More

    ಭಗವಂತನಿಗೆ ಎಲ್ಲವೂ ಸಾಧ್ಯ

    ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಕಲ್ಕತ್ತೆಯ ದಕ್ಷಿಣೇಶ್ವರದಲ್ಲಿ ಕಾಳಿದೇವಸ್ಥಾನದಲ್ಲಿ ನೆಲೆಸಿದ್ದರು. ಅಲ್ಲಿ ಹನ್ನೆರಡು ವರ್ಷ ಘೊರ ತಪಸ್ಸನ್ನು ಆಚರಿಸಿ ಅನೇಕ ಆಧ್ಯಾತ್ಮಿಕ ಅನುಭವಗಳನ್ನು ಪಡೆದಿದ್ದರು. ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದ ಮಥುರನಾಥ ಅವರ ಭಕ್ತನಾಗಿದ್ದ.

    ಭಗವಂತನಿಗೆ ಎಲ್ಲವೂ ಸಾಧ್ಯಒಮ್ಮೆ ಅವರಿಬ್ಬರೂ ಆಧ್ಯಾತ್ಮಿಕ ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದರು. ಮಥುರನಾಥನ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಮಾತಿನ ಮಧ್ಯದಲ್ಲಿ, ‘ಭಗವಂತನಿಗೆ ಎಲ್ಲವೂ ಸಾಧ್ಯ, ಅವನಿಗೆ ಯಾವುದೂ ಅಸಾಧ್ಯವಿಲ್ಲ’ ಎಂದರು ಪರಮಹಂಸರು. ಮಥುರನು ‘ಹಾಗಾದರೆ ಭಗವಂತ ನಿರ್ವಿುಸಿರುವ ಜಗತ್ತಿನ ನಿಯಮಗಳನ್ನು ಅವನೇ ಬದಲು ಮಾಡಬಹುದೇ?’ ಎಂದು ಪ್ರಶ್ನಿಸಿದನು. ಪರಮಹಂಸರು ‘ಹೌದು, ಅವನಿಗೆ ಸಾಧ್ಯ’ ಎಂದರು. ‘ಕೆಂಪು ದಾಸವಾಳದ ಗಿಡದಲ್ಲಿ ಬಿಳಿಯ ಬಣ್ಣದ ದಾಸವಾಳ ಹೂವು ಬೆಳೆಯಲು ಸಾಧ್ಯವೇ?’ ಎಂದು ಮಥುರನಾಥನು ಪ್ರಶ್ನಿಸಿದಾಗ, ‘ಭಗವಂತನು ಇಚ್ಛೆಪಟ್ಟರೆ ಆಗಬಹುದು’ ಎಂದರು. ಮಥುರನು ಅವರ ಮಾತನ್ನು ಒಪ್ಪಲಿಲ್ಲ. ಸ್ವಲ್ಪ ಸಮಯದ ನಂತರ ಸಂಭಾಷಣೆ ಮುಕ್ತಾಯಗೊಂಡು ಇಬ್ಬರೂ ತಮ್ಮ ತಮ್ಮ ಕೋಣೆಗಳಿಗೆ ಹೋದರು.

    ಮಾರನೆಯ ದಿವಸ ಮುಂಜಾನೆಯೇ ಶ್ರೀ ರಾಮಕೃಷ್ಣರು ಮಥುರನ ಕೋಣೆಯ ಬಳಿಗೆ ಬರುತ್ತಿದ್ದರು. ಇದನ್ನು ಕಂಡ ಮಥುರನು ಕೋಣೆಯಿಂದ ಹೊರಬಂದನು. ಪರಮಹಂಸರು ದಾಸವಾಳದ ಕೊಂಬೆಯನ್ನು ಹಿಡಿದುಕೊಂಡಿದ್ದರು. ‘ಮಥುರ ನೋಡು, ನಾನು ನಿನ್ನೆಯಷ್ಟೇ ಹೇಳಿದ್ದೆ. ಭಗವಂತನಿಗೆ ಎಲ್ಲವೂ ಸಾಧ್ಯ. ಆಗ ನೀನು ಕೆಂಪು ದಾಸವಾಳದ ಗಿಡದಲ್ಲಿ ಬಿಳಿ ದಾಸವಾಳ ಹೂವು ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದೆ. ಆಗಬಹುದು ಎಂದು ನಾನು ಹೇಳಿದ್ದೆ. ಆದರೆ ನೀನು ಅದನ್ನು ಒಪ್ಪಿಕೊಳ್ಳಲಿಲ್ಲ. ಈಗ ನೋಡು ಕೆಂಪು ದಾಸವಾಳದ ಗಿಡದಲ್ಲಿ ಬಿಳಿಯ ದಾಸವಾಳ ಬಿಟ್ಟಿರುವುದು.’

    ಒಂದೇ ಕೊಂಬೆಯಲ್ಲಿ ಕೆಂಪು ಹಾಗೂ ಬಿಳಿ ದಾಸವಾಳದ ಹೂಗಳನ್ನು ಕಂಡು ಆಶ್ಚರ್ಯಗೊಂಡ ಮಥುರನಾಥನು ಪರಮಹಂಸರಿಗೆ ನಮಸ್ಕರಿಸಿ, ‘ಭಗವಂತನಿಗೆ ಎಲ್ಲವೂ ಸಾಧ್ಯ’ ಎಂದನು.

    ನಾಳಿನ ಅಂತರಂಗದಲ್ಲಿ: ಸ್ವಾಮಿ ಆದಿತ್ಯಾನಂದ ಸರಸ್ವತೀ, ಚಿನ್ಮಯ ಮಿಷನ್, ಮಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts