾಧಿಗೆ ಮುನ್ನ ರಕ್ಷಾಕಾಳಿ ಪ್ರತಿಮೆಯನ್ನು ನೋಡುತ್ತಲೇ ಸಮಾಧಿಸ್ಥರಾದರು. 1899ನೆಯ ಇಸವಿ ಪುಷ್ಯಮಾಸದ ತ್ರಯೋದಶಿ ದಿನ ಹತ್ತುಗಂಟೆ ಐದು ನಿಮಿಷಕ್ಕೆ ಮಹಾಸಮಾಧಿಯಲ್ಲಿ ನಿಶ್ಚಲರಾಗಿ ನಿಂತರು. ಅವರ ಮುಖಮಂಡಲ ಜ್ಯೋತಿರ್ಮಯವಾಯಿತು. ಅವರು ತಮ್ಮ 54ನೇ ವರ್ಷದಲ್ಲಿ ಮೃಣ್ಮಯ ದೇಹವನ್ನು ತೊರೆದರು.

ನಾಗಮಹಾಶಯರು ಗೃಹಸ್ಥಾಶ್ರಮದಲ್ಲಿದ್ದು-ಗುರುಸ್ಥಾನವನ್ನು ಪಡೆದರು. ಶ್ರೀರಾಮಕೃಷ್ಣ ಪರಮಹಂಸರ ಅಪ್ರತಿಮ ಭಕ್ತರಾಗಿ, ವೈರಾಗ್ಯದ ಸೀಮೆಯನ್ನು ಹತ್ತಿದ ಪರಿಪೂರ್ಣ ಜ್ಞಾನಿಗಳು!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Stay connected

278,741FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...