ಅತಿಕ್ರಮ ತೆರವಿಗೆ ನಗರ ಶಾಸಕರ ಸೂಚನೆ

ವಿಜಯಪುರ: ನಗರದಲ್ಲಿ ಉದ್ಯಾನ, ದೇವಸ್ಥಾನ ಹಾಗೂ ಇತರೆ ಸಾರ್ವಜನಿಕ ಕಟ್ಟಡಗಳಿಗಾಗಿ ಕಾಯ್ದಿರಿಸಿದ ಜಾಗಗಳ ಅತಿಕ್ರಮಣದ ಬಗ್ಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಹಿತಿ ಪಡೆದು, ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.
ಇಲ್ಲಿನ ಶಾಸ್ತ್ರಿನಗರದ ಸರ್ವೇ ನಂ.671 ಹಾಗೂ 672 ಹಾಗೂ ವಜ್ರಹನುಮಾನ ನಗರದ ಸರ್ವೇ ನಂ.488 ಪ್ಲಾಟ್ ನಂ.144 ರಲ್ಲಾದ ಅತಿಕ್ರಮಣ ಜಾಗಗಳ ಬಗ್ಗೆ ಶಾಸಕ ಯತ್ನಾಳ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಪಾಲಿಕೆ ಆಯುಕ್ತರು ಹಾಗೂ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ನಗರದ ಮೀನಾಕ್ಷಿ ಚೌಕ್ ಸಿಟಿಎಸ್ ನಂ.403 ಉದ್ಯಾನ ಹಾಗೂ ರಿ.ಸ.ನಂ 844/ಪಿ ಪ್ಲಾಟ್ ನಂ.34ರ ಉದ್ಯಾನ ಜಾಗದ ಅತಿಕ್ರಮಣ ತೆರವುಗೊಳಿಸಲಾಗಿದೆ ಮತ್ತು 869/ಕ ನೇದ್ದರಲ್ಲಿ ಗಾರ್ಡನ್ ಜಾಗ ಕುರಿತು 2ನೇ ಅಡಿಷನಲ್ ಸಿ.ಜೆ ಮತ್ತು ಜೆಎಂಎ್ಸಿ 2 ನೇದ್ದರಲ್ಲಿ ಒ.ಎಸ್ ನಂ.242/2016 ನೇದ್ದರಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾದ ನಂತರ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಸರ್ವೇ ನಂ.748/ಬ ಕ ನೇದ್ದರ ಪ್ಲಾಟ್ ನಂ. 80ರ ಜಾಗಗಳು ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ಡಬ್ಲು.ಪಿ ನಂ. 200187/2019 ನೇದ್ದರಂತೆ ಪ್ರಕರಣ ದಾಖಲಿದ್ದು, ಅದರಲ್ಲಿ ತಡೆಯಾಜ್ಞೆ ಇದ್ದು, ರಿ.ಸ.ನಂ. 872 ರಲ್ಲಿ ನಿವೇಶನ ಸಂಖ್ಯೆ1ರಲ್ಲಿ ಅತಿಕ್ರಮಣವಾಗಿರುವ ವಿಷಯ ಕುರಿತು ಪ್ರಿನ್ಸಿಪಲ್ ಸಿವಿಲ್ ನ್ಯಾಯಾಧೀಶರು ವಿಜಯಪುರ ನ್ಯಾಯಾಲಯದಲ್ಲಿ ಒ.ಎಸ್ ನಂ. 862/2016, ಒ.ಎಸ್ ನಂ.857/2016, ಒ.ಎಸ್ ನಂ.84/2017, ಒ.ಎಸ್ ನಂ.854/2016 ನೇದ್ದರಂತೆ ಅತಿಕ್ರಮಣದಾರರು ಪ್ರಕರಣ ದಾಖಲಿಸಿದ್ದು, ಪ್ರಕರಣಗಳು ಇತ್ಯರ್ಥವಾದ ನಂತರ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಈಗಾಗಲೇ ಪಾಲಿಕೆ ವ್ಯಾಪ್ತಿಯ ಉದ್ಯಾನ ಹಾಗೂ ಬಯಲು ಜಾಗಗಳ ಅತಿಕ್ರಮಣದ ಬಗ್ಗೆ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಸರ್ವೇ ಕಾರ್ಯದಲ್ಲಿ ಕಂಡುಬರುವ ಅತಿಕ್ರಮಣವನ್ನು ತೆರವುಗೊಳಿಸಲು, ತಂಡಗಳನ್ನು ರಚಿಸಿ ತೆರವುಗೊಳಿಸುವ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇಲ್ಲಿನ ಶಾಸಿನಗರದ ರಿ.ಸ.ನಂ.671/ಬ ಪ್ಲಾಟ್ ನಂ.30, ಕ್ಷೇತ್ರ 1-ಎಕರೆ 11-ಗುಂಟೆ ಜಾಗವನ್ನು ಶಾಲೆ ಮತ್ತು ಆಟದ ಮೈದಾನಕ್ಕೆ ಕಾಯ್ದಿರಿಸಲಾಗಿದ್ದು, ಪೌರಾಯುಕ್ತರ ಹೆಸರಿಗೆ ಹಸ್ತಾಂತರಗೊಂಡಿದೆ.ರಿ.ಸ.ನಂ.672/ಕ ಇದು ಉದ್ಯಾನಕ್ಕೆ ಮೀಸಲಾಗಿದೆ. ಆದರೆ, ಬಹಳ ದಿನಗಳ ಹಿಂದೆಯೇ ಅಲ್ಲಿ 129 ಕ್ಕೂ ಹೆಚ್ಚಿನ ಮನೆಗಳು ನಿರ್ಮಿಸಿ ವಾಸಿಸುತ್ತಿದ್ದಾರೆ. ರಿ.ಸ.ನಂ 671/ಬ ಪ್ಲಾಟ್ ನಂ.30ರ ಜಾಗವನ್ನು 2009 ಜೂ.26ರಲ್ಲಿ ಸ್ಲಂ ಬೋರ್ಡ್‌ನಿಂದ ಕೊಳಚೆ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲಿರುವವರಿಗೆ ಬೇರೆಡೆ ಪುನರ್ವಸತಿ ಕಲ್ಪಿಸಲು ಕ್ರಮವಹಿಸಿ, ಕಂದಾಯ ಇಲಾಖೆ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ದಾಖಲೆ ಪಡೆದು ಆ ಜಾಗವನ್ನು ಮೋಜಣಿ ಮಾಡಿಸಿ, ವರದಿಯಂತೆ ಅತಿಕ್ರಮಣ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಮೋಜಣಿ ಮಾಡಿಕೊಡಲು ಭೂದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಭೂಮಾಪನ ಇಲಾಖೆಯವರಿಗೆ 2019 ಜೂ.21ರಂದು ಪತ್ರ ಬರೆದು ತುರ್ತಾಗಿ ವರದಿ ನೀಡುವಂತೆ ಕೋರಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ನಗರದ ವಜ್ರಹನುಮಾನ ನಗರದ ಸರ್ವೇ ನಂ.488 ಪ್ಲಾಟ್ ನಂ.114 ರಲ್ಲಿ ಅಲೆಮಾರಿ ಜನಾಂಗದ 20 ಕುಟುಂಬಗಳು ವಾಸಿಸುತ್ತಿದ್ದು, ಅವನ್ನು ತೆರವುಗೊಳಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *