ಬರದ ನಡುವೆಯೂ ಅಧಿಕಾರಿಗಳ ಸೆಲ್ಫಿ ಕ್ರೇಜ್

ವಿಜಯಪುರ: ವಿಜಯಪುರ ಜಿಲ್ಲೆಗೆ ಗುರುವಾರ ಆಗಮಿಸಿದ್ದ ಹಿರಿಯ ಅಧಿಕಾರಿ ಎಸ್.ಕೆ. ಕಂಬೋಜ್ ನೇತೃತ್ವದ ಕೇಂದ್ರ ತಂಡದ ಸದಸ್ಯರು ಬರ ವೀಕ್ಷಣೆ ನಡುವೆಯೂ ಸೆಲ್ಫಿ ತೆಗೆದುಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಬರದ ಭೀಕರತೆಗೆ ಜನರು ತತ್ತರಿಸಿದ್ದು, ಬರ ವೀಕ್ಷಣೆಗೆ ಆಗಮಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ತಮಗೆ ನ್ಯಾಯ ಕೊಡಿಸುತ್ತಾರೆ ಎನ್ನುವ ಮಹದಾಸೆ ಇಟ್ಟುಕೊಂಡಿದ್ದರೆ, ಅಧಿಕಾರಿಗಳು ಮಾತ್ರ ತಮಗೆ ಬೇಕಾದ ರೀತಿ ಅಧ್ಯಯನ ನಡೆಸಿ ಸೆಲ್ಫಿ ತೆಗೆಸಿಕೊಂಡು ಎಳೆ ನೀರು ಕುಡಿದು, ಹವಾನಿಯಂತ್ರಿತ ಕಚೇರಿಯಲ್ಲಿ ಊಟ ಮಾಡಿ ಹೋಗುವ ಪರಿಪಾಠಕ್ಕೆ ಬ್ರೇಕ್ ಹಾಕಬೇಕಿದೆ ಎಂದು ರೈತರು ಒತ್ತಾಯಿಸಿದರು.

ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ, ಕೃಷಿ ಬೆಳೆ ಹಾನಿ ಸೇರಿ ಬರ ಪರಿಹಾರಕ್ಕೆ 1100 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು. ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಸೇರಿ ಕೇಂದ್ರದ ಬರ ಅಧ್ಯಯನ ತಂಡ, ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.