ಮಿನಿ ಲಾರಿ ಪಲ್ಟಿ, ಓರ್ವ ಸಾವು

ವಿಜಯಪುರ: ಜಿಲ್ಲೆಯ ತಿಕೋಟಾ ಬಳಿ ಸೋಮವಾರ ಸಂಜೆ ಮಿನಿ ಲಾರಿ ಪಲ್ಟಿಯಾಗಿ ಜತ್ತ ತಾಲೂಕಿನ ಔದಿ ಗ್ರಾಮದ ದಾದಾಸಾಹೇಬ ಕೇದಾರ (30) ಸಾವಿಗೀಡಾಗಿದ್ದಾನೆ. ಬಿಜ್ಜರಗಿಯಿಂದ ತಿಕೋಟಾ ಮಾರ್ಗವಾಗಿ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಕಬ್ಬಿಣದ ಸರಳು ತುಂಬಿಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಲಾರಿಯಲ್ಲಿ ದಾದಾಸಾಹೇಬ ಒಬ್ಬನೇ ಇದ್ದ. ಗಂಭೀರ ಗಾಯಗೊಂಡ ದಾದಾಸಾಹೇಬ ಚಿಕಿತ್ಸೆ ಫಲಿಸದೆ ತಿಕೋಟಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಈ ಬಗ್ಗೆ ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.