ವಿಜಯಪುರ: ವಿಜಯಪುರ ಜಿಲ್ಲೆ ಎಂದರೆ ದ್ರಾಕ್ಷಿ, ದಾಳಿಂಬೆ ಹಾಗೂ ಲಿಂಬೆ ನೆನಪಿಗೆ ಬರುತ್ತದೆ. ಆದರೀಗ ಆರ್ಥಿಕ ಹೊರೆಯಿಂದ ಪಾರಾಗಲು ರೈತರು ಪರ್ಯಾಯ ಬೆಳೆ ಬೆಳೆಯಬೇಕಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮುಖ್ಯ ವ್ಯವಸ್ಥಾಪಕ ಎಂ.ಎಸ್. ಹಾಲಳ್ಳಿ ಹೇಳಿದರು.
ತಾಲೂಕಿನ ತಿಡಗುಂದಿಯ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರದಲ್ಲಿ ಆತ್ಮಾ ಯೋಜನೆಯಡಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೇರಲ ಮತ್ತು ಸೀತಾಲ ಬೆಳೆಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ರೈತರು ನೀರಿನ, ಕಾರ್ಮಿಕರ ಹಾಗೂ ಯಥೇಚ್ಛವಾಗಿ ಬಳಸುತ್ತಿರುವ ಸಿಂಪರಣೆಗಳಿಂದ ಹೊರಬರಲು ಪರ್ಯಾಯ ಬೆಳೆಗಳಾದ ಪೇರಲ ಮತ್ತು ಸೀತಾಲ ಬೆಳೆ ಬೆಳೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
ಡಾ.ಡಿ.ಎ. ಪೀರಜಾದೆ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಬಿ. ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಘವೇಂದ್ರ ಆಚಾರಿ ಸ್ವಾಗತಿಸಿದರು. ಸಿದ್ದಣ್ಣ ಠೋಕೆ ನಿರೂಪಿಸಿದರು. ಡಾ.ಎ.ಎಂ. ನದಾಫ್ ವಂದಿಸಿದರು. ಕಾರ್ಯಕ್ರಮದಲ್ಲಿ 120 ಕ್ಕೂ ಹೆಚ್ಚು ರೈತರು ಪಾಲ್ಲೊಂಡಿದ್ದರು.
