20.4 C
Bengaluru
Monday, January 20, 2020

ಹಿಂದು ಕಾರ್ಯಕರ್ತರಿಂದ ಹೋರಾಟ

Latest News

ಸಿಎಎ ಬೆಂಬಲಿಸಿ ರ‌್ಯಾಲಿ

ಬಾದಾಮಿ: ವಿಶ್ವದ ದೊಡ್ಡ ಹಿಂದು ರಾಷ್ಟ್ರವಾದ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ...

ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ಆರ್‌ಎಸ್‌ಎಸ್ ಅಂಗ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಸೇವಕಿಯರ ಘೋಷ ಸಹಿತ...

ಧರ್ಮದಲ್ಲಿ ರಾಜಕೀಯ ಸಲ್ಲ

ತೇರದಾಳ: ಧರ್ಮ ಶ್ರೇಷ್ಠವಾಗಿದ್ದು, ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ವೀರಶೈವರು ಲಿಂಗವನ್ನು ತ್ರಿಕಾಲಗಳಲ್ಲಿ ಪೂಜೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮ ಮತ್ತು ಗುರು ಜೀವನ...

ಕಲಾದಗಿಯಲ್ಲಿ ಆರ್ಥಿಕ ಗಣತಿಗೆ ಅಸಹಕಾರ

ಕಲಾದಗಿ: ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಪ್ರಬಲ ಕೋಮಿನ ನೂರಾರು ಮನೆಯವರು ಆರ್ಥಿಕ ಗಣತಿದಾರರಿಗೆ ಮಾಹಿತಿ...

ವೇಗ ಕಾಣದ ಫಾಸ್ಟ್ಯಾಗ್​ !

ಹೀರಾನಾಯ್ಕ ಟಿ. ವಿಜಯಪುರ: ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ​ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಆದರೆ, ಸಾಕಷ್ಟು ವಾಹನಗಳಿಗೆ ಫಾಸ್ಟ್ಯಾಗ್  ಅಳವಡಿಸದೆ ಇರುವುದರಿಂದ...

ವಿಜಯಪುರ: ಕಳೆದ 25 ವರ್ಷಗಳಿಂದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸನಾತನ ಸಂಸ್ಥೆ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿರುವುದಲ್ಲದೇ ನಿಷೇಧ ಹೇರುವ ಬಗ್ಗೆ ಮಾತನಾಡುತ್ತಿರುವ ಸಂಸ್ಥೆಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದಾಗಿ ಶ್ರೀರಾಮ ಸೇನೆ ಮುಖಂಡ ನೀಲಕಂಠ ಕಂದಗಲ್ಲ ತಿಳಿಸಿದರು.

ಕೆಲ ಕುತ್ಸುಕ ಬುದ್ಧಿಯ ಸಂಘ ಸಂಸ್ಥೆಗಳು ಸನಾತನ ಸಂಸ್ಥೆ ಮೇಲೆ ವಿನಾಕಾರಣ ಆರೋಪ ಹೊರಿಸುತ್ತಿವೆ. ಹಿಂದು ಕಾರ್ಯಕರ್ತರನ್ನು ಹಣಿಯುವ ಕುತಂತ್ರ ರೂಪಿಸುತ್ತಿವೆ. ಇಂಥ ಸಂಸ್ಥೆಗಳ ವಿರುದ್ಧ ಸೆ. 1 ರಂದು ಸಿದ್ಧೇಶ್ವರ ದೇವಸ್ಥಾನದ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶ, ಧರ್ಮ ಮತ್ತು ಸಂಸ್ಕೃತಿ ಉಳಿವಿಗಾಗಿ ಶ್ರಮಿಸುತ್ತಿರುವ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡುವುದು ತರವಲ್ಲ. ಕೆಲ ಎಡಪಂಥೀಯ ವಿಚಾರಧಾರೆಯುಳ್ಳ ಸಂಸ್ಥೆಗಳು, ಮಾಧ್ಯಮಗಳು ಹಾಗೂ ಬುದ್ಧಿ ಜೀವಿಗಳು ಎನಿಸಿಕೊಂಡವರು ಇಂಥದ್ದೊಂದು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇಂಥವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗುವುದು. ಈಗಾಗಲೇ ಅಂಥ ಮಾಧ್ಯಮಗಳು ಹಾಗೂ ಬುದ್ಧಿಜೀವಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಪ್ರಕರಣ ದಾಖಲಿಸಲು ತಯಾರಿ ನಡೆಯುತ್ತಿದೆ ಎಂದರು.

ದೇಶದ ಯಾವುದೇ ಮೂಲೆಯಲ್ಲಿ ಈ ಎಡಪಂಥೀಯರ ಹತ್ಯೆಗಳಾಗಲಿ ಅದನ್ನು ಹಿಂದುಪರ ಸಂಘಟನೆಗಳು ಮತ್ತು ಅದರ ಕಾರ್ಯಕರ್ತರ ಹಣೆಗೆ ಕಟ್ಟುವ ಪ್ರಯತ್ನವಾಗುತ್ತಿದೆ. ಹಿಂದು ಕಾರ್ಯಕರ್ತರನ್ನು ಬಂಧಿಸಿ ಅನವಶ್ಯಕ ಕಿರುಕುಳ ನೀಡಲಾಗುತ್ತಿದೆ. ಈ ಹಿಂದೆ ಇಂಥ ಪ್ರಕರಣಗಳಲ್ಲಿ ಹಿಂದು ಪರ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಅಂಥ ಯಾವುದೇ ಪ್ರಕರಣ ಸಾಬೀತಾಗಿಲ್ಲ. ಯಾವೊಬ್ಬ ಕಾರ್ಯಕರ್ತನೂ ಆರೋಪಿ ಎಂದು ಸಾಬೀತಾಗಿಲ್ಲ. ಸಿಂದಗಿ ಪಾಕ್ ಧ್ವಜ ಪ್ರಕರಣವಾದರೂ ಅಷ್ಟೆ. ಆರೋಪಿ ಸ್ಥಾನದಲ್ಲಿರುವವರು ಹಿಂದು ಕಾರ್ಯಕರ್ತರೆಂಬ ಹಣೆ ಪಟ್ಟಿ ಕಟ್ಟಿ ಪೊಲೀಸ್ ಠಾಣೆಗೆ ಎಳೆದು ತರಲಾಯಿತು. ಸುದೀರ್ಘ ಆರು ವರ್ಷಗಳ ಬಳಿಕ ಅವರು ದೋಷಮುಕ್ತರಾಗಿದ್ದು ಹಿಂದು ಸಂಘಟನೆ ಮೇಲಿನ ಆಪಾದನೆ ಸುಳ್ಳಾಯಿತು. ಇಂಥ ಅನೇಕ ಪ್ರಕರಣಗಳಲ್ಲಿ ಹಿಂದು ಸಂಘಟನೆಗಳ ಹೆಸರನ್ನು ಎಳೆದು ತರಲಾಗಿದೆ. ಹಿಂದು ಭಯೋತ್ಪಾದನೆ ಎಂಬ ಪದ ಹುಟ್ಟುಹಾಕಿ ಸನಾತನ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳಾಗುತ್ತಿವೆ. ಹೀಗಾಗಿ ಶ್ರೇಷ್ಠ ಸಂಸ್ಥೆ ಮೇಲೆ ಅಪಪ್ರಚಾರ ಎಸಗಿದವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಹೋರಾಟ ರೂಪಿಸುತ್ತಿರುವುದಾಗಿ ಕಂದಗಲ್ಲ ತಿಳಿಸಿದರು.

ನಗರ ಸಭೆ ಮಾಜಿ ಸದಸ್ಯ ರವೀಂದ್ರ ಕುಲಕರ್ಣಿ, ಸಂತೋಷ ವಿಶ್ವಕರ್ಮ, ಶಿವಾನಂದ ಕಂಬಾರ ಸೇರಿದಂತೆ ಇತರರಿದ್ದರು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...