20.4 C
Bangalore
Monday, December 9, 2019

ಸಂಧಾನ ಕಲೆಯಿಂದ ಸಂಘರ್ಷಗಳನ್ನು ತಣಿಸುತ್ತಿರುವ ಶ್ರೀ ಶ್ರೀ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಅಯೋಧ್ಯೆ ವಿವಾದ ಬಗೆಹರಿಸಲು ಸಂಧಾನ ಸಮಿತಿ ರಚನೆಯಾಗಿರುವುದು ಉತ್ತಮ ಬೆಳವಣಿಗೆ. ಪ್ರಪಂಚದ ಹಿಂಸಾಪೀಡಿತ ಮನಸ್ಸುಗಳನ್ನು ಬದಲಿಸಿ ಶಾಂತಿಯ ಮಾರ್ಗ ಕರುಣಿಸಿದ, ಜನಹಿತಕ್ಕಾಗಿ ಶ್ರಮಿಸುವಂತೆ ಮಾಡಿದ ಆರ್ಟ್ ಆಫ್ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಂಧಾನ ಸಮಿತಿಯ ಭಾಗವಾಗಿರುವುದರಿಂದ ಹೆಚ್ಚಿನ ನಿರೀಕ್ಷೆ ಮೂಡಿದೆ.

ಅಯೋಧ್ಯೆ ಪ್ರಕರಣವನ್ನು ಬಗೆಹರಿಸಲು ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಂಧಾನ ಸಮಿತಿಯೊಂದನ್ನು ಸುಪ್ರೀಂಕೋರ್ಟ್ ರಚಿಸಿರುವುದು ಉತ್ತಮ ಬೆಳವಣಿಗೆ. ಹಿಂದೂಗಳಿಗೆ ಅಪಾರ ನಂಬಿಕೆ ಇರುವ ಶ್ರೀರಾಮ ಜನ್ಮಸ್ಥಳದ ವಿವಾದದ ನೈಜಸ್ವರೂಪ ಸುಪ್ರೀಂ ಕೋರ್ಟ್​ಗೆ ಅರಿವಾದಂತಿದೆ. ಜತೆಗೆ, ಎರಡೂ ಧರ್ಮದವರಿಗೂ ತಮ್ಮ ಮೂಲತತ್ತ್ವಗಳ ವಿಚಾರದಲ್ಲಿ ರಾಜಿಯಾಗಿದ್ದೇವೆ ಎನಿಸದಂತೆ ಈ ಪ್ರಕರಣವನ್ನು ನಿರ್ವಹಿಸಬೇಕೆಂಬುದು ಕೂಡ ಸವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿದೆ. ರಾಜಕೀಯ ಪಕ್ಷಗಳ ಪ್ರವೇಶದಿಂದಾಗಿ ಈ ಪ್ರಕರಣ ಇನ್ನಷ್ಟು ಜಟಿಲವಾಗಿದೆ. ‘ಹಿಂದೂಗಳ ರಕ್ಷಕ’ ಎಂದು ಪಕ್ಷವೊಂದು ಬಿಂಬಿಸಿಕೊಂಡರೆ, ಇನ್ನೊಂದು ಪಕ್ಷ ಮುಸ್ಲಿಮರ ವೋಟ್​ಬ್ಯಾಂಕ್ ರಕ್ಷಿಸಿಕೊಳ್ಳಲು ಮುಂದಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಸೂಕ್ಷ್ಮ ಪ್ರಕರಣದ ಇತ್ಯರ್ಥಕ್ಕೆ ನ್ಯಾಯಾಲಯ ಸಂಧಾನದ ಹಾದಿ ಹಿಡಿದಿದೆ.

ಪ್ರಸ್ತುತ ಈ ಪ್ರಕರಣದಲ್ಲಿ ಗಮನ ಸೆಳೆಯುತ್ತಿರುವ ಅಂಶವೆಂದರೆ ಆರ್ಟ್ ಆಫ್ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ ಗುರೂಜಿ ಸಂಧಾನ ಸಮಿತಿಯ ಭಾಗವಾಗಿರುವುದು. ಸಮಿತಿಗೆ ಅವರನ್ನು ಪರಿಗಣಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ ಹೊಂದಿರುವ ಅಪಾರ ಮನ್ನಣೆ, ಜಾಗತಿಕವಾಗಿ ಹಲವು ಸಂಘರ್ಷಗಳನ್ನು ನಿಭಾಯಿಸಿದ ಪರಿಣತಿಯನ್ನು ಸುಪ್ರಿಂ ಕೋರ್ಟ್ ಪರಿಗಣಿಸಿದಂತಿದೆ. ಹಿಂದೂ ಧರ್ಮಗುರುವೊಬ್ಬರು ಸಮಿತಿಗೆ ಆಯ್ಕೆಯಾಗಿರುವುದು ಹಲವರ ಅಚ್ಚರಿಗೂ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ವಿವಾದಗಳನ್ನು ಬಗೆಹರಿಸುವಲ್ಲಿ ಗುರೂಜಿ ಪ್ರಾವೀಣ್ಯತೆ ಪಡೆದಿದ್ದಾರೆ ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.

ಶ್ರೀ ಶ್ರೀ ರವಿಶಂಕರ ಗುರೂಜಿ ತಮ್ಮ ವಿಧಾನಗಳ ಮೂಲಕ ವಿಭಿನ್ನವಾಗಿ ನಿಲ್ಲುತ್ತಾರೆ. 150 ದೇಶಗಳಲ್ಲಿ ಆರ್ಟ್ ಆಫ್ ಲಿವಿಂಗ್​ನ ಕೇಂದ್ರಗಳಿವೆ. ಭಾರತೀಯರೊಬ್ಬರು ಅಂತಾರಾಷ್ಟ್ರೀಯವಾಗಿ ಹೊಂದಿರಬಹುದಾದ ಅತ್ಯಂತ ವಿಸõತ ಜಾಲ ಇದಾಗಿದೆ. ವಿಶ್ವದಲ್ಲೇ ಹೆಚ್ಚಿನ ಅನುಯಾಯಿಗಳನ್ನು ಹೊಂದಿ, ಗೌರವಕ್ಕೆ ಪಾತ್ರರಾಗಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ರಾಜರಿಂದಲೇ ವಿಶೇಷ ಸ್ವಾಗತ ಪಡೆದು, ಕ್ರೀಡಾಂಗಣಗಳಲ್ಲಿ ಅಲ್ಲಿನ ಪ್ರಜೆಗಳಿಗೆ ಹಲವು ವಿಷಯಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ. ವಿಶ್ವಶಾಂತಿ ಹಾಗೂ ಭಾತೃತ್ವ ಸಂದೇಶ, ವ್ಯಕ್ತಿಗಳನ್ನು ಒತ್ತಡರಹಿತ ಹಾಗೂ ಸಮಾಧಾನಚಿತ್ತರಾಗುವಂತೆ ಮಾಡುವ ವಿಧಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಅತ್ಯಂತ ಸ್ಪರ್ಧಾತ್ಮಕ ಹಾಗೂ ಸಂಘರ್ಷಯುತವಾದ ಸಮಾಜದಲ್ಲಿರುವ ವ್ಯಕ್ತಿಗಳ ಒತ್ತಡದ ಬದುಕೇ ಸಾಮಾಜಿಕ ಒತ್ತಡವಾಗಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇಲ್ಲೆಲ್ಲೂ ಯಾವ ಧರ್ಮ ಎಂಬ ಪ್ರಶ್ನೆಯೇ ಎದುರಾಗುವುದಿಲ್ಲ. ವ್ಯಕ್ತಿಗತ ಸ್ವಾಸ್ಥ್ಯವೇ ಎಲ್ಲ ಸಮಾಜದ ಕೇಂದ್ರಬಿಂದು ಹಾಗೂ ಜಾಗತಿಕ ತತ್ತ್ವವಾಗಿದೆ.

ಸಂಘರ್ಷಗಳನ್ನು ಪರಿಹರಿಸುವಲ್ಲಿ ರವಿಶಂಕರ್ ಗುರೂಜಿ ಅತ್ಯುತ್ತಮ ಅನುಭವ ಹೊಂದಿದ್ದಾರೆ. ಕೊಲಂಬಿಯಾ ಸರ್ಕಾರ ಹಾಗೂ ಅಲ್ಲಿನ ಹಿಂಸಾಕೋರ ನುಸುಳುಕೋರರ ನಡುವಿನ ಕಳೆದ 50 ವರ್ಷಗಳ ಸಂಘರ್ಷವನ್ನು ಪರಿಹರಿಸುವಲ್ಲಿ ಅವರ ಪ್ರಯತ್ನ ಶ್ಲಾಘನೀಯ. ತಮಗಾಗಿ ಅನುಕಂಪ ಹಾಗೂ ಉತ್ತಮ ಭವಿಷ್ಯ ರೂಪಿಸುವ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿತ್ವವನ್ನು ಸಮಾಜದ ಎಲ್ಲ ಶ್ರೇಣಿಗಳ ಜನರು ಗುರೂಜಿಯಲ್ಲಿ ಕಂಡುಕೊಂಡರು. ಜನರ ದೃಷ್ಟಿಕೋನವನ್ನೇ ಬದಲಾಯಿಸಿ, ನಿರರ್ಥಕ ಹಿಂಸೆ ತ್ಯಜಿಸಿ, ಶಾಶ್ವತ ಶಾಂತಿ ಹಾಗೂ ಸಾಮರಸ್ಯಕ್ಕಾಗಿ ತುಡಿಯುವಂತೆ ಶ್ರೀಗಳು ಮಾಡಿದರು. ಎರಡೂ ಕಡೆಯವರು ಜನಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು. ಇದಕ್ಕಾಗಿ ಶ್ರೀಗಳು ತಮ್ಮ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದರು.

ಶ್ರೀಲಂಕಾದ ಕೊಸೊವೋ ಸೇರಿ ವಿಶ್ವದ ಹಲವು ಕಡೆಗಳಲ್ಲಿ ಫಲಿತಾಂಶಗಳನ್ನು ನೀಡಲು ಶ್ರೀಗಳು ಯಶಸ್ವಿಯಾದರು. ಜನಸಮೂಹದ ವರ್ತನೆಯನ್ನು ಬದಲಾಯಿಸುವುದು ಸುಲಭದ ಕೆಲಸವೇನಲ್ಲ. ಆದರೆ, ಶ್ರೀಗಳು ಅವರನ್ನು ತಲುಪಿದ ವಿಧಾನ ಫಲ ನೀಡಿದಂತೆ ಕಾಣುತ್ತದೆ. ಇದಕ್ಕಾಗಿ ಅಪಾರ ಸಮಯ, ನಿರಂತರ ಪ್ರಯತ್ನ, ಹಲವು ಚರ್ಚೆಗಳು ಬೇಕಾದವು ಎನ್ನುವುದು ಕೂಡ ಅಷ್ಟೇ ನಿಜ. ಶ್ರೀಗಳು ಕಾಶ್ಮೀರದಲ್ಲೂ ಶಾಂತಿ ಸ್ಥಾಪಿಸಲು ಶ್ರಮಿಸಿದ್ದಾರೆ.

ಹಲವು ಉಗ್ರರನ್ನು ಆಶ್ರಮಕ್ಕೆ ಬರುವಂತೆ ಮಾಡಿ, ಅಲ್ಲಿನ ಕೋರ್ಸ್ ಗಳಲ್ಲಿ ಭಾಗಿಯನ್ನಾಗಿಸಿದ ಬಳಿಕ ಶಾಂತಿ ಬಯಸುವ ನಾಗರಿಕರ ನ್ನಾಗಿ ಪರಿವರ್ತಿಸಿ ಕಳುಹಿಸಿದ್ದಾರೆ. ಇದೊಂದು ಸುದೀರ್ಘ ಹಾಗೂ ನಿರಂತರ ಪ್ರಯತ್ನ. ಬಹುತೇಕರು ಹಿಂಸೆಯನ್ನು ತೊರೆದಿದ್ದು, ಈ ಪ್ರಯತ್ನ ಅತ್ಯಂತ ದೊಡ್ಡಮಟ್ಟದಲ್ಲಿ ಹಾಗೂ ವಿಸõತವಾಗಿ ನಡೆಯಬೇಕಿದೆ.

ಅಯೋಧ್ಯಾ ಪ್ರಕರಣ ಇವೆಲ್ಲಕ್ಕಿಂತ ಭಿನ್ನ. ರಾಜಕೀಯಕ್ಕೆ ತುತ್ತಾಗಿ ಎರಡೂ ಪಕ್ಷದವರು ತಮ್ಮ ನಿಲುವುಗಳಲ್ಲಿ ಪಟ್ಟು ಹಿಡಿದಿದ್ದಾರೆ. ಇದಲ್ಲದೆ, ಮಧ್ಯಸ್ಥಿಕೆಗಾಗಿ ಸಂಧಾನ ಸಮಿತಿಗೆ ಸುಪ್ರೀಂಕೋರ್ಟ್ ಕಡಿಮೆ ಅವಧಿಯನ್ನು ನೀಡಿದೆ. ಅಂತಿಮ ನ್ಯಾಯಾಂಗ ನಿರ್ಣಯ ಕೈಗೊಳ್ಳಲು ಸೌಹಾರ್ದಯುತ ವಾತಾವರಣ ನಿರ್ವಿುಸುವ ಹೊಣೆಗಾರಿಕೆ ವಹಿಸಿದೆ. ಇದು ಶ್ರೀಗಳಲ್ಲಿ ಅಂತರ್ಗತವಾಗಿರುವ ಅಸಾಧಾರಣ ಸಾಮರ್ಥ್ಯದ ಸತ್ವ ಪರೀಕ್ಷೆಯೂ ಹೌದು. ಶ್ರೀಗಳು ಹಲವು ವರ್ಷಗಳಿಂದ ವಿವಿಧ ಗುಂಪುಗಳನ್ನು ಒಗ್ಗೂಡಿಸಲು, ಧ್ಯಾನದ ಮೂಲಕ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿರುವುದು ಗಮನಾರ್ಹ. ಜನರ ಭಾವನೆ, ನಿರೀಕ್ಷೆ, ಭೀತಿಗಳು ಹಾಗೂ ಯಾವುದೇ ನಿರ್ಣಯವನ್ನು ಸಮಾಜದ ಮೇಲೆ ಹೇರುವುದರಿಂದ ಉಂಟಾಗುವ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಅವರು ಸಮರ್ಥರಾಗಿದ್ದಾರೆ. ಹಲವು ಬಾರಿ ಎಲ್ಲರಿಗೂ ಸಮ್ಮತವಾಗುವ ನಿರ್ಣಯಗಳನ್ನು ಕಂಡುಕೊಳ್ಳುವ ಹೊಸ್ತಿಲಲ್ಲಿದ್ದಾಗಲೇ ರಾಜಕೀಯ ಪಕ್ಷಗಳು ಅಡ್ಡಿಯಾಗಿ ಪರಿಣಮಿಸಿವೆ. ರಾಜಕೀಯ ಕಾರಣಗಳಿಗಾಗಿ ಸಮಸ್ಯೆಗಳನ್ನು ಜೀವಂತವಾಗಿಡುವುದು ಅವುಗಳ ಉದ್ದೇಶವಾಗಿರುತ್ತದೆ.

ಆದರೆ, ಈಗ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಮುಂದಾಗಿರುವುದರಿಂದ ಎರಡೂ ಪಕ್ಷಗಳ ನಡುವೆ ಚರ್ಚೆಗೆ ವೇದಿಕೆಯಾಗುವ, ಸಮ್ಮತ ನಿರ್ಣಯ ಕೈಗೊಳ್ಳುವ ಅವಕಾಶಗಳು ಉಜ್ವಲವಾಗಿವೆ. ಎಲ್ಲಕ್ಕೂ ಪರ್ಯಾಯವಾಗಿರುವ ಕೋರ್ಟ್ ಆದೇಶವನ್ನೇ ಒಪ್ಪಿಕೊಳ್ಳುವುದಾಗಿ ಎರಡೂ ಕಡೆಯವರು ಒಪ್ಪಿಕೊಂಡಿದ್ದರೂ, ಯಾರ ಹಿತಾಸಕ್ತಿಗೆ ಧಕ್ಕೆ ಬಂದರೂ ಎರಡೂ ಕಡೆಯವರು ರಾಜಕೀಯ ಪಲ್ಲಟಗಳನ್ನು ಅನುಭವಿಸಬೇಕಾಗುತ್ತದೆ. ತಾಂತ್ರಿಕವಾಗಿ ಎರಡೂ ಕಡೆಯವರನ್ನು ಸಂತುಷ್ಟಗೊಳಿಸುವ ಪ್ರಯತ್ನಕ್ಕೂ ಹಿನ್ನಡೆಯಾಗಿದೆ.

ಆದರೆ, ಎರಡೂ ಕಡೆಯವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಅವರಲ್ಲಿರುವ ಭೀತಿಯನ್ನು ದೂರವಾಗಿಸಿ, ಸಂಘರ್ಷದ ಬಿಂದುಗಳನ್ನು ಕಡಿಮೆಗೊಳಿಸುವುದು ಹಾಗೂ ಸಂಧಾನಕ್ಕಿರುವ ಅವಕಾಶಗಳನ್ನು ವಿಸ್ತರಿಸುವುದು ಅಗತ್ಯವಾಗಿದೆ. ಈ ಕ್ಷೇತ್ರದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ ಜಾಗತಿಕವಾಗಿ ಸಿದ್ಧಹಸ್ತರಾಗಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಗೌರವಕ್ಕೆ ಪಾತ್ರರಾಗಿರುವ ಗುರೂಜಿ ವ್ಯಕ್ತಿತ್ವ ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿರುವುದು ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಈ ಹಿಂದೆಯೂ ಎರಡೂ ಪಕ್ಷದವರಿಗೆ ಸಮ್ಮತವಾಗುವ ಅಭಿಪ್ರಾಯ ರೂಪಿಸಲು ಕೈಗೊಂಡ ಪ್ರಯತ್ನಗಳನ್ನು ಹಾಗೂ ಆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಗುರೂಜಿ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಕೋರ್ಟ್ ನಿರ್ಣಯದ ಬೆಂಬಲವಿರಲಿಲ್ಲ. ಮಧ್ಯಸ್ಥಿಕೆ ವಿಫಲವಾಗಿದ್ದೇ ಆದಲ್ಲಿ ಸುಪ್ರೀಂಕೋರ್ಟ್ ಮುಂದಿನ ಹೆಜ್ಜೆಯ ಬಗ್ಗೆ ಪರಿಶೀಲನೆ ನಡೆಸುತ್ತದೆ. ಆದರೆ, ಈ ಪ್ರಕರಣಕ್ಕೆ ಮಧ್ಯಸ್ಥಿಕೆ ಅಗತ್ಯವಾಗಿದೆ. ಅದರಲ್ಲೂ ಜಾಗತಿಕ ಅನುಭವ, ವಿಸõತ ಜಾಲ, ವಿಶ್ವಾಸಾರ್ಹತೆ ಮತ್ತು ಆಳವಾದ ಅರಿಯುವಿಕೆಯ ಗುಣಗಳನ್ನು ಹೊಂದಿರುವ ಶ್ರೀ ಶ್ರೀ ರವಿಶಂಕರ ಗುರೂಜಿ ಸಂಧಾನ ಸಮಿತಿಯಲ್ಲಿರುವುದು ಧನಾತ್ಮಕ ಬೆಳವಣಿಗೆಯಾಗಿದೆ. ಈ ಕಾರಣದಿಂದಾಗಿಯೇ ಎರಡೂ ಕಡೆಯವರಿಗೂ ಒಪ್ಪಿಗೆಯಾಗುವ ಸೌಹಾರ್ದಯುತ ಪರಿಹಾರ ದೊರೆಯುವುದೆಂಬ ನಿರೀಕ್ಷೆ ನಮ್ಮೆಲ್ಲರದ್ದಾಗಿದೆ.

(ಲೇಖಕರು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸಂಸ್ಥೆ ಅಧ್ಯಕ್ಷರು)

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...