ಮಿನಿ ಎಟಿಎಂ ಸೌಲಭ್ಯ ಆರಂಭ

ವಿಜಯಪುರ: ಹಣಕಾಸಿನ ವ್ಯವಹಾರ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ತುರ್ತು ಅಗತ್ಯವಾಗಿದೆ ಎಂದು ಶಿವಾಜಿ ಮಹಾರಾಜ ಕೋ-ಅಪ್ ಕ್ರೆಡಿಟ್ ಸೊಸೈಟಿ ಸಂಘದ ನಿರ್ದೇಶಕ ಡಾ.ಸದಾಶಿವ ಪವಾರ ಹೇಳಿದರು.
ನಗರದ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಇತ್ತಿಚೆಗೆ ಮಿನಿ ಎಟಿಎಂ ಸೌಲಭ್ಯ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ವಿಜಯಪುರ ನಗರದಲ್ಲೇ ಮಿನಿ ಎಟಿಎಂ ಸೌಲಭ್ಯ ಪ್ರಾರಂಭ ಮಾಡಿದ ಮೊದಲ ಕ್ರೆಡಿಟ್ ಸೊಸೈಟಿ ಎಂಬ ಹೆಗ್ಗಳಿಕೆಗೆ ನಮ್ಮ ಸಂಘ ಪಾತ್ರವಾಗಿದೆ ಎಂದವರು ಹೇಳಿದರು.
ಸಂಘದ ಅಧ್ಯಕ್ಷ ಶಂಕರ ಕನಸೆ ಪೂಜೆ ನೆರವೇರಿಸಿ, ಎಟಿಎಂ ಯಂತ್ರ ಉದ್ಘಾಟಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ ಮಿನಿ ಎಟಿಎಂ ಕುರಿತು ಮಾಹಿತಿ ನೀಡಿ, ದೇಶದ ಯವುದೇ ಬ್ಯಾಂಕಿನ ಎಟಿಎಂ ಕಾರ್ಡ್ ಬಳಸಿ ಈ ಸೌಲಭ್ಯ ಪಡೆಯಬಹುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಿ.ಟಿ. ತರಸೆ, ನಿರ್ದೇಶಕರಾದ ಅರುಣ ಕದಂ, ಸಂಜಯ ಜಂಬೂರೆ, ಭಾರತ ದೇವಕುಳೆ, ಸದಸ್ಯ ಯುವರಾಜ ಚೋಳಕೆ, ಶಾಖಾ ವ್ಯವಸ್ಥಾಪಕ ಚಂದ್ರಕಾಂತ ಜಾಧವ, ಸಹಾಯಕ ವ್ಯವಸ್ಥಾಪಕ ಅಂಬಾದಾಸ ಚವಾಣ್, ವಿಠಲ ಚವಾಣ್, ಅನೀಲ ಕ್ಷೀರಸಾಗರ, ವಿಕಾಸ ಕಾಳೆ, ವಿಶಾಲ ಮಾನೆ, ರಾಜು ಚವಾಣ್, ಲಕ್ಷ್ಮಣ ಚವಾಣ್, ಆನಂದ ಮಸ್ಕೆ, ರಾಕೇಶ ಭೋಸಲೆ, ದೀಪಕ ಚವಾಣ್, ಶಿವಾಜಿ ಘಾಟಗೆ, ಮೋಹನ ತಾಟೆ, ಮಾರುತಿ ಮಾನೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *