ಮದುವೆ ಮನೆಯಲ್ಲೂ ಮೋದಿ ಹವಾ

ವಿಜಯಪುರ: ನರೇಂದ್ರ ಮೋದಿ ಪಟ್ಟಾಭಿಷೇಕ ಹಿನ್ನೆಲೆ ಮದುವೆ ಮನೆಯಲ್ಲೂ ಮೋದಿ ಪರ ಘೋಷಣೆ ಮೊಳಗಿದವಲ್ಲದೆ, ನವಜೋಡಿಗಳಿಗೆ ಮೋದಿ ಫೋಟೊ ನೀಡಿ ಶುಭ ಕೋರಲಾಯಿತು.
ನಗರದ ಸ್ಟೇಷನ್ ರಸ್ತೆಯಲ್ಲಿರುವ 18ನೇ ವಾರ್ಡ್‌ನ ಶಿವರಾಜ ಕಲಬುರ್ಗಿ ಅವರ ಸ್ವಗೃಹದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಇಂಥದ್ದೊಂದು ಸನ್ನಿವೇಶ ಕಂಡು ಬಂತು. ಮದುಮಗ ಶಿವರಾಜ ಮೋದಿ ಅಭಿಮಾನಿ ಎಂಬ ಕಾರಣಕ್ಕೆ ಸ್ನೇಹಿತರೆಲ್ಲರೂ ಮೋದಿ ಭಾವಚಿತ್ರ ನೀಡಿ ಶುಭ ಕೋರಿದರು. ಈ ವೇಳೆ ಮದುವೆ ಮಂಟಪದಲ್ಲೆಲ್ಲ ಮೋದಿ…ಮೋದಿ….ಎಂಬ ಉದ್ಘೋಷ ಕೇಳಿ ಬಂತು.