ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

ವಿಜಯಪುರ: ಜೀವನದಲ್ಲಿ ಯಶಸ್ಸು ಕಾಣಲು ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದು ಎಂ.ಎಸ್. ದೇಶಪಾಂಡೆ ಹೇಳಿದರು.
ನಗರದ ವಿ.ಬಿ. ದರಬಾರ ಶಾಲೆಯ 1983-89ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಜೀವನದ ದಾರಿದೀಪ. ಅಕ್ಷರ ಜ್ಞಾನವನ್ನು ಧಾರೆ ಎರೆದ ಗುರುಗಳಿಗೆ ಪ್ರತಿಯೊಬ್ಬ ವಿದ್ಯಾರ್ಥಿ ಹೃತ್ಪೂರ್ವಕವಾಗಿ ನಮಿಸಬೇಕು ಎಂದು ಹೇಳಿದರು.
ಶಿಕ್ಷಕರಾದ ಎಂ.ಆರ್. ಪಾಟೀಲ, ಕೆ.ಜಿ. ಕುಲಕರ್ಣಿ, ಜೆ.ಜೆ. ಪಾಟೀಲ, ಉಮಾ ಬಾಂಡಗಂಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಹಳೇ ವಿದ್ಯಾರ್ಥಿಗಳಾದ ರಾಜು ಲೋಣಿ, ರಾಜು ಕಸಬೇಗೌಡರ, ಗೋಪಾಲ ದೇಶಪಾಂಡೆ, ಆನಂದ ಝಳಕಿ, ಶಶಿಕಲಾ ಕಂಬಿ ಪಾಲ್ಗೊಂಡಿದ್ದರು. ಡಾ.ವಿಜಯ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾ ಪಾಟೀಲ ಹಾಗೂ ಮಹೇಶ ಭಾಗವತ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *