ಸುಖ, ದುಃಖ ಎರಡೂ ನಮ್ಮೊಳಗೇ ಇವೆ!

ನೋವು ಸಹಜವಾದ್ದದ್ದು; ಅದನ್ನು ನರಳಾಟವಾಗಿ ಮಾಡಬೇಕಿಲ್ಲ. ಯಾರಾದರೂ ಉದ್ದೇಶಪೂರ್ವಕವಾಗಿ ತಮಗಾಗಿಯೇ ದುಃಖವನ್ನು ಏತಕ್ಕಾಗಿ ಸೃಷ್ಟಿಸುತ್ತಾರೆ? ನೀವೇನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಮಗೆ ಅರಿವಿಲ್ಲವೆನ್ನುವುದು ನರಳಾಟದ ಏಕೈಕ ಕಾರಣವಾಗಿದೆ.

‘ಜೀವನವೇಕೆ ಅಷ್ಟೊಂದು ನೋವಿನಿಂದ ತುಂಬಿದೆ/ಕೂಡಿದೆ? ಮಾನವರು ಯಾವ ಕಾರಣಕ್ಕಾಗಿ ನರಳುತ್ತಾರೆ?’ ಇವು ಅನೇಕರು ಪುನಃಪುನಃ ಕೇಳುವ ಪ್ರಶ್ನೆಗಳಾಗಿವೆ.

ವಿಷಯವೇನೆಂದರೆ ನೋವು ಶಾರೀರಿಕವಾದುದು; ನರಳುವುದು ಶಾರೀರಿಕವಲ್ಲ. ನೋವಿರುವುದು ಶರೀರಕ್ಕೆ ಮತ್ತದು ಒಳ್ಳೆಯದು ಕೂಡ, ಆದರೆ ನರಳುವುದು ನೀವು ಸೃಷ್ಟಿಸಿಕೊಳ್ಳುವ ವಿಷಯ. ನೋವು ಒಳ್ಳೆಯದು ಎಂದು ಹೇಳಿದಾಗ, ‘ನೋವು ಅನುಭವಿಸಿ’ ಎಂದು ನಿಮಗೆ ಆಶೀರ್ವದಿಸುತ್ತಿಲ್ಲ! ನೋವಿನ ಅನುಪಸ್ಥಿತಿಯಲ್ಲಿ ದೇಹವನ್ನು ಕಾಪಾಡಿಕೊಳ್ಳಲು ಅಗತ್ಯ ಬುದ್ಧಿವಂತಿಕೆ ನಿಮ್ಮಲ್ಲಿ ಇಲ್ಲದಿರುವುದರಿಂದ ನೋವು ಒಳ್ಳೆಯದು. ನೋವು ಇಲ್ಲದ ದೇಹದ ಆ ಭಾಗಗಳನ್ನು ಹೇಗೆ ನೋಡಿಕೊಳ್ಳುತಿ್ತೕರಿ ಎಂಬುದನ್ನು ನೋಡಿ: ಉದಾಹರಣೆಗೆ, ಕೂದಲು ಮತ್ತು ಉಗುರುಗಳು. ಮಾನವ ದೇಹಕ್ಕೆ ಯಾವುದೇ ನೋವು ಇರಲಿಲ್ಲ ಎಂದೆಣಿಸೋಣ. ಫ್ಯಾಷನ್ನಿನ ಹೆಸರಿನಲ್ಲಿ, ಯಾವುದೇ ಸಮಯ ವ್ಯರ್ಥ ಮಾಡದೇ ನಿಮ್ಮನ್ನೇ ವಿರೂಪಗೊಳಿಸಿ ನಾಶಪಡಿಸುತಿ್ತೕರಿ!

ಆದರೆ, ರಸ್ತೆಯಲ್ಲಿ ನಡೆಯುತ್ತಿದ್ದು, ಒಂದು ಸೈಕಲ್ ದಾರಿಗೆ ಅಡ್ಡ ಬಂದರೆ, ಹಿಂದೆ ಸರಿಯುತಿ್ತೕರಿ. ಹೀಗೆ ಮಾಡುವುದು ನೋವಿನ ಪರಿಣಾಮ ತಿಳಿದಿರುವ ಕಾರಣದಿಂದ ಮಾತ್ರ. ಯಾವುದೇ ನೋವಿಲ್ಲದಿದ್ದರೆ, ನಿಂತ ಸ್ಥಳದಿಂದ ಕದಲುತ್ತಿರಲಿಲ್ಲ. ದೊಡ್ಡ ಲಾರಿ ಬಂದರೂ ಸಹ! ಏಕೆಂದರೆ ಅದು ಅಹಂಕಾರದ ಸ್ವರೂಪ. ಆದ್ದರಿಂದ ನೋವು ಒಳ್ಳೆಯದು. ಅದನ್ನು ನಿಜವಾಗಿಯೂ ಒಪ್ಪಿಕೊಂಡಾಗ ನೋವಷ್ಟೇ ಇರುತ್ತದೆ, ಯಾವುದೇ ನರಳಾಟವಿರುವುದಿಲ್ಲ. ಇದನ್ನು ನಿರೂಪಿಸಲು ಹಲವಾರು ಉದಾಹರಣೆಗಳಿವೆ.

ಅದ್ಭುತ ಉದಾಹರಣೆಯೆಂದರೆ ಯೋಗಿ, ಸದಾಶಿವ ಬ್ರಹ್ಮೇಂದ್ರ ಅವರದ್ದು. ಅವರು ಕೊಯಮತ್ತೂರಿನಿಂದ 200 ಕಿಲೋಮೀಟರ್ ದೂರದಲ್ಲಿರುವ ನೆರೂರಿನಲ್ಲಿ ವಾಸಿಸುತ್ತಿದ್ದರು. ಅವರು ನಿರಾಕಾಯ ಅಥವಾ ದೇಹಧರ್ಮವನ್ನು ತ್ಯಜಿಸಿದ್ದಂತಹ ಯೋಗಿಯಾಗಿದ್ದರು. ದೇಹದಲ್ಲಿನ ಎಲ್ಲ 72 ಸಾವಿರ ನಾಡಿಗಳು ಸಕ್ರಿಯವಾದರೆ, ಇದರರ್ಥ ಭೌತಿಕತೆಯ ಅರಿವಿರುವುದಿಲ್ಲವೆಂದು. ಭೌತಿಕತೆ ನಿಮ್ಮ ಅನುಭವದಲ್ಲಿರುವುದಿಲ್ಲ. ದೇಹವಿಲ್ಲದೆ ಇಲ್ಲಿ ಕುಳಿತುಕೊಳ್ಳುವ ಸ್ವಾತಂತ್ರ್ಯವನ್ನು ಕಲ್ಪಿಸಿಕೊಳ್ಳಬಲ್ಲಿರಾ? ಈಗ ಅದನ್ನು ನಿರ್ಲಕ್ಷಿಸಲು ಸಾಧ್ಯವಾಗುತ್ತಿಲ್ಲ. ನೆಲದ ಮೇಲೆ ಕುಳಿತಾಗ, ಕಾಲುಗಳು ನೋಯುವುದಕ್ಕೆ ಪ್ರಾರಂಭಿಸುತ್ತವೆ ಮತ್ತು ಬಹುಬೇಗ ಕೇವಲ ಕಾಲು ನೋವಾಗಿಬಿಡುತಿ್ತೕರ; ನಿಮ್ಮೆಲ್ಲ ಇತರ ಗುಣಗಳು ಮಾಯವಾಗುತ್ತವೆ. ಅದೇ ಎಲ್ಲ 72 ಸಾವಿರ ನಾಡಿಗಳನ್ನು ಸಕ್ರಿಯಗೊಳಿಸಿದರೆ, ದೇಹವನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಬಹುದು ಮತ್ತು ದೇಹಕ್ಕೆ ನಿಮ್ಮ ಮೇಲೆ ಯಾವುದೇ ಹಿಡಿತವಿರುವುದಿಲ್ಲ.

ಸದಾಶಿವ ಅವರಿಗೆ ದೇಹದ ಪ್ರಯೋಜನ ಇರಲಿಲ್ಲ. ಪರಿಣಾಮವಾಗಿ, ಬಟ್ಟೆ ಧರಿಸುವ ಪ್ರಶ್ನೆ ಉದ್ಭವಿಸಲಿಲ್ಲ. ಒಂದು ದಿನ, ಈ ನಿರ್ವಸ್ತ್ರ ಯೋಗಿ ರಾಜನ ತೋಟದೊಳಗೆ ಹೋದರು. ರಾಜ ತನ್ನ ರಾಣಿಯರೊಂದಿಗೆ ನದಿದಂಡೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಸದಾಶಿವರನ್ನು ನೋಡಿದಾಗ ರಾಜನಿಗೆ ಕೋಪ ಬಂತು. ನಮ್ಮ ಮುಂದೆ ಬೆತ್ತಲೆಯಾಗಿ ನಡೆಯಲು ಧೈರ್ಯ ಮಾಡುವ ಈ ವ್ಯಕ್ತಿ ಯಾರು? ಎಂದು ಕಂಡುಹಿಡಿಯಲು ಅವನು ತನ್ನ ಸೈನಿಕರಿಗೆ ಸೂಚಿಸಿದ.

ಸೈನಿಕರು ಸದಾಶಿವರನ್ನು ಕೂಗಿ ಕರೆದರು. ಅವರು ಹಿಂದೆ ತಿರುಗಲಿಲ್ಲ. ಸೈನಿಕರು ಕೋಪಗೊಂಡರು. ಅವರು ಸದಾಶಿವರ ಹಿಂದೆ ಬಂದು ಕತ್ತಿಯಿಂದ ಹೊಡೆದಾಗ ಅವರ ಬಲಗೈ ತುಂಡಾಗಿ ನೆಲಕ್ಕೆ ಬಿತ್ತು. ಆದರೂ ಅವರು ಮುಂದೆ ನಡೆಯುತ್ತಲೇ ಇದ್ದರು. ಇದನ್ನು ಕಂಡು ಭಯಭೀತರಾದ ಸೈನಿಕರು, ಇವರು ಸಾಮಾನ್ಯ ಮನುಷ್ಯರಲ್ಲ ಎಂದು ಅರಿತುಕೊಂಡರು. ರಾಜ ಮತ್ತೆಲ್ಲರೂ ಅವರ ಹಿಂದೆ ಓಡಿ, ಅವರ ಕಾಲಿನಡಿಯಲ್ಲಿ ಬಿದ್ದು ಅವರನ್ನು ಮರಳಿ ತೋಟಕ್ಕೆ ಕರೆತಂದರು. ನೆರೂರಿನಲ್ಲಿ ಸದಾಶಿವ ಯೋಗಿಗಳ ಸಮಾಧಿ ಇದ್ದು, ಅದು ಅತ್ಯಂತ ಶಕ್ತಿಯುತವಾದ ಸ್ಥಳವಾಗಿದೆ.

ಕೆಲ ವರ್ಷಗಳ ಹಿಂದೆ ನನ್ನ ಜೀವನದಲ್ಲಿ ನಡೆದ ಘಟನೆಯಿದು-ಆಗ ನಾನು ಬೈಕ್ ಓಡಿಸುತ್ತಿದ್ದ ದಿನಗಳು, ದೇಶಾದ್ಯಂತ ಬೈಕ್ ಮೇಲೆ ಸವಾರಿ ಮಾಡುತ್ತಿದ್ದೆ. ಆ ಸಮಯದಲ್ಲಿ ಒಮ್ಮೆ ಅಪಘಾತವಾಯಿತು. ನಾನು ನಿಲ್ಲಿಸಿದ ಬೈಕ್ ಮೇಲಿದ್ದಾಗ ವಾಹನವೊಂದು ಹಿಮ್ಮುಖವಾಗಿ ಬಂದು ಬೈಕಿಗೆ ಗುದ್ದಿದಾಗ ನನ್ನ ಕಾಲು ಬೈಕಿನ ಫುಟ್​ರೆಸ್ಟ್-ಗೆ ಒತ್ತಿತು. ಅದು ಮೊಂಡಾಗಿದ್ದರೂ, ನನ್ನ ಕಾಲಿನ ಸ್ನಾಯುವನ್ನು ಮೂಳೆಯವರೆಗೂ ಕತ್ತರಿಸಿತು. ಇದು ಪಟ್ಟಣ ಪ್ರದೇಶದಿಂದ ಬಹಳ ದೂರವಿದ್ದ ಸ್ಥಳ. ನಾನು ಅನೆಸ್ಥೇಶಿಯಾ ಸೌಲಭ್ಯವಿಲ್ಲದ ಸ್ಥಳೀಯ ಔಷಧಾಲಯಕ್ಕೆ ಹೋದೆ. ಅಲ್ಲಿದ್ದ ವೈದ್ಯರು ಗಾಯವನ್ನು ಪರೀಕ್ಷಿಸಿ, ‘ನೀವು ನೋವು ಉಂಟಾಗದಿರುವ ಔಷಧ ನೀಡುವ ದೊಡ್ಡ ಆಸ್ಪತ್ರೆಗೆ ಹೋಗಬೇಕು’ ಎಂದು ಹೇಳಿದರು. ಆಸ್ಪತ್ರೆ ಬಹು ದೂರದಲ್ಲಿತ್ತು ಮತ್ತು ನಾನು ಹೋಗುತ್ತಿದ್ದ ಸ್ಥಳದ ವಿರುದ್ಧ ದಿಕ್ಕಿನಲ್ಲಿತ್ತು.

ಜೀವನದಲ್ಲಿ ಹಿಂತಿರುಗಿ ನೋಡುವುದು ಹೇಗೆಂದು ನನಗೆ ತಿಳಿದಿಲ್ಲ; ಅದು ಯಾವಾಗಲೂ ನನ್ನ ಸಮಸ್ಯೆ! ಹಾಗಾಗಿ ನಾನು, ಈ ಕಡೆ ಅಲ್ಲ; ನಾನು ಆ ಕಡೆ ಹೋಗಬೇಕಾಗಿದೆ ಎಂದೆ. ವೈದ್ಯರು, ‘ಈ ಗಾಯದೊಂದಿಗೆ ನೀವು ಎಲ್ಲಿಯೂ ಹೋಗುವಂತಿಲ್ಲ’ ಎಂದು ಹೇಳಿದರು. ನಾವು ವಾದಿಸುತ್ತಿದ್ದಂತೆ, ನನ್ನ ರಕ್ತ ಅವರ ಚಿಕಿತ್ಸಾಲಯದಲ್ಲೆಲ್ಲ ಹರಡುತ್ತಿತ್ತು. ನನ್ನ ವಾದ ಗೆಲ್ಲಲಿಲ್ಲ; ನನ್ನ ರಕ್ತ ಗೆದ್ದಿತು! ಅವರು ಅನೆಸ್ಥೇಶಿಯಾ ಇಲ್ಲದೆ ಗಾಯದ ಚಿಕಿತ್ಸೆ ಪ್ರಾರಂಭಿಸಿದರು. ನನ್ನ ಸ್ನಾಯುವನ್ನು ಒಟ್ಟಿಗೆ ಸೇರಿಸಲು ಮೂರು ವಿಭಿನ್ನ ಹಂತಗಳಲ್ಲಿ ಸುಮಾರು ಐವತ್ನಾಲ್ಕು ಹೊಲಿಗೆಗಳನ್ನು ಹಾಕಬೇಕಾಯಿತು. ಇಡೀ ಪ್ರಕ್ರಿಯೆ ಉದ್ದಕ್ಕೂ, ಅವರು ಬೆವರುತ್ತ ಕೆಲಸ ಮಾಡುತ್ತಿರುವಾಗ, ನಾನು ವೈದ್ಯರೊಂದಿಗೆ ಮಾತನಾಡುತ್ತಿದ್ದೆ. ಅದು ಮುಗಿದ ನಂತರ, ಅವರು ನನ್ನನ್ನು ಕೇಳಿದರು, ‘ಯಾವುದೇ ನೋವು ಇರಲಿಲ್ಲವೇ?’

‘ಖಂಡಿತವಾಗಿಯೂ ನೋವಿತ್ತು. ಭಯಾನಕ, ಅಸಹನೀಯ ನೋವು’. ಆದರೆ ನೋವು ಸಹಜವಾದ್ದದ್ದು; ಅದನ್ನು ನರಳಾಟವಾಗಿ ಮಾಡಬೇಕಿಲ್ಲ. ಯಾರಾದರೂ ಉದ್ದೇಶಪೂರ್ವಕವಾಗಿ ತಮಗಾಗಿಯೇ

ದುಃಖವನ್ನು ಏತಕ್ಕಾಗಿ ಸೃಷ್ಟಿಸುತ್ತಾರೆ? ನೀವೇನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಮಗೆ ಅರಿವಿಲ್ಲವೆನ್ನುವುದು ನರಳಾಟದ ಏಕೈಕ ಕಾರಣವಾಗಿದೆ.

ಪ್ರತಿಯೊಬ್ಬರಿಗೂ ಇರುವ ಆಯ್ಕೆ ಇದೇ- ಸೃಷ್ಟಿಕರ್ತನ ಒಂದು ಅಂಗವಾಗಿ ಇಲ್ಲಿರುವುದು ಅಥವಾ ಆಲೋಚನೆಗಳು ಮತ್ತು ಭಾವನೆಗಳ ರಾಶಿಯಾಗಿರುವುದು. ಪ್ರತಿ ಕ್ಷಣವೂ ಈ ಆಯ್ಕೆ ಲಭ್ಯವಿದೆ. ಸ್ವೀಕಾರದ ಸ್ಥಿತಿಯನ್ನು ಆರಿಸಿದರೆ, ಜೀವನ ವಿಭಿನ್ನವಾದ ಆಕರ್ಷಕ ಹಂತಕ್ಕೆ ತಲುಪಿಸುತ್ತದೆ, ಅಲ್ಲಿ ಅಸ್ತಿತ್ವದಲ್ಲಿರುವ

ಪ್ರತಿಯೊಂದು ಕಲ್ಲು, ಬಂಡೆ, ಮರ ಮತ್ತು ಪರಮಾಣು ನಿಮಗೆ ತಿಳಿದಿರುವ ಭಾಷೆಯಲ್ಲಿ ಮಾತನಾಡುತ್ತದೆ. ಇಲ್ಲದಿದ್ದರೆ, ಈ ವಿಶಾಲ ಅಸ್ತಿತ್ವದಲ್ಲಿ ಒಬ್ಬಂಟಿಯಾಗಿರುತಿ್ತೕರಿ, ನಿರಂತರವಾಗಿ ಅಸುರಕ್ಷತೆ, ಅಸ್ಥಿರತೆ, ಮಾನಸಿಕವಾಗಿ ಸವಾಲುಗಳನ್ನು ಅನುಭವಿಸುತಿ್ತೕರಿ. ಆದ್ದರಿಂದ ನೀವು ನರಳುತ್ತಿದ್ದರೆ, ಇದು ನಿಮ್ಮನ್ನು ಸರಿಪಡಿಸಿಕೊಳ್ಳುವ ಸಮಯ- ಬೇರೊಬ್ಬರನ್ನಲ್ಲ. ಈ ಸರಳ ಸಂಗತಿಯನ್ನು ಅರ್ಥಮಾಡಿಕೊಳ್ಳಲು, ಜನರಿಗೆ ಅನೇಕ ಜನ್ಮಗಳು ಬೇಕಾಗುತ್ತದೆ!

ಒಂದು ದಿನ, ಶಂಕರನ್ ಪಿಳ್ಳೈ ತನ್ನ ಸ್ನೇಹಿತರೊಂದಿಗೆ ಕುಡಿಯಲು ಹೋದ. ಯೋಗಿಗಳು ಮತ್ತು ಕುಡುಕರಿಬ್ಬರಿಗೂ ಸಮಯದ ಅರಿವಿರುವುದಿಲ್ಲ- ಸಮಯ ಹೇಗೆ ಕಳೆಯುತ್ತದೆಯೆಂಬ ಯಾವ ಸುಳಿವು ಅವರಿಗಿರುವುದಿಲ್ಲ. ಶಂಕರನ್ ಪಿಳ್ಳೈ ಇದ್ದಕ್ಕಿದ್ದಂತೆ ಕೈಗಡಿಯಾರ ನೋಡಿದಾಗ, ಅದು ರಾತ್ರಿಯ 2.30 ಎಂದು ತೋರಿಸಿತು. ಅವನಿಗೆ ಬೇಗನೆ ಮನೆಗೆ ಹೋಗಬೇಕಾಗಿತ್ತು, ಆದ್ದರಿಂದ ಅವನು ಒಳದಾರಿಯಲ್ಲಿ ಹೋಗಲು ನಿರ್ಧರಿಸಿದ. ಅವನು ಓಲಾಡುತ್ತ ನಡೆಯುತ್ತಿದ್ದ ಕಾರಣ, ಒಂದು ಮುಳ್ಳಿನ ಪೊದೆಯಲ್ಲಿ ಬಿದ್ದು ಅವನ ಮುಖವೆಲ್ಲ ಗೀಚಿ ಗಾಯವಾಯಿತು. ಅಂತೂ ಇಂತೂ, ಅವನು ಮನೆಗೆ ತಲುಪಿದ, ಕೀಲಿಕಿಂಡಿಯನ್ನು ಹುಡುಕಲು ಪ್ರಯತ್ನಿಸಿದ. ಅದಕ್ಕೆ ಇನ್ನೊಂದರ್ಧ ಗಂಟೆ ತೆಗೆದುಕೊಂಡಿತು. ಅವನು ಒಳಗೆ ಬಂದು ಕನ್ನಡಿಯಲ್ಲಿ ನೋಡಿದಾಗ ಅವನ ಮುಖವೆಲ್ಲ ರಕ್ತಮಯವಾಗಿತ್ತು. ಔಷಧದ ಕಪಾಟನ್ನು ತೆಗೆದು, ತನಗೆ ಸಾಧ್ಯವಾದ ರೀತಿಯಲ್ಲಿ ಗಾಯಕ್ಕೆ ಆರೈಕೆ ಮಾಡಿದ. ನಂತರ ಸದ್ದಿಲ್ಲದೆ ಬಂದು ಹಾಸಿಗೆಯಲ್ಲಿ ಮಲಗಿದ. ಬೆಳಗ್ಗೆ ಎಂಟು ಗಂಟೆಗೆ, ಹೆಂಡತಿ ತಣ್ಣೀರನ್ನು ಮುಖಕ್ಕೆ ಎರಚಿ, ‘ಮೂರ್ಖ, ಮತ್ತೆ ಕುಡಿಯುಲು ಶುರು ಮಾಡಿದ್ದೀರೇನು?’ ಎಂದು ಕೇಳಿದಳು.

‘ಇಲ್ಲ ಚಿನ್ನ, ನಾನು ಒಂದು ಹನಿಯನ್ನೂ ಮುಟ್ಟಿಲ್ಲ’ ಎಂದ. ಹೆಂಡತಿ ಅವನ ಶರ್ಟಿನ ಕಾಲರ್ ಹಿಡಿದು ಅವನನ್ನು ಬಚ್ಚಲಮನೆಗೆ ಎಳೆದುಕೊಂಡು ಹೋದಳು. ಅಲ್ಲಿ ಕನ್ನಡಿ ಮೇಲೆಲ್ಲ ತುಂಬ ಬ್ಯಾಂಡ್-ಏಡ್​ಗಳಿದ್ದವು!

ಯಾರು ಸಂಪೂರ್ಣವಾಗಿ ಪ್ರಜ್ಞಾರಹಿತರಾಗಿ ರುತ್ತಾರೋ ಅಥವಾ ಉನ್ಮತ್ತರಾಗಿರುತ್ತಾರೋ, ಅವರು ಮಾತ್ರ ಇಂಥದ್ದನ್ನು ಮಾಡುತ್ತಾರೆ, ಅಲ್ಲವೇ? ಕನ್ನಡಿಗೆ ಬ್ಯಾಂಡ್-ಏಡ್ ಹಾಕುವುದರಿಂದ ನೀವು ಗುಣಮುಖರಾಗುವುದಿಲ್ಲ. ನೀವು ಗಾಯಕ್ಕೆ ಆರೈಕೆ ಮಾಡಬೇಕು.

ದುಃಖಗಳು ಮತ್ತು ಸಂತೋಷಗಳು ಎರಡೂ ಒಳಗಿನಿಂದಲೇ ಉಂಟಾಗುತ್ತವೆ. ಆದ್ದರಿಂದ ಅದರ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿ, ಬೇರೆಯವರತ್ತ ನೋಡಬೇಡಿ. ಇದನ್ನು ಎಷ್ಟು ಬೇಗನೆ ಕಲಿಯುವಿರೋ, ಜೀವನವು ಅಷ್ಟೇ ಹೆಚ್ಚು ಆಕರ್ಷಕ ಮತ್ತು ಅದ್ಭುತವಾಗುತ್ತದೆ. ಈಗ ಇರುವದನ್ನು ನಿಜವಾಗಿಯೂ ಒಪ್ಪಿಕೊಂಡರೆ, ನೋವು ಕೇವಲ ನೋವಾಗಿರುತ್ತದೆ. ಈಗ ಇರುವುದನ್ನು ವಿರೋಧಿಸಿದಾಗ ಮಾತ್ರ ನೋವು ನರಳಾಟಕ್ಕೆ ತಿರುಗುತ್ತದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

(ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

One Reply to “ಸುಖ, ದುಃಖ ಎರಡೂ ನಮ್ಮೊಳಗೇ ಇವೆ!”

Leave a Reply

Your email address will not be published. Required fields are marked *