ಸಾಧನೆಗೆ ಸಾಮರ್ಥ್ಯವೇ ಉರುಗೋಲು

ವಿಜಯಪುರ: ಪ್ರತಿಯೊಬ್ಬ ವಿದ್ಯಾರ್ಥಿ ನಿಗೂಢ ಸಾಮರ್ಥ್ಯ ಹೊಂದಿರುತ್ತಾನೆ. ಆ ಸಾಮರ್ಥ್ಯ ಬಳಸಿಕೊಂಡು ಮಹತ್ತರ ಸಾಧನೆ ಮಾಡಬೇಕೆಂದು ಅಶೋಕ ಹಂಚಲಿ ಹೇಳಿದರು.
ನಗರದ ಟ್ಯಾಲೆಂಟ್ ಕರಿಯರ್ ಅಕಾಡಮಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ‘ಉಚಿತ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ಎಸ್.ಡಿ. ಗಡೇದ ಮಾತನಾಡಿ, ವಿದ್ಯಾರ್ಥಿಗಳು ಕೊಳೆತ ಹಣ್ಣಾಗದೇ, ಗಿಡದಲ್ಲಿರುವ ಹಣ್ಣುಗಳಾಗಬೇಕೆಂದು ಹೇಳಿದರು. ಅರ್ಜುನ ಸಾಗರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಾರದರ್ಶಕವಾಗಿ ಅಧ್ಯಯನ ಮಾಡಿದ್ದಾದರೆ, ಬಯಸಿದ ಆಸೆ ಈಡೇರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಐಎಎಸ್ ಹಾಗೂ ಕೆಎಎಸ್ ಹುದ್ದೆಗಳ ಗುರಿ ಇಟ್ಟುಕೊಂಡು ಅಧ್ಯಯನದ ಜತೆಗೆ ಇಂದಿನ ತಂತ್ರಜ್ಞಾನ ಬಳಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು. ಟ್ಯಾಲೆಂಟ್ ಕರಿಯರ್ ಅಕಾಡಮಿಯಲ್ಲಿ ತರಬೇತಿ ಪಡೆದು ಪೊಲೀಸ್ ಪರೀಕ್ಷೆಯಲ್ಲಿ ಹಣಮಂತ ಫಕೀರಪ್ಪಗೋಳ (ನೂರಕ್ಕೆ ನೂರು ಅಂಕ), ಶಿವಾನಂದ ಬುಕ್ಕಾಗೊಳ (ನೂರಕ್ಕೆ 98 ಅಂಕ) ಹಾಗೂ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾಗರ ರಾಠೋಡ ಅವರನ್ನು ಸನ್ಮಾನಿಸಲಾಯಿತು.
ಕೃಷ್ಣಕಿಶೋರ ಹಳ್ಳೂರ, ಪ್ರಕಾಶ ಉಡಚಾಣ, ಶ್ರೀಶೈಲ ರತ್ನಾಕರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಆರ್.ಕೆ. ಹನಗಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಜಂಬಗಿ ವಂದಿಸಿದರು.

Leave a Reply

Your email address will not be published. Required fields are marked *