17.5 C
Bengaluru
Monday, January 20, 2020

ಭಾವಾತೀತಧ್ಯಾನದ ಮಹರ್ಷಿ ಮಹೇಶ್ ಯೋಗಿ

Latest News

ಮನಿಮಾತು| ಕಾರ್ ಲೋನ್ ಇದ್ದಾಗ ಹೋಮ್ ಲೋನ್ ಸಿಗುವುದೇ?

ಪ್ರಿವೆಂಟಿವ್ ಹೆಲ್ತ್ ಚೆಕ್ ಅಪ್ (ಮುನ್ನೆಚ್ಚರಿಕೆ ವಹಿಸಲು ಮಾಡುವ ಆರೋಗ್ಯ ತಪಾಸಣೆ) ಮಾಡಿಸಿದರೆ ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ ಲಭ್ಯವಾಗುವುದೇ? ಇದು...

ಮಾಸಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ; ಸಚಿವಾಕಾಂಕ್ಷಿಗಳಿಂದ ದೆಹಲಿಯಲ್ಲಿ ಅಂತಿಮ ಹಂತದ ಲಾಬಿ

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸ್ತಿರೋ ಸಚಿವಾಕಾಂಕ್ಷಿಗಳ ಅಂತಿಮ ಹಂತದ ಕಸರತ್ತು ಬೆಂಗಳೂರಿನಿಂದ ಈಗ ದೆಹಲಿಗೆ ಶಿಫ್ಟ್​ ಆಗಿದೆ. ದಾವೋಸ್​ಗೆ ಸಿಎಂ ಬಿಎಸ್ ಯಡಿಯೂರಪ್ಪ ತೆರಳಿದ್ದಾರೆ. ಬಿಎಸ್​ವೈ...

ಚೆನ್ನೈನಲ್ಲಿ ಎಂಎಸ್ ಧೋನಿ ರಿಟೇನ್!

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದಲ್ಲಿ...

ಯೋಗಕ್ಷೇಮ| ಯೋಗಾಸನಗಳನ್ನು ಯಾರು ಅಭ್ಯಾಸ ಮಾಡಬಹುದು?

ಹೌದು, ಈ ಪ್ರಶ್ನೆ ಸಹಜವೇ. ಯೋಗ ಬರಿ ಋಷಿ ಮುನಿಗಳಿಗೆ, ನಿವೃತ್ತರಿಗೆ, ಸಾಧಕರಿಗೆ ಕಡೆಗೆ ರೋಗಿಗಳಿಗೆ ಎಂಬ ಕಲ್ಪನೆ ಹಬ್ಬಿ ಬಿಟ್ಟಿದೆ. ಯೋಗ...

ಪರೀಕ್ಷಾ ಪೆ ಚರ್ಚಾ 3ನೇ ಆವೃತ್ತಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಜತೆ ಸಂವಹನ ನಡೆಸುವ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೂರನೇ ಆವೃತ್ತಿ ಕಾರ್ಯಕ್ರಮ ದೆಹಲಿಯ ತಲ್ಕತೋರಾ...

ಆಧುನಿಕ ಭಾರತದ ಯೋಗಿಗಳಲ್ಲಿ ಪಶ್ಚಿಮದ ಜನತೆಯನ್ನು ತಮ್ಮತ್ತ ವಿಶಿಷ್ಟವಾಗಿ ಸೆಳೆದುಕೊಂಡವರಲ್ಲಿ ಜೆಡ್ಡು ಕೃಷ್ಣಮೂರ್ತಿ, ಓಶೋ ರಜನೀಶ್, ಯೂಜಿ ಪ್ರಮುಖರು. ಇವರ ಸಾಲಿಗೆ ಸೇರುವ ಮಹತ್ವದ ಮತ್ತೊಂದು ಹೆಸರು ‘ಮಹರ್ಷಿ’ ಎಂದು ಸರ್ವರಿಂದ ಕರೆಸಿಕೊಂಡ ಮಹೇಶ್ ಯೋಗಿ. ಇವರು ತಮ್ಮ ‘Transcendental Meditation’ ಮೂಲಕ ಲಕ್ಷಾಂತರ ಜನರನ್ನು ತಮ್ಮತ್ತ ಸೆಳೆದುಕೊಂಡರು. ಜಗತ್ತಿನ ತತ್ತ್ವಶಾಸ್ತ್ರದ ಇತಿಹಾಸದಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಸಿಕೊಂಡರು.

ಮಹರ್ಷಿ ಮಹೇಶ್ ಯೋಗಿ ವಿಲಕ್ಷಣ ಸಾಧಕರು. ಅವರ ಬಳಿ ಲಕ್ಷಾಂತರ ಜನ ಬಂದು ಶಿಷ್ಯರಾದರು. ಇಂಗ್ಲಿಷ್ ಮತ್ತು ಹಿಂದಿಯ ಮೂಲಕ ತಮ್ಮ ಸರಳತತ್ತ್ವದ ‘ಭಾವಾತೀತಧ್ಯಾನಕ್ರಮ’ವನ್ನು ಪ್ರತಿಯೊಬ್ಬರಿಗೂ ಮುಟ್ಟಿಸಿದರು. ಮಹರ್ಷಿ ಮಹೇಶ್ ಯೋಗಿ 1918ರ ಜನವರಿ 12ರಂದು ಜನಿಸಿದರು. ಇವರ ಜನ್ಮಸ್ಥಳ ಮಧ್ಯಪ್ರದೇಶದ ಜಬಲ್​ಪುರ.

ಪೂರ್ವಚರಿತ್ರೆ: ಅವರ ಬಾಲ್ಯವಿದ್ಯಾಭ್ಯಾಸದ ವಿವರಗಳು ದೊರಕುತ್ತಿಲ್ಲ. ಆದರೆ, ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ 1924ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದರೆಂಬ ದಾಖಲೆಗಳಿವೆ. ಇವರು ಕೆಲಕಾಲ ಜಬಲ್​ಪುರದ ಗನ್​ಕ್ಯಾರಿಯರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದುಂಟು. ಅನಂತರ ಜ್ಯೋತಿರ್​ವುಠದಲ್ಲಿ ಆಡಳಿತಾಧಿಕಾರಿಯಾಗಿ ಸೇರ್ಪಡೆಗೊಂಡರು. ಆ ಮಠ ಶ್ರೀಶಂಕರಾಚಾರ್ಯರ ಪರಂಪರೆಗೆ ಸೇರಿದ್ದು. ಇವರು ಗುರುದೇವ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಲ್ಲಿ ಶಿಷ್ಯವೃತ್ತಿ ಕೈಗೊಂಡರು. ಅಲ್ಲಿ ಇವರು ಬಾಲಬ್ರಹ್ಮಚಾರಿ ಮಹೇಶ್ ಎಂಬ ಹೆಸರಿನಿಂದಲೇ ಪ್ರಖ್ಯಾತರಾದರು. ಬ್ರಹ್ಮಾನಂದ ಸರಸ್ವತಿಯವರ ಪ್ರೀತಿಯ ಶಿಷ್ಯರಾಗಿ ಬೆಳೆದರು. ಕೆಲದಿನಗಳ ನಂತರ ಬ್ರಹ್ಮಾನಂದ ಸರಸ್ವತಿಯವರು ಬಾಲಬ್ರಹ್ಮಚಾರಿ ಮಹೇಶರ ಬುದ್ಧಿವಂತಿಕೆ, ಸಮಯಪ್ರಜ್ಞೆ, ಶಾಸ್ತ್ರಾನುಸಂಧಾನ, ತಪಶ್ಚರ್ಯು ಕಂಡು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. ಮಹಾಗುರುಗಳ ಪದತಲದಲ್ಲಿ ಕುಳಿತು ರಹಸ್ಯವಿದ್ಯೆ ಆರ್ಜಿಸಿದರು. ಇವರು ಆಳವಾದ ಧ್ಯಾನಸ್ಥಿತಿಗೆ ಹೋಗುತ್ತಿದ್ದದ್ದುಂಟು. ಗುರುಗಳು ನಿರ್ಯಾಣಗೊಳ್ಳುವವರೆಗೂ ಆಶ್ರಮದಲ್ಲಿಯೇ ಇದ್ದರು. 1953ನೆಯ ಇಸವಿ ಹಿಮಾಲಯದ ಉತ್ತರಾಖಂಡದ ಉತ್ತರಕಾಶಿಯಲ್ಲಿ ತಪೋಮಗ್ನರಾದರು. ಅಲ್ಲಿ ಎರಡು ವರ್ಷಗಳ ಕಾಲ ಕಠಿಣ ತಪಶ್ಚರ್ಯುಯಲ್ಲಿ ಮುಳುಗಿ ಯೋಗಿ ಎನಿಸಿಕೊಂಡರು.

ಮಹೇಶ್ ಯೋಗಿ ಮೊದಲಿಗೆ ಉತ್ತರಕಾಶಿಯಲ್ಲಿ ಸಾರ್ವಜನಿಕ ಭಾಷಣ ಪ್ರಾರಂಭಿಸಿದರು. ಇವರು ಮೊದಲಿಗೆ ಸಾಂಪ್ರದಾಯಿಕ ಧ್ಯಾನಪದ್ಧತಿಯನ್ನು ಗುರುದೇವ ಬ್ರಹ್ಮಾನಂದ ಸರಸ್ವತಿಯವರ ಅನುಗ್ರಹದಿಂದ ಸಂಪಾದಿಸಿದ್ದರು. ಆ ಧ್ಯಾನಕ್ರಮವನ್ನೇ ‘ಟ್ರಾ್ಯನ್ಸ್​ಡೆಂಟಲ್ ಡೀಪ್ ಮೆಡಿಟೇಷನ್’ ಎಂಬ ಹೆಸರಿನಿಂದ ಪ್ರಚುರವಾಯಿತು. ಕೆಲ ಕಾಲಾನಂತರ ತಾವು ರೂಪಿಸಿದ ಧ್ಯಾನಪದ್ಧತಿಗೆ ‘ಟ್ರಾ್ಯನ್ಸ್ ಡೆಂಟಲ್ ಮೆಡಿಟೇಷನ್’ ಎಂದು ಕರೆದು ಪ್ರಚಾರ ಮಾಡತೊಡಗಿದರು. ಇವರ ಅಪೂರ್ವ ಧ್ಯಾನಪದ್ಧತಿ ಅರಿತ ಭಾರತೀಯ ಪಂಡಿತರು ಮತ್ತು ಭಾರತೀಯ ಯೋಗಿಗಳು ಇವರನ್ನು ‘ಮಹರ್ಷಿ’ ಎಂದು ಕರೆಯತೊಡಗಿದರು.

ಮಹರ್ಷಿಗಳು 1955-57 ಎರಡು ವರ್ಷಗಳ ಕಾಲ ವಿಶ್ವಪರ್ಯಟನೆ ಕೈಗೊಂಡರು. 1957ನೆಯ ಇಸವಿಯಲ್ಲಿ ಆಧ್ಯಾತ್ಮಿಕ ಪುನರುಜ್ಜೀವನದ ಆಂದೋಲನ ಪ್ರಾರಂಭಿಸಿದರು. ಇವರ ಎರಡನೆಯ ವಿಶ್ವಪರ್ಯಟನೆ 1958ರ ಇಸವಿಯಲ್ಲಿ ಪ್ರಾರಂಭಗೊಂಡು 1968ರ ವರೆಗೆ ನಡೆಯಿತು. ಅವರು ಮೊದಲ ವಿಶ್ವಪರ್ಯಟನೆಯ ಸಮಯದಲ್ಲಿ ಲೋಕಕ್ಕೆ’I had one thing in mind, that I know something which is useful to every man’ ಎಂದು ಸಾರಿದ್ದರು. ಅದು ಎರಡನೆಯ ವಿಶ್ವಪರ್ಯಟನೆಯ ಹೊತ್ತಿಗೆ ನಿಜವೂ ಆಯಿತು. 1986ರಲ್ಲಿ ಪ್ರಕಟಗೊಂಡ ‘Around the World’ ಪುಸ್ತಕದಲ್ಲಿ ವಿಶ್ವಪರ್ಯಟನೆಯ ವಿವರಗಳಿವೆ. ದ್ವಿತೀಯ ಪರ್ಯಟನೆಯಲ್ಲಿ ತಾವು ರೂಪಿಸಿದ ‘ಭಾವಾತೀತಧ್ಯಾನದ’ ಮಹತ್ವವನ್ನು ಸ್ಯಾನ್​ಪ್ರಾನ್ಸಿಸ್ಕೋ, ಲಾಸ್ ಏಂಜಲೀಸ್, ಬಾಸ್ಟನ್, ನ್ಯೂಯಾರ್ಕ ಮತ್ತು ಲಂಡನ್ ನಗರಗಳಲ್ಲಿ ಧ್ಯಾನತರಗತಿಗಳನ್ನು ಏರ್ಪಡಿಸುವ ಮೂಲಕ ಸಾರಿದರು. ಅಲ್ಲಿಯ ಜನರು ‘ಭಾವಾತೀತಧ್ಯಾನ’ ಪದ್ಧತಿಗೆ ಆಕರ್ಷಿತರಾದರು. ಮಹರ್ಷಿಗಳು ಲಾಸ್ ಏಂಜಲ್ಸ್​ನ ಹೆಲನಾ ಓಲ್ಸನ್ ಎಂಬುವರ ಮನೆಯಲ್ಲಿದ್ದಾಗ, ಮೂರುವರ್ಷಗಳ ಯೋಜನೆಯೊಂದನ್ನು ರೂಪಿಸಿದರು. ಈ ಯೋಜನೆ ಮೂಲಕ ಸಮಸ್ತವಿಶ್ವವನ್ನು ವ್ಯಾಪಿಸುವ ಉದ್ದೇಶ ಮಹರ್ಷಿಯವರದಾಗಿತ್ತು. ಇವರು ಸಾಮಾನ್ಯ ಹಾಗೂ ಮಧ್ಯಮವರ್ಗದ ಶಿಷ್ಯರೊಡನೆ ಬೆರೆತರು. ಅವರೆಲ್ಲ ಇವರ ಧ್ಯಾನಕ್ರಮಕ್ಕೆ ಆಕರ್ಷಿತರಾದರು. ಇವರ ಜತೆ, ಕೆಲ ಪ್ರಸಿದ್ಧ ಸಾಹಿತಿಗಳೂ, ವಿಜ್ಞಾನಿಗಳೂ, ಕಲಾವಿದರೂ ಸೇರಿಕೊಂಡರು. ಅಂಥವರಲ್ಲಿ ನ್ಯಾನ್ಸಿಕುಕ್ ಡೆ ಹೆರೆರಾ ಮತ್ತು ಡೋರಿಸ್ ಡ್ಯೂಕ್ ಪ್ರಮುಖರು.

ಪ್ರಚಾರ-ಪ್ರಸಾರ: ಮಹರ್ಷಿ ಮಹೇಶ ಯೋಗಿ 1959ರಲ್ಲಿ ಅಮೆರಿಕಕ್ಕೆ ಬಂದಾಗ ಆಧ್ಯಾತ್ಮಿಕ ಪುನರುತ್ಥಾನಕ್ಕೆ ಚಾಲನೆ ನೀಡಿದರು. ಅವರು ವೇದೋಕ್ತ ಭಾವಾತೀತ ಧ್ಯಾನಕ್ಕೆ ಹೊಸಸ್ಪರ್ಶ ನೀಡಿದರು. ಅದೇ ಹೊತ್ತಿಗೆ ಅಂತಾರಾಷ್ಟ್ರೀಯ ಧ್ಯಾನಸಂಸ್ಥೆ ಪ್ರಾರಂಭಿಸಿ, ಸ್ಯಾನ್​ಫ್ರಾನ್ಸಿಸ್ಕೋ ಮತ್ತು ಲಂಡನ್ನಿನಲ್ಲಿ ಇದರ ಶಾಖಾಕೇಂದ್ರ ತೆರೆದರು. 1960ರ ನಂತರ ಮಹೇಶ್ ಯೋಗಿ ಹಲವಾರು ದೇಶಗಳ ಪರ್ಯಟನ ಕೈಗೊಂಡರು. ಭಗವಾನ್ ರಜನೀಶ್ ಹೊರತು ಪಡಿಸಿದರೆ, ಪ್ರಪಂಚದಾದ್ಯಂತ ನೂರಾರು ಭಾವಾತೀತ ಧ್ಯಾನಕೇಂದ್ರಗಳನ್ನು ತೆರೆದ ಕೀರ್ತಿ ಮಹರ್ಷಿಗಳಿಗೆ ಸಲ್ಲುತ್ತದೆ. ಈ ನಡುವೆ ಇಂಗ್ಲೆಂಡ್​ನಲ್ಲಿ ಟಿ.ವಿ. ಸಂದರ್ಶನಗಳು ಪ್ರಸಾರವಾದವು. ‘ಬರ್ವಿುಂಗ್​ಹ್ಯಾಂಪೋಸ್ಟ್’, ‘ಆಕ್ಸಫರ್ಡ್​ವೆುೕಯಿಲ್’, ‘ಕೇಂಬ್ರಿಡ್ಜ್ ಡೈಲಿನ್ಯೂಸ್’ ಪತ್ರಿಕೆಗಳು ಮಹರ್ಷಿಗಳ ಭಾವಾತೀತಧ್ಯಾನದ ಮಹತ್ವವನ್ನು ಜಗತ್ತಿಗೆ ಸಾರಿದವು. ಮಹರ್ಷಿಗಳು 1961ರಲ್ಲಿ ಬಿ.ಬಿ.ಸಿ ದೂರದರ್ಶನದಲ್ಲಿ ಉಪನ್ಯಾಸಗಳನ್ನು ನೀಡಿದರು. ಐದುಸಾವಿರಕ್ಕೂ ಹೆಚ್ಚು ಜನ ಸೇರಿದ್ದ ಲಂಡನ್ನಿನ ರಾಯಲ್ ಆಲ್ಬರ್ಟ್​ಹಾಲ್​ನಲ್ಲಿ ಐತಿಹಾಸಿಕ ಪ್ರವಚನ ನೀಡಿದರು. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಧ್ಯಾತ್ಮಿಕ ವಿಕಾಸದ ಮೂಲಕ ಜ್ಞಾನೋದಯ ಸಾಧ್ಯವೆಂದು ಅವರು ಹೇಳಿದರು. ಆದರ್ಶವ್ಯಕ್ತಿ, ಆದರ್ಶಸಮಾಜ, ಆದರ್ಶರಾಷ್ಟ್ರ ಹಾಗೂ ಆದರ್ಶವಿಶ್ವದ ನಿರ್ಮಾಣ ಆಗುವುದು ಅಗತ್ಯವಿದೆಯೆಂದು ತಿಳಿಸಿದರು. ಅವರು ಚೇತನಾ ವಿಜ್ಞಾನ (Science of Creative Intellegence)ವೆಂಬ ಒಂದು ಜ್ಞಾನಭಂಡಾರವನ್ನೇ ಜಗತ್ತಿಗೆ ನೀಡಿದರು. ಈ ಚೇತನಾ ವಿಜ್ಞಾನವೆನ್ನುವುದು ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಮೆರೆಯುವ ವೇದವಿಜ್ಞಾನ. ಅಪೌರುಷೇಯ ಎನಿಸಿದ ವೇದವಿಜ್ಞಾನವನ್ನು ಆಧುನಿಕ ವಿಜ್ಞಾನವು ವಿಶ್ಲೇಷಿಸಿ, ಅದರಲ್ಲಿರುವ ಸನಾತನ ತತ್ತ್ವಗಳನ್ನು ಎಲ್ಲರ ಆದರಣೆಗೂ ಪಾತ್ರವಾಗುವಂತೆ ಇವರು ಮಾಡಿದರು. ಈ ಚೇತನಾ ವಿಜ್ಞಾನದ ಪ್ರಯೋಗಾತ್ಮಕ ಅಂಗವೇ ‘ಭಾವಾತೀತಧ್ಯಾನ’ ಪ್ರಕಲ್ಪ. ಇದು ಸುಲಭವೂ ಸರಳವೂ ಆದ ಒಂದು ಧ್ಯಾನಪದ್ಧತಿಯೆಂದು ಎಲ್ಲರಿಗೂ ಅವರು ಮನವರಿಕೆ ಮಾಡಿಕೊಟ್ಟರು. ಇದು ವಿಶ್ವದ ಲಕ್ಷಾಂತರ ಜನರ ಪ್ರತ್ಯಕ್ಷಾನುಭವಕ್ಕೆ ನಿದರ್ಶನವಾಯಿತು. ಇದರ ಪ್ರಚಾರ-ಪ್ರಸಾರಕ್ಕಾಗಿ ಪ್ರಪಂಚದ ಮೂಲೆ-ಮೂಲೆಗಳಲ್ಲೂ ಧ್ಯಾನಕೇಂದ್ರಗಳನ್ನು ಸ್ಥಾಪಿಸಿದರು. ಆ ಕೇಂದ್ರಗಳ ಮೂಲಕ ಭಾವಾತೀತ ಧ್ಯಾನಪದ್ಧತಿ ತಿಳಿಯಲು, ಕಲಿಯಲು ಜನ ಮುಂದೆ ಬಂದರು. ಈ ಪದ್ಧತಿಯಂತೆ ಧ್ಯಾನಮಾಡಲು ಯಾರೂ ಕಷ್ಟಪಡಬೇಕಿಲ್ಲ. ಬೆಳಗ್ಗೆ ಮತ್ತು ಸಂಜೆ ಕೇವಲ ಹದಿನೈದು ನಿಮಿಷ ಧ್ಯಾನ ಮಾಡಿದರೆ ಸಾಕು. ಪೂರ್ಣಫಲ ಪಡೆಯಲು ಸಾಧ್ಯವೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.

ಭಾವಾತೀತಧ್ಯಾನದ ಮಹತ್ವವನ್ನು ಜಗತ್ತಿನಾದ್ಯಂತ ಸಾರುತ್ತಲೇ 1961ರ ಏಪ್ರಿಲ್​ನಲ್ಲಿ ಹೃಷಿಕೇಶದಲ್ಲಿ ಪ್ರಥಮಬಾರಿಗೆ ಭಾವಾತೀತಧ್ಯಾನ ತರಬೇತಿ ಶಿಬಿರವನ್ನು ಶಿಕ್ಷಕರಿಗಾಗಿ ಹಮ್ಮಿಕೊಂಡರು. ಈ ವಿಶೇಷ ತರಬೇತಿ ಶಿಬಿರಕ್ಕೆ ಭಾರತವೂ ಸೇರಿದಂತೆ ಅರುವತ್ತು ರಾಷ್ಟ್ರಗಳಿಂದ ಸಹಸ್ರಾರು ಜನ ಭಾಗವಹಿಸಿದರು. 1962ರಲ್ಲಿ ಪ್ರಪಂಚಪರ್ಯಟನೆಯನ್ನು ಪ್ರಾರಂಭಿಸಿ ಯುರೋಪ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ಗಳಲ್ಲಿ ಉಪನ್ಯಾಸಗಳನ್ನು ನೀಡಿದರು. ಬ್ರಿಟನ್ನಿನಲ್ಲಿ ಆಧ್ಯಾತ್ಮಿಕ ಸಮುನ್ನತಿಗಾಗಿ ಶಾಖೆಯೊಂದನ್ನು ತೆರೆದರು. 1962ರ ಏಪ್ರಿಲ್ 20ರಂದು ಋಷಿಕೇಶದಲ್ಲಿ ನಲ್ವತ್ತು ದಿನಗಳ ಭಾವಾತೀತ ಧ್ಯಾನಶಿಬಿರವನ್ನು ಎರಡನೆಯ ಬಾರಿ ನಡೆಸಿದರು. ಮಹರ್ಷಿಯವರು ಇದೀಗ ಐದನೆಯ ವಿಶ್ವಪರ್ಯಟನೆಗೆ ಸಿದ್ಧರಾದರು. ಅದೇ ವರ್ಷ ಕ್ಯಾಲಿಫೋರ್ನಿಯಾದಲ್ಲಿ ಅನುಭವಿ ಸಾಧಕರ ಜತೆ ಧ್ಯಾನಶಿಬಿರಗಳನ್ನು ನಡೆಸಿದರು. 1961ರಲ್ಲಿ ಪ್ರಾರಂಭಿಸಿದ್ದ The Science of being and Art of Living ಪುಸ್ತಕ 1964ರಲ್ಲಿ ಪೂರ್ಣಗೊಂಡಿತು. ಇದು 13 ಭಾಷೆಗಳಲ್ಲಿ ಅನುವಾದಗೊಂಡು ಲಕ್ಷಾಂತರ ಪುಸ್ತಕಗಳು ಮಾರಾಟಗೊಂಡವು. 1966ರಲ್ಲಿ ಮಹರ್ಷಿಯವರು ‘ಸ್ಟೂಡೆಂಟ್ ಇಂಟರ್​ನ್ಯಾಶನಲ್ ಮೆಡಿಟೇಷನ್ ಸೊಸೈಟಿ’ (SIMS)ಯನ್ನು ಲಾಸ್ ಏಂಜಲೀಸ್​ನಲ್ಲಿ ಸ್ಥಾಪಿಸಿದರು. ಈ ಸಂಸ್ಥೆ ಒಂದು ಸಾವಿರ ಧ್ಯಾನಶಿಬಿರಗಳನ್ನು ನಡೆಸಿತು. ಈ ಪ್ರಕಲ್ಪಕ್ಕೆ ಹಾರ್ವರ್ಡ್​ನ ವಿಶ್ವವಿದ್ಯಾಲಯ, ಮಾಲೆ ವಿಶ್ವವಿದ್ಯಾಲಯ ಮತ್ತು ಯುಸಿಎಲ್​ಎ ಸಂಸ್ಥೆಗಳು ಕೈಜೋಡಿಸಿದುವು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1971ರಲ್ಲಿ ‘ಮಹರ್ಷಿ ಇಂಟರ್ ನ್ಯಾಷನಲ್’ ಯೂನಿವರ್ಸಿಟಿ ಸ್ಥಾಪನೆಯಾಯಿತು. 1972ನೆಯ ವರ್ಷ ಮಹರ್ಷಿಗಳ ಪಾಲಿಗೆ ಅಮೃತಘಳಿಗೆಯೇ ಸರಿ. ಚೇತನಾ ವಿಜ್ಞಾನದಲ್ಲಿ ತರಬೇತಿ ಪಡೆದ 2000 ಜನ ಹೊಸಶಿಕ್ಷಕರ ಜತೆಗೂಡಿ ವಿಶ್ವ ಆಯೋಜನೆಯೊಂದನ್ನು ಮೆಲ್ಬೊರ್ನ್​ದಲ್ಲಿ ಉದ್ಘಾಟಿಸಿದರು. ಪ್ರತಿಯೊಂದು ದೇಶದಲ್ಲೂ ಪ್ರತಿ ದಶಲಕ್ಷ ಜನಸಂಖ್ಯೆಗೆ ಒಂದು ವಿಶ್ವ ಆಯೋಜನ ಕೇಂದ್ರ ಸ್ಥಾಪಿಸತೊಡಗಿದರು. ಈ ಆಯೋಜನೆಯ ಪರಿಣಾಮವಾಗಿ ಭಾವಾತೀತ ಧ್ಯಾನದ ಅಭ್ಯಾಸದಿಂದಾಗಿ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆಂದು ಗುರುತಿಸಲಾಯಿತು. ಇದು ‘ಮಹರ್ಷಿ ಎಫೆಕ್’ ಎಂದು ಮುಂದೆ ಕರೆಯಲಾಯಿತು. ಮಹರ್ಷಿಗಳು ಇದರಿಂದ ಸ್ಪೂರ್ತಿ ಪಡೆದು 1975 ಜನವರಿ 12ರಂದು ‘ಜ್ಞಾನಯುಗದ ಅರುಣೋದಯ’ (Dawn of the Age of Entightenment)ವನ್ನು ಜಗತ್ತಿಗೆ ಸಾರಿದರು. ವೈಯಕ್ತಿಕ ಹಾಗೂ ಸಾಮೂಹಿಕ ಚೇತನದ ಉನ್ನತ ಮಟ್ಟಗಳು ಬೆಳೆಯುವುದನ್ನು ಹಾಗೂ ಜ್ಞಾನಯುಗದ ಪ್ರಭೆ ಮೇಲೇರುವುದನ್ನು ಪರಿಶೋಧಿಸಲು ಅದೇ ವರ್ಷ ಸ್ವಿಟ್ಸರ್​ಲೆಂಡ್​ನಲ್ಲಿ ‘ಮಹರ್ಷಿ ಯುರೋಪಿಯನ್ ರಿಸರ್ಚ್ ಯೂನಿವರ್ಸಿಟಿ’ಯನ್ನು ಮಹರ್ಷಿಗಳು ಸ್ಥಾಪನೆ ಮಾಡಿದರು. ಅನಂತರ 1976 ಜನವರಿ 12ರಂದು ‘ಜ್ಞಾನಯುಗದ ವಿಶ್ವಸರ್ಕಾರ’ (World Govt.of the Age of enlightenment) ವನ್ನು ಸ್ಥಾಪಿಸಿದರು. ಇದಕ್ಕೆ 1,500 ರಾಜಧಾನಿಗಳು ಹಾಗೂ ನಡೆಸಿಕೊಂಡು ಹೋಗಲು 16000 ಜನ ಜ್ಞಾನಯುಗೀ ಮಂಡಲಾಧಿಪತಿಗಳನ್ನು ನಿಯುಕ್ತಿಗೊಳಿಸಿದ್ದು ಮತಧರ್ಮಶಾಸ್ತ್ರದ ಚರಿತ್ರೆಯಲ್ಲೇ ಅಪೂರ್ವ ಸಂದರ್ಭ. 1978ನೆಯ ಇಸವಿ. ಮಹರ್ಷಿಯವರು 108 ದೇಶಗಳಲ್ಲಿ ‘ಆದರ್ಶಸಮಾಜ ಆಂದೋಲನ’ (Ideal Society Campaign) ವನ್ನು ಕೈಗೊಂಡರು. ಈ ಆಂದೋಲನದ ಕಾಲದಲ್ಲಿ ಎಲ್ಲೆಲ್ಲಿ ಜ್ಞಾನಯುಗಿ ಮಂಡಲಾಧೀಪರು ಹೋಗುವರೋ ಅಲ್ಲೆಲ್ಲ ‘ಮಹರ್ಷಿ ಎಫೆಕ್ಟ್’ ಇರುವುದು ಕಂಡು ಬಂದಿತು.

ವೇದವಿಜ್ಞಾನ: ವೇದಗಳಲ್ಲಿರುವ ಜ್ಞಾನವನ್ನು ‘ವೇದವಿಜ್ಞಾನ’ದ ರೂಪದಲ್ಲಿ ಜಗತ್ತಿಗೆ ನೀಡಬೇಕೆಂಬ ಉದ್ದೇಶದಿಂದ 3000 ಜನ ಜ್ಞಾನಯುಗೀ ಮಂಡಲಾಧಿಪತಿಗಳನ್ನು ಪ್ರಪಂಚದ ನಾನಾ ಭಾಗಗಳಿಂದ ಬರಮಾಡಿಕೊಂಡು 1980ರಲ್ಲಿ ‘ವೇದ ವಿಶ್ವಸಮ್ಮೇಳನ’ವನ್ನು ದೆಹಲಿಯಲ್ಲಿ ನಡೆಸಿದರು. ವೇದವಿಜ್ಞಾನವು ಶಿಕ್ಷಣ ವ್ಯವಸ್ಥೆಯಲ್ಲಿ ಸೇರಬೇಕು. ಪ್ರತಿದೇಶವು ಸಮಸ್ಯೆಗಳಿಂದ ಮುಕ್ತಗೊಳ್ಳಬೇಕು. ಅದು ಸ್ವಯಂಪೂರ್ಣತೆಯನ್ನೂ ಅಜೇಯತ್ವವನ್ನೂ ಪಡೆದುಕೊಳ್ಳಬೇಕು. ಜಗತ್ತು ತನ್ಮೂಲಕ ಸುಖಮಯವಾಗುತ್ತದೆ. ಹೀಗೆ, ವೇದವಿಜ್ಞಾನದ ಅನ್ವಯ ಆಧುನಿಕ ಜೀವನದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕಗೊಳ್ಳಬೇಕೆಂಬ ಸದಿಚ್ಛೆ ಮಹರ್ಷಿಯವರದಾಗಿತ್ತು. ಈ ಕಾರಣದಿಂದ 1980ರ ವರ್ಷವನ್ನು ವಿಶುದ್ಧ ಜ್ಞಾನವರ್ಷ (Year of purp knowledge) ವೆಂದು ಮಹರ್ಷಿಗಳು ಲೋಕಕ್ಕೆ ಸಾರಿದರು. ಮಹರ್ಷಿಯವರು 1982ರಂದು ಉತ್ತರಪ್ರದೇಶದಲ್ಲಿ ‘ಮಹರ್ಷಿ ವೇದವಿಜ್ಞಾನ ವಿಶ್ವವಿದ್ಯಾಪೀಠಮ್ ಸ್ಥಾಪನೆ ಮಾಡಿದರು. ಇಲ್ಲಿ ವೇದವಿಜ್ಞಾನದಲ್ಲಿ ಪರಿಣತರಾಗಲು, ಅವಕಾಶ ನೀಡಲಾಯಿತು. ನೆದರ್​ಲ್ಯಾಂಡಿನ ಸೀಲ್ಸ್​ಬರ್ಗ್​ನಲ್ಲಿ ಆಶ್ರಮಸ್ಥಾಪನೆ ಮಾಡಿ 1991ರಿಂದ 2008 ರವರೆಗೆ ಕಾರ್ಯಕ್ಷೇತ್ರವಾಗಿಸಿಕೊಂಡರು. ಇಲ್ಲೇ ‘ಮಹರ್ಷಿ ಯುರೋಪಿಯನ್ ರಿಸರ್ಚ್ ಯೂನಿವರ್ಸಿಟಿ’ (MERU) ಯನ್ನು ಲೋಕಾರ್ಪಣೆ ಗೊಳಿಸಿದರು. ಇದು ಮುಂದೆ ‘ಮೇರು’ ಎಂದು ಪ್ರಖ್ಯಾತವಾಯಿತು. ಇಲ್ಲಿ 22 ಭಾಷೆಗಳಲ್ಲಿ 144 ರಾಷ್ಟ್ರಗಳಿಗೆ ‘ವೇದದರ್ಶನ’ ಪ್ರಸಾರವಾಗಲು ಅನುವು ಮಾಡಿಕೊಟ್ಟರು. ಅಮೆರಿಕ ಸಂಯುಕ್ತ ಸಂಸ್ಥಾನದ ಫೇರ್​ಫೀಲ್ಡ್​ನಲ್ಲಿ ‘ಮಹರ್ಷಿ ವೇದಿಕ್ ಸಿಟಿ’ ನಿರ್ವಣಗೊಂಡಿತು. ಇಂಥ ಹತ್ತಾರು ಪ್ರಕಲ್ಪಗಳ ಮೂಲಕ ಮಹರ್ಷಿ ವಿಶ್ವದ ಗಮನ ಸೆಳೆದು ವಿಶ್ವಮಾನ್ಯರೇ ಆದರು. ಅವರು ನೆದರ್​ಲ್ಯಾಂಡಿನ ‘ವ್ಲೋಡ್ರಾಪ್’ನಲ್ಲಿ 90ನೇ ಹುಟ್ಟುಹಬ್ಬ ಆಚರಿಸಿಕೊಂಡರು. 2008ರ ಫೆಬ್ರವರಿ 5 ರಂದು ವ್ಲೋಡ್ರಾಪ್​ನಲ್ಲಿ ದೇಹ ತ್ಯಜಿಸಿದರು. ಅವರ ಪಾರ್ಥಿವಶರೀರವನ್ನು ಮಹರ್ಷಿ ಗಳ ಇಚ್ಛೆಯ ಮೇರೆಗೆ ಅಲಹಾಬಾದ್ ಆಶ್ರಮದಲ್ಲಿ ಸಮಾಧಿ ಮಾಡಲಾಯಿತು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...