ಆಕ್ಸ್‌ಫರ್ಡ್ ಶಾಲೆ ವಿದ್ಯಾರ್ಥಿನಿ ಸಾಧನೆ

ವಿಜಯಪುರ: ರಾಜ್ಯ ಸರ್ಕಾರ 2018-19 ನೇ ಸಾಲಿನ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಎಜ್ಯುಕೇಷನಲ್ ರಿಸರ್ಚ್ ಆ್ಯಂಡ್ ಟ್ರೇನಿಂಗ್ (ಡಿಎಸ್‌ಇಆರ್‌ಟಿ) ಅಡಿ ನಡೆಸುವ ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಗ್ಝಾಮಿನೇಷನ್(ಎನ್‌ಟಿಎಸ್‌ಇ) ನಲ್ಲಿ ನಗರದ ಆಕ್ಸ್‌ರ್ಡ್ ಶಾಲೆ ವಿದ್ಯಾರ್ಥಿನಿ ಸೋನಾಲಿ ವಾಲಿ ಪಾಸಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಸಾಧನೆಗೆ ಎಕ್ಸಲಂಟ್ ಶಿಕ್ಷಣ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಬಿ.ಎಸ್. ಕಳಸಾ, ಆಕ್ಸ್ಸ್‌ಫರ್ಡ್ ಸಂಸ್ಥೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪ್ರಾಚಾರ್ಯ ಜೆ.ಎಂ. ಇನಾಮದಾರ್ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *