21.7 C
Bengaluru
Tuesday, January 21, 2020

ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆ

Latest News

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಮುಂಬೈ ಸಿದ್ಧಿವಿನಾಯಕನಿಗೆ 35 ಕಿಲೋ ಚಿನ್ನ | ದೆಹಲಿ ಮೂಲದ ಉದ್ಯಮಿಯ ಕಾಣಿಕೆಯ ಮೌಲ್ಯ 14 ಕೋಟಿ ರೂಪಾಯಿ!

ಮುಂಬೈ: ಕಳೆದ 200ಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಮುಂಬೈ ಸಿದ್ಧಿವಿನಾಯಕ ದೇವರಿಗೆ ಇದೇ ಮೊದಲ ಬಾರಿಗೆ 35 ಕಿಲೋ ಚಿನ್ನ ಕಾಣಿಕೆ ರೂಪದಲ್ಲಿ...

ವಿಜಯಪುರ: ಅದೊಂದು ಮೈ ರೋಮಾಂಚನಗೊಳಿಸುವ ಆಟ. ಎದೆ ಝುಲ್ ಎಂದರೂ ಉತ್ಸಾಹಕ್ಕೆ ಮಾತ್ರ ಕೊರತೆಯಿಲ್ಲ. ಶರವೇಗ ದಲ್ಲಿ ಎತ್ತುಗಳ ಓಟ, ಓಡಾಟ. ಎತ್ತುಗಳನ್ನು ಹಿಡಿಯಲು ಯುವಕರ ದಂಡು. ಈ ಎಲ್ಲ ದೃಶ್ಯ ಕಂಡು ಪ್ರತಿಯೊಬ್ಬರ ಮೈ ಜುಂ ಎನಿಸಿದ್ದಂತೂ ಸತ್ಯ.

ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಬುಧವಾರ ನಡೆದ ಕರಿ ಹರಿಯುವ ಹಾಗೂ ಹೋರಿ ಬೆದರಿಸುವ ಆಟ ವನ್ನು ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಿಸಿ ಖುಷಿ ಅನುಭವಿಸಿದರು. ಕಾಖಂಡಕಿ ಕಾರಹುಣ್ಣಿಮೆ ಪ್ರಯುಕ್ತ ನಡೆಯುವ ಕರಿ ಹರಿಯುವ ಹಾಗೂ ಹೋರಿ ಬೆದರಿಸುವ ಆಟ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ಕಾರ ಹುಣ್ಣಿಮೆಯಾದ ಏಳುದಿನಕ್ಕೆ ಆಚರಿಸುತ್ತ ಎಲ್ಲೆಡೆ ತನ್ನದೆ ಆದ ಜನಪ್ರಿಯತೆ ಪಡೆದಿದೆ. ಮೈದಾನದಲ್ಲಿ ಎತ್ತುಗಳನ್ನು ಹಿಡಿಯಲು ಯುವ ಕರು ನಡೆಸಿದ ಕಸರತ್ತು ಜನಮನಸೂರೆಗೊಳಿಸುವಂತಿತ್ತು.

ಸ್ಪರ್ಧೆಯ ವೈಶಿಷ್ಟ್ಯ: ರಾಜ್ಯದಲ್ಲಿ ವಿಶಿಷ್ಟ ಜಾನಪದ ಪರಂಪರೆ, ಇತಿಹಾಸಹೊಂದಿದೆ. ಈ ಬಾರಿ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಎತ್ತುಗಳು ಮೈದಾನಕ್ಕಿಳಿದಿದ್ದವು. ಮೈದಾನದಲ್ಲಿ ಕರಿ ಸಂಭ್ರಮ ನಡೆಯುತ್ತಿರುವಾಗ ಕಾಖಂಡಕಿ ಗ್ರಾಮದ ಗೌಡರ ಕೆಂಪು ಮತ್ತು ಬಿಳಿ ವರ್ಣದ ಎತ್ತುಗಳು ವಾದ್ಯಮೇಳಗಳೊಂದಿಗೆ ಗೌಡರ ಮನೆಯಿಂದ ಹಿಂದೆ ಹೆಜ್ಜೆ ಹಾಕುತ್ತ ಬಂದವು. ಗ್ರಾಮದ ಅಗಸಿ ಬಾಗಿಲಲ್ಲಿ ಪೂಜೆಗೊಂಡು ಗ್ರಾಮದ ಒಳಗೆ ಓಡುತ್ತವೆ. ಮೊದಲು ಯಾವ ವರ್ಣದ ಎತ್ತು ಗೌಡರ ಮನೆ ತಲುತ್ತದೆ. ಅದರ ಮೇಲೆ ಆ ವರ್ಷದ ಬೆಳೆಯನ್ನು ನಿರ್ಧರಿಸಲಾಗುತ್ತದೆ.

ಈ ಬಾರಿ ಬಿಳಿ ಎತ್ತು ಮುಂದೆ ಬಂದಿದ್ದರಿಂದ ಜೋಳ, ಕುಸುಬೆ, ಬಾಳೆ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ಗ್ರಾಮಸ್ಥರು ಭಾವಿಸಿದ್ದುಂಟು.

ಮಾಳಿಗೆ ಮೇಲೆ ನಿಂತ ಜನಸ್ತೋಮ

ಕಾಖಂಡಕಿ ಕಾರ ಹುಣ್ಣಿಮೆ ಹಿನ್ನೆಲೆ ನಡೆದ ಹೋರಿಗಳ ಬೆದರಿಸುವ ಸ್ಪರ್ಧೆ ನೋಡಲು ಜನರು ಮನೆ ಮಾಳಿಗೆ ಮೇಲೆ ನಿಂತು ಸಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.

ಜಿಲ್ಲೆಯಲ್ಲದೆ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿದ ಜಿಲ್ಲೆಗಳ ಜನರು ಆಗಮಿಸಿದ್ದರು.

ಸ್ಪರ್ಧೆಯಲ್ಲಿ ಕೆಲವರಿಗೆ ಗಾಯ

ಹೋರಿಗಳ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೆಲ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಕ್ಕಟ್ಟಾದ ಸ್ಥಳದಿಂದ ಎದ್ದು ಹೊರ ಬರಲು ಜಾಗ ಇಲ್ಲದೇ ಚಿಕಿತ್ಸೆ ಪಡೆಯದೆ ಅಲ್ಲಿಯೇ ಕುಳಿತು ಮತ್ತೆ ಸ್ಪರ್ಧೆಯನ್ನು ವೀಕ್ಷಿಸಿದ ಪರಿ ವಿಶೇಷವಾಗಿತ್ತು.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...