ನಿಸ್ವಾರ್ಥ ಸೇವೆ ಮಾಡಿ

ವಿಜಯಪುರ: ನಿಸ್ವಾರ್ಥ ಸೇವೆ ಮಾಡುವ ಮನಸ್ಸು ಎಲ್ಲರೂ ಹೊಂದಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಹೇಳಿದರು.
ಇಲ್ಲಿನ ಮಹಿಳಾ ವಿವಿ ಜ್ಞಾನಶಕ್ತಿ ಆವರಣದಲ್ಲಿ ಎನ್‌ಎಸ್‌ಎಸ್ ಕೋಶದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ‘ಸೇವೆ’ ಎಂಬ ಪದಕ್ಕೆ ಹೆಸರಾದವರು. ಸಾರ್ವಜನಿಕ ಸ್ಥಳಗಳನ್ನು ಸ್ವತಃ ಅವರೇ ಸ್ವಚ್ಛಗೊಳಿಸುತ್ತಿದ್ದರು. ಆದ್ದರಿಂದ ಸೇವೆ ಎಂಬುದು ನಿಸ್ವಾರ್ಥದಿಂದ ಕೂಡಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ಜೀವನವನ್ನೆ ಗಾಂಧೀಜಿ ಅವರು ಸೇವೆಗಾಗಿ ಮೀಸಲಿಟ್ಟಂತಹ ಮಹಾತ್ಮರು. ನಮ್ಮ ಕೆಲಸದ ಬಗ್ಗೆ ಮತ್ತು ನಮ್ಮತನದ ಬಗ್ಗೆ ನಮ್ಮಲ್ಲಿ ಸದಾ ಗೌರವವಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಸಂಯೋಜಕ ಪ್ರೊ.ಬಿ.ಎಲ್.ಲಕ್ಕಣ್ಣವರ, ಮಹಿಳಾ ಪದವಿ ಮಹಾವಿದ್ಯಾಲಯಗಳ ಕಾರ್ಯಕ್ರಮಗಳ ಅಧಿಕಾರಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.