ಗುಂಡಿ ಮುಚ್ಚಲು ಶಾಸಕ ಯತ್ನಾಳ ಸಿದ್ಧ

ವಿಜಯಪುರ: ಹಾನಿಗೊಳಗಾದ ನಗರದ ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸುವ ಕಾಮಗಾರಿ ಕೈಗೊಳ್ಳಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

2018ರ ಸೆ. 29 ರಂದೇ ಪತ್ರ ಬರೆಯಲಾಗಿದ್ದು ಟಾಸ್ಕ್ ಫೋರ್ಸ್ ಅಡಿ ಕಾಮಗಾರಿ ಕೈಗೊಳ್ಳಲು ತಿಳಿಸಲಾಗಿದೆ. ಒಟ್ಟು 21 ಕಾಮಗಾರಿಗಳ ಪಟ್ಟಿ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಮಂಜೂರುಗೊಳಿಸಲು ಡಿಸಿ ಎಸ್.ಬಿ. ಶೆಟ್ಟೆಣ್ಣವರಗೆ ತಿಳಿಸಿರುವುದಾಗಿ ಶಾಸಕ ಯತ್ನಾಳ ತಿಳಿಸಿದ್ದಾರೆ.

ಜಲನಗರದ ಬಿಡಿಎದಿಂದ ಕೋರ್ಟ್ ವೃತ್ತದವರೆಗೆ ಗುಂಡಿ ಮುಚ್ಚುವುದು, ಸೊಲ್ಲಾಪುರ ರಸ್ತೆಯಿಂದ ರಿಂಗ್ ರೋಡ್​ವರೆಗೆ ರಸ್ತೆ ಗುಂಡಿ ಮುಚ್ಚುವುದು, ಬಾಗಲಕೋಟೆ ಕ್ರಾಸ್​ನಿಂದ ವಿಶ್ವೇಶ್ವರಯ್ಯ ವೃತ್ತ, ಜಿಲ್ಲಾ ಕ್ರೀಡಾಂಗಣದಿಂದ ಎಪಿಎಂಸಿ ವೃತ್ತ, ಮನಗೂಳಿ ಅಗಸಿಯಿಂದ ಬೈಪಾಸ್​ವರೆಗೆ, ಸರಾಫ್ ಬಜಾರ್ ಆಂತರಿಕ ರಸ್ತೆ, ಖೇಡ ಕಾಲೇಜ್ ಮಾರ್ಗವಾಗಿ ಆಶ್ರಮ ಕೂಡುವ ರಸ್ತೆ, ಸೊಲ್ಲಾಪುರ ಬೈಪಾಸ್ ರಿಂಗ್ ರಸ್ತೆಯಿಂದ ಎನ್​ಎಚ್-13ವರೆಗೆ, ಸಂಸ್ಕೃತಿ ಕಾಲನಿಯಿಂದ ಸಿದ್ಧೇಶ್ವರ ದೇವಸ್ಥಾನದವರೆಗೆ, ಎಪಿಎಂಸಿ ಗೇಟ್​ನಿಂದ ಎನ್​ಎಚ್ ಕೂಡುವ ರಸ್ತೆ, ಗಣೇಶನಗರ ಬಸ್ ನಿಲ್ದಾಣದಿಂದ ವಜ್ರ ಹನುಮಾನ ಗುಡಿವರೆಗೆ, ವಾಟರ್ ಟ್ಯಾಂಕ್​ನಿಂದ ಸೊಲ್ಲಾಪುರ ಬೈಪಾಸ್​ವರೆಗೆ, ಜಮಖಂಡಿ ವೃತ್ತದಿಂದ ವಾಟರ್ ಟ್ಯಾಂಕ್​ವರೆಗೆ ಹಾಗೂ ಆದರ್ಶನಗರ ಆಂತರಿಕ ರಸ್ತೆ, ವಾಟರ್ ಟ್ಯಾಂಕ್​ನಿಂದ ಟಕ್ಕೆ ಕ್ರಾಸ್, ಗುರುಪಾದೇಶ್ವರ ನಗರದಲ್ಲಿ ಶಿವಯೋಗೇಶ್ವರ ಆಶ್ರಮ ಎದುರಿನ ಒಳರಸ್ತೆಗಳ ಸುಧಾರಣೆ, ಬಿಡಿಎ ಕ್ರಾಸ್​ನಿಂದ ಕನಕದಾಸ ಬಡಾವಣೆ ಬಸ್​ಸ್ಟಾಫ್, ಮೀನಾಕ್ಷಿ ಚೌಕ್​ನಿಂದ ಶಿವಾಜಿ ವೃತ್ತದವರೆಗೆ, ಇಟಗಿ ಪೆಟ್ರೋಲ್​ಪಂಪ್​ನಿಂದ ತೊರವಿವರೆಗೆ, ಕೀರ್ತಿನಗರ ಹಾಗೂ ಕೆಕೆ ಕಾಲನಿ ಆಂತರಿಕ ರಸ್ತೆ, ಬಂಜಾರ ಕ್ರಾಸ್​ನಿಂದ ಆಲಕುಂಟೆ ನಗರ ಮತ್ತು ರಿಂಗ್​ರೋಡ್​ನಿಂದ ಸಾಯಿಪಾರ್ಕ್​ವರೆಗಿನ ರಸ್ತೆಗಳ ದುರಸ್ತಿ ಕಾಮಗಾರಿ ಕೈಗೊಳ್ಳಲು ತಿಳಿಸಲಾಗಿದೆ. ಒಟ್ಟು 60 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ತಿಳಿಸಲಾಗಿದೆ ಎಂದು ಶಾಸಕ ಯತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.