19 C
Bengaluru
Thursday, January 23, 2020

ನಗರದಲ್ಲಿ ಸಜ್ಜೆ ರೊಟ್ಟಿ ಸದ್ದು

Latest News

ಶೆಡ್ ತೆರವಿಗೆ ಸ್ಥಳೀಯರ ಬೆಂಬಲ ಕರಿಯಮ್ಮನ ಅಗ್ರಹಾರದಲ್ಲಿ ಪಾಲಿಕೆ ಕಾರ್ಯಾಚರಣೆ, ಅಕ್ರಮ ನಿವಾಸಿಗಳ ಓಡಿಸಲು ಆಗ್ರಹ

ಕೆ.ಆರ್.ಪುರ:  ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ, ಬೆಳ್ಳಂದೂರು ಸುತ್ತಲಿನ ಶೆಡ್​ಗಳನ್ನು ತೆರವು ಮಾಡಿರುವ ಬಿಬಿಎಂಪಿ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಶೆಡ್​ಗಳಲ್ಲಿ ಸ್ಥಳೀಯರೂ ಇದ್ದಾರೆ. ಆದರೆ, ಅವರ ನಡುವೆ...

ಚೇಂಜ್ ಆಗಿದೆ ಟ್ರೆಂಡ್; ಪುನೀತ್​ ಸೋಷಿಯಲ್​ ಮಾತು

ಬೆಂಗಳೂರು: ‘ಇತ್ತೀಚೆಗೆ ಒಂದು ಟೀಸರ್-ಟ್ರೇಲರ್ ಲಾಂಚ್ ಮಾಡಬೇಕು ಎಂದರೆ ಅಲ್ಲಿಂದಲೇ ಶುರುವಾಗುತ್ತದೆ. ಈಗ ಟ್ರೆಂಡ್ ಚೇಂಜ್ ಆಗಿದೆ. ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು..’ - ಪವರ್​ಸ್ಟಾರ್ ಪುನೀತ್...

ನುಡಿ ಹಬ್ಬಕ್ಕೆ ಸಿದ್ಧತೆ

ಬೆಂಗಳೂರು: ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯಲಿರುವ ‘85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ರಾಜ್ಯ ಸರ್ಕಾರ...

ಬರ್ತ್​ ಡೇ ವಿಷ್; ನಿಖಿಲ್ ಧನುಷ್ ಫ್ಯಾನ್ಸ್ ಖುಷ್

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರ್ ಬುಧವಾರ (ಜ. 22) ಜನ್ಮದಿನ ಆಚರಿಸಿಕೊಂಡಿದ್ದು ಮಾತ್ರವಲ್ಲದೆ ಈ ವರ್ಷವಿಡೀ ಸಿನಿಮಾದಲ್ಲಿ...

ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿದೆ ಎಂದ ಬಾಂಬರ್​ ಆದಿತ್ಯರಾವ್: ಪಣಂಬೂರು ಎಸಿಪಿ ಕಚೇರಿಯಲ್ಲಿ ತಡರಾತ್ರಿವರೆಗೆ ವಿಚಾರಣೆ

ಮಂಗಳೂರು: ತಡರಾತ್ರಿಯವರೆಗೂ ಬಾಂಬರ್ ಆದಿತ್ಯರಾವ್ ವಿಚಾರಣೆ ನಡೆದಿದ್ದು ಪೊಲೀಸ್ ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಹಿರಂಗವಾಗಿದೆ. ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿರೋದಾಗಿ ಹೇಳಿರುವ ಆದಿತ್ಯರಾವ್, ಸರಿಯಾದ ಕೆಲಸವಿಲ್ಲದೆ...

ವಿಜಯಪುರ: ಜಿಲ್ಲೆ ಖ್ಯಾತ ಪ್ರತಿಭೆ ಸುನೀಲಕುಮಾರ ಸುಧಾಕರ ರಚಿಸಿದ ಮಟಾಶ್ ಚಿತ್ರ ಸಜ್ಜಿ ರೊಟ್ಟಿ ಚವಳಿಕಾಯಿ ಗೀತೆ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು.

ನಗರದ ಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಎಸ್.ಡಿ. ಅರವಿಂದ ಮಾತನಾಡಿ, ವಿಜಯಪುರಿಗರ ಪ್ರೀತ್ಯಾಧಾರಗಳಿಗೆ ನಾವು ಮನ ಸೋತಿದ್ದೇವೆ. ಇಲ್ಲಿರುವ ಚಿತ್ರಪ್ರೇಮಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಚಿತ್ರೀಕರಣಕ್ಕೆ ಬಂದಾಗ ಇಲ್ಲಿರುವ ಸ್ಮಾರಕಗಳನ್ನು ನಾವು ಚಿತ್ರದಲ್ಲಿ ಕಥೆಗೆ ತಕ್ಕಂತೆ ಬಳಸಿಕೊಂಡಿದ್ದೇವೆ. ಚಿತ್ರದ ಕಥೆ ನೋಟ್‌ಬ್ಯಾನ್ ಸಂದರ್ಭವನ್ನು ಒಳಗೊಂಡಿದೆ. ಇಂತಹ ಕಥೆಗೆ ಸಂಬಂಧಪಟ್ಟ ಹಾಡನ್ನು ವಿಜಯಪುರದಲ್ಲಿ ಬಿಡುಗಡೆ ಮಾಡಲು ಸಂತೋಷವೆನಿಸುತ್ತದೆ ಎಂದರು.

ಉತ್ತರ ಕರ್ನಾಟಕ ಭಾಷಾ ಸೊಗಡಿನ ಗೀತೆಯನ್ನು ಚಿತ್ರಕ್ಕೆ ಬಳಸಬೇಕು. ಹಾಗೇ ಈ ಗೀತೆಯನ್ನು ಇದೇ ಊರಿನವರ ಕಡೆಯಿಂದ ಬರೆಯಿಸಬೇಕೆಂದು ಆಸೆ ಪಟ್ಟಿದ್ದೆ. ಹಾಗಾಗಿ ನಾವು ಸುನೀಲಕುಮಾರ ಸುಧಾಕರ ಅವರನ್ನು ಕೇಳಿಕೊಂಡಾಗ ಅವರು ಒಂದೇ ದಿನದಲ್ಲಿ ಹಾಡು ಬರೆದು ಕೊಟ್ಟಿದ್ದಾರೆ. ಅವರ ಸಾಹಿತ್ಯಕ್ಕೆ ಪುನೀತ್ ರಾಜಕುಮಾರ್ ಧ್ವನಿಗೂಡಿಸಿದ್ದು, ಈ ಚಿತ್ರದ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಬೇಕೆಂದರು. ಕಾರ್ಯಕ್ರಮದಲ್ಲಿಯೇ ಚಿತ್ರನಟ ಗೌತಮ್ ಎಚ್.ಸಿ. ಅವರ ಜನ್ಮದಿನ ಆಚರಿಸಲಾಯಿತು. ಸಹ ನಿರ್ದೇಶಕ ಮಲ್ಲಿಕಾರ್ಜುನ, ರುದ್ರಪ್ಪ ಮಣೂರ, ರೂಪಾಂಜಲಿ ಬಡಿಗೇರ, ಶ್ರೀಕಾಂತ ಮಣೂರ, ಉಮೇಶ ಸುರೇಬಾನ್, ಗೀತ ರಚನೆಕಾರ ಸುನೀಲಕುಮಾರ ಸುಧಾಕರ, ನಾಯಕಿ ಐಶ್ವರ್ಯ ಸಿಂಧೋಗಿ, ಸಮರ್ಥ ನರಸಿಂಹರಾಜು, ಗಣೇಶ ರಾಜ್, ರವಿ ಕಿರಣ, ಅಮೋಘ ರಾಹುಲ್, ಸಿದ್ದು ಎರಲಬನ್ನಿಕೊಡು ಇತರರಿದ್ದರು.

ಚಿತ್ರ ತಂಡದಿಂದ ಬೀದಿ ನಾಟಕ: ಸಜ್ಜಿ ರೊಟ್ಟಿ ಚವಳಿಕಾಯಿ ದುಡ್ಡಿಗೆ ಸೇರ್ ಬದನಿಕಾಯಿ’ ಗೀತೆಯನ್ನು ಚಿತ್ರ ತಂಡದ ಸದಸ್ಯರು ಬೀದಿ ನಾಟಕದ ಮೂಲಕ ಹಾಡಿ ಕುಣಿದು ಕುಪ್ಪಳಿಸುವ ಮೂಲಕ ಜನಮನ ಸೆಳೆದರು. ನಗರದ ಪ್ರಮುಖ ವೃತ್ತಗಳಲ್ಲಿ ಹಲಗೆ ಬಾರಿಸುತ್ತ ಸಂಚರಿಸಿದರು. ಐತಿಹಾಸಿಕ ಗೋಳಗುಮ್ಮಟ ಆವರಣದಿಂದ ಹಾಡಿನ ಪ್ರಚಾರ ಆರಂಭಿಸಲಾಯಿತು. ಹಾಡಿಗೆ ಅತ್ಯುತ್ತಮ ಹೆಜ್ಜೆ ಹಾಕಿದವರಿಗೆ ಟಿ ಶರ್ಟ್ ಮತ್ತು ಹೂಗುಚ್ಛ ನೀಡಲಾಯಿತು. ಲಂಬಾಣಿ ಕಲಾವಿದರ ವಿಶೇಷ ನೃತ್ಯ ಗಮನ ಸೆಳೆಯಿತು. ಕಂದಗಲ್ಲ ಹನುಮಂತರಾಯ ರಂಗಮಂದಿರ ಆವರಣ, ಬಿಎಲ್‌ಡಿಇ ರಸ್ತೆ, ಗೋದಾವರಿ ಹೋಟೆಲ್ ಆವರಣ, ಗಾಂಧಿ ವೃತ್ತ, ಸಿದ್ಧೇಶ್ವರ ದೇವಸ್ಥಾನ ಅಂಗಳದಲ್ಲಿ ಬೀದಿ ನಾಟಕ ಮತ್ತು ನೃತ್ಯ ಪ್ರದರ್ಶನ ನಡೆಯಿತು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...