ಅಕ್ಷೋಭ್ಯತೀರ್ಥರ ಆರಾಧನಾ ಮಹೋತ್ಸವ

ತಾಳಿಕೋಟೆ: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಹುಣಸಿಹೊಳೆ ಕಣ್ವ ಮಠದ 2ನೇ ಪೀಠಾಧಿಪತಿ ಶ್ರೀಮದ್ ಅಕ್ಷೋಭ್ಯತೀರ್ಥರ 207ನೇ ಆರಾಧನಾ ಮಹೋತ್ಸವ ವೈಭವದಿಂದ ನಡೆಯಿತು.

ಗ್ರಾಮದ ಶ್ರೀಮದ್ ಅಕ್ಷೋಭ್ಯತೀರ್ಥರ ಹಾಗೂ ಶ್ರೀಮದ್ ವಿದ್ಯಾನಿಧಿ ತೀರ್ಥರ ಬೃಂದಾವನಗಳಿಗೆ ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಕಣ್ವ ಮಠದ ಯತಿಗಳಾದ ವಿದ್ಯಾವಾರಧಿ ಶ್ರೀಪಾದರ ಅನುಪಸ್ಥಿತಿಯಲ್ಲಿ ಸಿಂಧನೂರಿನ ಶಂಕರ ಆಚಾರ್ಯರ ನೇತೃತ್ವದಲ್ಲಿ ವಿಠಲ, ಕೃಷ್ಣನ ಪೂಜೆ, ಮುದ್ರಾಧಾರಣೆ, ಮಹಾಸಂಸ್ಥಾನ ಪೂಜೆ ನೆರವೇರಿಸಿ, ಬೃಂದಾವನಗಳಿಗೆ ಮಂಗಳಾರತಿ ಮಾಡಿದರು.

ಶಂಕರ ಆಚಾರ್ಯರು ಮಾತನಾಡಿ, ಸಂಸ್ಕಾರವಿದ್ದಲ್ಲಿ ಸಮೃದ್ಧಿ, ವಿದ್ಯೆಯಿದ್ದಲ್ಲಿ ವಿನಯವಿರುವುದು. ಧರ್ಮಾಚರಣೆಯಿಂದ ಮನ ಬೆಳೆಸಬ ಹುದು. ದೇಶ ಉಜ್ವಲಗೊಳಿಸಬಹುದು. ಲೌಕಿಕ ಜೀವನದಲ್ಲಿ ಮೇಲ್ನೋಟಕ್ಕೆ ಹಣವೇ ಮುಖ್ಯವೆನಿಸಿದರೂ ಗುರುಗಳ ಅನುಗ್ರಹದೊಂದಿಗೆ ಸಮಾಜ ಕಾರ್ಯ ಮಾಡಿ ಯಶಸ್ಸು ಗಳಿಸಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾಲಯ ಅಮವಾಸ್ಯೆ ನಿಮಿತ್ತ ವಿಪ್ರ ಬಾಂಧವರು ಸಾಮೂಹಿಕ ಪಿತೃ ಕಾರ್ಯ ನೇರವೇರಿಸಿದರು.

ಶಶಿಕಾಂತ ದೇಶಪಾಂಡೆ, ಭೀಮಣ್ಣ ಕುಲಕರ್ಣಿ, ರವಿ ದೇಶಪಾಂಡೆ, ಗುರುರಾಜ ಕುಲಕರ್ಣಿ, ಸುನೀಲ ಕುಲಕರ್ಣಿ, ಗುರುದತ್ತ ಚಪಟ್ಲಾ, ಗಂಗಾಧರ ಜೋಶಿ, ಕಮಾಲಕರ ದೇಶಪಾಂಡೆ, ಮನೋಹರ ಕುಲಕರ್ಣಿ, ಸುಧಾಕರ ದೋಟಿಹಾಳ ಸೇರಿದಂತೆ ಬಿಳೆಭಾವಿ, ತಾಳಿಕೋಟೆ, ನಾಗೂರ, ನಾರಾಯಣಪುರ, ಹುಣಸಗಿ, ಕೊಡೆಕಲ್ಲ, ಕಾಮನಟಗಿ, ದ್ಯಾಮನಾಳ ಗ್ರಾಮಗಳ ವಿಪ್ರ ಬಾಂಧವರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.