ರಾಜ್ಯಮಟ್ಟದ ಕಬಡ್ಡಿಗೆ ಆಯ್ಕೆ

ವಿಜಯಪುರ: ರಾಜ್ಯಮಟ್ಟದ ಜ್ಯೂನಿಯರ್ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಿತು.

ಜಿಲ್ಲೆಯಿಂದ 94 ಬಾಲಕ ಮತ್ತು ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ತಲಾ ಐವರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಬಾಲಕರ ವಿಭಾಗದಲ್ಲಿ ಹರೀಶ ಸುರೇಂದ್ರ ಸೋಮೇಶ್ವರ, ಶ್ರೀಶೈಲ ಮಾಳಪ್ಪ ದನಗೊಂಡ, ಕಿರಣಕುಮಾರ ಶೇಖಪ್ಪ ಶಿಂಧೆ, ಅಭಿಷೇಕ ಅನಂತರಾಜ ಕಾಸರ, ಸುನೀಲ ನಾತು ರಾಠೋಡ ಹಾಗೂ ಬಾಲಕಿಯರ ವಿಭಾಗದಲ್ಲಿ ಸಾನಿಯಾ ಅಜೀಮ ಶೇಖ, ಭಾಗ್ಯಶ್ರೀ ರವೀಂದ್ರ ಬಡಿಗೇರ, ಮೇಘಾ ಸೋಮಪ್ಪ ವಾಲಿಕಾರ, ರಾಗಿಣಿ ಶಿವಶಂಕರ ಸಂಗಣ್ಣವರ, ಕೋಮಲ ಕೇಶು ಚವಾಣ್ ಅವರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶರಣಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಬಂಡೆಪ್ಪ ಜಿ. ತೇಲಿ, ರಮೇಶ ಪಾಟೀಲ, ಸಂಗಮೇಶ ಹಾರಿವಾಳ, ವಿನೋದ ಸಿಂದಗಿ, ನಾಗಪ್ಪ ಎಸ್. ಪೂಜಾರಿ, ಸಂಜೀವ ಮೆಟಗಾರ, ಚಂದ್ರು ತೇಲಿ ಇನ್ನಿತರರಿದ್ದರು. ಬೆಂಗಳೂರಿನಲ್ಲಿ ಆ.19ರಂದು ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.