22.8 C
Bengaluru
Saturday, January 18, 2020

ಹರೆಯದವರ ಬಗ್ಗೆ ಹುಷಾರು

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ರವಿಕುಮಾರ್ ರಾಥೋಡ್ ರಾಜಸ್ಥಾನದಿಂದ ಕರ್ನಾಟಕದ ನಗರವೊಂದಕ್ಕೆ ವಲಸೆ ಬಂದು ಬಟ್ಟೆ ಅಂಗಡಿ ತೆರೆದ ಕೆಲವೇ ವರ್ಷಗಳಲ್ಲಿ ಆತನ ವ್ಯವಹಾರ ಅಭಿವೃದ್ಧಿಗೊಂಡಿತು. ಆತ ಅದೇ ನಗರದಲ್ಲಿ ಸೈಟ್ ಖರೀದಿಸಿ ಮೂರು ಮಹಡಿ ಮನೆ ಕಟ್ಟಿ ಪತ್ನಿ ಪೂಜಾ ಹಾಗೂ ಇಬ್ಬರು ಮಕ್ಕಳಾದ ರವಿ ಮತ್ತು ಉಷಾ ಜತೆ ವಾಸಿಸತೊಡಗಿದ. ಹದಿನೈದು ವರ್ಷದವಳಾದ ಉಷಾ ಮನೆ ಹತ್ತಿರದಲ್ಲಿಯೇ ಇದ್ದ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಹನ್ನೆರಡು ವರ್ಷದ ರವಿ ಅದೇ ಶಾಲೆಯಲ್ಲಿಯೇ ಕಲಿಯುತ್ತಿದ್ದ.

ಆ ದಿನ ಬೆಳಗಿನ 10 ಗಂಟೆಗೆ ಮನೆ ತಾರಸಿಗೆ ಬಂದು ನಿಂತ ಉಷಾ ‘ನಮ್ಮ ಮನೆಗೆ ಬೆಂಕಿ ಬಿದ್ದಿದೆ’ ಎಂದು ಅರಚತೊಡಗಿದಳು. ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದರು. 15 ನಿಮಿಷದಲ್ಲಿ ಅಗ್ನಿಶಮನ ಸಿಬ್ಬಂದಿ ಸ್ಥಳಕ್ಕೆ ಬಂದು ಮೂರನೆಯ ಮಹಡಿಯಿಂದ ದಟ್ಟ ಹೊಗೆ ಬರುತ್ತಿದ್ದುದನ್ನು ನೋಡಿ ಮನೆಯೊಳಗೆ ಹೋದರು. ಬೆಂಕಿ ರಾಥೋಡ್ ಕೊಠಡಿಗೆ ಸೇರಿದ್ದ ಬಾತ್​ರೂಂನಿಂದ ಬರುತ್ತಿತ್ತು. ಬಾತ್​ರೂಂನ ಅಗುಳಿ ಹಾಕಿರದಿದ್ದುದರಿಂದ ಸಿಬ್ಬಂದಿ ಬೇಗನೇ ಒಳಹೋಗಿ ಬೆಂಕಿ ನಂದಿಸಿದರು.

ಸ್ನಾನದ ಕೋಣೆಯ ನೆಲದ ಮೇಲೆ ರಾಥೋಡ್​ನ ಶವ ಅರ್ಧ ಸುಟ್ಟು ಕರಕಲಾಗಿ ಬಿದ್ದಿತ್ತು. ಪಕ್ಕದಲ್ಲಿ 2 ಲೀಟರಿನ ಒಂದು ಪ್ಲಾಸ್ಟಿಕ್ ಬಾಟಲ್, ಅದರಲ್ಲಿ ಸ್ವಲ್ಪ ಪೆಟ್ರೋಲ್ ಇತ್ತು. ಶವದ ಮೇಲೆಯೂ ಪೆಟ್ರೋಲ್ ವಾಸನೆ ಬರುತ್ತಿದ್ದುದರಿಂದ ರಾಥೋಡ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರ್ತಸಿದ ಅಗ್ನಿಶಮನ ಅಧಿಕಾರಿ ಕೂಡಲೇ ಪೊಲೀಸರಿಗೆ ಸುದ್ದಿಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರನ್ನು ಮಾಡಿದರು. ಶವ ಅಂಗಾತವಾಗಿ ಬಿದ್ದಿದ್ದು ಕುತ್ತಿಗೆಯಿಂದ ಎದೆಯವರೆಗೆ ಸುಟ್ಟು ಹೋಗಿತ್ತು. ರಾಥೋಡ್ ವ್ಯಾಪಾರ ವಹಿವಾಟಿನಲ್ಲಿ ನಷ್ಟವನ್ನನುಭವಿಸಿದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ಅವರೂ ಅಭಿಪ್ರಾಯಪಟ್ಟು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಮನೆಯಲ್ಲೇ ಇದ್ದ ರಾಥೋಡ್​ನ ಪುತ್ರಿ ಉಷಾಳನ್ನು ನಡೆದ ಘಟನಾವಳಿ ಬಗ್ಗೆ ವಿವರಿಸಲು ಕೇಳಿದಾಗ ಆಕೆ ಹೀಗೆಂದಳು-‘ನಿನ್ನೆ ರಾತ್ರಿ ತಾಯಿ, ತಮ್ಮ ಹೈದರಾಬಾದಿಗೆ ಹೋದರು. ನಾನು, ತಂದೆ ಇಬ್ಬರೇ ಮನೆಯಲ್ಲಿ ಇದ್ದೆವು. ರಾತ್ರಿ ಎರಡನೆಯ ಮಹಡಿಯಲ್ಲಿರುವ ನನ್ನ ಕೋಣೆಯಲ್ಲಿ ಮಲಗಿಕೊಂಡೆ. ಬೆಳಗ್ಗೆ 9.45ಕ್ಕೆ ‘ಹಾ’ ಎನ್ನುವ ಶಬ್ದ ಕೇಳಿಸಿತು. ಕೂಡಲೇ ಮೂರನೆಯ ಮಹಡಿಯಲ್ಲಿನ ಅಪ್ಪನ ಕೋಣೆಗೆ ಓಡಿಹೋದೆ. ಅಪ್ಪನ ಬಾತ್​ರೂಂನಿಂದ ಹೊಗೆ ಬರುತ್ತಿತ್ತು. ನಾನು ಹೆದರಿಕೆಯಿಂದ ಒಳಗೆ ಹೋಗಲಿಲ್ಲ. ತಾರಸಿಗೆ ಹೋಗಿ ನೆರೆಹೊರೆಯವರನ್ನು ಸಹಾಯಕ್ಕೆ ಕೂಗಿದೆ. ಹೇಗೆ ಬೆಂಕಿ ಬಿದ್ದಿತೋ ಗೊತ್ತಿಲ್ಲ’ ಎಂದಳು. ‘ಮನೆಯಲ್ಲಿ ಯಾರೂ ಕೆಲಸದವರಿರಲಿಲ್ಲವೇ’ ಎಂದು ಕೇಳಿದಾಗ ‘ಮನೆ ಕೆಲಸದವರು 11 ಗಂಟೆ ನಂತರವೇ ಬರುತ್ತಾರೆ’ ಎಂದಳು.

ಮರಣೋತ್ತರ ಪರೀಕ್ಷೆಯಲ್ಲಿ, ‘45 ವರ್ಷದ ರಾಥೋಡ್​ನನ್ನು ಬಾರಿ ಬಾರಿ ಇರಿದು ಕೊಲೆ ಮಾಡಲಾಗಿದೆ ಹಾಗೂ ಸತ್ತ ನಂತರ ಅವನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ, ದೇಹ ಸುಟ್ಟ ಕಾರಣದಿಂದ ಇರಿತದ ಗಾಯಗಳು ಮೇಲ್ನೋಟಕ್ಕೆ ಗೋಚರಿಸಿಲ್ಲ’ ಎಂದು ವೈದ್ಯರು ವರದಿ ಮಾಡಿದರು. ಕೂಡಲೇ ಕೊಲೆ ಹಾಗೂ ಸಾಕ್ಷ್ಯನಾಶದ ಪ್ರಕರಣ ದಾಖಲಾಗಿ ತನಿಖೆ ಆರಂಭವಾಯಿತು.

ಏತನ್ಮಧ್ಯೆ ರಾಥೋಡ್​ನ ಪತ್ನಿ ಪೂಜಾ ಹೈದರಾಬಾದಿನಿಂದ ವಾಪಸಾದಳು. ‘ಗಂಡನಿಗೆ ಯಾವುದೇ ಚಿಂತೆಗಳಿರಲಿಲ್ಲ, ವ್ಯಾಪಾರ ಲಾಭದಲ್ಲಿಯೇ ಇತ್ತು. ವೈರಿಗಳಿರಲಿಲ್ಲ. ಎಲ್ಲರ ಜೊತೆ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದ. ಯಾಕೆ ಆತ್ಮಹತ್ಯೆ ಮಾಡಿಕೊಂಡನೋ ಗೊತ್ತಿಲ್ಲ’ ಎಂದಳು. ರಾಥೋಡ್ ಮನೆ ಹಾಗೂ ಅಂಗಡಿ ನೌಕರರೂ ಇದೇ ಅಭಿಪ್ರಾಯ ನೀಡಿದರು.

ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ತಂದೆ, ಮಗಳ ಹೊರತು ಬೇರೆ ಯಾರೂ ಇರಲಿಲ್ಲ. ‘ಇದ್ದ ಮೂರರಲ್ಲಿ ಕದ್ದವರು ಯಾರು’ ಎನ್ನುವಂತೆ ಸಂಶಯದ ಸೂಜಿ ಉಷಾಳತ್ತಲೇ ತಿರುಗಿತು. ಉಷಾಳನ್ನು ಪ್ರಶ್ನಿಸಲು ಅಧಿಕಾರಿಗಳು ಮತ್ತೊಮ್ಮೆ ಅವಳ ಮನೆಗೆ ಹೋದಾಗ ಪೂಜಾ, ‘ನನ್ನ ಮಗಳಿಗೂ ಈ ಸಾವಿಗೂ ಯಾವುದೇ ಸಂಬಂಧವಿಲ್ಲ, ನೀವು ಅವಳನ್ನು ಪ್ರಶ್ನಿಸುವ ಅಗತ್ಯವಿಲ್ಲ’ ಎಂದಳು. ಅಷ್ಟರಲ್ಲಿ ಅಕಸ್ಮಾತ್ತಾಗಿ ತನಿಖಾಧಿಕಾರಿಯ ದೃಷ್ಟಿ ಉಷಾಳ ಪಾದಗಳತ್ತ ಹೋಯಿತು. ಅವಳ ಎರಡೂ ಪಾದಗಳಿಗೆ ಸುಟ್ಟ ಗಾಯವಾಗಿರುವುದನ್ನು ಗಮನಿಸಿದ ಅವರು ಆ ಗಾಯ ಹೇಗಾಯಿತು ಎಂದು ವಿಚಾರಿಸಿದಾಗ ಉಷಾ ಸಮರ್ಪಕ ಉತ್ತರ ಕೊಡಲಿಲ್ಲ. ತನಿಖಾಧಿಕಾರಿ ತಾಯಿ ಸಮ್ಮುಖದಲ್ಲೇ ಅಪ್ರಾಪ್ತ ಬಾಲಕಿಯನ್ನು ಮಹಿಳಾ ಪೊಲೀಸರ ಸಹಾಯದಿಂದ ವಿಚಾರಣೆ ಮಾಡಿದರು. ಪೊಲೀಸರ ನಿರಂತರ ಪ್ರಶ್ನೆಗಳನ್ನು ತಾಳಲಾರದೆ ಉಷಾ ಅಳುತ್ತ, ‘ತಂದೆಯನ್ನು ನಾನೇ ಕೊಲೆ ಮಾಡಿದೆ’ ಎಂದಾಗ ಅಲ್ಲಿದ್ದವರೆಲ್ಲ ಗಾಬರಿಯಾದರು. ನಡೆದ ಘಟನೆಗಳನ್ನು ಆಕೆ ಹೀಗೆ ವಿವರಿಸಿದಳು:

‘ನನಗೆ ಇದೇ ಬಡಾವಣೆಯಲ್ಲಿ ಓದುತ್ತಿದ್ದ ವಿನಯ್ ಎಂಬ ಬಾಯ್ಫ್ರೆಂಡ್ ಇದ್ದಾನೆ. ನಾವು ಒಂದು ವರ್ಷದಿಂದ ಲವ್ ಮಾಡುತ್ತಿದ್ದೇವೆ. ನಾವಿಬ್ಬರೂ ತರಗತಿಗಳಿಗೆ ಹೋಗದೆ ಸಿನಿಮಾ, ಮಾಲ್​ಗಳಲ್ಲಿಯೇ ಹೆಚ್ಚಿನ ಕಾಲ ಕಳೆಯುತ್ತಿದ್ದೆವು. ನನ್ನ ಕಳೆದ ಹುಟ್ಟಿದ ಹಬ್ಬಕ್ಕೆಂದು ಅಪ್ಪ ಸ್ಮಾರ್ಟ್ ಫೋನ್ ತಂದುಕೊಟ್ಟಿದ್ದರು. ನಾನು ಫೋನಿನಲ್ಲಿ ವಿನಯನ ಜತೆ ಗಂಟೆಗಟ್ಟಲೇ ಮಾತನಾಡುವುದು, ಚಾಟ್ ಮಾಡುವುದು ಮುಂತಾದುವನ್ನು ಗಮನಿಸಿ ಅವರು ಕೋಪಗೊಂಡು ಫೋನನ್ನು ಕಸಿದುಕೊಂಡರು. ಫೋನ್​ನಲ್ಲಿ ನಮ್ಮಿಬ್ಬರ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೋಗಳನ್ನು ನೋಡಿ ಕುಪಿತರಾದರು. ಆ ದಿನ ಅವರು ನನಗೆ ಹಿಗ್ಗಾಮುಗ್ಗಾ ಹೊಡೆದು ವಿನಯ್ನ ಸಂಗ ಬಿಡದಿದ್ದರೆ ನನ್ನನ್ನು ತಮ್ಮ ಊರಿಗೆ ಕಳಿಸುತ್ತೇನೆ ಎಂದು ಹೆದರಿಸಿದರು. ಆ ಇಡೀ ದಿನ ನನ್ನನ್ನು ರೂಂನಲ್ಲಿ ಊಟ ಕೊಡದೆ ಕೂಡಿ ಹಾಕಿದರು. ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ಬಂದ ನನ್ನ ತಾಯಿಗೂ ಎರಡೇಟು ಬಿದ್ದವು.

ಮಾರನೆಯ ದಿನದಿಂದಲೇ ತಂದೆ ನನ್ನನ್ನು ಶಾಲೆಗೆ ಕಳಿಸಲು ಹಾಗೂ ಮನೆಗೆ ಕರೆತರಲು ಒಬ್ಬ ಸೇವಕಿಯನ್ನು ಗೊತ್ತುಮಾಡಿದರು. ಒಂದು ದಿನ ನಾನವಳ ಕಣ್ಣು ತಪ್ಪಿಸಿ ವಿನಯ್ನ ಸಂಪರ್ಕ ಮಾಡಿದೆ. ನಾವಿಬ್ಬರೂ ಒಂದಾಗಬೇಕಾದರೆ ನಾನು ಮನೆ ಬಿಟ್ಟು ಬರಬೇಕು ಇಲ್ಲವೇ ನನ್ನ ತಂದೆ ಸಾಯಬೇಕು ಎಂದು ತೀರ್ವನಿಸಿದ ನಾವಿಬ್ಬರು ನನ್ನ ತಂದೆಯನ್ನು ಕೊಲ್ಲಲು ನಿಶ್ಚಯಿಸಿದೆವು. ಅಷ್ಟರಲ್ಲಿ ತಾಯಿ ನನ್ನ ತಮ್ಮನೊಡನೆ ಊರಿಗೆ ಹೋಗಬೇಕಾಯಿತು. ಇದೇ ಸಮಯವೇ ತಂದೆಯನ್ನು ಕೊಲೆ ಮಾಡಲು ಸೂಕ್ತ ಎಂದು ಯೋಚಿಸಿ ಕೊಲೆಯ ರೂಪುರೇಷೆಗಳನ್ನು ರ್ಚಚಿಸಿದೆವು.

ತಾಯಿ ಊರಿಗೆ ಹೋಗುವ ದಿನ ಅಪ್ಪ ಅಂಗಡಿಯನ್ನು ಮುಚ್ಚಿ ಬೇಗ ಮನೆಗೆ ಬಂದರು. ನಾವೆಲ್ಲರೂ ಒಟ್ಟಿಗೇ ಊಟ ಮಾಡಿದೆವು. ಊಟಮಾಡಿದ ನಂತರ ಅವರು ವಾಡಿಕೆಯಂತೆ ಒಂದು ಗ್ಲಾಸ್ ಹಾಲು ಕುಡಿಯುತ್ತಾರೆ. ವಿನಯ್ ತಂದುಕೊಟ್ಟಿದ್ದ ನಿದ್ರೆಯ ಗುಳಿಗೆಯ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಅಪ್ಪನಿಗೆ ಕುಡಿಯಲು ಕೊಟ್ಟೆ. ನಂತರ ಅಮ್ಮನನ್ನು ಕಳಿಸಲು ಸ್ಟೇಷನ್​ಗೆ ಹೋಗಿ ವಾಪಸ್ ಬರುವಾಗ ವಿನಯ್ನನ್ನು ನನ್ನ ಮನೆಗೆ ಬರಹೇಳಿದೆ.

ಅವನು ತನ್ನ ಮನೆಯಿಂದ ಎರಡು ಚಾಕುಗಳನ್ನೂ ಹಾಗೂ ಪೆಟ್ರೋಲ್ ಬಂಕಿನಿಂದ ಖರೀದಿಸಿದ್ದ ಒಂದು ಬಾಟಲ್ ಪೆಟ್ರೋಲನ್ನೂ ತಂದ. ರಾತ್ರಿ 11ಕ್ಕೆ ನಾವಿಬ್ಬರೂ ಅಪ್ಪನ ಕೋಣೆಗೆ ಹೋದಾಗ ಗಾಢನಿದ್ರೆಯಲ್ಲಿದ್ದರು. ಅವರನ್ನು ಪದೇಪದೆ ತಿವಿದೆವು. ಅವರ ಪ್ರಾಣ ಹೋದ ನಂತರ ಶವವನ್ನು ಬಾತ್​ರೂಂಗೆ ಎಳೆದುಕೊಂಡು ಹೋಗಿ ಮಲಗಿಸಿದೆವು. ನಂತರ ನೆಲದ ಮೇಲಿದ್ದ ರಕ್ತದ ಕಲೆಗಳನ್ನು ಒರೆಸಿದೆವು.

ಅಪ್ಪ ಹಾಗೂ ನಮ್ಮಿಬ್ಬರ ಬಟ್ಟೆಗಳಲ್ಲದೆ ಹಾಸಿಗೆ ಮೇಲಿದ್ದ ಬೆಡ್​ಶೀಟ್ ಸಹ ರಕ್ತಮಯವಾದ್ದರಿಂದ ಅವನ್ನು ವಾಷಿಂಗ್​ವುಷೀನಿಗೆ ಹಾಕಿದೆವು. ವಿನಯ್ಗೆ ತೊಡಲು ಅಪ್ಪನ ಶರ್ಟ್ ಕೊಟ್ಟೆ. ನಂತರ ಬಾತ್​ರೂಂಗೆ ಹೋಗಿ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆವು. ನಮ್ಮಿಬ್ಬರ ಪಾದಗಳಿಗೂ ಪೆಟ್ರೋಲ್ ಚಿಮ್ಮಿ ಬೆಂಕಿ ತಗುಲಿ ಗಾಯವಾಯಿತು. ವಿನಯ್ ತನ್ನ ಮನೆಗೆ ಹೋದ ನಂತರ ನಾನು ತಾರಸಿಗೆ ಹೋಗಿ ಸಹಾಯಕ್ಕಾಗಿ ಅರಚಿದೆ’ ಎಂದಳು.

ಪೊಲೀಸರು ವಿನಯ್ನ ಮನೆಗೆ ಹೋಗಿ ಅವನನ್ನು ಬಂಧಿಸಿದಾಗ ಆತ ತನಗೂ ಉಷಾಗೂ ದೈಹಿಕ ಸಂಬಂಧವಿದ್ದುದನ್ನು ತಿಳಿಸಿ ಕೊಲೆಯಲ್ಲಿನ ತನ್ನ ಪಾತ್ರವನ್ನು ಒಪ್ಪಿಕೊಂಡ. ತನ್ನ ಮನೆಯಲ್ಲಿ ಅಡಗಿಸಿದ್ದ ಚಾಕುಗಳನ್ನು ಹಾಜರುಪಡಿಸಿದ. ಇತರ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಇಬ್ಬರ ಮೇಲೆಯೂ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು.

‘ಬಾಲ್ಯಕ್ಕೆ ನಗು ಹೇಗೋ ಹಾಗೆಯೇ ಹದಿಹರೆಯಕ್ಕೆ ಸೆಕ್ಸ್’ ಎನ್ನುತ್ತಾಳೆ ಜೀವನ ತರಬೇತಿಗಾರ್ತಿ ಮಾರ್ಥಾ ಬೆಕ್. ಬಾಲಕ ಬಾಲಕಿಯರು ಹದಿಹರೆಯಕ್ಕೆ ಬಂದಾಗ ಅವರ ದೇಹಗಳಲ್ಲಿ ಆಗುವ ಬದಲಾವಣೆಗಳಿಂದ ತಮ್ಮ ದೇಹದ ಬಗ್ಗೆ ಹೆಚ್ಚಿನ ಆಸಕ್ತಿ, ಸೆಕ್ಸ್ ಬಗ್ಗೆ ತಿಳಿಯುವ ಕುತೂಹಲ ಹಾಗೂ ಅನುಭವಿಸುವ ಬಯಕೆ ಉಂಟಾಗುತ್ತವೆ. ಇಂತಹ ಕಾಲದಲ್ಲಿ ಹಿರಿಯರು ಎಚ್ಚರದಿಂದಿದ್ದು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡದಿದ್ದರೆ ಅನಾಹುತಗಳೇ ಸಂಭವಿಸುತ್ತವೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...